Connect with us

FILM

ಅನುಪಮಾ ಸೀರಿಯಲ್‌ ಸೆಟ್‌ನಲ್ಲಿ ಅ*ಗ್ನಿ ಅ*ವಘಡ 

Published

on

ಮಂಗಳೂರು/ಮುಂಬೈ : ಇತ್ತೀಚೆಗೆ ಅ*ಗ್ನಿ ಅವ*ಘಡಗಳು ಹೆಚ್ಚಾಗಿ ನಡೆಯುತ್ತಿವೆ. ಸಿನಿಮಾ, ಧಾರಾವಾಹಿಗಳ ಚಿತ್ರೀಕರಣದ ವೇಳೆ ಹಲವು ದುರಂ*ತಗಳು ಸಂಭವಿಸಿವೆ. ಇದೀಗ ಮತ್ತೊಂದು ಅ*ಗ್ನಿ ಅ*ವಘಡ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಹಿಂದಿಯ ಖ್ಯಾತ ಧಾರಾವಾಹಿ ಅನುಪಮಾದ ಸೆಟ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ. ಶೂಟಿಂಗ್ ಸೆಟ್ ಸಂಪೂರ್ಣ ಹೊ*ತ್ತಿ ಉರಿದಿದೆ ಎಂದು ತಿಳಿದುಬಂದಿದೆ.

ಮುಂಬೈ ಫಿಲ್ಮ್ ಸಿಟಿಯಲ್ಲಿರುವ ಸೆಟ್‌ನಲ್ಲಿ ಈ ಘಟನೆ ನಡೆದಿದೆ. ಬೆಂ*ಕಿ ತೀವ್ರವಾಗಿ ವ್ಯಾಪಿಸಿದ್ದು, 5 ಅ*ಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂ*ಕಿ ನಂದಿಸುವ ಕೆಲಸ ಮಾಡಿವೆ.

ಇದನ್ನೂ ಓದಿ : Watch video: ಗ್ಯಾಸ್ ಸಿಲಿಂಡರ್ ಸ್ಪೋಟ; ಕೂದಲೆಳೆ ಅಂತರದಲ್ಲಿ ಪಾರಾದ ಮನೆಮಂದಿ

ಬೆಳಿಗ್ಗೆ 7 ಗಂಟೆಗೆ ಧಾರಾವಾಹಿಯ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ, ಚಿತ್ರೀಕರಣ ಆರಂಭಕ್ಕೂ ಎರಡು ಗಂಟೆ ಮೊದಲು ಬೆಂ*ಕಿ ಅವಘಡ ಸಂಭವಿಸಿದೆ. ಈ ಘಟನೆಯಿಂದ ಯಾವುದೇ ಗಾ*ಯಗಳಾದ ಬಗ್ಗೆ ವರದಿಯಾಗಿಲ್ಲ. ಚಿತ್ರೀಕರಣ ಆರಂಭವಾದ ಬಳಿಕ ದುರಂ*ತ ಸಂಭವಿಸಿದ್ದೇ ಆದಲ್ಲಿ ಭಾರೀ ದೊಡ್ಡ ಅನಾಹು*ತವೇ ಸಂಭವಿಸುತ್ತಿತ್ತು. ಇನ್ನು ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಸಂಘ ಆಗ್ರಹಿಸಿದೆ ಎಂದು ತಿಳಿದುಬಂದಿದೆ.

FILM

ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

Published

on

ಮಂಗಳೂರು/ಬೆಂಗಳೂರು : ಭವ್ಯ ಗೌಡ ಕಿರುತೆರೆಯಲ್ಲಿ ಮಿನುಗುತ್ತಿರುವ ತಾರೆ. ಕರ್ಣ ಧಾರಾವಾಹಿಯ ನಿಧಿಯಾಗಿ ಎಲ್ಲರ ಮನಗೆದ್ದಿರುವ ಚೆಲುವೆ. ಇದೀಗ ಅವರು ಹಿರಿತೆರೆಗೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಅವರು ಸ್ವತಃ ಹೇಳಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


ಯಾವ ಸಿನಿಮಾ?
ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಭವ್ಯಾ ಗೌಡ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5ರ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ ನಾನು ದುನಿಯಾ ವಿಜಯ್ ಅವರು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಲ್ಯಾಂಡ್‌ಲಾರ್ಡ್‌ ಎಂದು ಸಿನಿಮಾದ ಹೆಸರು. ಇದು ನನ್ನ ಮೊದಲ ಸಿನಿಮಾ ಆಗಿದೆ. ರಚಿತಾ ರಾಮ್ ಮತ್ತು ದುನಿಯಾ ವಿಜಯ್ ಎದುರು ನಿಂತಿದ್ದರು. ನಾನು ನರ್ವಸ್ ಆಗಿದ್ದೆ. ಶಾಟ್ ಮುಗಿದ ಬಳಿಕ ರಚಿತಾ ರಾಮ್ ಪಕ್ಕಕ್ಕೆ ಕರೆದು, ಎಲ್ಲರೂ ಆರ್ಟಿಸ್ಟ್ ಸರಿ ಸಮಾನರು ಎಂದರು. ಅವರು ಲೇಡಿ ಸೂಪರ್ಸ್ಟಾರ್ ಎಂದು ರಚಿತಾ ರಾಮ್ ಅವರನ್ನು ಹೊಗಳಿದ್ದಾರೆ.

ಭವ್ಯ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಗೀತಾ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು. ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕುಖ್ಯಾತ ಹೊರ ರಾಜ್ಯ, ಅಂತರ್ ಜಿಲ್ಲಾ ಕಳವು ಪ್ರಕರಣಗಳ ಆರೋಪಿ ಇತ್ತೆ ಬರ್ಪೆ ಅಬುಬಕ್ಕರ್ ಬಂಧನ

ಲ್ಯಾಂಡ್‌ಲಾರ್ಡ್‌ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿದ್ದು, ಚಿತ್ರವು ಜನವರಿ 23ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಮಗಳು ರಿತನ್ಯಾ ಕೂಡ ನಟಿಸಿದ್ದಾರೆ.

Continue Reading

FILM

ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

Published

on

ಮಂಗಳೂರು/ಬೆಂಗಳೂರು :  ಸಿನಿಮಾ – ಕಿರುತೆರೆ ತಾರೆಯರು ಹೆಸರು ಬದಲಾಯಿಸುವುದು ಸಾಮಾನ್ಯ ಸಂಗತಿ. ಅದೆಷ್ಟೋ ನಟ – ನಟಿಯರು ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದೀಗ ನೀನಾದೆ ನಾ ಧಾರಾವಾಹಿ ಖ್ಯಾತಿಯ ಖುಷಿ ಶಿವು ಸರದಿ.

ನೀನಾದೆ ನಾ …ದಿಲ್ ಖುಷ್

ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು ನಟಿಸಿದ್ದ ‘ ನೀನಾದೆ ನಾ..’  ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ದಿಲೀಪ್ ಖುಷಿ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದರು. ಈ ಜೋಡಿಯನ್ನು ದಿಲ್ ಖುಷ್ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು.

ಈ ಧಾರಾವಾಹಿಯ ಯಶಸ್ಸಿಗೆ ಸಾಕ್ಷಿಯಾಗಿ ‘ನೀನಾದೆ ನಾ’ ಎರಡನೇ ಅಧ್ಯಾಯ  ಪ್ರಸಾರವಾಗಿತ್ತು.ಕರಾವಳಿಯಲ್ಲಿ ಹೊಸ ಪ್ರೇಮ ಕಥೆ ಅರಳಿ ನಲಿದಿತ್ತು. ತುಳುನಾಡಿನ ಸಂಸ್ಕೃತಿ, ಭಾಷೆಯ ಅನಾವರಣ ಮಾಡಲಾಗಿತ್ತು. ಆದರೆ, ಮೊದಲ ಅಧ್ಯಾಯದಷ್ಟು ಸಕ್ಸಸ್ ಸಿಗಲಿಲ್ಲ. ಹಾಗಾಗಿ ಕಥೆಯನ್ನು ಎಳೆಯದೆ ಧಾರಾವಾಹಿಗೆ ಅಂತ್ಯ ಹಾಡಲಾಯಿತು. ಆದರೆ, ದಿಲ್ ಖುಷ್‌ನ ಮಾತ್ರ ಜನ ಮರೆತಿಲ್ಲ.

ಇನ್ಮುಂದೆ ಖುಷಿ ಅಲ್ಲ… ರಮಿಕಾ :

ಖುಷಿ ಶಿವು ಸೋಶಿಯಲ್ ಮೀಡಿಯಾಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಇದೀಗ ಅವರು ಹೆಸರು ಬದಲಾಯಿಸಿಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸುಂದರವಾದ ಹೊಸ ಕಥೆಯ ಆರಂಭ ಎಂಬುದಾಗಿ ಬರೆದುಕೊಂಡಿರುವ ನಟಿ ಹೊಸ ಹೆಸರನ್ನು ಘೋಷಿಸಿದ್ದಾರೆ.

ಪ್ರೀತಿಯ ಅಭಿಮಾನಿಗಳೇ, ಸ್ನೇಹಿತರೇ ಮತ್ತು ಹಿತೈಷಿಗಳೇ, ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಿಮಗೆಲ್ಲರಿಗೂ ತಿಳಿಸುವುದೇನೆಂದರೆ, ಹೊಸ ಕನಸಿನೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು, ನೀವೆಲ್ಲರೂ ಪ್ರೀತಿಸಿದ, ಅಭಿಮಾನಿಸಿದ, ಹಾರೈಸಿದ, ನನ್ನ ‘ಖುಷಿ ಶಿವು’  ಹೆಸರನ್ನು ವಿಶೇಷ ಕಾರಣಗಳಿಂದ ‘ರಮಿಕಾ ಶಿವು’ ಎಂದು ಬದಲಾಯಿಸಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ : ಕಾಸರಗೋಡು: ಸಿನಿಮಾ ನಿರ್ದೇಶಕನ ಪುತ್ರ ಆತ್ಮಹತ್ಯೆ!

ಆದರೆ, ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಪ್ರೋತ್ಸಾಹ ಬದಲಾಗದೆ ಇನ್ನೂ ಹೆಚ್ಚಾಗುತ್ತದೆ ಎಂದು ನಂಬಿದ್ದೇನೆ. ಇದು ಸುಂದರವಾದ ಹೊಸ ಕಥೆಯ ಆರಂಭ. ಇಂತೀ ನಿಮ್ಮ ಪ್ರೀತಿಯ ರಮಿಕಾ ಶಿವು ಎಂದು ಬರೆದುಕೊಂಡಿದ್ದಾರೆ.

Continue Reading

BIG BOSS

ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿಗೆ ಕಾನೂನು ಸಂಕಷ್ಟ!? ಕಾರಣ ಏನು?

Published

on

BBK12: ಬಿಗ್‌ ಬಾಸ್‌ ಸೀಸನ್‌ 12ರ ಸ್ಪರ್ಧಿ ಗಿಲ್ಲಿನಟ ಅವರು ತಮ್ಮ ಆಟ, ವ್ಯಕ್ತಿತ್ವ ಜತೆಗೆ ಆರಂಭದಿಂದಲೂ ಬಿಗ್‌ಬಾಸ್‌ ಮನೆಯಲ್ಲಿ ಹಾಸ್ಯ ಸ್ವಾಭಾವದಿಂದ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ಆದರೆ ಇದೀಗ ಗಿಲ್ಲಿಗೆ ಶಾಕ್‌ವೊಂದು ಎದುರಾಗಿದೆ.


ಹೌದು, ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ಅವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.


ಇತ್ತೀಚೆಗೆ ಗಿಲ್ಲಿ ಮತ್ತು ರಿಷಾ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಗಿಲ್ಲಿಅವರು ರಿಷಾ ಅವರ ಬಟ್ಟೆಗಳನ್ನು ಬಾತ್‌ ರೂಮ್‌ ಏರಿಯಾದಲ್ಲಿ ಇಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ. ಜತೆಗೆ ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತಾನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BBK12 : ಅಶ್ವಿನಿ ಗೌಡಗೆ ಶಿಕ್ಷೆ…ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ!

ಈ ಕುರಿತು ಮಹಿಳಾ ಆಯೋಗ ಸಂಬಂಧ ಪಟ್ಟ ವಿಡಿಯೋ ಫೊಟೇಜ್‌ಗಳನ್ನು ಪರಿಶೀಲನೆ ಮಾಡಿದ್ದು, ಮೇಲ್ನೋಟಕ್ಕೆ ಗಿಲ್ಲಿ ಅವರು ತಪ್ಪಾಗಿ ನಡೆದುಕೊಂಡಿರುವ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಪ್ರಕರಣವನ್ನು ಲೀಗಲ್‌ ಟೀಮ್‌ ಅಭಿಪ್ರಾಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ವರದಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page