Connect with us

LATEST NEWS

ಜಮ್ಮು ವೈಷ್ಣೋದೇವಿ ದೇಗುಲದ ಸಂಕೀರ್ಣದಲ್ಲಿ ಬೆಂಕಿ ದುರಂತ..!

Published

on

ಜಮ್ಮು :  ಜಮ್ಮುವಿನ ಪ್ರಸಿದ್ಧ ಯಾತ್ರಾಸ್ಥಳ ಮಾತಾ ವೈಷ್ಣೋದೇವಿ ದೇವಾಲಯ ಸಂಕೀರ್ಣದಲ್ಲಿ ಭಾರಿ ಬೆಂಕಿ ದುರಂತ ಸಂಭವಿಸಿದೆ.

ದೇಗುಲ ಇರುವ ಆವರದ ಕಟ್ಟಡಕ್ಕೆ ಬೆಂಕಿ ತಗುಲಿದ್ದು ಅಪಾರ ನಷ್ಟ ಸಂಭವಿಸಿದೆ.  ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ನಡೆದಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ 4.15 ರ ಸುಮಾರಿಗೆ ಗರ್ಭಗೃಹದ ಪಕ್ಕದಲ್ಲಿರುವ ಕಾಳಿಕಾ ಭವನದ ನಗದು ಎಣಿಕೆಯ ಕೋಣೆಯೊಳಗೆ ಏಕಾಎಕಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿದೆ ಆದರೆ ಘಟನೆಯಲ್ಲಿ ಯಾವುದೇ ಸಾವುಗಳು ವರದಿಯಾಗಿಲ್ಲ.

ಬೆಂಕಿಯಿಂದಾಗಿ ಅಪಾರ ಪ್ರಮಾಣದ ನಗದು ಸೇರಿದಂತೆ ಹಲವು ದಾಖಲೆಗಳು ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.

 

LATEST NEWS

ಎನ್‌ಡಿಎ ಬಳಿಯ ಹೌಸಿಂಗ್ ಸೊಸೈಟಿಯಲ್ಲಿ ಪಾಕ್ ನೋಟು ಪತ್ತೆ; ಚುರುಕುಗೊಂಡ ತನಿಖೆ

Published

on

ಮಂಗಳೂರು/ ಪುಣೆ : ಮಹಾರಾಷ್ಟ್ರದ  ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಪಾಕಿಸ್ತಾನದ 20 ರೂಪಾಯಿ ಮುಖಬೆಲೆಯ ನೋಟು ಪತ್ತೆಯಾಗಿದೆ. ಸದ್ಯ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ


ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ(ಎನ್‌ಡಿಎ) 18 ಕಿ.ಮೀ ದೂರದಲ್ಲಿರುವ ಭುಕುಮ್ ಪ್ರದೇಶದಲ್ಲಿ ಹೌಸಿಂಗ್ ಸೊಸೈಟಿ ಇದೆ. ಈ  ಸೊಸೈಟಿಯ ಸರ್ವೀಸ್ ಲಿಫ್ಟ್‌ನ ಹೊರಗೆ ಪಾಕಿಸ್ತಾನಿ ಕರೆನ್ಸಿ ನೋಟು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಬೆಂಗಳೂರಿನ ಸರಣಿ ಹಂತಕನ ಗುರುತು ಪತ್ತೆಹಚ್ಚಿದ ಪೊಲೀಸರು

ನೋಟು ಸಿಕ್ಕಿರುವ ಬಗ್ಗೆ ಸೊಸೈಟಿಯ ಪದಾಧಿಕಾರಿಗಳು ಪೊಲೀಸರನ್ನು ಸಂಪರ್ಕಿಸಿದ್ದಾರೆ.  ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ನೋಟುಗಳನ್ನು ಪಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ಆರಂಭವಾಗಿದೆ. ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ  ಎಂದು ಪಿಂಪ್ರಿ ಪೊಲೀಸ್ ಸಹಾಯಕ ಆಯುಕ್ತ ವಿಶಾಲ್ ಹಿರೇ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಬೆಂಗಳೂರಿನ ಸರಣಿ ಹಂತಕನ ಗುರುತು ಪತ್ತೆಹಚ್ಚಿದ ಪೊಲೀಸರು

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಇಂದಿರಾನಗರದಲ್ಲಿ  ಐದು ಗಂಟೆಗಳ ಅವಧಿಯಲ್ಲಿ ನಾಲ್ವರ ಮೇಲೆ ಚಾಕುವಿನಿಂದ ಹ*ಲ್ಲೆ ನಡೆಸಿದ ಸರಣಿ ಹಂತಕನ ಗುರುತು ಪತ್ತೆಯಾಗಿದೆ.

ಬೆಂಗಳೂರಿನ ಇಂದಿರಾನಗರದಲ್ಲಿ ಶನಿವಾರ ಮತ್ತು ರವಿವಾರದ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಪ್ರತ್ಯೇಕ ನಾಲ್ಕು ಸ್ಥಳಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಹಲ್ಲೆ ನಡೆದಿದ್ದು, ಇವುಗಳನ್ನು ಒಬ್ಬನೇ ವ್ಯಕ್ತಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನ ಗುರುತು ಪತ್ತೆಯಾಗಿದೆ.

ಈ ಬಗ್ಗೆ ಬೆಂಗಳೂರು ಪೂರ್ವ ಉಪ ಪೊಲೀಸ್ ಆಯುಕ್ತ ಡಿ. ದೇವರಾಜ್ ಮಾಹಿತಿ ನೀಡಿದ್ದು,”ಆರೋಪಿಯನ್ನು ಕದಂಬ ಎಂದು ಗುರುತಿಸಲಾಗಿದ್ದು, ಈ ಮೊದಲೇ ಪೊಲೀಸ್ ದಾಖಲೆಗಳಲ್ಲಿ ಮೊಬೈಲ್ ಫೋನ್ ಕಳ್ಳ ಮತ್ತು ಕುಡುಕ ಎಂದು ತಿಳಿದುಬಂದಿದೆ. ಆತ ಕುಡಿದ ಮತ್ತಿನಲ್ಲಿ ದಾಳಿ ನಡೆಸಿದ್ದಾನೆ. ಆರೋಪಿ ಬೈಯಪ್ಪನಹಳ್ಳಿ ಕೊಳಗೇರಿ ನಿವಾಸಿ. ಆತ ಕೊನೆಯ ಬಾರಿ ಹೊಸಕೋಟೆಯಲ್ಲಿ ಕಾಣಿಸಿಕೊಂಡಿದ್ದ” ಎಂದು ಹೇಳಿದರು.

ಇದನ್ನೂ ಓದಿ: ಮೃತದೇಹವನ್ನು ಸಾಗಿಸುತ್ತಿದ್ದ ಅಂಬುಲೆನ್ಸ್‌ನಲ್ಲಿ ಬೆಂಕಿ: ಪ್ರಾಣಾಪಾಯದಿಂದ 4 ಜನ ಬಚಾವ್

ಏನಿದು ಪ್ರಕರಣ?

ಇಂದಿರಾನಗರದ ರಸ್ತೆಯ ಸಮೀಪವಿರುವ ಹೋಟೆಲ್ ಬಳಿ ರಾತ್ರಿ 9:40ರ ಸುಮಾರಿಗೆ ತಿಂಡಿ ಮಾರುತ್ತಿದ್ದ ದೀಪಕ್ ಕುಮಾರ್ ವರ್ಮಾ (24) ಎಂಬುವವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹ*ಲ್ಲೆ ನಡೆಸಿದ್ದ. ಕುಡಿದ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ ನಡೆಸಿ ಆತ ಪರಾರಿಯಾಗಿದ್ದ. ಇದೇ ರೀತಿ ಇನ್ನೊಂದು ಕಡೆ ರಸ್ತೆ ಬದಿಯಲ್ಲಿ ತಿಂಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೂ ದಾಳಿ ನಡೆದಿತ್ತು.

ಬಳಿಕ ಬೈಕ್ ಟ್ಯಾಕ್ಸಿ ಸವಾರನ ಮೇಲೆ ಹಲ್ಲೆ ನಡೆಸಿದ ದಾಳಿಕೋರ ಸವಾರನ ಬೈಕ್ ಮತ್ತು ಮೊಬೈಲ್ ಕಳ್ಳತನ ಮಾಡಿದ್ದ. ಆದರೆ ನಾಲ್ಕನೇ ದಾಳಿಯನ್ನು ಭದ್ರತಾ ಸಿಬ್ಬಂದಿಯು ತಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಿಚಿತ ಹಂತಕನ ದಾಳಿಗಳಿಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸರಣಿ ಹಂತಕನ ಗುರುತು ಪತ್ತೆಯಾಗಿದ್ದು, ಸದ್ಯ ಆತನನ್ನು ಬಂಧಿಸಲು ಬಲೆ ಬೀಸಿದ್ದಾರೆ.

 

 

 

Continue Reading

BELTHANGADY

ಬೆಳ್ತಂಗಡಿ: ದಿನಸಿ ಅಂಗಡಿಗೆ ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ದೋಚಿದ ಕಳ್ಳರು

Published

on

ಬೆಳ್ತಂಗಡಿ: ದಿನಸಿ ಅಂಗಡಿಗೆ ಕಳ್ಳರು ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ಫೆ.10 ರಂದು ರಾತ್ರಿ ನಡೆದಿದೆ.

ಹರೀಶ್ ಕುಲಾಲ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ನಿನ್ನೆಯ ದಿನ ರಾತ್ರಿ ಕಳ್ಳರು ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಹೋದಿ ಅಂಗಡಿಯಲ್ಲಿದ್ದ ಹಲವಾರು ವಸ್ತುಗಳನ್ನು ಬಾಚಿಕೊಂಡು ಹೋಗಿದ್ದಾರೆ.

ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗಡಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page