Connect with us

LATEST NEWS

ಕುಟುಂಬ ಕಲಹ :ರುಬ್ಬುವ ಕಲ್ಲು ಎತ್ತಿಹಾಕಿ ತಂದೆಯ ಕೊಂದ ಮಗ..!

Published

on

ಕೋಲಾರ: ಕುಟುಂಬದಲ್ಲಿ ಉಂಟಾದ ಕಲಹ ತಾರಕಕ್ಕೆ ಏರಿ ಸ್ವಂತ ಮಗನೇ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ, ಶ್ರೀನಿವಾಸಪುರದ ಅಂಬೇಡ್ಕರ್ ಪಾಳ್ಯದಲ್ಲಿ ಅಪ್ಪಂದಿರ ದಿನವಾದ ನಿನ್ನೆ ತಡ ರಾತ್ರಿ ನಡೆದಿದೆ.

ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಮೃತ ದುರ್ದೈವಿ. ನವೀನ್ ತಂದೆಯನ್ನು ಕೊಲೆ ಮಾಡಿದ ಆರೋಪಿ. ನವೀನ್ ಮತ್ತು ವೆಂಕಟೇಶ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ.

ಬಳಿಕ ಮಾತಿಗೆ ಮಾತು ಬೆಳೆದು ತಡರಾತ್ರಿ ನವೀನ್ ಮನೆಯಲ್ಲಿದ್ದ ರುಬ್ಬುವ ಗುಂಡಿನಿಂದ ತಲೆಗೆ ಹೊಡೆದು ವೆಂಕಟೇಶ್ ಅವರನ್ನು ಕೊಲೆ ಮಾಡಿದ್ದಾನೆ.

ತಲೆಗೆ ರುಬ್ಬುವ ಗುಂಡುನಿಂದ ಹೊಡೆದ ಪರಿಣಾಮ ವೆಂಕಟೇಶ್ ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳೀಯರು ಮನೆ ಮಂದಿಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನವೀನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಬಳಿಕ ನವೀನ್‍ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

DAKSHINA KANNADA

ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ಭಾವಪೂರ್ಣ ಬೀದಿ ನಾಟಕ

Published

on

ಕಾಸರಗೋಡು: ಸಮಾಜದೊಳಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸ್ನೇಹಾಲಯ ಡಿ ಅಡಿಕ್ಷನ್ ಸೆಂಟರ್ ಹಾಗೂ ಮಂಜೇಶ್ವರದ ಜನಮೈತ್ರಿ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಪ್ಪಳ ಹಾಗೂ ಹೊಸಂಗಡಿ ಬಸ್ ನಿಲ್ದಾಣಗಳಲ್ಲಿ ಭಾವಪೂರ್ಣ ಬೀದಿ ನಾಟಕ ಹಾಗೂ ಮೈಮ್ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳು, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದ ಮೇಲೆ ಬೀರುವ ಪರಿಣಾಮಗಳನ್ನು ಸ್ಪಷ್ಟವಾಗಿ ಸಾರ್ವಜನಿಕರಿಗೆ ಪರಿಚಯಿಸುವುದು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯಶಾಸ್ತ್ರ (MSW) ವಿದ್ಯಾರ್ಥಿಗಳು ಸ್ನೇಹಾಲಯ ತಂಡದೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಕಲಾತ್ಮಕವಾಗಿ ತಮ್ಮ ಸಂದೇಶವನ್ನು ಸಾರ್ವಜನಿಕರ ಮುಂದಿಟ್ಟು ಜನಮನ ಗೆದ್ದರು.

ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ (ಎಎಸ್ಪಿ) ಶ್ರೀ ಪಿ. ಬಾಲಕೃಷ್ಣ ನಾಯರ್, ಹೊಸದುರ್ಗ ಠಾಣೆಯ ವೃತ್ತ ನಿರೀಕ್ಷಕ (ಸಿ.ಐ) ಅಜಿತ್ ಕುಮಾರ್, ಮಂಜೇಶ್ವರ ಠಾಣೆಯ ಸಿ.ಐ ಶ್ರೀ ಅನುಪ್ ಹಾಗೂ ಸ್ನೇಹಾಲಯ ಡಿ ಅಡಿಕ್ಶನ್ ಕೇಂದ್ರದ ಕಾರ್ಯನಿರ್ವಾಹಕ, ನಿರ್ದೇಶಕ ಶ್ರೀ ಜೋಸೆಫ್ ಕ್ರಾಸ್ತಾ ಅವರು ಪ್ರಮುಖರಾಗಿ ಉಪಸ್ಥಿತರಿದ್ದರು.

ಸ್ನೇಹಾಲಯ ಡಿ ಅಡಿಕ್ಷನ್ ಸೆಂಟರ್ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಪೊಲೀಸ್ ಅಧಿಕಾರಿಗಳು, ಕಾಸರಗೋಡು ಜಿಲ್ಲೆಯಲ್ಲಿನ ಮಾದಕವಸ್ತು ಬಳಕೆಯಲ್ಲಿರುವ ಯುವಜನತೆಗೆ ಸೂಕ್ತ ಚಿಕಿತ್ಸೆ ನೀಡಲು ಇರುವ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಸ್ನೇಹಾಲಯವು ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಅಮೋಘ ಸೇವೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಜೊತೆಗೆ, ಇತ್ತೀಚೆಗೆ ಈ ಸಂಸ್ಥೆಯು ಸ್ಥಾಪಿಸಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಆರಂಭಿಸಿರುವ ಸ್ನೇಹಾಲಯ ಡಿ ಅಡಿಕ್ಷನ್ ಸೆಂಟರ್ ಕುರಿತು ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಮಾತನಾಡಿದ ಶ್ರೀ ಜೋಸೆಫ್ ಕ್ರಾಸ್ತಾ, ಸ್ನೇಹಾಲಯದಲ್ಲಿ ಲಭ್ಯವಿರುವ ವಿವಿಧ ಚಿಕಿತ್ಸೆ ವಿಧಾನಗಳು, ವೈಯಕ್ತಿಕ ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಕುಟುಂಬ ಜವಾಬ್ದಾರಿಗಳ ಜತೆಗೆ ಒಡನಾಡಿ ಬೆಳೆಸುವ ದಿಶೆಯ ಸೇವೆಗಳ ಬಗ್ಗೆ ವಿವರಿಸಿದರು. ಮಾದಕವಸ್ತುಗಳ ಮೋಹದಿಂದ ಮುಕ್ತವಾಗಿರುವ ಸಮುದಾಯ ನಿರ್ಮಾಣಕ್ಕೆ ಸ್ನೇಹಾಲಯ ತೊಡಗಿಸಿಕೊಂಡಿರುವ ನಿಷ್ಠೆ ಹಾಗೂ ಸೇವಾಭಾವನೆಗೆ ಅವರು ಬದ್ಧರಾಗಿರುವುದನ್ನು ಸ್ಪಷ್ಟಪಡಿಸಿದರು.
ಸಮಾರಂಭದ ಅಂತ್ಯದಲ್ಲಿ ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ನೇಹಾಲಯ ತಂಡದ ಈ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮವನ್ನು ಶ್ರದ್ದೆಯಿಂದ ವೀಕ್ಷಿಸಿ ಎಲ್ಲಾ ಕಲಾವಿದರನ್ನು ತುಂಬು ಹ್ರದಯದಿಂದ ಅಭಿನಂದಿಸಿದರು.

 

Continue Reading

FILM

ಋತುಚಕ್ರದ ಬಗ್ಗೆ ಮಾತನಾಡುವಾಗ ಈಗಲೂ ಮುಜುಗರವಾಗುತ್ತದೆ – ಸಮಂತಾ ಬೇಸರ

Published

on

‘ಮಹಿಳೆಯರಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಋತುಚಕ್ರದ ವಿಚಾರಗಳ ಬಗ್ಗೆ ಮಾತನಾಡುವಾಗ ಇನ್ನೂ ಮೌನ ವಹಿಸುತ್ತೇವೆ. ​​ಪಿಸುಮಾತುಗಳಿಂದ ಹೇಳುತ್ತೇವೆ. ಅವಮಾನ ಎಂದು ಭಾವಿಸುತ್ತೇವೆ. ಈ ಮನಸ್ಥಿತಿ ಬದಲಾಗಬೇಕು ಎಂದು ನಮ್ಮ ಋತುಚಕ್ರ ಶಕ್ತಿಯುತವಾಗಿವೆ. ಇದು ಜೀವನವನ್ನು ದೃಢಪಡಿಸುತ್ತವೆ. ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪ್ರತಿ ತಿಂಗಳೂ ನಿರಂತರವಾಗಿ ಕಲಿಯುತ್ತಲೇ ಇರಬೇಕು’ ಎಂದು ನಟಿ ಸಮಂತಾ ಅಭಿಪ್ರಾಯಪಟ್ಟಿದ್ದಾರೆ.

 

ನಟಿ ಸಮಂತಾ ರುತು ಪ್ರಭು ಡಿವೋರ್ಸ್‌ ಬಳಿಕ ಪರದೆ ಮೇಲೆ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ‘ಖುಷಿ’ ಬಳಿಕ ಅನಾರೋಗ್ಯದ ಕಾರಣದಿಂದ ಸಮಂತಾ ಸಿನಿಮಾ ಕೆಲಸ ಕಡಿಮೆ ಮಾಡಿ ವೆಬ್ ಸೀರಿಸ್​​ಗಳತ್ತ ಅವರ ಗಮನ ಕೊಡಲು ಆರಂಭಿಸಿದ್ದಾರೆ. ಇದರ ಜೊತೆಗೆ ಸಮಂತಾ ಸಾಮಾಜಿಕ ಕಳಕಳಿ ತೋರಿಸುವ ಕೆಲಸ ಮಾಡುವುದರ ಜೊತೆಜೊತೆಗೆ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆ. ಈಗ ನಟಿ ಋತುಚಕ್ರದ ಬಗ್ಗೆ ಮಾತನಾಡಿದ್ದು, ಈ ವಿಚಾರವನ್ನು ಓಪನ್ ಆಗಿ ಮಾತನಾಡಲು ಮುಜುಗರಪಟ್ಟುಕೊಳ್ಳುವ ಸ್ಥಿತಿ ಇದೆ ಎಂದು ಬೇಸರ ಹೊರಹಾಕಿದ್ದಾರೆ.

ಸಮಂತಾ ಅವರು ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ಶುಭಂ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರ ಜೊತೆಗೆ ಸಮಂತಾ ಅವರು ವೆಬ್ ಸೀರಿಸ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು, ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ‘ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್​ಡಮ್’ ಹೆಸರಿನ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇನ್ನು, ರಾಜ್ ಜೊತೆ ಸಮಂತಾ ಡೇಟಿಂಗ್ ಮಾಡತ್ತಿರುವ ಬಗ್ಗೆ ವರದಿಗಳೂ ಇವೆ. ಆದರೆ, ಇದನ್ನು ಸಮಂತಾ ಅವರು ಖಚಿತಪಡಿಸಿಲ್ಲ. ರಾಜ್ ಅವರಿಗೆ ಈಗಾಗಲೇ ವಿವಾಹ ಆಗಿದೆ. ಅವರ ಜೊತೆ ಸಮಂತಾ ಕಾಣಿಸಿಕೊಂಡಿರುವುದು ಆಶ್ಚರ್ಯಕರ ಸಂಗಾತಿಯಾಗಿದೆ.

Continue Reading

LATEST NEWS

WATCH VIDEO : ಕೀಲಿ ಕೈ ಬೇಕಾಗಿಲ್ಲ, 30 ಸೆಕೆಂಡ್ ನಲ್ಲಿ ಹೀಗೂ ಬೀಗ ತೆಗೆಯಬಹುದು!

Published

on

ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೊವೊಂದು ಕಳ್ಳರು ಸಿರಿಂಜ್ ಬಳಸಿ ಬೀಗಗಳಿಗೆ ಪಟ್ರೋಲ್ ಸುರಿದು, ಬೆಂಕಿ ಹಚ್ಚಿ ನಂತರ ಬೀಗ ಓಪನ್ ಮಾಡುತ್ತಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೀಗವು ಕೇವಲ 30 ಸೆಕೆಂಡ್‌ಗಳಲ್ಲಿ ತೆರೆಯುತ್ತದೆ. ನಾವು ಸಿರಿಂಜ್‌ನಿಂದ ಪೆಟ್ರೋಲ್ ಚುಚ್ಚಿ ಬೆಂಕಿ ಹಚ್ಚುತ್ತೇವೆ. ಬೆಂಕಿ ಆರಿದ ನಂತರ, ಅದನ್ನು ಸುಲಭವಾಗಿ ತಳ್ಳಬಹುದು.” ಅನೇಕ ಬೀಗಗಳ ಒಳಗೆ ಪ್ಲಾಸ್ಟಿಕ್ ಪೊರೆಯಂತಹ ರಚನೆ ಇರುತ್ತದೆ. ಬಿಸಿಯಾದಾಗ, ಈ ಪ್ಲಾಸ್ಟಿಕ್ ಕರಗಿ ಬೀಗವು ಒತ್ತಡ ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಆತ ವಿವರಿಸಿದ್ದಾನೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರನು, “ಇದು ಜಾಗೃತಿ ಮೂಡಿಸುವ ವಿಡಿಯೊಗಿಂತ ಕಳ್ಳರಿಗೆ ತರಬೇತಿ ನೀಡುವಂತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾನೆ.

WATCH VIDEO :

Continue Reading
Advertisement

Trending

Copyright © 2025 Namma Kudla News

You cannot copy content of this page