Connect with us

DAKSHINA KANNADA

ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧFIR ದಾಖಲು

Published

on

ಬೆಳ್ತಂಗಡಿ : ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.

ಬ್ಯಾರಿ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ತೆಕ್ಕಾರು ನಿವಾಸಿ ಇಬ್ರಾಹಿಂ ಎಸ್‌.ಬಿ ಎಂಬವರು  ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಬಿಎನ್ಎಸ್ಎಸ್ ಆಕ್ಟ್ 196, 352(2) ಅಡಿ ಪ್ರಕರಣ ದಾಖಲಿಸಲಾಗಿದೆ.

ಹರೀಶ್ ಪೂಂಜಾ ಹೇಳಿದ್ದೇನು?

ಬ್ಯಾರಿಗಳ ಆಕ್ರಮಣದಿಂದ ಅಯೋಧ್ಯೆಯ ರಾಮ ಮಂದಿರ ಮಸೀದಿಯಾದ ಬಳಿಕ ನಾವು 500 ವರ್ಷ ಕಾದೆವು. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು, ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಎಂದಾಗ ಅರ್ಥ ಮಾಡಿಕೊಳ್ಳಲಿಲ್ಲ. ನಾವು 500 ವರ್ಷ ಕಾದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದೆವು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ತೆಕ್ಕಾರಿನಲ್ಲಿ ಒಬ್ಬನೇ ಒಬ್ಬ ಬ್ಯಾರಿ ಇಲ್ಲದಿದ್ದಾಗಲೂ ನಮ್ಮ ಹಿರಿಯರು ಗೋಪಾಲಕೃಷ್ಣ ದೇವರನ್ನು ನಂಬಿಕೊಂಡು ಬಂದಿದ್ದರು. ಬಳಿಕ ಬ್ಯಾರಿಗಳ ಅಥವಾ ಟಿಪ್ಪುವಿನ ಆಕ್ರಮಣದಿಂದ ಗೋಪಾಲಕೃಷ್ಣ ದೇವಸ್ಥಾನ ಧ್ವಂಸಗೊಂಡು ನೆಲದಡಿಗೆ ಹೋದರೂ, ನಾವು ಹಿಂದೂ ಸಮಾಜ ನಿದ್ದೆಯಲ್ಲಿದ್ದೆವು, ನಾವು ಎದ್ದಿರಲಿಲ್ಲ. ನಾವು ಏಳಬೇಕಾದರೆ ಕಾಲಚಕ್ರ ಉರುಳಿ ಉರುಳಿ 2025. ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠೆ ಆಗುವ ಘಳಿಗೆ ಕೂಡಿ ಬರಬೇಕಾಗಿತ್ತು. ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠೆಯಾದ ಮರುವರ್ಷ, ಅಂದರೆ 2025ರಲ್ಲಿ ತೆಕ್ಕಾರಿನಲ್ಲಿ ಇರುವ ಅತ್ಯಲ್ಪ ಹಿಂದೂ ಸಮಾಜ ಒಂದಾಗಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠೆ ಮಾಡುವ ಸಂಕಲ್ಪ ಬಂತಲ್ವ ಅದಕ್ಕೆ ಗೋಪಾಲಕೃಷ್ಣ ದೇವರ ಪ್ರೇರಣೆ ಇದೆ.

ಬ್ಯಾರಿಗಳಲ್ಲಿ ಎಷ್ಟು ಜಾತಿ ಇದೆ ಎಂದು ಕೇಳಿದರೆ ಅಂಕಿ ಅಂಶ ಹೇಳುತ್ತದೆ. ಮೊನ್ನೆ ಸಿದ್ದರಾಮಯ್ಯ ಜನಗಣತಿ ಮಾಡಿದರು, ಅದರಲ್ಲಿ ಬ್ಯಾರಿಗಳಲ್ಲಿ ಜಾತಿ ಇದೆಯಾ ಕೇಳಿದರೆ, ಜಾತಿ ಇಲ್ಲ ಎಂದಿದ್ದಾರೆ. ಬ್ಯಾರಿಗಳಲ್ಲಿ ಕನಿಷ್ಠ 70-74 ಜಾತಿಗಳಿವೆ. ಆದರೆ, ನಮಗೆ ಯಾವ ಜಾತಿ ಎಂದು ಯಾರಿಗೂ ಗೊತ್ತಿಲ್ಲ. ನಮಗೆ ಗೊತ್ತಿರುವುದು ಏನು ಎಂದರೆ, ಉಸ್ಮಾನಾಕ, ಅಬ್ದುಲ್ಲಾಕ, ಇಬ್ರಾಹಿಂ ಎಲ್ಲಾ ಬ್ಯಾರಿ ಎಂದೇ ಗೊತ್ತಿರುವುದು. ಆದರೆ, ಹಿಂದೂ ಸಮಾಜದಲ್ಲಿ ನಾವು ಆ ರೀತಿಯಲ್ಲ. ಅವನು ಯಾರು..ಅವನು ಬ್ರಾಹ್ಮಣ, ಇವನು ಯಾರು..ಅವನು ಶೆಟ್ಟಿ, ಅವನು ಯಾರು.. ಅವನು ಬಿಲ್ಲವ, ಇವನು ಯಾರು..ಅವನು ಗೌಡ, ಇವನು ಯಾರು..ಅವನು ಕುಲಾಲ, ಈ ರೀತಿಯ ಜಾತಿ ಜಾತಿ ನಮಗೆ ಮಾತ್ರ ಗೊತ್ತಿರುವುದಲ್ಲ, ಬ್ಯಾರಿಗಳಿಗೂ ಗೊತ್ತಿದೆ.

ಇದನ್ನೂ ಓದಿ : ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಬ್ಬರು ಹಿಂದು ಮುಖಂಡರಿಗೆ ಜೀವ ಬೆದರಿಕೆ

ಇತಿಹಾಸವನ್ನು ಮತ್ತೊಮ್ಮೆ ನೀವು ಮರೆತ್ತದ್ದೇ ಆದರೆ, ನಿಮ್ಮ ಊರಿನಲ್ಲಿರುವುದು 150 ಹಿಂದೂಗಳ ಮನೆಗಳು, ಒಂದು ಸಾವಿರಕ್ಕಿಂತಲೂ ಅಧಿಕ ಇರುವುದು ಬ್ಯಾರಿಗಳು. ಇನ್ನು 10 ವರ್ಷ ಕಳೆದರೆ 1,200 ಇರುವ ಬ್ಯಾರಿಗಳ ಸಂಖ್ಯೆ 600ಕ್ಕೆ ಇಳಿಯುವುದಿಲ್ಲ. ಇನ್ನು 10 ವರ್ಷ ಕಳೆದರೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5 ಸಾವಿರ ಆಗುತ್ತದೆ. 5 ಸಾವಿರದಿಂದ 10 ಸಾವಿರ ಆದರೂ, ಇಲ್ಲಿರುವ ಹಿಂದೂ ಸಮಾಜ ಸನಾತನವಾಗಿ ಸಾವಿರ ವರ್ಷ ಗೋಪಾಲಕೃಷ್ಣ ದೇವರನ್ನು ಆರಾಧನೆ ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡುವ ದಿನ ಇಂದಿನ ಬ್ರಹ್ಮಕಲಶೋತ್ಸವದ ದಿನ ಎಂದಿದ್ದಾರೆ.

DAKSHINA KANNADA

ಮಂಗಳೂರು: ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ

Published

on

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮೇ 20 ರಂದು ಮತ್ತೆ ಕೈದಿಗಳ ನಡುವೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ.

ಅಡುಗೆ ಕೆಲಸ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್ ಹೊಡೆದಿದ್ದಾನೆ. ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾದರು.

ಇದನ್ನೂ ಓದಿ: ಮೇ 23 ರಿಂದ ತುಳುನಾಡಿನಾದ್ಯಂತ “ಗಂಟ್ ಕಲ್ವೆರ್’ ತುಳು ಚಿತ್ರ ತೆರೆಗೆ

ತಕ್ಷಣ ಜಾಗೃತರಾದ ಜೈಲಿನ ಅಧಿಕಾರಿಗಳು ಮುನೀರ್ ಮೇಲೆ ಹಲ್ಲೆ ಮಾಡುವುದನ್ನು ತಪ್ಪಿಸಿದರು. ಇದರಿಂದ ಕೆಲಕಾಲ ಜೈಲಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿದು ಬಂದಿದೆ.

ಬರ್ಕೆ ಪೊಲೀಸರು ಜೈಲು ಆವರಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಸ್ತುತ ಹೆಚ್ಚಿನ ತನಿಖೆ ನಡೆಯುತ್ತಿದೆ.

Continue Reading

DAKSHINA KANNADA

ಮೇ 23 ರಿಂದ ತುಳುನಾಡಿನಾದ್ಯಂತ “ಗಂಟ್ ಕಲ್ವೆರ್’ ತುಳು ಚಿತ್ರ ತೆರೆಗೆ

Published

on

ಮಂಗಳೂರು: ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ ಸುಧಾಕರ ಬನ್ನಂಜೆ ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ “ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಚಿತ್ರ ನಿರ್ಮಾಪಕರು, ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಸಿನಿಪೋಲಿಸ್ ಪಿವಿ ಆರ್ ,ರೂಪವಾಣಿ , ಉಡುಪಿಯಲ್ಲಿ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್ ಹಾಗೂ ಸಿನಿ ಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದರು.

ಇದನ್ನೂ ಓದಿ: 35 ವರ್ಷದ ನಟಿಯನ್ನು ವರಿಸಲಿದ್ದಾರೆ ವಿಶಾಲ್..! ಅಷ್ಟಕ್ಕೂ ಹುಡುಗಿ ಯಾರು ಗೊತ್ತಾ..?

ತುಳು ಚಿತ್ರರಂಗದ ಖ್ಯಾತ ನಟರು ಇದರಲ್ಲಿ ನಟಿಸಿದ್ದಾರೆ ಎಂದು ವಿವರಿಸಿದರು. ವೇದಿಕೆಯಲ್ಲಿ ರಾಕೇಶ್ ಆಚಾರ್ಯ, ಸುಧಾಕರ್, ಪ್ರಶಾಂತ್ ಆಚಾರ್ಯ, ತಮ್ಮ ಲಕ್ಷ್ಮಣ ಮೊದಲಾದವರಿದ್ದರು.

Continue Reading

DAKSHINA KANNADA

ಶಾಸಕ ಹರೀಶ್ ಪೂಂಜಾ ವಿರುದ್ದ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

Published

on

ಉಪ್ಪಿನಂಗಡಿ : ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹರೀಶ್ ಪೂಂಜಾ ವಿರುದ್ದ ಪ್ರಕರಣ ದಾಖಲಾಗಿತ್ತು. ಇಂದು(ಮೇ 20) ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಎಫ್ಐಆರ್ ರದ್ದುಗೊಳಿಸುವಂತೆ ಹರೀಶ್ ಪೂಂಜಾಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳದ ಹೈಕೋರ್ಟ್ ದೂರುದಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

ಇದನ್ನೂ ಓದಿ : ಶಿಶಿಲದ ಶ್ರೀ ಶಿಶಿಲೇಶ್ವರನಿಗೆ ವಿಭಿನ್ನ ಶೈಲಿಯಲ್ಲಿ ತೆಪ್ಪೋತ್ಸವ

ಈ ನಡುವೆ ಪೊಲೀಸರು ಶಾಸಕ ಪೂಂಜಾ ವಿರುದ್ದ ಹೈಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಶಾಸಕ ಹರೀಶ್ ಪೂಂಜಾಗೆ ಮತ್ತೊಂದು ಹಿನ್ನಡೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page