Connect with us

DAKSHINA KANNADA

ಅರಣ್ಯ ಸಿಬ್ಬಂದಿಯ ಮನೆಯಲ್ಲೇ ಅಕ್ರಮ ಮರದ ದಿಮ್ಮಿಗಳ ದಾಸ್ತಾನು ಪತ್ತೆ..!

Published

on

ಪುತ್ತೂರು: ಕರ್ನಾಟಕ ಅರಣ್ಯ ರಬ್ಬರ್ ನಿಗಮದ ನೌಕರರೊಬ್ಬರ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾದ ಬೆಲೆಬಾಳುವ ಮರಗಳನ್ನು ಪುತ್ತೂರು ಅರಣ್ಯ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಪುತ್ತೂರು ಕೆಎಫ್‌ಡಿಸಿ ಇಲಾಖೆಯ ನೌಕರ, ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್ ಎಂಬವರ ಮನೆಯಲ್ಲಿ ಸುಮಾರು 2.5 ಲಕ್ಷ ರೂಪಾಯಿಗೂ ಅಧಿಕ ಬೆಲೆಯ ಬೀಟೆ, ಹಲಸು, ಸಾಗುವಾನಿ ಹಾಗೂ ಇತರೆ ಜಾತಿಯ ಮರದ ದಿಮ್ಮಿಗಳು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಇಲಾಖೆ ದಾಳಿ ಮಾಡಿ ಪತ್ತೆ ಹಚ್ಚಿದೆ.

ಅರುಣ್ ಅವರ ಮನೆಗೆ ದಾಳಿ ನಡೆಸಿ ಮರಗಳನ್ನು ಸ್ವಾಧೀನ ಪಡಿಸಿಕೊಂಡು ಅರುಣ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.ಇನ್ನು ದಾಳಿಯಾಗುತ್ತಿದ್ದಂತೆ ಅರುಣ್ ಕುಮಾರ್ ಅವರು ತಲೆಮರೆಸಿಕೊಂಡಿದ್ದಾರೆಂದು ತಿಳಿದುಬಂದಿದೆ.

DAKSHINA KANNADA

7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ, ಲುಕ್ ಔಟ್ ನೋಟಿಸ್ ಹೊರಡಿಸಿದ ಕೊಣಾಜೆ ಪೊಲೀಸರು

Published

on

ಮಂಗಳೂರು: ನಗರದ ಹೊರವಲಯದ ಪಿ ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕಾಸರಗೋಡು ನಿವಾಸಿ ಸಲೀಂ ಎಂಬವರ ಪುತ್ರ ಮೊಹಮ್ಮದ್ ಶಾಮೀಲ್‌(21) ಎಂಬವರು 7  ವರ್ಷಗಳ ಹಿಂದೆ ಪಿ ಎ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 14-4-2018ರಂದು ಕಾಲೇಜಿನ ಪಾರ್ಕಿಂಗ್ ಸ್ಥಳಕ್ಕೆ ಬಂದು ಕಾಲೇಜಿನ ಒಳಗೆ ಬಾರದೇ ಮನೆಗೂ ಹೋಗದೇ ನಾಪತ್ತೆಯಾಗಿದ್ದರು.

ಅವರನ್ನು ಕೂಡಲೇ ಪತ್ತೆ ಮಾಡಿಕೊಡುವಂತೆ ಲಿಖಿತ ದೂರನ್ನು ಕೊಣಾಜೆ ಠಾಣಾ ಪೊಲೀಸರಲ್ಲಿ ದಾಖಲಿಸಿದ್ದರು. ಪಿ ಎ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್ ಎಂಬವರು ಕೊಣಾಜೆ ಠಾಣೆಗೆ ಮತ್ತೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಎತ್ತರ 168 CM, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕಪ್ಪು ಕುರುಚಲು ಗಡ್ಡ ಮತ್ತು ಮೀಸೆ ಹಾಗೂ ಉದ್ದ ತಲೆ ಕೂದಲು ಹೊಂದಿದ್ದಾರೆ. ಮಾಲಯಾಳಂ, ಇಂಗ್ಲೀಷ್, ಹಿಂದಿ ಭಾಷೆಯನ್ನು ಅವರು ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ  0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9091873198 ,9535247535 ನೇ ಸಂಖ್ಯೆಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

 

 

Continue Reading

DAKSHINA KANNADA

ಮಂಗಳೂರು: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರು ಅರೆಸ್ಟ್

Published

on

ಮಂಗಳೂರು: ಡ್ರಗ್‌ ಪೆಡ್ಲಿಂಗ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಕೋಟೆಕಾರು ಗ್ರಾಮದ ಬಗಂಬಿಲ ಮೈದಾನ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಬಂಧಿಸಿದ್ದಾರೆ. ಮೊಹಮ್ಮದ್ ನಿಗಾರೀಸ್, ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಸಬೀರ್ ಅಹಮ್ಮದ್ ಬಂಧಿತ ಆರೋಪಿಗಳು.

ಆರೋಪಿಗಳಿಂದ 59,300 ರೂ. ಬೆಲೆಬಾಳುವ 1.511 ಕೆಜಿ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ತೂಕ ಮಾಪಕ, 2 ಮೊಬೈಲ್, 1 ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರದ ಧುಲೆ ನಿವಾಸಿ ಮೊಹಮ್ಮದ್ ನಿಗಾರೀಸ್  ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ.

ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಪೆರ್ಮನ್ನೂರು ಗಂಡಿ ನಿವಾಸಿ ಸಬೀರ್ ಅಹಮ್ಮದ್‌, ಡ್ರೈವರ್ ಮತ್ತು ಪೈಂಟರ್ ಅಗಿದ್ದವರು. ಶಕೀಬನು ಬಿ.ಸಿ.ರೋಡ್‌ನ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದುಕೊಂಡು ಮಾರಾಟ ಮಾಡುತ್ತಿರುವಾಗ ಗಂಡಿ ಪ್ರದೇಶದಲ್ಲಿ  ಬಂಧಿಸಿದ್ದಾರೆ.

 

Continue Reading

DAKSHINA KANNADA

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

Published

on

ಸುಬ್ರಹ್ಮಣ್ಯ: ಬಹುಭಾಷಾ ನಟಿ ನಯನ ತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆವ ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗಿಯಾದರು.

ಪತಿ ವಿಘ್ನೇಶ್‌ ಶಿವನ್ ಜೊತೆ ಆಗಮಿಸಿದ ನಯನ್ ತಾರಾ ದಂಪತಿಗೆ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಉಪಸ್ಥಿತಿಯಲ್ಲಿ ಸಮಿತಿ ಪ್ರಮುಖರು ಸೇರಿ ಗೌರವ ಸಲ್ಲಿಸಿದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page