Connect with us

International news

14 ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿದಾಯ !

Published

on

ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಒಲಿಂಪಿಯನ್ ‘ಎಮ್ಮಾ ಮೆಕ್ ಕೀನ್’ ಸೋಮವಾರ ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ವಿದಾಯ ಘೋಷಿಸಿದ್ದಾರೆ.

ಮೆಕ್ ಕಿಯಾನ್ ಮೂರು ಬೇಸಿಗೆ ಒಲಿಂಪಿಕ್ಸ್ ಗಳಲ್ಲಿ 14 ಒಲಿಂಪಿಕ್ ಪದಕಗಳ ಗೆದ್ದ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ:ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಇವರ ಪದಕಗಳ ಪಟ್ಟಿಯಲ್ಲಿ ಆರು ಚಿನ್ನದ ಪದಕಗಳು, ಮೂರು ಬೇಸಿಗೆ ಒಲಿಂಪಿಕ್ ಗಳಲ್ಲಿ ಪದಕ ಬಂದಿದೆ. ಇನ್ನೂ ಟೋಕಿಯೊ ಒಲಿಂಪಿಕ್ 2020ರಲ್ಲಿ, ಎಮ್ಮಾ ಏಳು ಪದಕ ಗೆಲ್ಲುವುದರೊಂದಿಗೆ ಒಂದೇ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

INTERNATIONAL

ಪ್ರೀತಿಯಿಂದ ಸಾಕಿದ ಪಿಟ್‌ಬುಲ್ ಶ್ವಾನದ ದಾಳಿಗೆ ಪ್ರಾಣ ಬಿಟ್ಟ ಯುವತಿ..!

Published

on

ಅಮೇರಿಕಾ: ಇತ್ತೀಚಿನ ದಿನಗಳಲ್ಲಿ ಶ್ವಾನ ಪ್ರಿಯರು ನಾಯಿಗಳನ್ನು ಮನೆ ಮಕ್ಕಳಿಗಿಂತ ಮುದ್ದಾಗಿ ಸಾಕಿರುತ್ತಾರೆ. ಆದರೆ ತಾವು ಸಾಕಿದ ನಾಯಿಗಳಿಂದಲೇ ಸಾವು ಬರುತ್ತೆ ಎಂಬುದನ್ನು ಊಹಿಸಿರುವುದಿಲ್ಲ. ಅಂತಹುದೇ ಆಘಾತಕಾರಿ ಘಟನೆಯೊಂದು ನಡೆದಿದೆ. ಅಮೇರಿಕಾದ ಟೆಕ್ಸಾಸ್‌ನಲ್ಲಿ ಕಾಲೇಜು ಓದುವ ಯುವತಿಯೊಬ್ಬಳು ತಾನೇ ಸಾಕಿದ ಪಿಟ್‌ಬುಲ್ ಶ್ವಾನದ ದಾಳಿಗೆ ಬಲಿಯಾಗಿದ್ದಾಳೆ. ಮ್ಯಾಡಿಸನ್ ರಿಲೇ ಹಲ್ ಎಂಬ 23ರ ಹರೆಯದ ಯುವತಿ ತಾನೇ ಸಾಕಿದ ಪಿಟ್‌ಬುಲ್ ಶ್ವಾನಗಳ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. ಈಕೆಯ ನಿವಾಸದಲ್ಲೇ ಈ ಘಟನೆ ನಡೆದಿದ್ದು ಆಕೆಯ ಶವ ಪತ್ತೆಯಾಗಿದೆ. ನವೆಂಬರ್ 21ರಂದು ಈ ಘಟನೆ ನಡೆದಿದೆ.

ಆ ನಾಯಿಗಳು ಆಕೆಯನ್ನು ಪ್ರೀತಿಸುವಂತೆ ಕಾಣುತ್ತಿದ್ದವು. ಹಲವಾರು ವಾರಗಳಿಂದ ಅವುಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು ಎಂದು ಯುವತಿ ರಿಲೇ ಹಲ್ ತಾಯಿ ಜೆನ್ನಿಫರ್ ಹಬ್ಬೆಲ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ತುರ್ತು ಕರೆಗೆ ಸ್ಪಂದಿಸಿದ ಅಧಿಕಾರಿ ಒಂದು ಪಿಟ್‌ಬುಲ್ ಶ್ವಾನಕ್ಕೆ ಗುಂಡಿಕ್ಕಿದ ನಂತರವೇ ಯುವತಿ ರಿಲೇ ಹಲ್ ಬಳಿ ತಲುಪಲು ಅವರಿಗೆ ಸಾಧ್ಯವಾಗಿದೆ. ಹಾಗೂ ಇತರ ಎರಡು ಶ್ವಾನಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ನಡೆಯುವ ವೇಳೆ ಮನೆ ಮಾಲೀಕರು ಪಟ್ಟಣದಿಂದ ಹೊರಗಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಲ್, ಆರು ತಿಂಗಳಲ್ಲಿ ಬಾಲ್ಯ ಶಿಕ್ಷಣದ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಿದ್ದರು. ಮೂರು ಪಿಟ್ ಬುಲ್‌ಗಳು ಹಿತ್ತಲಿನಲ್ಲಿ ದಾಳಿ ಮಾಡಿದಾಗ ಹಲ್ ಅವರು ನಾಯಿಗಳನ್ನು ಒಳಗೆ ಬಿಡುವುದಕ್ಕೆ ಹೋಗಿದ್ದರು.

ನಂತರ ಬೊಬ್ಬೆ ಕೇಳಿ ನೆರೆಹೊರೆಯವರು ತುರ್ತು ಸೇವೆಗಳಿಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಸ್ಮಿತ್ ಕೌಂಟಿ ಶೆರಿಫ್‌ನ ಡೆಪ್ಯೂಟಿಯೊಬ್ಬರು ಹಿತ್ತಲಿನಲ್ಲಿ ಹಲ್‌ ಅವರನ್ನು ನೋಡಿದ್ದಾರೆ ಈ ವೇಳೆ ನಾಯಿಗಳು ಅವರತ್ತ ಬಂದಿವೆ. ಈ ಸಂದರ್ಭ ರಕ್ಷಣೆಗಾಗಿ ಅವರು ಒಂದು ನಾಯಿಗೆ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ಸ್ಮಿತ್ ಕೌಂಟಿ ಶೆರಿಫ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಾರ್ಜೆಂಟ್ ಲ್ಯಾರಿ ಕ್ರಿಶ್ಚಿಯನ್ ಹೇಳಿದ್ದಾರೆ.

 

 

 

Continue Reading

INTERNATIONAL

ಲವ್ ಬ್ರೇಕಪ್ ಎಫೆಕ್ಟ್; ತಾನೇ ಸೃಷ್ಟಿಸಿದ ಎಐ ಸಂಗಾತಿ ಜೊತೆ ಮದುವೆಯಾದ ಮಹಿಳೆ!

Published

on

ಟೋಕಿಯೊ: ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕೆ ಚಾಟ್‌ ಜಿಪಿಟಿ ಬಳಸಿ ತಾವೇ ಸೃಷ್ಟಸಿದ್ದ ಕೃತಕ ಬುದ್ದಿಮತ್ತೆ (ಎಐ) ಸಂಗಾತಿಯನ್ನು ಮಹಿಳೆ ಮದುವೆಯಾಗಿರುವ ಆತಂಕಕಾರಿ ಘಟನೆಯೊಂದು ಜಪಾನ್‌ನಲ್ಲಿ ನಡೆದಿದೆ.


32 ವರ್ಷದ ಕಾನೊ ಎಂಬ ಮಹಿಳೆ ಚಾಟ್ ಜಿಪಿಟಿ ಬಳಸಿ ಸೃಷ್ಟಿಸಿರುವ Lune Klaus ಜೊತೆ ರಿಂಗ್ ಬದಲಾಯಿಸಿಕೊಂಡು ಜಪಾನ್ ಮದುವೆಯ ಸಾಂಪ್ರದಾಯಿಕ ಉಡುಗೆ ಧರಿಸಿ ಮದುವೆಯಾಗಿದ್ದಾರೆ. ಕಾನೊ ಅವರು ‘ನೀನು ಮದುವೆಯಾಗುತ್ತೀಯಾ’ ಎಂದು ಕೇಳಿದಾಗ ಅದು ಯೆಸ್ ಎಂದಿದೆ. ಆದರೆ ಈ ರೀತಿಯ ಮದುವೆಗೆ ಜಪಾನ್‌ನಲ್ಲಿ ಯಾವುದೇ ಕಾನೂನುಗಳಿಲ್ಲ.

ಇದನ್ನೂ ಓದಿ: ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿಗೆ ಕಾನೂನು ಸಂಕಷ್ಟ!? ಕಾರಣ ಏನು?

ಲವ್ ಬ್ರೇಕಪ್ ಎಫೆಕ್ಟ್!
ಮಹಿಳೆ ಕಳೆದ ಮೂರು ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಆ ವ್ಯಕ್ತಿ ನಂತರ ಬ್ರೇಕಪ್ ಮಾಡಿಕೊಂಡ ನಂತರ ಮಹಿಳೆ ನೊಂದಿದ್ದರು ಎನ್ನಲಾಗಿದೆ.

Continue Reading

INTERNATIONAL

ಫಂಗ್–ವಾಂಗ್ ಚಂಡಮಾರುತಕ್ಕೆ ನಲುಗಿದ ಫಿಲಿಪ್ಪೀನ್ಸ್‌; ಇಬ್ಬರು ಸಾವು, 10 ಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರ

Published

on

ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ಫಂಗ್-ವಾಂಗ್ ಚಂಡಮಾರುತ ಅಪಾರ ಹಾನಿ ಉಂಟು ಮಾಡಿದೆ. ಉತ್ತರ ಫಿಲಿಪ್ಪೀನ್ಸ್‌ ತೀರಕ್ಕೆ ಭಾನುವಾರ ರಾತ್ರಿ ‘ಫಂಗ್–ವಾಂಗ್’ ಚಂಡಮಾರುತ ಅಪ್ಪಳಿಸಿದೆ. ಇಬ್ಬರು ಮೃತಪಟ್ಟಿರುವ ವರದಿಯಾಗಿದ್ದು, ಭೂಕುಸಿತದ ಭೀತಿಯಿಂದ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.

ಚಂಡಮಾರುತದ ಪ್ರಭಾವದಿಂದ ಹಲವಾರು ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ. ಭಾರೀ ಮಳೆಗೆ ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನದಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಕುಸಿದು ಬಿದ್ದ ಮನೆಯೊಂದರ ಅವಶೇಷಗಳಡಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಗೆದ್ದ ರಿಚಾ ಘೋಷ್‌ಗೆ ಪೊಲೀಸ್ ಹುದ್ದೆ; ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ

ಗಂಟೆಗೆ 185 ಕಿ.ಮೀ ವೇಗ ಪಡೆದುಕೊಂಡಿರುವ ಚಂಡಮಾರುತ, ಲುಜೋನ್ ದ್ವೀಪಕ್ಕೂ ಅಪ್ಪಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಕೋಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಫಿಲಿಪ್ಪೀನ್ಸ್‌ನಲ್ಲಿ ಈ ಚಂಡಮಾರುತವನ್ನು ‘ಉವಾನ್‌’ ಎಂದು ಕರೆಯಲಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಅಪ್ಪಳಿಸಿದ್ದ ‘ಕಲ್ಮೇಗಿ’ ಚಂಡಮಾರುತಕ್ಕೆ ಫಿಲಿಪ್ಪೀನ್ಸ್‌ನಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page