Connect with us

ಕದ್ರಿ ಪಾರ್ಕ್ ಬಳಿ ಅಗ್ನಿ ಅನಾಹುತ :ರಾಜಸ್ಥಾನಿ ವ್ಯಾಪಾರಿಯ ಪೀಠೋಪಕರಣ ಬೆಂಕಿಗಾಹುತಿ..

Published

on

ಕದ್ರಿ ಪಾರ್ಕ್ ಬಳಿ ಅಗ್ನಿ ಅನಾಹುತ :ರಾಜಸ್ಥಾನಿ ವ್ಯಾಪಾರಿಯ ಪೀಠೋಪಕರಣ ಬೆಂಕಿಗಾಹುತಿ..

ಮಂಗಳೂರು : ಮಂಗಳೂರಿನ ಕದ್ರಿ ಪಾರ್ಕ್ ಬಳಿ ಅಗ್ನಿ ಅನಾಹುತ ಸಂಭವಿಸಿದೆ.

 

ಮಧ್ಯರಾತ್ರಿ ಈ ಬೆಂಕಿ ದುರಂತ ಸಂಭವಿಸಿದ್ದು ಬೀದಿ ಬದಿ ವ್ಯಾಪಾರಿಯ ಪ್ಲಾಸ್ಟಿಕ್, ಮರದ ಪೀಠೋಪಕರಣಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದೆಯಾದರೂ ಅದಾಗಲೇ ಪೀಠೋಪಕರಣ ಸಂಪೂರ್ಣ ನಾಶವಾಗಿದೆ.

ಬೀದಿ ಬದಿ ವ್ಯಾಪಾರಿ ರಾಜಸ್ಥಾನ ಮೂಲದ ಅಬ್ದುಲ್ ಸಲಾಂ ಎಂಬವರು ಇಲ್ಲಿ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ: ವಾರ್ಷಿಕ ಮಹೋತ್ಸವ

Published

on

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ ಇದರ ವಾರ್ಷಿಕ ಮಹೋತ್ಸವ ನಡೆಯಿತು. ದಿವ್ಯ ಬಲಿ ಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ, ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪ್ರೀತಿ, ತ್ಯಾಗ ಮತ್ತು ಏಕತೆಯೊಂದಿಗೆ ದೇವರ ಅನುಗ್ರಹವು ಬೇಕು. ಇದಕ್ಕಾಗಿ ಪ್ರತಿದಿನ ಮಾತೆ ಮರಿಯಮ್ಮನ ಜಪಮಾಲೆಯನ್ನು ಪಠಿಸುವುದರಿಂದ  ಇದನ್ನು ಗಳಿಸಬಹುದು ಎಂದರು.

ಬಂಟ್ವಾಳ ವಲಯದ ಹಾಗೂ ಪಾಲಟಾಯ್ನ್ ಸಭೆಯ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಫರ್ಲಾ ಧರ್ಮಕೇಂದ್ರದ ಧರ್ಮಗುರು ವಂದನೀಯ  ಮಾರ್ಕ್ ಅರುಣ್ ಡಿಸೋಜ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಹಾಗೂ ಗೌರವಾರ್ಥವಾಗಿ ಆಶೀರ್ವದಿಸಿದ ಮೇಣದ ಬತ್ತಿಯನ್ನು ವಿತರಿಸಲಾಯಿತು. ಊರ, ಪರವೂರ  ಅನೇಕ ಭಕ್ತರು ಭಾಗವಹಿಸಿದ್ದರು.

Continue Reading

LATEST NEWS

ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡಿದ ಆರ್‌ ಅಶ್ವಿನಿ; ನೆಟ್ಟಿಗರು ಶಾಕ್!

Published

on

ಭಾರತದ ಮಾಜಿ ಆಲ್‌ರೌಂಡರ್ ಆರ್‌ ಅಶ್ವಿನ್ ತಮ್ಮ ಅಧಿಕೃತ ಎಕ್ಸ್‌ಖಾತೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಚಿತ್ರವನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

ಹೌದು, ಅಶ್ವಿನ್ ಆಗಾಗೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅನೇಕ ರೀತಿಯ ಸಂತೋಷದ ಕ್ಷಣಗಳಿರುವ ಫೋಟೋ, ವೀಡಿಯೋ ಹಂಚಿಕೊಳ್ಳುತ್ತಾರೆ. ಇದನ್ನ ಅಭಿಮಾನಿಗಳು ಕೂಡ ಇಷ್ಟಪಟ್ಟು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಈ ಬಾರಿ ಇದಕ್ಕೆ ತದ್ವಿರುದ್ದವೆಂಬಂತೆ ಎರಡು ಚಿತ್ರಗಳ ಕೊಲಾಜ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಬದಿಯಲ್ಲಿ ಸನ್ನಿ ಲಿಯೋನ್ ಅವರ ಚಿತ್ರವನ್ನು ಹೊಂದಿದ್ದರೆ, ಇನ್ನೊಂದು ಬದಿಯಲ್ಲಿ ಚೆನ್ನೈನ ಸಾಧು ಬೀದಿಯ ಚಿತ್ರವಿದೆ. ಇದು ಸಾಕಷ್ಟು ಅಭಿಮಾನಿಗಳ ಚಿಂತೆಗೀಡು ಮಾಡಿತ್ತು. ಆದರರೆ ಆಟಗಾರನ ಚಟುವಟಿಕೆಯ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳುವಲ್ಲಿ ನೆಟ್ಟಿಗರು ಯಶಸ್ವಿಯಾಗಿದ್ದಾರೆ.

ಈ ಎರಡು ಚಿತ್ರಗಳ ಕೊಲಾಜ್ ಅರ್ಥವೇನು?
ಅಶ್ವಿನ್ ಅವರು ಪೋಸ್ಟ್ ಮಾಡಿರುವ ಎರಡು ಪೋಟೋಗಳ ಅರ್ಥವನ್ನು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ಅಷ್ಟಕ್ಕೂ ಆಲ್‌ರೌಂಡರ್ ಈ ಫೋಟೋ ಮೂಲಕ ತಮಿಳುನಾಡು ಆಲ್‌ರೌಂಡರ್ ಸನ್ನಿ ಸಂಧು ಬಗ್ಗೆ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಪಾದಾರ್ಪಣೆ ಮಾಡಿ ಗಮನಸೆಳೆದಿದ್ದರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ (ಡಿ.08) ಸೌರಾಷ್ಟ್ರ ವಿರುದ್ಧ ನಡೆದ ಪಂದ್ಯದಲ್ಲಿ ಸಂಧು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ತಮಿಳುನಾಡು ಪರ ತಮ್ಮ ಎರಡನೇ ಪಂದ್ಯವನ್ನು ಆಡಿದ ಸನ್ನಿ, ಸಾಯಿ ಸುದರ್ಶನ್ (55 ಎಸೆತಗಳಲ್ಲಿ 101*) ಅವರೊಂದಿಗೆ ಕೇವಲ 9 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ 37 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ಇದು ಅವರ ತಂಡದ ಗೆಲುವಿಗೆ ಕಾರಣವಾಯಿತು.

ಇದನ್ನೂ ಓದಿ: ಮುರಿದುಬಿದ್ದ ಮದುವೆ: ಟಿ20 ಸರಣಿಗೆ ಅಭ್ಯಾಸ ಆರಂಭಿಸಿದ ಸ್ಮೃತಿ ಮಂಧನಾ

22 ವರ್ಷದ ಸನ್ನಿ ಸಂಧುರನ್ನು ಮುಂಬರುವ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ಅನ್‌ಕ್ಯಾಪ್ಡ್ ಆಲ್‌ರೌಂಡರ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದು ಅನ್ನೋ ಸೂಚನೆಯನ್ನೂ ಅಶ್ವಿನ್ ತಮ್ಮ ಪೋಸ್ಟ್‌ನ ಮೂಲಕ ನೀಡಿದ್ದಾರೆ.

Continue Reading

LATEST NEWS

ಸಾರಿಗೆ ಬಸ್ ಪ*ಲ್ಟಿಯಾಗಿ ಕಂಡಕ್ಟರ್ ಸಾ*ವು; ಹಲವು ಪ್ರಯಾಣಿಕರಿಗೆ ಗಾ*ಯ

Published

on

ಮಂಗಳೂರು/ರಾಯಚೂರು : ಸಾರಿಗೆ ಬಸ್ ಪ*ಲ್ಟಿಯಾಗಿ ನಿರ್ವಾಹಕ ಮೃ*ತಪಟ್ಟ ಘಟನೆ ಇಂದು(ಡಿ.09) ಬೆಳಗ್ಗೆ ರಾಯಚೂರಿನ ದೇವದುರ್ಗ ತಾಲೂಕಿನ ಅಂಚೇಸುಗೂರು ಕಾಲುವೆಯ ಸೇತುವೆ ಬಳಿ ನಡೆದಿದೆ. ಬಸವರಾಜ್  ಮೃತ ಕಂಡಕ್ಟರ್.

ಕೆಎಸ್‌ಆರ್‌ಟಿಸಿ ಬಸ್ ಅಂಜಳ ಗ್ರಾಮದಿಂದ ದೇವದುರ್ಗಕ್ಕೆ ಸಾಗುತ್ತಿತ್ತು. ಈ ವೇಳೆ ಅಂಚೇಸುಗೂರು ಕಾಲುವೆಯ ಸೇತುವೆ ದಾಟುವಾಗ ಈ ದುರಂ*ತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪ*ಲ್ಟಿಯಾಗಿದ್ದು, ಪರಿಣಾಮ ಬಸ್‌ ನಲ್ಲಿದ್ದ 40 ಜನರ ಪೈಕಿ 38 ಪ್ರಯಾಣಿಕರು ಗಾ*ಯಗೊಂಡಿದ್ದಾರೆ.

ಇದನ್ನೂ ಓದಿ : ಬಾರ್ಡರ್ 2 : ಅಹಾನ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಡಲೇ ಧಾವಿಸಿ, ಸಲಾಕೆಗಳಿಂದ ಬಸ್‌ ನ ಗಾಜು ಒಡೆದು, ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಎಷ್ಟು ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್‌ ಗಳಲ್ಲಿ ಗಾಯಾಳುಗಳನ್ನ ರವಾನೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾ*ಯಗೊಂಡಿದ್ದ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೇ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾರೆ. ಅಪಘಾ*ತದ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page