Connect with us

LATEST NEWS

ಕೋಲಾರದಲ್ಲಿ 2021ರ ಮೊದಲ ದಿನವೇ ಭೀಕರ ಅಪಘಾತ: ತಂದೆ ಮಗ ಸೇರಿ ಮೂವರು ಬಲಿ..! 

Published

on

ಕೋಲಾರದಲ್ಲಿ 2021ರ ಮೊದಲ ದಿನವೇ ಭೀಕರ ಅಪಘಾತ: ತಂದೆ ಮಗ ಸೇರಿ ಮೂವರು ಬಲಿ..!

ಕೊಲಾರ:ಮಾಲೂರು ತಾಲೂಕಿನ ಹರಿಪುರ ಗೇಟ್ ಬಳಿ ನಿನ್ನೆ ಶುಕ್ರವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ತಂದೆ-ಮಗ ಸೇರಿ ಮೂವರು ದುರಂತ ಅಂತ್ಯ ಕಂಡಿದ್ದಾರೆ.

ಕುಪ್ಪಂನಿಂದ ಮಾಲೂರಿಗೆ ಪತ್ನಿ ಮತ್ತು ಮಗನೊಂದಿಗೆ ಮಾಲೂರು ಪಟ್ಟಣಕ್ಕೆ ಬೈಕ್​ನಲ್ಲಿ ಮುನಿರಾಜು ಆಗಮಿಸುತ್ತಿದ್ದರು. ಮಾಲೂರು ಪಟ್ಟಣದಿಂದ ಟೇಕಲ್​ನತ್ತ ಅನಿಲ್ ಕುಮಾರ್ ಕೂಡ ಬೈಕ್​ನಲ್ಲಿ ತೆರಳುತ್ತಿದ್ದರು

.

ಮೃತರಲ್ಲಿ  ನೊಸಗೆರೆಯ 35 ವರ್ಷದ ಮುನಿರಾಜು), ಇವರ ಪುತ್ರ 9 ವರ್ಷದ ಪ್ರವೀಣ್  ಹಾಗೂ ಟೇಕಲ್​ನ 24 ವರ್ಷದ ಅನಿಲ್ ಮೃತ ದುರ್ದೈವಿಗಳಾಗಿದ್ದಾರೆ.

ಹರಿಪುರ ಗೇಟ್ ಬಳಿ ಈ ಎರಡೂ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಪ್ರವೀಣ್ ಸ್ಥಳದಲ್ಲೇ ಮೃತಪಟ್ಟರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮುನಿರಾಜು ಹಾಗೂ ಅನಿಲನ್ನು  ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಹೇಳಗಾಗಿದೆ.

ಮುನಿರಾಜು ಪತ್ನಿ ಗಾಯಗೊಂಡಿದ್ದು, ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಬೈಕ್​ಗಳು ನಜ್ಜುಗುಜ್ಜಾಗಿವೆ. ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಸಮಗ್ರ ನೆಫ್ರಾಲಜಿ ಸೌಲಭ್ಯದ ಮೂಲಕ ನಿರಂತರ ಸೇವೆ ನೀಡಲಾಗುತ್ತಿದೆ : ಕೆಎಂಸಿ ಆಸ್ಪತ್ರೆ

Published

on

ಮಂಗಳೂರು : ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು , ಶೀಘ್ರ ರೋಗ ಪತ್ತೆ, ಚಿಕಿತ್ಸೆ ಮತ್ತು ಕಿಡ್ನಿ ಸಮಸ್ಯೆಯ ದೀರ್ಘ ಕಾಲದ ನಿರ್ವಹಣೆಯನ್ನು ಗುರಿಯಾಗಿಸಿ ತನ್ನ ಸಮಗ್ರ ಮೂತ್ರಪಿಂಡ (ಕಿಡ್ನಿ) ಆರೈಕೆಯ  ಸೇವೆಯನ್ನು ಒತ್ತಿ ಹೇಳಿದೆ. ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚಿಸುವ ಈ ನೇತೃತ್ವವನ್ನು ಆಸ್ಪತ್ರೆಯ ನೆಫ್ರಾಲಜಿ ವಿಭಾಗವು ಕೈಗೊಂಡಿದೆ.

ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ದಕ್ಷಿಣಕನ್ನಡದ ಅತಿದೊಡ್ಡದಾದ ಡಯಾಲಿಸಿಸ್‌ ಘಟಕವನ್ನು ಹೊಂದಿದ್ದು, 24 ಗಂಟೆ ನಿರಂತರ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನೆಫ್ರಾಲಜಿಸ್ಟ್‌ಗಳನ್ನು ಹೊಂದಿರುವ ಏಕೈಕ ಘಟಕವಾಗಿದ್ದು, ಸದಾ ರೋಗಿಯ ಆರೈಕೆಗೆ ಮುಡಿಪಾಗಿರುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ನೆಫ್ರಾಲಜಿ ತಜ್ಞ, ಡಾ ಅಶೋಕ್‌ ಭಟ್‌, ವಿಶ್ವ ಕಿಡ್ನಿ ದಿನ  ಮೂತ್ರಪಿಂಡದ ಆರೋಗ್ಯವನ್ನು ಆದ್ಯತೆಯನ್ನಾಗಿ ಪರಿಗಣಿಸುವಂತೆ ನೆನಪಿಸುವ ದಿನ. ರೋಗ ಲಕ್ಷಣಗಳು ಸಮಸ್ಯೆ ಮುಂದುವರಿದ ಹಂತ ತಲುಪಿದಾಗ ಗೋಚರವಾಗುವ ಕಾರಣದಿಂದ  ಸಾಕಷ್ಟು ರೋಗಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಯ ಕುರಿತು ಅರಿವು ಹೊಂದಿರುವುದಿಲ್ಲ. ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್‌ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ರೋಗ ತಡೆಗಟ್ಟುವುದೇ ದೀರ್ಘ ಕಾಲದ ಕಿಡ್ನಿ ಆರೋಗ್ಯಕ್ಕೆ ದಾರಿ. ಪ್ರತಿಯೊಬ್ಬರು ನೆಫ್ರೊಲಾಜಿ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಸಲಹೆಯನ್ನು ಪಡೆಯಬೇಕು ಎಂದರು.

ಹಿರಿಯ ನೆಫ್ರಾಲಜಿ ತಜ್ಞ ಡಾ.ಸುಶಾಂತ್‌ ಕುಮಾರ್ ಮಾತನಾಡಿ, ಎಲ್ಲಾ ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್‌ ಒಂದೇ ಪರಿಹಾರವಲ್ಲ. ಡಯಾಲಿಸಿಸ್‌ ಸಿಕೆಡಿಯಲ್ಲಿ 5ನೇ ಹಂತದಲ್ಲಿ ಅಥವಾ ತೀವ್ರ ಪ್ರಮಾಣದ ಸಮಸ್ಯೆಗಳು ಕಂಡು ಬಂದಾಗ ಆರಂಭಿಸಬೇಕಾಗುತ್ತದೆ. ಡಯಾಲಿಸಿಸ್‌ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ. ಆದರೆ ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ನಮ್ಮಲ್ಲಿ ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಅದೇ ರೀತಿ ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಆ್ಯಕ್ಟ್‌ಗೆ ಅನುಗುಣವಾಗಿ ಎಲ್ಲಾ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು.

ಸೌಲಭ್ಯಗಳ ಕುರಿತು ಮಾತನಾಡಿದ ನೆಫ್ರಾಲಜಿ ವಿಭಾಗದ ಎಚ್‌ಒಡಿ ಡಾ.ಮಯೂರ್ ಪ್ರಭು, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ನಮ್ಮ ದಕ್ಷಿಣ ಕನ್ನಡದಲ್ಲೇ  ಅತಿದೊಡ್ಡ ಡಯಾಲಿಸಿಸ್‌  ಕೇಂದ್ರಗಳಲ್ಲಿ ಒಂದಾದ ಅಡ್ವಾನ್ಸ್ಡ್ ಡಯಾಲಿಸಿಸ್‌ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್ ಡಯಾಗ್ನೋಸ್ಟಿಕ್‌ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರಾಲಜಿ ಸೌಲಭ್ಯವನ್ನು ರೂಪಿಸಿದ್ದೇವೆ. ನಮ್ಮ ತಂಡವು ಅತಿದೊಡ್ಡ ತಜ್ಞರ ತಂಡವಾಗಿದ್ದು ವರ್ಷದ 365 ದಿನವೂ 24 ಗಂಟೆಗಳ ಆರೋಗ್ಯ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್‌ ದಾ*ಳಿ

ನಾವು ರೋಗಿ ಕೇಂದ್ರಿತ ಸೇವೆಗಳಾದ ಬೆಡ್‌ಸೈಡ್‌ ಟ್ರೀಟ್‌ಮೆಂಟ್‌, ಐಸಿಯುನಲ್ಲಿ ಡಯಾಲಿಸಿಸ್‌ ಸೌಲಭ್ಯ, ಶೂನ್ಯ ಹರಡುವಿಕೆಯ ವಿಧಾನದೊಂದಿಗೆ ಎಚ್‌ಐವಿ ಮತ್ತು ಎಚ್‌ಬಿಎಸ್‌ಎಜಿ ಸೋಂಕಿತರಿಗೆ ವಿಶೇಷ ಡಯಾಲಿಸಿಸ್‌ ಸೌಲಭ್ಯ, ಸುಸಜ್ಜಿತ ಎಚ್‌ಡಿಎಫ್‌ ಡಯಾಲಿಸಿಸ್ ಘಟಕ ಮತ್ತು ನಿಯಮಿತ ಡಯಾಲಿಸಿಸ್ ಅಗತ್ಯವಿರುವ ಹಾಸಿಗೆ ಹಿಡಿದ ರೋಗಿಗಳಿಗೆ ಮೀಸಲಾದ ಸಾರಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಪ್ರದೇಶದಲ್ಲಿ ರೋಗಿ-ಕೇಂದ್ರಿತ ನೆಫ್ರಾಲಜಿ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸುವುದರೊಂದಿಗೆ ಮೂತ್ರಪಿಂಡದ ಕಾಯಿಲೆಗಳ ಜಾಗೃತಿ, ಆರಂಭಿಕ ಪತ್ತೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಆಸ್ಪತ್ರೆ ಪುನರುಚ್ಚರಿಸುತ್ತದೆ ಎಂದರು.

Continue Reading

LATEST NEWS

ಬೆಂಗಳೂರು: ಟಿಪ್ಪರ್‌ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಜೀವಾಂತ್ಯ!

Published

on

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್‌ ಲಾರಿ ಹರಿದು 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನ 21 ವರ್ಷದ ಕೃತಿಕಾ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಕೃತಿಕಾ ಜೊತೆಗಿದ್ದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗೆಳತಿ ಹಂಸಾ ಜೊತೆ ಕೃತಿಕಾ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಚಲಿಸುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸ್ಕಿಡ್ ಆಗಿ, ಇಬ್ಬರು ಕೆಳಗೆ ಬಿದ್ದಿದ್ದಾರೆ. ಸ್ಕೂಟಿ ಚಲಾಯಿಸುತ್ತಿದ್ದ ಹಂಸಾ ಎಡಭಾಗಕ್ಕೆ ಬಿದ್ರೆ, ಕೃತಿಕಾ ಬಲಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಕೃತಿಕಾ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರೀತಿಸುವಂತೆ ಸಹಪಾಠಿಯಿಂದ ಒತ್ತಾಯ; ಶಾಲಾ ಕಟ್ಟಡದಿಂದ ಜಿ*ಗಿದು ವಿದ್ಯಾರ್ಥಿನಿ ಆ*ತ್ಮಹ*ತ್ಯೆ

ಹಂಸಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಬಗ್ಗೆ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದೇನು?

ಮೈಸೂರು ರಸ್ತೆಯಲ್ಲಿರುವ ಆರ್.ಆರ್ ಆಸ್ಪತ್ರೆ ಎಕ್ಸಿಟ್ ಗೇಟ್ ನಲ್ಲಿ ಅಪಘಾತ ನಡೆದಿದೆ. ಇಬ್ಬರು ಮೆಡಿಕಲ್ ವಿದ್ಯಾರ್ಥಿನಿ ಬೈಕ್ ನಲ್ಲಿ ತೆರಳುತ್ತಿದ್ದರು. ಬೆಂಗಳೂರಿಂದ ಮೈಸೂರು ಕಡೆಗೆ ಹೋಗ್ತಿದ್ದ ಲಾರಿ ಡಿಕ್ಕಿ ಆಗಿದೆ. ಹಿಂಬದಿ ಸವಾರಿಣಿ ಸಾವನ್ನಪ್ಪಿದ್ದಾರೆ, ಚಾಲಕಿಗೆ ಗಾಯವಾಗಿದೆ. ಮೃತಳು ಆರ್.ಆರ್.ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.

Continue Reading

International news

ಭಾರತಕ್ಕೆ ಹೊರಟಿದ್ದ ಸರಕು ಹಡಗಿನ ಮೇಲೆ ಇರಾನ್‌ ದಾ*ಳಿ

Published

on

ಮಂಗಳೂರು/ಟೆಹ್ರಾರ್ : ಯುಎಇ ಬಂದರಿನಿಂದ ಹೊರಟಿದ್ದ ಥಾಯ್ ಧ್ವಜದ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ದಾ*ಳಿ ನಡೆಸಲಾಗಿದೆ.

ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಥಾಯ್ ಕಂಪೆನಿ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕ ನೌಕೆ ಮಯೂರಿ ನಾರಿ ಹೆಸರಿನ ನೌಕೆ ಮೇಲೆ ದಾಳಿ ನಡೆಸಲಾಗಿದೆ.

ಈ ನೌಕೆ ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿನತ್ತ ಸಾಗುತ್ತಿತ್ತು. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವಾಗ ಈ ದಾ*ಳಿ ನಡೆದಿದೆ. ದಾ*ಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.

ಇದನ್ನೂ ಓದಿ : ಇಸ್ರೇಲ್‌-ಇರಾನ್‌ ಸಂಘರ್ಷ; ಕಿಮ್‌ ಜಾಂಗ್‌ ಉನ್‌ ಎಂಟ್ರಿ..ಬೆಂಬಲ ಯಾರಿಗೆ!?

20 ನಾವಿಕರನ್ನು ತೆಪ್ಪಗಳ ಮೂಲಕ ಒಮಾನಿ ನೌಕಾಪಡೆ ರಕ್ಷಿಸಿದ್ದು, ಉಳಿದ ಮೂವರು ನೌಕೆಯಲ್ಲಿಯೇ ಇದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. 178 ಮೀಟರ್ ಉದ್ದವಿರುವ ಈ ಹಡಗು 30,000 ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸದ್ಯ ದಾ*ಳಿಯ ಬಗ್ಗೆ ತನಿಖೆ ನಡೆಸುವುದಾಗಿ ರಾಯಲ್ ಥಾಯ್ ನೌಕಾಪಡೆ ಹೇಳಿಕೆ ನೀಡಿದೆ.

 

 

 

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page