Connect with us

DAKSHINA KANNADA

ಕಾರ್ಕಳಕ್ಕೆ ಭೇಟಿ ನೀಡಿದ ಮಾಜಿ ಕ್ರಿಕೆಟ್ ಕಪ್ತಾನ ರವಿಶಾಸ್ತ್ರಿ : ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವರಿಗೆ ವಿಶೇಷ ಪೂಜೆ..!

Published

on

ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ  ರವಿಶಾಸ್ರಿ ಮಂಗಳವಾರ ಭೇಟಿ ನೀಡಿದರು.

ಕಾರ್ಕಳ: ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ  ರವಿಶಾಸ್ರಿ ಮಂಗಳವಾರ ಭೇಟಿ ನೀಡಿದರು. 

ಅವರ ಸಂಬಂಧಿಗಳಾದ ಸಂತೋಷ್ ಶಾಸ್ತ್ರಿ , ಕವಿತಾ ಶಾಸ್ತ್ರೀ ಹಾಗೂ ಕುಟುಂಬದವರು ‌ ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ , ಕಲ್ಪೋಕ್ತ ಪೂಜೆ , ನಾಗತಂಬಿಲ ಸೇವೆ ಅರ್ಪಿಸಿದರು ಬಳಿಕ ವಿಷ್ಣು ಮೂರ್ತಿ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು.

ನರಸಿಂಹ ತಂತ್ರಿ ಹಾಗೂ ಅಶೋಕ್ ಕಾರಂತ್ ಪೂಜಾ ವಿಧಿ ವಿಧಾನ ನೆರವೇರಿಸಿದರು‌.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ , ದೇವಾಲಯ ಮೊಕ್ತೇಸರ ಅನಂತ ಪಟ್ಟಾಭಿರಾವ್ , ದೇವಾಲಯ ಅಭಿವೃದ್ದಿ‌ಸಮಿತಿಯ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವದ ಕಾರ್ಯದರ್ಶಿ ರಮೇಶ್ ರಾವ್ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ, ಕರ್ನಾಟಕ ಬ್ಯಾಂಕ್ ನ ನಿವೃತ್ತ ಜನರಲ್ ಮ್ಯಾನೇಜರ್ ನಾಗರಜ್ ರಾವ್ , ಸತೀಶ್ ರಾವ್ , ಗೌರವಾಧ್ಯಕ್ಷ ಯುವರಾಜ್ ನಾಯಕ್ , ಚಲನಚಿತ್ರ ನಿರ್ದೇಶಕ ಸಂದೀಪ್ ಶೆಟ್ಟಿ, ಸುಧೀರ್ ಕುಮಾರ್ ಪಡುಬಿದ್ರೆ , ನವೀನ್ ಕುಮಾರ್ ಶೆಟ್ಟಿ, ರಮಾಕಾಂತ್ , ಪವನ್ ಜೈನ್ , ಕಸ್ತೂರಿ ಉಪಸ್ಥಿತರಿದ್ದರು.

ರವಿ ಶಾಸ್ತ್ರಿ ಪೂರ್ವಜರು ಕಾರ್ಕಳ ಎರ್ಲಪಾಡಿಯವರು :

ರವಿ ಶಾಸ್ತ್ರಿ 2007 -2023 ರ ವರೆಗೆ ಒಟ್ಟು ಹನ್ನೊಂದು ಬಾರಿ ಕರ್ವಾಲು ದೇವಸ್ಥಾನ ಕ್ಕೆ ಆಗಮಿಸಿ ನಾಗನಿಗೆ ಪೂಜೆ ಸಲ್ಲಿಸುತಿದ್ದಾರೆ.ಶಾಸ್ತ್ರಿಯವರ ಪೂರ್ವಜರು ಎರ್ಲಪಾಡಿಯ ಕರ್ವಾಲುಗೆ ಸೇರಿದವರು, ಐವತ್ತರ ದಶಕದಲ್ಲಿ ರವಿಶಾಸ್ರಿಯವರ ಅಜ್ಜ
ಎಂ ವಿ ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದರು . ಬಳಿಕ ರವಿಶಾಸ್ರಿ ಯ ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್ ನಲ್ಲಿ ಶಿಕ್ಷಣ ಮುಗಿಸಿ ಮುಂಬಯಿ ನಲ್ಲಿ ಡಾಕ್ಟರ್ ಆಗಿ ಅಲ್ಲೆ ನೆಲೆನಿಂತರು . ಬಳಿಕ ಮುಂಬಯಿ ನಲ್ಲೆ ಹುಟ್ಟಿ ಬೆಳೆದ ರವಿ ಶಾಸ್ತ್ರೀ ಅಲ್ಲೇ ಶಿಕ್ಷಣ ಪಡೆದು ದೇಶದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾದರು.

ಹನ್ನೆರಡು ವರ್ಷಗಳ ಹಿಂದೆ ಪತ್ನಿ ಸಮೇತ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ದೀರ್ಘಕಾಲ ಯಾವುದೇ ಸಮಸ್ಯೆಯಿಲ್ಲದೆ ಉಳಿದುಕೊಂಡಿದ್ದ ದಂಪತಿಗಳು ನಂತರ ಅವರ ಮಗಳು ಅಲೈಕಾವನ್ನು ಪಡೆದರು. ಅಂದಿನಿಂದ ವಾರ್ಷಿಕವಾಗಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತಿದ್ದಾರೆ. ಕಳೆದ ಮೂರು ವರ್ಷಗಳ ಕೋವಿಡ್ ಲಾಕ್ ಡೌನ್ ಹಿನ್ನೆಲೆ ಹಾಗು ವಲ್ಡ್ ಕಪ್ ಒತ್ತಡಗಳಿಂದ ಮೂರು ವರ್ಷಗಳು ಬರಲು ಸಾಧ್ಯವಾಗಲಿಲ್ಲ

ಮುಂದಿನ ತಿಂಗಳಲ್ಲಿ ನಡೆಯುವ ಐಪಿಎಲ್ ಪಂದ್ಯಾಟದ ಬಗ್ಗೆ ಉಲ್ಲೇಖಿಸಿದ ರವಿ ಶಾಸ್ತ್ರಿ ಹತ್ತು ಟೀಂಗಳಿದ್ದು ಕ್ರೀಡಾ ಕ್ಷೇತ್ರ ವೆ ಕಾತರದಲ್ಲಿದೆ. ಈಗಾಗಲೇ ಅದರ ಪೂರ್ವ ತಯಾರಿಗಳು ನಡೆಯುತಿದೆ .ಐಪಿಎಲ್ ನಲ್ಲಿ ಯುವ ಆಟಗಾರರಿಗೆ ತೆರೆದಿಟ್ಟ ವೇದಿಕೆಯಾಗಿದ್ದು ದಾಖಲೆಗಳಿಗೆ ಸ್ಪೂರ್ತಿದಾಯಕವಾಗಿದೆ. ಮುಂದೆ ನಡೆಯಲಿರುವ ವರ್ಲ್ಡ್‌ ಕಪ್ ನಲ್ಲಿ ಉತ್ತಮ ಕ್ರೀಡಾಪಟುಗಳಿಗೆ ಭಾಗವಹಿಸಲು ಐಪಿಎಲ್ ಬಹುದೊಡ್ಡ ವೇದಿಕೆ ಕಲ್ಪಿಸುತ್ತಿದೆ.

ಭಾರತೀಯ ಕ್ರಿಕೆಟ್ ತಂಡದ ಉಲ್ಲೇಖಿಸಿದ ರವಿ ಶಾಸ್ತ್ರಿ ಕ್ರೀಡೆಯಲ್ಲಿ ಏರಿಳಿತಗಳು ಸರ್ವೆ ಸಾಮಾನ್ಯ ವಾಗಿದೆ. ಆದರೆ ಅದರಲ್ಲೂ ಉತ್ತಮ ಪ್ರತಿಭೆ ತೋರುತ್ತಿರುವುದು ಶ್ಲಾಘನೀಯ ಎಂದರು. ಕ್ರಿಕೇಟಿಗ ಕೆ‌.ಎಲ್ ರಾಹುಲ್ ಉಲ್ಲೇಖಿಸಿದ ರವಿ ಶಾಸ್ತ್ರಿ ಉತ್ತಮ ಶ್ರೇಯಾಂಕ ದಲ್ಲಿ ಆಡುತಿದ್ದಾನೆ .ಮುಂದಿನ ಎಂಟು ವರ್ಷಗಳಲ್ಲಿ ಆತನಿಗೆ ಉತ್ತಮ ಭವಿಷ್ಯವಿದೆ ಎಂದರು.

ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಆಲೌರೌಂಡರ್ಗಳ ಕೊರತೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರವಿ ಶಾಸ್ತ್ರಿ ಜಡೇಜ ಹಾಗೂ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ ‌. ಕ್ರೀಡೆಯಲ್ಲಿ ‌ಸೋಲು ಗೆಲುವು ಸಹಜವಾಗಿದೆ
ಗಾಯಾಳು ರಿಷಭ್ ಪಂತ್ ಅದ್ಭುತ ಕ್ರಿಕೆಟ್ ಆಟಗಾರ ಅದಷ್ಟು ಬೇಗ ಪೀಲ್ಡ್ ಗೆ ಮರಳಲಿದ್ದು , ಅವರ ಬರುವಿಕೆಯನ್ನು ಭಾರತ ಮಾತ್ರವಲ್ಲದೆ ಇಡಿ ವಿಶ್ವವೇ ಕಾಯುತ್ತಿದೆ . ಮುಂದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ ವಹಿಸಲಿದ್ದು ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದರು

DAKSHINA KANNADA

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ, ಇನ್ನೋರ್ವನಿಗಾಗಿ ಶೋಧ

Published

on

ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ದಿಲ್‌ಜಾನ್‌ ಅನ್ಸಾರಿ ಎಂಬಾತನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದ ಆರೋಪಿಗಳಾದ ಕೂಳೂರು ನಿವಾಸಿ ಸಾಗರ್‌, ಧನುಷ್‌, ಲಾಲು ಯಾನೆ ರತೀಶ್‌ ಮತ್ತು ಮೋಹನ್ ಎಂಬ ನಾಲ್ವರ ಪೈಕಿ ಕಾವೂರು ಪೊಲೀಸರು ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂಬವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಜನವರಿ 11 ರಂದು ಸಂಜೆ ಸುಮಾರು 6 :05ರ ಸುಮಾರಿಗೆ ಜಾರ್ಖಂಡ್ ಮೂಲದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬಾತನನ್ನು ತಡೆದು ನಿಲ್ಲಿಸಿದ ನಾಲ್ವರು ಆರೋಪಿಗಳು, ‘ನೀನು ಬಾಂಗ್ಲಾದೇಶದವನು’ ಎಂದು ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲ್‌ಜಾನ್‌ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಜೊತೆಗೆ 3(5) ಅಡಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಪೆಡ್ಲರ್‌ಗಳಿಗೆ ಡ್ರಗ್‌ ಸಪ್ಲೈ ಮಾಡುತ್ತಿದ್ದ ಉಗಾಂಡ ಮಹಿಳೆ ಅರೆಸ್ಟ್

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿ ಕಾವೂರು ನಿವಾಸಿ ಮೋಹನ್‌ ಎಂಬಾತ ಪರಾರಿಯಾಗಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಅನುಪಮ ಮಹಿಳಾ ಮಾಸಿಕ ಪತ್ರಿಕೆ; ಜ.15ರಂದು ಬೆಳ್ಳಿ ಹಬ್ಬ ಸಂಭ್ರಮ, ವಿಶೇಷ ಸಂಚಿಕೆ ಬಿಡುಗಡೆ

Published

on

ಮಂಗಳೂರು: ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜ.15ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.


ಬೆಳ್ಳಿ ಹಬ್ಬವನ್ನು ಖ್ಯಾತ ಸಾಹಿತಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದಾರೆ ಎಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ನಡೆಯಲಿದೆ. ಗೌರವ ಅತಿಥಿಗಳಾಗಿ ಸ್ಪೀಕರ್ ಯು.ಟಿ ಖಾದರ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರನ್ನು ಕೂಡಾ ಸನ್ಮಾನಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

ಸುದ್ದಿಗೋಷ್ಠಿಯಲ್ಲಿ ಕರಾವಳಿ ಇತರ ಮಹಿಳಾ ಸಾಹಿತಿಗಳು, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

Published

on

ಮಂಗಳೂರು: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗುವುದಕ್ಕಿಂತ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ರೈತರ, ಮಹಿಳೆಯರ, ಕಾರ್ಮಿಕರ ಬಗ್ಗೆ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್‌ ಆರೋಪಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ದಿನಗಳ ಸಮಯಾವಕಾಶ ಕಡಿಮೆ ಆಯಿತು ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲಾವಕಾಶ ವಿಸ್ತರಿಸಿ ಎಂದು ಬಿಜೆಪಿ ಆಗ್ರಹಿಸಿದರೂ ಅದನ್ನು ವಿಸ್ತರಿಸಿಲ್ಲ. ಕೇವಲ ನಾಮಾಕಾವಸ್ತೆ ಉತ್ತರಕರ್ನಾಟಕದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಮಾಡಲಾಗಿದೆಯೇ ಹೊರತು ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ದೂರಿದರು.

ಈಗ ಮತ್ತೆ ತಕ್ಷಣ ಅಧಿವೇಶನ ಕರೆಯುವ ಬಗ್ಗೆ ಜೀ ರಾಮ್‌ಜೀ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಬಿಜೆಪಿ ಬಹಿರಂಗ ಚರ್ಚೆಗೂ ಸಿದ್ದ. ನಾವು ಚರ್ಚೆಯಿಂದ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ: ಡೆಲಿವರಿ ಬಾಯ್‌ ಆದ ರಾಜ್ಯಸಭಾ ಸಂಸದ; ವೀಡಿಯೋ ವೈರಲ್

ಆದರೆ ಈ ಚರ್ಚೆ ಪಾರ್ಲಿಮೆಂಟ್‌ನಲ್ಲಿ ಆಗುವಾಗ ನೀವು ಪ್ರತಿಪಕ್ಷವಾಗಿ ಏನು ಮಾಡಿದಿರಿ..? ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಶಿವರಾಜ್ ಸಿಂಗ್ ಚೌಹಾನ್‌ ಅವರನ್ನು ಮಾತನಾಡ್ಲಿಕ್ಕೆ ಬಿಡಲಿಲ್ಲ. ನೀವು ಅಂದು ನಡೆದುಕೊಂಡ ರೀತಿ ಎಂತದ್ದು. ಕಾಂಗ್ರೆಸ್ಸಿಗೆ ಈ ಮಸೂದೆಯ ಚರ್ಚೆ ಬೇಕಾಗಿಲ್ಲ. ಜನರ ದಾರಿತಪ್ಪಿಸಲು ಅವರು ಮುಂದಾಗಿದ್ದಾರೆ. ಕೇಂದ್ರದ ಯೋಜನೆಗಳ ಬಗ್ಗೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page