Connect with us

DAKSHINA KANNADA

ಮುಲ್ಕಿಯಲ್ಲಿ ಮಧ್ಯರಾತ್ರಿ ಮನೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ-ಲಕ್ಷಾಂತರ ರೂ. ನಷ್ಟ

Published

on

ಮಂಗಳೂರು: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮಂಗಳೂರು ಹೊರಲವಯದ ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮಾರಡ್ಕ ಎಂಬಲ್ಲಿ ನಡೆದಿದೆ.


ಇಲ್ಲಿನ ಮಾರಡ್ಕ ನಿವಾಸಿ ಸುನಂದ ಪೂಜಾರ್ತಿ ಎಂಬವರ ಮನೆಗೆ ಬುಧವಾರದಂದು ಮಧ್ಯೆ ರಾತ್ರಿಯ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಹಂಚಿನ ಮನೆ ಬೆಂಕಿ ತಗುಲಿ ಉರಿಯಲು ಆರಂಭಿಸಿದೆ.

ಈ ಸಂದರ್ಭ ಮನೆಯಲ್ಲಿದ್ದ ಸುನಂದರವರ ಮಗ ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರಾದ ರಾಜು ವಿಕೇಶ್ ಚಂದ್ರಹಾಸ ಸುರೇಶ್ ಮತ್ತಿತರರು ಸೇರಿ ಬೆಂಕಿಯನ್ನು ನಂದಿಸಲು ನೀರನ್ನು ಹಾಯಿಸಿದ್ದು, ಬಳಿಕ ಅಗ್ನಿಶಾಮಕದಳ ಬಂದು ಹೆಚ್ಚಿನ ಅನಾಹುತವಾಗದಂತೆ ಬೆಂಕಿಯನ್ನು ನಂದಿಸಿದ್ದಾರೆ.


ಘಟನೆ ನಡೆದ ದಿನ ಸುನಂದರವರು ಸಂಬಂಧಿಕರ ಮನೆಗೆ ಹೋಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಮಾಜೀ ಪಂಚಾಯತ್ ಸದಸ್ಯ ಮೋರ್ಗನ್ ವಿಲಿಯಂ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಡಿ.28 : ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಮಹಾಸಭೆ, ಸಾಧಕರಿಗೆ ಸನ್ಮಾನ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಇದರ 87ನೇ ವಾರ್ಷಿಕ ಮಹಾಸಭೆ ಬಂಗ್ರ ಕೂಳೂರಿನ ಮಡಿವಾಳ ಸಭಾಭವನದ ಅಮೃತ ಸಭಾಂಗಣದಲ್ಲಿ ಡಿಸೆಂಬರ್ 28ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.


ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ ಎನ್ ಪ್ರಕಾಶ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ, ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಮ್ ಎನ್ ಶಿವಲಿಂಗಪ್ಪ, ಹುಬ್ಬಳ್ಳಿ ಗೋಕುಲ್ ಹೊಟೇಲ್‌ ಮಾಲಕಿ ಡಾ ಸರಳ ರಮೇಶ್ ಕುಂದರ್‌, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಮಡಂತ್ಯಾರಿನ ಬ್ರಾಂಚ್‌ ಮ್ಯಾನೇಜರ್‌ ಓಂ ಪ್ರಸಾದ್ ಕೆ. ಆಗಮಿಸಲಿದ್ದಾರೆ. ಮಂಗಳೂರು ರಜತ ಯೂತ್‌ನ ಅಧ್ಯಕ್ಷ ಸಂಪತ್‌ ಕೊಂಡಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾಂಜಲಿ ನಾರಾಯಣ ಬಿಜೈ ಉಪಸ್ಥಿತರಿರುವರು.

ಇದೇ ವೇಳೆ ಹಿರಿಯ ದೈವಾರಾಧಕರಾದ ಹರೀಶ್ ಸೊರಕೆ, ಹಿರಿಯ ಕುಲಕಸಬುದಾರರಾದ ಸೋಮನಾಥ ಮಡಿವಾಳ ಗುರುಪುರ, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಕೀರ್ತನ್‌ ಕಟೀಲು ಇವರಿಗೆ ಸನ್ಮಾನ ನಡೆಯಲಿದೆ. ಅಪರಾಹ್ನ 3 ಗಂಟೆ ಬಳಿಕ ಸಂಘದ ಸದಸ್ಯರು ಹಾಗೂ ಮಹಿಳಾ ಘಟಕದ ಸದಸ್ಯೆಯರಿಂದ ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ.

ಇದನ್ನೂ ಓದಿ: ವೀರಭಾರತಿ ವ್ಯಾಯಾಮ ಶಾಲೆ ಬೆಂಗ್ರೆ ಮಂಗಳೂರು; ನೂತನ ಗರ್ಭಗುಡಿಯ ಹಾಗೂ ಕಟ್ಟಡದ ಶಿಲಾನ್ಯಾಸ ಸಮಾರಂಭ

ಡಿ.14ರಂದು ಕ್ರೀಡಾಕೂಟ: 87ನೇ ವಾರ್ಷಿಕ ಮಹಾಸಭೆಯ ಅಂಗವಾಗಿ ಮಡಿವಾಳ ಸ್ವಜಾತಿ ಬಾಂಧವರಿಗಾಗಿ ಆಟೋಟ, ಕ್ರಿಕೆಟ್‌ ಹಾಗೂ ಇನ್ನಿತರೆ ಸ್ಪರ್ಧೆಗಳನ್ನು ಡಿಸೆಂಬರ್ 14ರಂದು ಬೆಳಿಗ್ಗೆ 9ಕ್ಕೆ ನಂತೂರಿನ ಪಾದುವಾ ಹೈಸ್ಕೂಲ್‌ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಪ್ರಕಟಣೆ ತಿಳಿಸಿದೆ.

Continue Reading

DAKSHINA KANNADA

ವಿಶ್ವಕಪ್ ಗೆದ್ದ ಚಾಂಪಿಯನ್ ಧನಲಕ್ಷ್ಮಿ ಪೂಜಾರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

Published

on

ಮಂಗಳೂರು: ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆದ್ದ ದಕ್ಷಿಣ ಭಾರತದ ಏಕೈಕ ಆಟಗಾರ್ತಿ ಸುರತ್ಕಲ್ ನ ಧನಲಕ್ಷ್ಮಿ ಪೂಜಾರಿ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಗುರುವಾರ ಸುರತ್ಕಲ್ ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ನಡೆಯಿತು. ಸುಮಾರು ಐವತ್ತಕ್ಕೂ ಅಧಿಕ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮಿ ಪೂಜಾರಿ ಅವರು ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಾಯಗೊಂಡ ಸಂದರ್ಭ ಶಾಸಕರು ನೀಡಿದ ನೆರವನ್ನು ಸ್ಮರಿಸಿಕೊಂಡರಲ್ಲದೆ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಹಕಾರ ನೀಡಿದ ತರಬೇತುದಾರರು, ಸಂಘ ಸಂಸ್ಥೆಗಳ ನೆರವನ್ನು ಸ್ಮರಿಸಿಕೊಂಡರು.

ಶಾಸಕ ಡಾ.ಭರತ್ ಶೆಟ್ಟಿ  ವೈ ಮಾತನಾಡಿ, ಇಂದು ವಿಶ್ವ ಚಾಂಪಿಯನ್ ತಂಡವನ್ನು ಪ್ರತಿನಿಧಿಸುವ ಮೂಲಕ ನಮ್ಮ ಕ್ಷೇತ್ರ, ಜಿಲ್ಲೆ, ರಾಜ್ಯ ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ. ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನು ಎದುರಿಸುತ್ತ ಓದಿನ ಜೊತೆಗೆ ತನ್ನ ನೆಚ್ಚಿನ ಕಬಡ್ಡಿ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವುದು ಎಲ್ಲಾ ಕ್ರೀಡಾಪಟುಗಳಿಗೂ ಮಾದರಿಯಾದ ಸಾಧನೆಯಾಗಿದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ: ಮಹಿಳಾ ವಿಶ್ವಕಪ್ ಕಬಡ್ಡಿಯಲ್ಲಿ ಆಳ್ವಾಸ್ ವಿದ್ಯಾರ್ಥಿನಿ ಧನಲಕ್ಷ್ಮೀ ಪೂಜಾರಿ

ಪ್ರಮುಖರಾದ ಮಹಾಬಲ ಪೂಜಾರಿ ಅವರು ಶುಭ ಹಾರೈಸಿದರು. ಪ್ರಮುಖರಾದ ರಾಜೇಶ್ ಕೊಟ್ಟಾರಿ, ಧನಲಕ್ಷ್ಮೀ ಪೂಜಾರಿ  ಹೆತ್ತವರು, ಬಿಜೆಪಿ ಪದಾಧಿಕಾರಿಗಳು, ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Continue Reading

DAKSHINA KANNADA

ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ; ಮಂಗಳೂರು ವಿಮಾನ ನಿಲ್ದಾಣದಲ್ಲೂ 17 ವಿಮಾನ ವಿಳಂಬ

Published

on

ಮಂಗಳೂರು: ದೇಶದ ಅತೀ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ ನಿನ್ನೆಯೂ ಮುಂದುವರಿದಿದ್ದು, ಇದರ ಬಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರಿಗೂ ತಟ್ಟಿದೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸುವ 5 ವಿಮಾನ ಹಾಗೂ ನಿರ್ಗಮಿಸುವ 5 ವಿಮಾನಗಳು ರದ್ದಾಗಿದ್ದು, ಒಟ್ಟು 17 ವಿಮಾನಗಳು ತಡವಾಗಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಇತ್ತೀಚಿನ ಮಾಹಿತಿಗಳನ್ನು ಗಮನಿಸುವಂತೆ ಏರ್ಪೋರ್ಟಿನ ಪ್ರಕಟಣೆ ತಿಳಿಸಿದೆ.

ಮುಂಬಯಿ, ಹೊಸದಿಲ್ಲಿ, ಬೆಂಗಳೂರು ಇಂಡಿಗೋ ವಿಮಾನ ಗುರುವಾರ ರದ್ದುಗೊಂಡಿತ್ತು. ಕೆಲವರಿಗೆ ಕೆಲವು ತಾಸಿನ ಮೊದಲೇ ಮಾಹಿತಿ ರವಾನೆ ಆದ ಕಾರಣದಿಂದ ಬಹುತೇಕ ಮಂದಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿಲ್ಲ. ಕೊನೆಯ ಹಂತದಲ್ಲಿ ಗೊತ್ತಾದ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿ ಸಿಬಂದಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಮುಂಗಡ ಬುಕ್ಕಿಂಗ್ ಮಾಡಿದ ಎಲ್ಲ ಪ್ರಯಾಣಿಕರು ವಿಮಾನ ಸಂಚಾರದ ಖಚಿತತೆ ತಿಳಿದು ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಸೂಚನೆಯನ್ನೂ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಕರಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ವೃದ್ಧ ದಂಪತಿ ಡಿಜಿಟಲ್‌ ಅರೆಸ್ಟ್‌ಗೆ ಯತ್ನ; ಸೈಬರ್‌ ಕಳ್ಳರ ಯತ್ನ ವಿಫಲಗೊಳಿಸಿದ ಬ್ಯಾಂಕ್‌ ಮ್ಯಾನೇಜರ್‌, ಪೊಲೀಸರು

ಮುಂಬಯಿ, ಹೊಸದಿಲ್ಲಿ ಸಹಿತ ಇತರ ಕಡೆಯಿಂದ ಬರುವ ಹಾಗೂ ಹೋಗುವ ಹಲವು ಇಂಡಿಗೋ ಹಾಗೂ ಏರ್‌ಇಂಡಿಯಾ ವಿಮಾನಗಳು ನಿಗದಿತ ಸಮಯಕ್ಕಿಂತ ಬರೋಬ್ಬರಿ 2-3 ತಾಸು ಹಾಗೂ ಅದಕ್ಕಿಂತ ಅಧಿಕ ಸಮಯ ತಡವಾಗಿಯೇ ಸಂಚಾರ ನಡೆಸಿದೆ. ಅರ್ಧ ತಾಸಿಗಿಂತ ಅಧಿಕ ತಡವಾಗಿ ಮಂಗಳೂರಿನಿಂದ ಒಟ್ಟು 17 ವಿಮಾನಗಳು ಸಂಚರಿಸಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page