Connect with us

International news

ಟರ್ಕಿಯ ಸ್ಕಿ ರೆಸಾರ್ಟ್‌ನಲ್ಲಿ ಅಗ್ನಿ ಅವಘಡ; ಮೃತರ ಸಂಖ್ಯೆ 76ಕ್ಕೆ ಏರಿಕೆ

Published

on

ಮಂಗಳೂರು/ ಅಂಕಾರ : ವಾಯುವ್ಯ ಟರ್ಕಿಯಲ್ಲಿನ ಜನಪ್ರಿಯ ಸ್ಕೀ ರೆಸಾರ್ಟ್‌ನಲ್ಲಿ ನಡೆದ ಭಾರೀ ಅಗ್ನಿ ಅವಘಡದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ಥಿತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ಬೆಂಕಿಗೆ ಆಹುತಿಯಾಯಿತು. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಗೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ. ರೆಸಾರ್ಟ್‌ನಲ್ಲಿದ್ದ ಇಬ್ಬರೂ ಭಯಭೀತರಾಗಿ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಕೆಲವು ಜನರು ಬೆಡ್‌ರೂಂನ ಬೆಡ್‌ಶೀಟ್‌ಗಳನ್ನು ಬಳಸಿ ತಮ್ಮ ಕೋಣೆಗಳಿಂದ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ಸ್ಥಳಿಯ ಮಾಧ್ಯಮಗಳು ಹೇಳಿವೆ.

ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

ಅವಘಡದಲ್ಲಿ ಒಟ್ಟು 76 ಮಂದಿ ಸಾವನ್ನಪ್ಪಿದ್ದು, 51ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು. ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಈ ನಡುವೆ ಅಗ್ನಿ ಅವಘಡಕ್ಕೆ ಕಾರಣ ಏನೆಂಬ ಬಗ್ಗೆ ತನಿಖೆ ಮುಂದುವರೆದಿದ್ದು, ತನಿಖೆಗಾಗಿ 6 ಪ್ರಾಸಿಕ್ಯೂಟರ್‌ಗಳನ್ನು ಸರ್ಕಾರ ನೇಮಿಸಿದೆ.

ಮತ್ತೊಂದು ಅವಘಡ

ಕೇಂದ್ರ ಟರ್ಕಿಯಲ್ಲಿ ಇರುವ ಮತ್ತೊಂದು ಸ್ಕಿ ರೆಸಾರ್ಟ್‌ನ ಹೋಟೆಲ್‌ವೊಂದರಲ್ಲಿ ಅಡುಗೆ ಅನಿಲ ಸ್ಪೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

 

International news

ಎಲನ್ ಮಸ್ಕ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಮಹಿಳೆ

Published

on

ಮಂಗಳೂರು/ವಾಷಿಂಗ್ಟನ್: ಕೆಲದಿನಗಳ ಹಿಂದೆ ಆಶ್ಲೇ ಸೇಂಟ್‌ ಕ್ಲೇರ್  ಎಂಬ ಮಹಿಳೆ ತನ್ನ 5 ತಿಂಗಳ ಮಗುವಿಗೆ ಎಲಾನ್ ಮಸ್ಕ್ ತಂದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಮಹಿಳೆ,  ಮಸ್ಕ್ ಅವರೇ 5 ತಿಂಗಳ ಮಗುವಿನ ತಂದೆ ಎಂದು ಘೋಷಿಸ ಬೇಕು. ಅದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ಅಮೆರಿಕದ ಮ್ಯಾನ್‌ಹಟನ್‌ನ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. 2024ರ ಜನವರಿಯಲ್ಲಿ ಸೈಂಟ್ ಬರ್ತಾಸ್ ಎಂಬಲ್ಲಿಗೆ ತೆರಳಿದ್ದಾಗ ಮಗುವಿಗೆ ಜನ್ಮ ನೀಡಿದ್ದೆ. ಮಸ್ಕ್ 3 ಬಾರಿ ಮಗುವನ್ನು ನೋಡಿದ್ದರು. ನಂತರ ಮಗುವಿನ ಬಗ್ಗೆ ವಿಚಾರಿಸಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಂ*ಬ್ ಬೆದರಿಕೆ; ನವದೆಹಲಿಯತ್ತ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ

ಏನಿದು ಮಸ್ಕ್ ವಿರುದ್ದ ಮಹಿಳೆ ಮಾಡಿದ ಆರೋಪ ?

ಸಂಪ್ರದಾಯವಾದಿ ಪ್ರಭಾವಿ ಮಹಿಳೆ ಆಶ್ಲೇ ಸೇಂಟ್ ಕ್ಲೇರ್ ಅವರ ಐದು ತಿಂಗಳ ಮಗುವಿನ ತಂದೆ ಎಲನ್‌ ಮಸ್ಕ್ ಎಂದು ಹೇಳಿಕೊಂಡಿದ್ದರು. ಈ ಆರೋಪಗಳ ಬಗ್ಗೆ ಮೌನ ಮುರಿದ ಟೆಸ್ಲಾ ಸಿಇಒ ಎಲನ್ ಮಸ್ಕ್ , ಈ ಪೋಸ್ಟ್‌ಗೆ ವಾವ್ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಆಶ್ಲೇ ಸೇಂಟ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ,”ಐದು ತಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲಾನ್ ಮಸ್ಕ್ ಆ ಮಗುವಿನ ತಂದೆ” ಎಂದು ಲ್ಯಾಟಿನ್ ನುಡಿಗಟ್ಟಿನೊಂದಿಗೆ ಹೇಳಿದ್ದರು.

“ಮಗುವಿನ ಸುರಕ್ಷತೆಗಾಗಿ ಮಾಹಿತಿಯನ್ನು ಖಾಸಗಿಯಾಗಿಟ್ಟಿದ್ದೆ ಆದರೆ ಟ್ಯಾಬ್ಲಾಯ್ಡ್‌ಗಳು ಸುದ್ದಿಯನ್ನು ಪ್ರಕಟಿಸಲು ತಯಾರಿ ನಡೆಸುತ್ತಿವೆ ಎಂದು ತಿಳಿದ ನಂತರ ಸಾರ್ವಜನಿಕವಾಗಿ ಪ್ರಕಟಿಸಲು ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ. “ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ, ಟ್ಯಾಬ್ಲಾಯ್ಡ್ ಮಾಧ್ಯಮ ಹಾನಿಯನ್ನು ಲೆಕ್ಕಿಸದೆ ಹಾಗೆ ಸುದ್ದಿ ಪ್ರಕಟಿಸಲು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಆಶ್ಲೇ ಸೇಂಟ್ ಬರೆದಿದ್ದರು.

Continue Reading

International news

ಪಾಕ್ ವಾಯು ಪ್ರದೇಶದಲ್ಲಿ 46 ನಿಮಿಷ ಹಾರಟ ನಡೆಸಿದ ಮೋದಿ ವಿಮಾನ! ಹೇಗಿತ್ತು ಭದ್ರತೆ ?

Published

on

ಮಂಗಳೂರು/ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ವಿಮಾನ ನವದೆಹಲಿಯಿಂದ ಪ್ಯಾರಿಸ್‌ಗೆ ಪ್ರಯಾಣಿಸುವ ವೇಳೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿ ಸಂಚಾರ ನಡೆಸಿದೆ ಎಂದು ತಿಳಿದು ಬಂದಿದೆ.

ಅಫ್ಘಾನ್ ವಾಯುಪ್ರದೇಶ ಮುಚ್ಚಿದ್ದರಿಂದ ಇಂತಹದೊಂದು ಬೆಳವಣಿಗೆ ನಡೆದಿದೆ. ಇದರಿಂದಾಗಿ, ಭಾರತೀಯ ವಿಮಾನವು ಪಾಕಿಸ್ತಾನದ ಅನುಮತಿಯೊಂದಿಗೆ ಅಲ್ಲಿನ ವಾಯುಪ್ರದೇಶದ ಗಡಿಯೊಳಗೆ ಹಾರಬೇಕಾಯಿತು. ಪ್ರಧಾನಿ ಮೋದಿ ಇದ್ದ ವಿಮಾನವು ಪಾಕಿಸ್ತಾನದ ಪ್ರದೇಶಗಳಾದ ಶೇಖ್‌ಪುರ, ಹಫೀಜಾಬಾದ್, ಚಕ್ವಾಲ್ ಮತ್ತು ಕೊಹಾಟ್ ಮೂಲಕ ಹಾದು ಹೋಗಿ ಸುಮಾರು 46 ನಿಮಿಷಗಳ ಕಾಲ ಪಾಕಿಸ್ತಾನದ ವಾಯುಪ್ರದೇಶದಲ್ಲಿತ್ತು ಎಂದು ತಿಳಿದು ಬಂದಿದೆ.

ಕಟ್ಟೆಚ್ಚರ ವಹಿಸಿದ ಭದ್ರತಾ ಪಡೆಗಳು

ದೇಶದ ಯಾವುದೇ ಉನ್ನತ ಮಟ್ಟದ ನಾಯಕರ ಅಂತರರಾಷ್ಟ್ರೀಯ ಪ್ರಯಾಣದ ಅವಧಿಯಲ್ಲಿ ಭದ್ರತೆ ವಿಚಾರದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರ ಪಾಲಿಸಲಾಗುಹತ್ತದೆ. ಒಂದು ರಾಷ್ಟ್ರದ ಮುಖ್ಯಸ್ಥರು ಇನ್ನೊಂದು ದೇಶದ ಮೇಲೆ ಪ್ರಯಾಣಿಸುವಾಗ ವಿಮಾನ ಭದ್ರತೆಗೆ ಸಂಬಂಧಿಸಿದಂತೆ ಸಮನ್ವಯವಿರುತ್ತದೆ. ಮೋದಿ ಅವರಿದ್ದ ವಿಮಾನ ಪಾಕಿಸ್ತಾನದ ಮೇಲೆ ಹಾದು ಹೋಗುವಾಗ ಭಾರತ ಮತ್ತು ಪಾಕ್ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿದ್ದವು.

ಇದನ್ನೂ ಓದಿ: ದುಬೈನಿಂದ ಹೊರಟ ವ್ಯಕ್ತಿ ನದಿಗೆ ಬಿದ್ದರೂ ಈಜಿ ಮನೆ ಸೇರಿದ!

ಇದೇ ಮೊದಲಲ್ಲ..!

ಪ್ರಧಾನಿ ಮೋದಿಯವರ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಆಗಸ್ಟ್ 2024ರಲ್ಲಿ ಉಕ್ರೇನ್‌ನಿಂದ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರಿದ್ದ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿ 46 ನಿಮಿಷಗಳ ಕಾಲ ಅಲ್ಲಿಯೇ ಸಂಚಾರ ನಡೆಸುತ್ತಿತ್ತು. ವಿಮಾನವು ಮೊದಲು ಚಿತ್ರಲ್ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿ ಅಮೃತಸರಕ್ಕೆ ಹೋಗುವ ಮೊದಲು ಇಸ್ಲಾಮಾಬಾದ್ ಮತ್ತು ಲಾಹೋರ್‌ನ ವಾಯು ನಿಯಂತ್ರಣ ವಲಯಗಳ ಮೂಲಕ ಹಾದುಹೋಗಿತ್ತು.

ವಿಮಾನದಲ್ಲಿದೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು

ಬೋಯಿಂಗ್ 777 ವಿಮಾನವು ಭಾರತದ ಉನ್ನತ ನಾಯಕರ ಭದ್ರತೆಗಾಗಿ ಇದೆ. ಇದೇ ರೀತಿ ಪ್ರಧಾನಿ ಮೋದಿಯವರ ವಿಮಾನ ‘ಏರ್‌ ಇಂಡಿಯಾ ಒನ್’ ಸಾಮಾನ್ಯ ಫ್ಲೈಟ್ ಅಲ್ಲ. ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಮತ್ತು ಅಡ್ವಾನ್ಸ್ಡ್ ಸೇಫ್ಟಿ ಫೀಚರ್ಸ್ ಹೊಂದಿದೆ. ಇದನ್ನು ಏರ್ ಇಂಡಿಯಾ ಪೈಲಟ್‌ಗಳಿಗಿಂತ ಭಾರತೀಯ ಐಎಎಫ್‌ನಿಂದ ತರಬೇತಿ ಪಡೆದ ಪೈಲಟ್‌ಗಳು ಆಪರೇಟ್ ಮಾಡುತ್ತಾರೆ. ಇದು ವೈಮಾನಿಕ ಬೆದರಿಕೆಗಳನ್ನು ನಿಭಾಯಿಸುತ್ತದೆ. ಅಗತ್ಯವಿದ್ದರೆ ರಕ್ಷಣಾತ್ಮಕ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ  ಹೊಂದಿದೆ.

ಎರಡು ದೇಶಗಳ ನಡುವೆ ಉದ್ವಿಗ್ನತೆಯ ಹೊರತಾಗಿಯೂ ಪಾಕಿಸ್ತಾನ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳನ್ನು ಪಾಲಿಸಿದೆ. ಪಾಕಿಸ್ತಾನ ಕೂಡ ತನ್ನ ವಾಯುಪ್ರದೇಶದ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಿದೆ.

Continue Reading

International news

ಲಂಕಾದಲ್ಲಿ ಕಪಿ ಚೇಷ್ಟೆ; ಕೋತಿ ಕಿತಾಪತಿಯಿಂದ ರಾಷ್ಟ್ರವೇ ಕತ್ತಲು

Published

on

ಮಂಗಳೂರು/ಶ್ರೀಲಂಕಾ : ಕೋತಿಯೊಂದು ಮಾಡಿದ ಅವಾಂತರಕ್ಕೆ ಇಡೀ ಶ್ರೀಲಂಕಾವೇ ಕತ್ತಲಲ್ಲಿ ಮುಳುಗಿದ ವಿಚಿತ್ರ ಪರಿಸ್ಥಿತಿ ನಿನ್ನೆ (ಫೆ.9) ಸಂಭವಿಸಿದೆ. ವಿದ್ಯುತ್‌ ಉಪಕೇಂದ್ರವೊಂದಕ್ಕೆ ಆಗಮಿಸಿದ ಕಪಿಯೊಂದು ಮಾಡಿರುವ ಕಿತಾಪತಿಯಿಂದಾಗಿ ರಾಷ್ಟ್ರವೇ ಹಲವು ಘಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು.

ಅಷ್ಟಕ್ಕೂ ನಡೆದಿದ್ದು ಏನು ?

ಶ್ರೀಲಂಕಾದ ಇಂಧನ ಸಚಿವ ಕುಮಾರ ಜಯಕೋಡಿ “ಇಡೀ ದೇಶಕ್ಕೆ ವಿದ್ಯುತ್​ ಸರಬರಾಜು ಮಾಡುತ್ತಿದ್ದ ಗ್ರಿಡ್​ ಟ್ರಾನ್ಸ್​ಫಾರ್ಮರ್‌ಗೆ ಒಂದು ಕೋತಿ ತಾಕಿತ್ತು. ಇದೇ ಕಾರಣಕ್ಕೆ ವಿದ್ಯುತ್​ ಸಂಚಾರ ನಿಲ್ಲುವಂತಾಗಿದೆ. ನಮ್ಮ ಎಂಜಿನಿಯರ್​ಗಳು ದುರಸ್ಥಿ ಕೆಲಸ ಮಾಡುತ್ತಿದ್ದು, ಆದಷ್ಟು ಬೇಗ ವಿದ್ಯುತ್​ ಸರಬರಾಜು ಮೊದಲಿನಂತೆ ಸಿಗಲಿದೆ ಎಂದು ಖುದ್ದು ಸಚಿವ ಜಯಕೋಡಿ ಹೇಳಿದ್ದಾರೆ. ಮತ್ತೊಮ್ಮೆ ಇಂಥಾ ಅಡಚಣೆ ಆಗದಂತೆ ನೋಡಿಕೊಳ್ಳೋದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಅಂದು ಮಾರುತಿ.. ಇಂದು ಮಂಗ ಲಂಕನ್ನರನ್ನ ನಿದ್ದೆಗಡಿಸಿದಂತಾಗಿದೆ” ಎಂದು ಕೋತಿಯೊಂದು ಮಾಡಿದ ಕಿತಾಪತಿ ಹೇಳಿಕೊಂಡಿದ್ದಾರೆ.

 

ಇದನ್ನೂ ಓದಿ : ಕಾರ್ ರೇಸಿಂಗ್ ವೇಳೆ ಮತ್ತೆ ಅಪ*ಘಾತಕ್ಕೊಳಗಾದ ನಟ ಅಜಿತ್

 

ಈ ಘಟನೆಯು ಸರಿಸುಮಾರು 11:30ರ ವೇಳೆಗೆ ನಡೆದಿದ್ದು, ಜನತೆಯು ಪರದಾಡುವಂತಾಯಿತು. ತಕ್ಷಣವೇ ವಿದ್ಯುತ್‌ ಇಲಾಖೆಯ ಎಂಜಿನಿಯರ್‌ಗಳು ಮತ್ತು ಸಹಾಯಕರು ವಿದ್ಯುತ್‌ ಮಾರ್ಗಗಳನ್ನು ಸರಿಪಡಿಸುವ ಕಾರ್ಯ ಕೈಗೊಂಡಿದ್ದು, ಆಸ್ಪತ್ರೆಗಳು ಸೇರಿದಂತೆ ತುರ್ತು ಅಗತ್ಯವಿರುವ ಇತರೆ ಕೇಂದ್ರಗಳಿಗೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದಾಗಿಯೂ ಕೆಲ ಭಾಗಗಳಿಗೆ ವಿದ್ಯುತ್‌ ಸಂಪರ್ಕ ಇನ್ನೂ ದೊರೆಯಬೇಕಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page