Connect with us

LATEST NEWS

WATCH : ಜಿರಾಫೆಯೊಡನೆ ಸಿಂಹಿಣಿಗಳ ಹೋರಾಟ; ವೀಡಿಯೋ ವೈರಲ್

Published

on

ಮಂಗಳೂರು/ಆಫ್ರಿಕಾ:  ಕಾಡಿನ ರಾಜ ಎಂಬುವುದಾಗಿ ಸಿಂಹವನ್ನು ಹೇಗೆ ಪರಿಗಣಿಸುತ್ತೇವೋ ಅದೇ ರೀತಿ ಸಿಂಹಿಣಿಯೂ ಯಾವುದರಲ್ಲಿಯೂ ಕಮ್ಮಿ ಇರುವುದಿಲ್ಲ. ಒಮ್ಮೊಮ್ಮೆ ರಾಜನಿಗಿಂತಲೂ ಹೆಚ್ಚಾಗಿಯೇ ಶಕ್ತಿಯನ್ನು ಪ್ರದರ್ಶಿಸುತ್ತದೆ. ಬುದ್ದಿವಂತಿಕೆ, ಚಾಣಕ್ಷತನವೆಲ್ಲವೂ ಹೆಚ್ಚಾಗಿಯೇ ಇರುತ್ತದೆ. ಯಾವುದೇ ಪ್ರಾಣಿಯನ್ನೂ ಕೂಡ ಕ್ಷಣದಲ್ಲಿ ಬೇಟೆಯಾಡಿ ಕೊಂದು ಬಿಡುತ್ತದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಸಿಂಹಿಣಿಯೊಂದು ಜಿರಾಫೆಯ ಮೇಲೆ ಜಿಗಿದು ಬೇಟೆಯಾಡಿದ ಘಟನೆ ಆಫ್ರಿಕಾದ ಬೋಟ್ಸ್ವಾನಾದಲ್ಲಿರುವ ಚೋಬ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಇದನ್ನು ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.

ವೀಡಿಯೋದಲ್ಲಿ ಏನಿದೆ?

ಈ ವೀಡಿಯೋದಲ್ಲಿ, ಒಂಟಿ ಜಿರಾಫೆಯು ಸಿಂಹಿಣಿಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತದೆ. ಗುಂಪಿನಿಂದ 10-12 ಸಿಂಹಿಣಿಗಳು ಸುತ್ತುವರೆದಿವೆ. ಒಂದೆಡೆ ಸಿಂಹಿಣಿಗಳು ಅದನ್ನು ಬೇಟೆಯಾಡಲು ಬಯಸುತ್ತಿದ್ದರೆ, ಮತ್ತೊಂದೆಡೆ ಜಿರಾಫೆಯು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ. ಒಂದೊಂದಾಗಿ, ಮೂರು ಸಿಂಹಿಣಿಗಳು ಜಿರಾಫೆಯ ಬೆನ್ನಿನ ಮೇಲೆ ಹತ್ತಿ ಬೇಟೆಯಾಡಲು ಪ್ರಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ : Watch video: ಸೊಸೆ ಜೊತೆ ಮುಖೇಶ್ ಅಂಬಾನಿ ಅನುಚಿತ ವರ್ತನೆ; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

 

 

Advertisement
Click to comment

Leave a Reply

Your email address will not be published. Required fields are marked *

LATEST NEWS

‘ವ್ಯಾಪಾರ ರಿಯಾಯಿತಿ ಬದಲು ಕದನ ವಿರಾಮಕ್ಕೆ ಸಹಾಯ ಮಾಡಿದ್ದೇನೆ…’ : ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ ಭಾರತ

Published

on

ಮಂಗಳೂರು/ಹೊಸದಿಲ್ಲಿ: ಭಾರತ ಹಾಗೂ ಪಾಕ್ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿರುವಾಗಲೇ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ವ್ಯಾಪಾರ ರಿಯಾಯಿತಿಯ ಬದಲಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಸಹಾಯ ಮಾಡಿದ್ದೇನೆ’ ಎಂಬ ಹೇಳಿಕೆ ನೀಡಿದ್ದನು. ಇದೀಗ ಟ್ರಂಪ್ ಹೇಳಿಕೆಗೆ ಭಾರತ ಸರ್ಕಾರ ನಿನ್ನೆ (ಮೇ 13) ತಿರಸ್ಕಾರ ವ್ಯಕ್ತ ಪಡಿಸಿದೆ.

ವಿದೇಶಾಂಗ ಸಚಿವಾಲಯ ಹೇಳಿದ್ದೇನು ..?

“ಮೇ 7 ರಂದು ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ ಮೇ 10 ರಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ತಿಳುವಳಿಕೆ ಬರುವವರೆಗೆ, ಹೆಚ್ಚುತ್ತಿದ್ದ ಮಿಲಿಟರಿ ಪರಿಸ್ಥಿತಿಯ ಕುರಿತು ಭಾರತ ಮತ್ತು ಅಮೆರಿಕಾ ನಾಯಕರ ನಡುವೆ ಸಂಭಾಷಣೆಗಳು ನಡೆದವು. ಯಾವುದೇ ಚರ್ಚೆಗಳಲ್ಲಿ ವ್ಯಾಪಾರದ ವಿಷಯವು ಬರಲಿಲ್ಲ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ನಾವು ಅವರ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ..! ಉಗ್ರರ ಜೊತೆ ಪಾಕ್‌ಗೂ ಖಡಕ್ ಎಚ್ಚರಿಕೆ ಕೊಟ್ಟ ಮೋದಿ ..!

ವ್ಯಾಪಾರದ ಮಾತುಕತೆ ನಡೆದಿಲ್ಲ ..!

ಇತ್ತೀಚಿನ ಮಿಲಿಟರಿ ಉಲ್ಬಣದ ಸಮಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಯಾವುದೇ ಚರ್ಚೆಗಳಲ್ಲಿ “ವ್ಯಾಪಾರದ ವಿಷಯವು ಬರಲಿಲ್ಲ” ಎಂದು ನಿಸ್ಸಂದಿಗ್ಧವಾಗಿ ಹೇಳಿದೆ. ಟ್ರಂಪ್‌ ಅವರ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ (MEA), ಪಾಕಿಸ್ತಾನದೊಂದಿಗಿನ ಉದ್ವಿಗ್ನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಾಯಕತ್ವ ಸಂಪರ್ಕದಲ್ಲಿತ್ತು, ಆದರೆ ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿತು.

Continue Reading

bangalore

ಮತ್ತೆ ಆವರಿಸುತ್ತಿರುವ ಮುಂಗಾರು ; ಸಿಡಿಲು, ಮಿಂಚು ಸಹಿತ ರಾಜ್ಯಾದ್ಯಂತ ಅಲ್ಲಲ್ಲಿ ಮಳೆ

Published

on

ಬಳ್ಳಾರಿ/ ಬೆಂಗಳೂರು/ದ.ಕ/ಉಡುಪಿ : ಒಂದೊಮ್ಮೆ ಭಾರೀ ಆರ್ಭಟಿಸಿ ಬಳಿಕ ಕೊಂಚ ತಣ್ಣಗಾಗಿದ್ದ ಮುಂಗಾರು ಪೂರ್ವ ಮಳೆ ಮತ್ತೆ ರಾಜ್ಯಾದ್ಯಂತ ಆವರಿಸಿದೆ. ನಿನ್ನೆ (ಮೇ.13) ಒಂದೇ ದಿನ ರಾಜ್ಯಾದ್ಯಂತ ಅಲ್ಲಲ್ಲಿ ಸಿಡಿಲು, ಮಿಂಚು ಸಹಿತ ವರುಣನ ಆರ್ಭಟ ಜೋರಾಗಿಯೇ ಇತ್ತು.

ಬಳ್ಳಾರಿಯಲ್ಲಂತೂ ವರುಣನಾರ್ಭಟ ಜೋರಾಗಿಯೇ ಇತ್ತು ಮಾತ್ರವಲ್ಲದೆ, ಅಪಾರ ಹಾನಿಯೂ ಸಂಭವಿಸಿದೆ. ಮೊದಲೇ ಟ್ರಾಫಿಕ್ ಜಾಮ್ ಹೆಚ್ಚಿರುವ ಬೆಂಗಳೂರಿನಲ್ಲಿ ನಿನ್ನೆ ಮತ್ತೂ ಅಧಿಕ ಹೊತ್ತು ಜಾಮ್ ಆಘಿತ್ತು ಮಾತ್ರವಲ್ಲದೆ, ಬಸ್‌ ಒಳಗೂ ನೀರು ನುಗ್ಗಿ ಪ್ರಯಾಣಕ್ಕೆ ತೊಂದರೆ ನಿಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲೂ ಅಲ್ಲಲ್ಲಿ ಜೋರು ಮಳೆ ಸುರಿದಿದೆ.

ಬಳ್ಳಾರಿಯಲ್ಲಿ ಸಿಡಿಲು ಬಡಿದು ಪ್ರಾಣಹಾನಿ :

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಕುರಿಗಾಹಿಗಳು ಬಲಿಯಾಗಿದ್ದಾರೆ. ಬೀರಪ್ಪ (45), ಸುನೀಲ (26), ವಿನೋದ್ (14) ಮೃತ ದುರ್ದೈವಿಗಳು. ಕುರಿ ಮೇಯಿಸಲು ತೆರಳಿದ್ದಾಗ ಜೋರು ಮಳೆ ಬಂದಿದೆ. ಈ ವೇಳೆ, ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ಸಿರಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ರೈತ ಸುನೀಲ ಕಾಳೇರ (29), ಹಾನಗಲ್ಲ ತಾಲೂಕಿನ ಕೊಂಡೋಜಿ ಗ್ರಾಮದಲ್ಲಿ ವೃದ್ದೆ ಮರಿಯಮ್ಮ ನಾಯ್ಕ‌ರ್ (60) ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್‌ಜಾಮ್, ಬಸ್‌ ಒಳಗೂ ನೀರು :

ಬೆಂಗಳೂರಿನಲ್ಲಿ ಸುರಿದ ಗುಡುಗು, ಗಾಳಿ ಸಹಿತ ಭಾರಿ ಮಳೆಗೆ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್, ಕೆ.ಆ‌ರ್. ಸರ್ಕಲ್ ಸುತ್ತಮುತ್ತ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾನ್ಯತಾ ಟೆಕ್ ಪಾರ್ಕ್‌ ಬಳಿ ಬಿಎಂಟಿಸಿ ಬಸ್ ಒಳಗೆ ಮಳೆ ನೀರು ನುಗ್ಗಿದೆ. ಭಾರಿ ಮಳೆಯಿಂದ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಿಂದ ಬಸ್‌ ಒಳಭಾಗಕ್ಕೆ ಮಳೆ ನೀರು ಹರಿದಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆ :

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಸಿಡಿಲು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

Continue Reading

LATEST NEWS

ಬೈಕ್‌ ಓಡಿಸುತ್ತಲೇ ಹಠಾತ್ ಹೃದಯಾಘಾತ; ಯುವಕ ಜೀವಾಂತ್ಯ

Published

on

ಮಂಗಳೂರು./ಉತ್ತರ ಪ್ರದೇಶ: ಗಮನಿಸಿದ್ದೀರಾ ..? ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದೆ. ದಿನದಿಂದ ಇನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಯಾವ ಸಂದರ್ಭ ಹೇಗೆ ಆಗುತ್ತದೆ ಎಂದು ಹೇಳುವುದೇ ಅಸಾಧ್ಯ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಸ್ವಲ್ಪ ಸಮಯದ ಹಿಂದೆ ಚೆನ್ನಾಗಿದ್ದ ಯುವಕ ಹಠಾತ್ತನೆ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಹೌದು.. ವ್ಯಕ್ತಿಯೊಬ್ಬ ಬೈಕ್‌ ಓಡಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಗಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಕತ್ ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಚ್ ಪೇಡಾ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : ಲಾರಿ ಡಿಕ್ಕಿ ಹೊಡೆದು ಸಶಸ್ತ್ರ ಮೀಸಲು ಪಡೆ ಪೇದೆ ದುರಂತ ಅಂತ್ಯ

ಸಿಸಿಟಿವಿ ದೃಶ್ಯದಲ್ಲಿ 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಹಠಾತ್ತನೆ ಹೃದಯಾಘಾತವಾಗಿ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾನೆ. ಕೂಡಲೇ ಅಲ್ಲಿನ ಸ್ಥಳೀಯರು ಆತನ ಸಹಾಯಕ್ಕೆ ಮುಂದಾಗಿ ಸಿಪಿಆರ್ ನೀಡಿದ್ದಾರೆ. ಜೊತೆಗೆ ಆಸ್ಪತ್ರೆಗೂ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page