Connect with us

LATEST NEWS

ಭಾರತದಿಂದ ಪರಾರಿಯಗಿದ್ದ ನಿತ್ಯಾನಂದನ ಅಧಿಕೃತ ಕೈಲಾಸ ಸ್ಥಳ ಕೊನೆಗೂ ಬಹಿರಂಗ

Published

on

ಮಂಗಳೂರು/ಮಧುರೈ: ಭಾರತದಿಂದ ಪಲಾಯನ ಮಾಡಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020ರಲ್ಲಿ ಕೈಲಾಸ ರಾಷ್ಟ್ರ ಎಂದು ಘೋಷಿಸಿದ್ರು. ಆದ್ರೆ ಆ ಜಾಗ ಯಾವ ದೇಶದಲ್ಲಿದೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಹಲವು ವರ್ಷಗಳ ನಿಗೂಢತೆಯ ನಂತರ ನಿತ್ಯಾನಂದನ ‘ಕೈಲಾಸ’ದ ಸ್ಥಳವನ್ನು ಅವರ ಶಿಷ್ಯರೇ ಬಹಿರಂಗ ಪಡಿಸಿದ್ದಾರೆ.

ಹೌದು, ನಿತ್ಯಾನಂದ ಎಲ್ಲಿದ್ದಾನೆ ಎಂಬುದರ ಕುರಿತು ಅಚ್ಚರಿಯ ಮಾಹಿತಿಯನ್ನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಬಹಿರಂಗ ಆಗಿದೆ. ತಿರುವಣ್ಣಮಲೈ ಮಠದಿಂದ ಸ್ವಾಮಿ ನಿತ್ಯಾನಂದನ ನಿಷೇಧಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ನಿತ್ಯಾನಂದ ಸ್ವಯಂ ಘೋಷಿತ ರಾಷ್ಟ್ರ ಎಲ್ಲಿದೆ ಎಂಬ ಪ್ರಶ್ನೆಗೆ ಕೋರ್ಟ್​ನಲ್ಲಿ ಉತ್ತರ ಸಿಕ್ಕಿದೆ.

ನಿತ್ಯಾನಂದನ ಕೈಲಾಸ ದೇಶ ಎಲ್ಲಿದೆ?
ಅತ್ಯಾಚಾರ ಆರೋಪದ ಮೇಲೆ ಭಾರತದಿಂದ ಪರಾರಿಯಾಗಿದ್ದ ಆಧ್ಯಾತ್ಮಿಕ ನಾಯಕ ನಿತ್ಯಾನಂದ ಪ್ರಸ್ತುತ ಆಸ್ಟ್ರೇಲಿಯಾ ಬಳಿಯ “ಯುಎಸ್‌ಕೆ” ಎಂಬ ಸ್ವಯಂ ಘೋಷಿತ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

“ಕೈಲಾಸ” ರಾಷ್ಟ್ರದ ಸ್ಥಳದ ಕುರಿತು ನ್ಯಾಯಾಲಯವು ಸ್ವಾಮಿ ನಿತ್ಯಾನಂದನ ಅನುಯಾಯಿಗಳನ್ನು ಕೆಣಕಿತು. ಅಧಿನಾಮ ಮಠದಿಂದ ಅವರನ್ನು ನಿಷೇಧಿಸುವ ಏಕ-ನ್ಯಾಯಾಧೀಶರ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿಗಳಾದ ಎಸ್‌.ಎಂ ಸುಬ್ರಮಣ್ಯಂ ಮತ್ತು ಮಾರಿಯಾ ಕ್ಲೆಟ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಿತ್ಯಾನಂದನ ಭೌತಿಕ ಸ್ಥಳದ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿತು. “ಅರ್ಜಿದಾರರು ಎಲ್ಲಿದ್ದಾರೆ? ಈ ಕೈಲಾಸ ಎಲ್ಲಿದೆ?” ಎಂದು ನ್ಯಾಯಾಧೀಶರು ಕೇಳಿದಾಗ, ನಿತ್ಯಾನಂದನ ಶಿಷ್ಯ ಅರಚನ ತಿರುಮಲ, ವಿವಾದಾತ್ಮಕ ಗುರು ಆಸ್ಟ್ರೇಲಿಯಾ ಬಳಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” (ಯುಎಸ್‌ಕೆ) ಅನ್ನು ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಸ್ಥಾಪಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ನಿತ್ಯಾನಂದ ಪರ ವಕಾಲತ್ತು ವಹಿಸಲು ಹೊಸ ವಕೀಲರನ್ನ ನೇಮಿಸಲು ಅರ್ಚನಾ ಅನುಮತಿ ಕೋರಿದ್ರು. ಮನವಿಯನ್ನ ಸ್ವೀಕರಿಸಿದ ಕೋರ್ಟ್​​​, ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ನಿತ್ಯಾನಂದ ಸಾವಿನ ಕುರಿತು ಸ್ಪಷ್ಟನೆ ಕೊಟ್ಟ ಕೈಲಾಸ

2020ರಲ್ಲಿ “ಕೈಲಾಸ” ರಾಷ್ಟ್ರದ ಘೋಷಣೆ
ಭಾರತದಿಂದ ಪಲಾಯನ ಮಾಡಿದ ನಂತರ ನಿತ್ಯಾನಂದ 2020ರಲ್ಲಿ “ಕೈಲಾಸ” ರಾಷ್ಟ್ರದ ರಚನೆಯನ್ನು ಘೋಷಿಸಿದರು. ಅವರು ಈಕ್ವೆಡಾರ್ ಬಳಿ ದ್ವೀಪಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇತ್ತೀಚೆಗೆ ಮಾರ್ಚ್ 30ರಂದು ಯುಗಾದಿಗೆ ಭಕ್ತರಿಗೆ ಆಶೀರ್ವಾದ ಮಾಡಲು ಅವರು ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ವಿರುದ್ಧದ ವಂಚನೆಗಳನ್ನು ತಳ್ಳಿಹಾಕಿದ್ದರು. ಇದೀಗ ಅವರ ಶಿಷ್ಯರ ಮೂಲಕ ನಿತ್ಯಾನಂದನ ಕೈಲಾಸದ ವಿಳಾಸ ಅಧಿಕೃತವಾಗಿ ಹೊರಬಿದ್ದಂತಾಗಿದೆ.

LATEST NEWS

ಮಣಿಪಾಲದ ಅಪಾರ್ಟ್‌ಮೆಂಟ್‌ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಸೆಕ್ಯೂರಿಟಿ ಗಾರ್ಡ್ ಬಂಧನ

Published

on

ಮಣಿಪಾಲ: ಮಣಿಪಾಲದ ಅಪಾರ್ಟ್ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅದೇ ಅಪಾರ್ಟ್ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಣೇಶ್ ಗಣಪ ನಾಯ್ಕ್ ಬಂಧಿತ ಆರೋಪಿಯಾಗಿದ್ದಾನೆ. ಮಾಲಕರು ನೀಡಿದ ಮನೆಯ ಕೀಯನ್ನು ಬಳಸಿಕೊಂಡು ಈತ ಮಹಿಳೆಯನ್ನು ಬಲವಂತವಾಗಿ ಇರಿಸಿ ಅಕ್ರಮ ಲಾಭಕ್ಕಾಗಿ ವೇಶ್ಯಾವಾಟಿಕೆ ವ್ಯವಹಾರ ಮಾಡುತ್ತಿದ್ದ.

ಇದನ್ನೂ ಓದಿ: ಉಪ್ಪಿನಂಗಡಿ: ಪತ್ನಿಯನ್ನು ಚೂ*ರಿಯಿಂದ ಇ*ರಿದು ಕೊಂ*ದ ಪತಿ

ಮಹಿಳೆಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Continue Reading

LATEST NEWS

ಸಿಎಂ ಹೊಡೆಯಲು ಕೈಯೆತ್ತಿದ್ದ ASP ಭರಮನಿಗೆ ಜಾಕ್‌ಪಾಟ್

Published

on

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ತಮ್ಮ ಮೇಲೆ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರಿಂದ ತೀವ್ರ ಅವಮಾನಕ್ಕೊಳಗಾಗಿ ಸ್ವಯಂ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದ ಧಾರವಾಡ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರಿಗೆ ಈಗ ಜಾಕ್‌ಪಾಟ್ ಹೊಡೆದಿದೆ.


ಹೌದು, ಕೆಲವು ಸಮಯದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ ಭರಮನಿ ಅವರಿಗೆ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದರು. ಇದರಿಂದ ತೀವ್ರವಾಗಿ ಮನನೊಂದಿದ್ದ ಬರಮನಿ ಅವರು ಸ್ವಯಂ ನಿವೃತ್ತಿಗೆ ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ಸಂಬಂಧ ರಾಜ್ಯ ಸರ್ಕಾರ ಭಾರೀ ಟೀಕೆ ಗುರಿಯಾಗಿತ್ತು. ಕೊನೆಗೆ ನಾರಾಯಣ ಬರಮನಿ ಅವರನ್ನು ಹಿರಿಯ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ನಾರಾಯಣ ಬರಮನಿ ಅವರು ಕೆಲಸಕ್ಕೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ಇದೀಗ ನಾರಾಯಣ ಬರಮನಿ ಅವರಿಗೆ ಮುಂಬಡ್ತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಅವಮಾನ: ಪತ್ರ ಬರೆದು ಸ್ವಯಂ ನಿವೃತ್ತಿಗೆ ಮುಂದಾದ ಎಎಸ್ಪಿ

ಧಾರವಾಡ ಎಎಸ್‌ಪಿ ಆಗಿದ್ದ ಬರಮನಿ ಅವರಿಗೆ ಈಗ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್‌ ಆಯುಕ್ತ(ಡಿಸಿಪಿ) ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.

Continue Reading

DAKSHINA KANNADA

ಪ್ರಿಯಾಂಕ್ ಖರ್ಗೆ ಅವರಿಗೆ ಸರ್ವಜ್ಙ ಸಿಂಡ್ರೋಮ್ ಇದೆ: ಶಾಸಕ ಭರತ್ ಶೆಟ್ಟಿ

Published

on

ಮಂಗಳೂರು: ಗೃಹಸಚಿವರು ಮಂಗಳೂರನ್ನು ಉಡ್ತಾ ಪಂಜಾಬ್ ಆಗ್ಲಿಕ್ಕೆ ಬಿಡೋದಿಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದರು. ವಿಧಾನಸಭೆಯಲ್ಲಿ ಪ್ರತೀ ಬಾರಿ ನಮ್ಮ ಕೋರಿಕೆ ಇದ್ದದ್ದು ಕೂಡಾ ಅದೇ. ಜಿಲ್ಲೆಯಲ್ಲಿ ಡ್ರಗ್ಸ್ ಪೂರೈಕೆಗೆ ಕಡಿವಾಣ ಹಾಕಬೇಕು ಅಂತ. ಪೊಲೀಸರು ಡ್ರಗ್ಸ್ ಸೀಜ್ ಮಾಡ್ತಾರೆ. ಆರೋಪಿಗಳನ್ನು ಅರೆಸ್ಟ್ ಮಾಡ್ತೀರಿ. ಆದರೆ 6 ತಿಂಗಳ ಬಳಿಕ ಮತ್ತೆ ಸೀಜ್ ಬಗ್ಗೆ ಸುದ್ದಿ ಇರೋದಿಲ್ಲ. ಡ್ರಗ್ಸ್ ಸಪ್ಲೈ ನಿರಂತರವಾಗಿ ಆಗ್ತಾನೇ ಇದೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ವಾಗ್ದಾಳಿಯನ್ನು ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗೆದ್ದ ಕೂಡಲೇ ಬಿಜೆಪಿಗರಿಗೆ, ಆರೆಸ್ಸೆಸ್ ನವರಿಗೆ ಬೈಯ್ಯೋದನ್ನು ಪ್ರಿಯಾಂಕ್ ಖರ್ಗೆ ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಅವರಿಗೆ ಸ್ವಲ್ಪ ಸರ್ವಜ್ಞ ಸಿಂಡ್ರೋಮ್ ಇದೆ. ಅಂದ್ರೆ ಎಲ್ಲಾ ತಿಳಿದವರು ಅನ್ನೋ ಭಾವನೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಲಿಂಗರಾಜು ಕಣ್ಣಿ ಅವರನ್ನು ಡ್ರಗ್ಸ್ ವ್ಯವಹಾರದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಡ್ರಗ್ಸ್ ಕೇಸನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಸರ್ಕಾರದಿಂದ ವಿವಿಧ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಸಾಧ್ಯವಾದರೆ ತನಿಖೆಗೆ ಸಹಕರಿಸಲಿ ಇಲ್ಲವಾದಲ್ಲಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಪ್ರಕರಣದ ಹಿಂದೆ ಸ್ಥಾಪಿತ ಹಿತಾಸಕ್ತಿಗಳು, ದೊಡ್ಡವರ ಕೈವಾಡವಿದೆ. ಪ್ರಕರಣವನ್ನು ಸರಕಾರ ಲಘುವಾಗಿ ಪರಿಗಣಿಸಿದೆ. ಇಷ್ಟು ದೊಡ್ಡ ಪ್ರಕರಣವನ್ನು ವಿಷಯಾಂತರ ಮಾಡಲು ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಪ್ರಕರಣವೊಂದರಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಿದರು. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡ ವಿಕಾಸ್ ಪುತ್ತೂರು, ಜಿಲ್ಲಾ ವಕ್ತಾರ ರಾಜಗೋಪಾಲ ರೈ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page