Connect with us

LATEST NEWS

ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಣೆ; ಖುದ್ದು ಆತನ ಮನೆಗೆ ಭೇಟಿ ನೀಡಿದ ಖ್ಯಾತ ಉದ್ಯಮಿ ರತನ್ ಟಾಟಾ.

Published

on

ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಣೆ; ಖುದ್ದು ಆತನ ಮನೆಗೆ ಭೇಟಿ ನೀಡಿದ ಖ್ಯಾತ ಉದ್ಯಮಿ ರತನ್ ಟಾಟಾ..!

ಮುಂಬೈ: ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಲು ಪುಣೆಗೆ ಭೇಟಿ ನೀಡಿದ ಖ್ಯಾತ ಉದ್ಯಮಿ ರತನ್ ಟಾಟಾ.
ರತನ್ ಟಾಟಾ ತನ್ನ ಅನುಕರಣೀಯ ಬದುಕಿನಿಂದ ಯಾವಾಗಲೂ ದೇಶದ ಜನತೆಗೆ ಆದರ್ಶಪ್ರಾಯರಾಗಿದ್ದಾರೆ.ತಮ್ಮ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿದ ರತನ್, ಮುಂಬಯಿಯಿಂದ ಪುಣೆಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.ಈ ವಿಚಾರವನ್ನು ಮಾಜಿ ಉದ್ಯೋಗಿಯ ಬಂಧು ಯೋಗೇಶ್ ದೇಸಾಯಿ ಹಂಚಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅನಾರೋಗ್ಯಪೀಡಿತನಾದ ಈ ಮಾಜಿ ಉದ್ಯೋಗಿಯೊಂದಿಗೆ ಸಂವಹನ ನಡೆಸುತ್ತಿರುವ 83 ವರ್ಷದ ರತನ್‌ ಟಾಟಾರ ಚಿತ್ರವನ್ನು ಶೇರ್‌ ಮಾಡಿದ ಯೋಗೇಶ್, “ಸರ್‌ ರತನ್ ಟಾಟಾ ಅವರು ಶ್ರೇಷ್ಠ ಉದ್ಯಮಿಯಲ್ಲದೇ ಒಬ್ಬ ಮಾನವೀಯತೆಯುಳ್ಳವರೂ ಹೌದು.

ಕಳೆದ 2 ವರ್ಷಗಳಿಂದ ಅನಾರೋಗ್ಯಪೀಡಿತರಾದ ತಮ್ಮ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರನ್ನು ಭೇಟಿ ಮಾಡಲು ರತನ್‌ ಟಾಟಾ ಅವರು ಮುಂಬಯಿಯಿಂದ ಪುಣೆಗೆ ಬಂದಿದ್ದರು.

ಈ ವೇಳೆ ಅವರೊಂದಿಗೆ ಯಾವುದೇ ಮಾಧ್ಯಮ ಅಥವಾ ಬೌನ್ಸರ್‌ಗಳು ಇರಲಿಲ್ಲ. ಸಂಸ್ಥೆಗೆ ನಿಷ್ಠರಾದ ಉದ್ಯೋಗಿಗಳ ಮೇಲಿನ ಕಮಿಟ್‌ಮೆಂಟ್ ಮಾತ್ರವೇ ಅವರ ನಡವಳಿಕೆಯಲ್ಲಿ  ಎದ್ದು ಕಾಣುತ್ತಿತ್ತು.

ಬರೀ ಹಣವೇ ಎಲ್ಲವೂ ಅಲ್ಲ ಎಂಬ ಪಾಠವನ್ನು ರತನ್ ಟಾಟಾರಿಂದ ಕಲಿಯಬೇಕಿದೆ. ಎಲ್ಲ ಉದ್ಯಮಿಗಳಿಗೂ ಮಾದರಿಯಾಗಿರುವ ಇವರು ಮೇಲ್ಪಂಕ್ತಿಯಲ್ಲದ್ದಾರೆ.  ಹ್ಯಾಟ್ಸ್ ಆಫ್ ಟು ಯು ಸರ್

kerala

ಕಾಸರಗೋಡು: ಕೊನೆಯ ಹಂತದಲ್ಲಿದೆ ಮಧೂರು ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ

Published

on

ಕಾಸರಗೋಡು: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರುಷ ಹಲವಾರು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ಇದೀಗ ಕಾಸರಗೋಡಿನ ಮಧುವಾಹಿನಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವವು ನಡೆಯಲಿದೆ. ಮಾ.27 ರಿಂದ ಎ.7ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಬಳಗ ಅತ್ಯಾಕರ್ಷಕವಾಗಿ ಕೆತ್ತನೆ ಕೆಲಸ ನಿರ್ವಹಿಸಿದ್ದು, ಕಾಷ್ಠ ಶಿಲ್ಪವನ್ನು ಮೂಡುಬಿದಿರೆ ಸಂಪಿಗೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ಮಾಡಿದ್ದಾರೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ದೇಗುಲದ ನವೀಕರಣ ಕಾಮಗಾರಿ ನಡೆದಿದ್ದು, ರಾಜಾಂಗಣ, ಹೊರಾಂಗಣದ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ, ಸುತ್ತು ಪೌಳಿಗೆ ಕೆಂಪುಕಲ್ಲು ಹಾಸಲಾಗಿದೆ. ನೂತನವಾಗಿ ಕಗ್ಗಲ್ಲಿನಿಂದ ನಿರ್ಮಾಣಗೊಂಡ ಕೆತ್ತನೆ ಕೆಲಸದ ಕಂಬಗಳು, ಕಾಷ್ಠ ಶಿಲ್ಪಗಳು ಆಕರ್ಷಿಸುತ್ತಿವೆ.

ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಾಲಯ ಇತ್ಯಾದಿಗಳ ಕಾರ್ಯ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. 2-3 ತಿಂಗಳುಗಳಿಂದ ಮಕ್ಕಳು, ಮಹಿಳೆಯರು ಸಹಿತ ಎಲ್ಲರೂ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ನಿರತರಾಗಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಚಪ್ಪರದ ಕಾರ್ಯ ನಡೆಯುತ್ತಿದೆ. ಈ ಬಾರಿ ಮಧೂರು ದೇವಾಲಯದ ಅಷ್ಟಬಂದ ಬ್ರಹ್ಮಕಲಶೋತ್ಸವವು ಒಂದು ಇತಿಹಾಸ ಸೃಷ್ಠಿಗೆ ಕಾರಣವಾಗಲಿದೆ.

Continue Reading

LATEST NEWS

ಹೆಬ್ರಿ : ಪಬ್ಲಿಕ್ ಜಾಗದಲ್ಲಿ ಹೊಡೆದಾಟ ಮಾಡಿದ 8 ಮಂದಿ ಅರೆಸ್ಟ್

Published

on

ಹೆಬ್ರಿ : ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿಸಿ ಗಲಾಟೆ ಮಾಡಿ, ಹೊಡೆದಾಟ ನಡೆಸಲು ಜನರು ಕಾಯುತ್ತಿರುತ್ತಾರೆ. ತಾಳ್ಮೆಯನ್ನು ಮೂಲೆಗುಂಪು ಮಾಡಿ ಗದ್ದಲ ಸೃಷ್ಠಿಸುತ್ತಾ ಮನಃಶ್ಶಾಂತಿ ಹಾಳುಮಾಡಿಕೊಂಡು ಇರುತ್ತಾರೆ. ಮನೆಯಲ್ಲಿ ಆದರೂ ಪರವಾಗಿಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ ನಡೆಸಿದರೆ ಏನಾಗಬಹುದು ? ಇದೀಗ ಅದೇ ರೀತಿ ಸಾರ್ವಜನಿಕ ಜಾಗದಲ್ಲಿ ಗಲಾಟೆ ಮಾಡಿಕೊಂಡ 8 ಜನರು ಇದೀಗ ಕಂಬಿ ಎಣಿಸುವ ಸ್ಥಿತಿ ಬಂದಿದೆ. ಏನಿದು ಘಟನೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೆಬ್ರಿಯಲ್ಲಿ ಬಡಾಗುಡ್ಡೆ ಹೋಗುವ ದಾರಿ ಬಳಿ ಮಾ.13ರಂದು ಸಂಜೆ ವೇಳೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಎಂಟು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ 7-8 ಜನರು ಸೇರಿಕೊಂಡು ಪರಸ್ಪರ ಬೈದಾಡಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹನುಮಂತ, ಸುರೇಶ್, ರೇಖಾ, ರಮೇಶ, ಮಂಜುನಾಥ, ದುರ್ಗೇಶ್, ಹನುಮಂತ, ವಿಶ್ವನಾಥ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

DAKSHINA KANNADA

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನಾಪತ್ತೆ ಪ್ರಕರಣ; ಮತ್ತೋರ್ವ ವಿದ್ಯಾರ್ಥಿ ಕಾಣೆ

Published

on

ಮಂಗಳೂರು : ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳಾದ ಫರಂಗಿಪೇಟೆ ನಿವಾಸಿ ದಿಗಂತ್ ಹಾಗೂ ಮೂಡುಪೆರಾರ ನಿವಾಸಿ ನಿತೇಶ್ ಕಾಣೆಯಾಗಿದ್ದು, ಹಲವು ಹೋರಟ ಹಾಗೂ ತೀವ್ರ ತನಿಖೆಯ ಬಳಿಕ ಪತ್ತೆಯಾಗಿದ್ದರು. ಈ ಮೂಲಕ ಎರಡೂ ಪ್ರಕರಣಗಳು ಸುಖಾಂತ್ಯ ಕಂಡಿತ್ತು. ಆದರೆ ಇದೀಗ ಮತ್ತೋರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ಯಾಕಾಗಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎನ್ನುವುದೇ ಗೊಂದಲ ಸೃಷ್ಠಿಸುತ್ತಿದೆ.

ಪಣಂಬೂರು ಕೋಸ್ಟ್‌ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಮಾ.12ರಂದು ಕುಂಜತ್‌ಬೈಲ್‌ನಲ್ಲಿರುವ ಮನೆಯಿಂದ ಕಾಣೆಯಾಗಿದ್ದಾನೆ.

ತಿಳಿ ಹಸಿರು ಬಣ್ಣದ ರೌಂಡ್ ಟಿ ಶರ್ಟ್, ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದ ಈತ ಬಿಳಿ ಬಣ್ಣದ ಕನ್ನಡಕ ಧರಿಸಿದ್ದಾನೆ. ಇಂಗ್ಲಿಷ್, ಹಿಂದಿ, ಓಡಿಯಾ ಭಾಷೆ ಬಲ್ಲವನಾಗಿದ್ದಾನೆ. ಈತನನ್ನು ಕಂಡವರು ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page