Connect with us

LATEST NEWS

ನೇಪಾಳ: 72 ಮಂದಿಯನ್ನು ಹೊತ್ತೊಯುತ್ತಿದ್ದ ವಿಮಾನ ಪತನ – ಭಾರತೀಯರು ಸೇರಿ   ಹಲವರು ಸಾವನ್ನಪ್ಪಿರುವ ಶಂಕೆ : 32 ಮೇರ ದೇಹ ಹೊರಕ್ಕೆ..!

Published

on

ಕಠ್ಮಂಡು: ಸುಮಾರು 72 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನ ರವಿವಾರ ಬೆಳಗ್ಗೆ ನೇಪಾಳದ ಪೋಖರಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ.

ಪತನಗೊಂಡ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪೋಖರಾ-ಕಠ್ಮಂಡು ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಯೇತಿ ಏರ್‌ಲೈನ್ಸ್ ಸೇರಿರುವ ಅವಳಿ-ಎಂಜಿನ್ ಎಟಿಆರ್ 72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪೋಖರಾಕ್ಕೆ ಹೊರಟಿತ್ತು.

ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಸಮೀಪವಿದ್ದಾಗ ಹಳೆಯ ವಿಮಾನ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ. 32 ಮಂದಿ ಮೃತದೇಹಗಳನ್ನ ಹೊರಕ್ಕೆ ತೆಗೆಯಲಾಗಿದೆ.

ವಿಮಾನವು ರನ್‌ವೇಗೆ ಅಪ್ಪಳಿಸಿದ್ದು, ಅದರ ರಭಸಕ್ಕೆ ಕೂಡಲೇ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ.

ಮುಗಿಲೆತ್ತರ ಚಿಮ್ಮುತ್ತಿದ್ದ ಅಗ್ನಿ ಜ್ವಾಲೆಗಳನ್ನು ನಂದಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಕ್ಷಣಾ ಕಾರ್ಯಚರಣೆ ಮುಕ್ತಾಯವಾಗುವವರೆಗೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ವಿಮಾನದಲ್ಲಿ 53 ಮಂದಿ ನೇಪಾಳಿಗರು, ಐವರು ಭಾರತೀಯರು, ನಾಲ್ವರು ರಷ್ಯನ್ನರು, ಇಬ್ಬರು ಕೊರಿಯನ್ಸ್‌, ಅರ್ಜೆಂಟೀನಿಯಾ ಹಾಗೂ ಐರಿಶ್‌ ದೇಶದ ಒಬ್ಬೊಬ್ಬರು ಪ್ರಯಾಣಿಸುತ್ತಿದ್ದರು.

ಪೋಖ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನ ಅಪಘಾತ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ತುರ್ತು ಕ್ಯಾಬಿನೆಟ್ ಸಭೆ ಕರೆದಿದೆ. ರಕ್ಷಣಾ ಕಾರ್ಯಚರಣೆ ಬಗ್ಗೆ ಚರ್ಚೆಗೆ ತಕ್ಷಣವೇ ಬರುವಂತೆ ಸೂಚನೆ ನೀಡಿದೆ.

BIG BOSS

BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

Published

on

BBK12: ಟಾಪ್‌-06ನಲ್ಲಿ ಕಾವ್ಯಾ ಅವರು ಇರೋದಕ್ಕೆ ಅರ್ಹರಲ್ಲ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.


ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರ ಹೊಮ್ಮಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ ಕಾವ್ಯಾ ಶೈವ ಅವರ ಜೊತೆ ರಕ್ಷಿತಾ ಶೆಟ್ಟಿ ಅವರಿಗೆ ಅಷ್ಟೊಂದು ಒಡನಾಟವಿರಲಿಲ್ಲ.

ನಾಮಿನೇಶನ್‌ ವಿಚಾರದಲ್ಲೂ ಕಾವ್ಯಾ ಮತ್ತು ರಕ್ಷಿತಾ ಅವರಿಗೆ ಆಗ್ಗಾಗೇ ಜಗಳವಾಗುತ್ತಿತ್ತು. ಅಲ್ಲದೆ ಗಿಲ್ಲಿ ಕಾವ್ಯಾ ಫ್ರೆಂಡ್‌ಶಿಪ್ ಕುರಿತು ರಕ್ಷಿತಾ ಅವರಿಗೆ ಅಸಮಾಧಾನವಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ಕಾವ್ಯಾ ಅವರ ಜೊತೆ ಇರುವ ಮುನಿಸು ರಕ್ಷಿತಾ ಅವರಿಗೆ ಕಡಿಮೆಯಾಗಿಲ್ಲ ಎನ್ನಬಹುದು.

ಇದನ್ನೂ ಓದಿ: ರಕ್ಷಿತಾ ಕ್ಷಮಾಪಣೆ ಪತ್ರದ ಬಗ್ಗೆ ಧ್ರುವಂತ್ ಪೋಸ್ಟ್: ನಮ್ಮಿಬ್ಬರದ್ದು ಒಂದೇ ರಾಶಿ-ನಕ್ಷತ್ರ!

ಇದೀಗ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ಟಾಪ್‌ 6ನಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ, ಅವರ ಬದಲಿಗೆ ಜಾನ್ವಿ ಅವರು ಇರಬೇಕಿತ್ತು. ಮಾಲು ಅಣ್ಣ ಇರಬಹುದಿತ್ತು. ಮಾಲು ಅವರು ಮಾತನಾಡುವುದು ಕಡಿಮೆ. ಆದರೆ ಅವರದ್ದು ಒಳ್ಳೆಯ ವ್ಯಕ್ತಿತ್ವ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

Published

on

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026’ ಅಂತಾರಾಜ್ಯ ಪ್ರಶಸ್ತಿಯನ್ನು  ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆರಿಗೆ ಪ್ರದಾನ ಮಾಡಲಾಯಿತು.

ಕಾಸರಗೋಡು ನುಳ್ಳಿಪಾಡಿಯಲ್ಲಿ ನಡೆದ ಕನ್ನಡ ಭವನ ರಜತ ಸಂಭ್ರಮ – ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನುಅವರು  ಸ್ವೀಕರಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ  ಅಂಕಣಕಾರರಾಗಿ ಹಾಗೂ ಕ್ರೀಡಾ  ವಿಮರ್ಶಾತ್ಮಕ ಲೇಖನಗಳ  ಮೂಲಕ ಎಸ್. ಜಗದೀಶ್ಚಂದ್ರ ಅಂಚನ್ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ.ಕೆ.ವಾಮನ್ ರಾವ್, ನಿರ್ದೇಶಕ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕರ್ನಾಟಕ ಬ್ಯಾರಿ‌ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ , ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ , ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಸಾಹಿತಿ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು  ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

Published

on

 

ಸಾಂದರ್ಭಿಕ ಚಿತ್ರ

ಮಂಗಳೂರು : ವಿವಿಧ ಡಾಕ್ಯುಮೆಂಟ್ಸ್‌ ಗಳಿದ್ದ ಪರ್ಸೊಂದು ಕಳೆದುಹೋಗಿದೆ. ಚೇತನ್ ಎಂಬವರು ಬಂಟ್ವಾಳದಿಂದ ಕುಂಟಲ್ ಪಲ್ಕೆಯವರೆಗೆ ಆಟೋದಲ್ಲಿ ಪ್ರಯಾಣಿಸಿದ್ದು, ಈ ವೇಳೆ ಅವರ ಪರ್ಸ್  ಜೇಬಿನಿಂದ ಕೆಳಗೆ ಬಿದ್ದಿದೆ. ಅದರಲ್ಲಿ ಆಧಾರ್ ಕಾರ್ಡ್, ಹಣ ಹಾಗೂ ಇತರೆ ಡಾಕ್ಯುಮೆಂಟ್ಸ್‌ ಗಳಿದ್ದವು. ಯಾರಿಗಾದರೂ ಪರ್ಸ್ ಸಿಕ್ಕಿದ್ದಲ್ಲಿ 9036015784 ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page