Connect with us

DAKSHINA KANNADA

ಖ್ಯಾತ ಡಾಲಿ ಚಾಯ್‌ವಾಲ ಮಂಗಳೂರಿಗೆ ಆಗಮನ

Published

on

ಮಂಗಳೂರು : ಇಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾಲಿ ಚಾಯ್ ವಾಲ ಅವರನ್ನು ಅದ್ದೂರಿಯಾಗಿ ಸ್ವಾಗತ ಕೊರಲಾಯಿತು.

 

ಮಂಗಳೂರಿನಲ್ಲಿ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಮಂಗಳೂರು ಸ್ಟ್ರೀಟ್‌ ಫುಡ್‌ ಫಿಯೆಸ್ಟದಲ್ಲಿ ಈ ಬಾರಿ ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್‌ವಾಲ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಅವರು ಭಾಗವಹಿಸಲಿದ್ದಾರೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಿಲ್ಲಾಡಳಿತದ ಸಹಕಾರದಲ್ಲಿ ಈ ಐದು ದಿನಗಳ ಮಂಗಳೂರು ಸ್ಟ್ರೀಟ್‌ ಫುಡ್‌ ಫಿಯೆಸ್ಟ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಸಂಕ್ರಾಂತಿ ರಜೆ : ಮನೆ ಮಾಲಿಕ ಕಳ್ಳನಿಗೆ ಬರೆದಿಟ್ಟ ಲೆಟರ್ ವೈರಲ್

ತನ್ನ ಮಂಗಳೂರು ಭೇಟಿಯ ಕುರಿತು ಡಾಲಿ ಚಾಯ್‌ವಾಲ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ‘ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. ಮಜಾ ಕರೇಂಗೆ .. ಚಾಯ್‌ ಪಿಯೇಂಗೆ’ ಎಂದು ಪೋಸ್ಟ್‌ ಹಾಕಿದ್ದರು.

ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್‌ ಹಂಚಿ ಕೊಂಡ ಬಳಿಕ ಡಾಲಿ ಚಾಯ್‌ವಾಲ ಅವರು ದೇಶಾದ್ಯಂತ ಪರಿಚಿತರಾಗಿದ್ದಾರೆ. ಅವರ ಮೂಲ ಹೆಸರು ಸುನಿಲ್‌ ಪಾಟೀಲ್‌. ಆದರೆ ಅವರು ಡಾಲಿ ಚಾಯ್‌ವಾಲ ಎಂದೇ ಪ್ರಸಿದ್ಧರಾಗಿದ್ದಾರೆ.

DAKSHINA KANNADA

ಪುತ್ತೂರು ನಗರಸಭೆಯಲ್ಲಿ ಹೊಸ ಕಾನೂನು ಜಾರಿ..! ಈ ಉದ್ಯಮಕ್ಕೆ ಎರಡು ಪರವಾನಿಗೆ..!?

Published

on

ಪುತ್ತೂರು: ನಗರ ಸಭಾ ವ್ಯಾಪ್ತಿಯ ವರ್ತಕರಿಗೆ ಶಾಕಿಂಗ್ ನೀಡುವಂತಹ ಆದೇಶವನ್ನು ನಗರಸಭೆ ಪೌರಾಯುಕ್ತರು ಹೊರಡಿಸಿದ್ದಾರೆ. ನಗರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಉದ್ದಿಮೆ ಪರವಾನಿಗೆ ಜೊತೆಗೆ ಇನ್ನೊಂದು ಪರವಾನಿಗೆಯನ್ನೂ ಪಡೆಯಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ನಗರಸಭೆಯ ಪೌರಾಯುಕ್ತರ ಫರ್ಮಾನಿನಂತೆ ಇನ್ನು ಮುಂದೆ ಉದ್ಯಮ ನವೀಕರಣ ಮಾಡುವವರು ಪ್ರತ್ಯೇಕವಾದ ಉದ್ಯಮ ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ತಾವು ಪಡೆದಿರುವ ಉದ್ದಿಮೆ ಪರವಾನಿಗೆಯ ಹೊರತಾಗಿ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದರೆ ಅದಕ್ಕೆ ಪ್ರತ್ಯೇಕವಾದ ಪರವಾನಿಗೆಯನ್ನು ಪಡೆಯಬೇಕಾಗುತ್ತದೆ.

ಹಾಗೊಂದು ವೇಳೆ ಪ್ರತ್ಯೇಕ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸಿದರೆ ಅಂತ ಅಂಗಡಿಗಳ ಪರವಾನಿಗೆ ರದ್ದು ಮಾಡಿ ದಂಡ ಸಹಿತ ಉದ್ಯಮ ಸ್ಥಗಿತಗೊಳಿಸಲಾಗುವದು ಎಂದು ಎಚ್ಚರಿಸಿದ್ದಾರೆ.

Continue Reading

DAKSHINA KANNADA

ಸುಳ್ಯ: ಹಿಟ್ ಆ್ಯಂಡ್ ರನ್ ಗೆ ಇಬ್ಬರು ಬಲಿ

Published

on

ಸುಳ್ಯ ಸಮೀಪದ ಕನಕಮಜಲು ಬಳಿ ನಿನ್ನೆ ರಾತ್ರಿ ನಡೆದ ಹಿಟ್ ಅ್ಯಂಡ್ ರನ್ ಪ್ರಕರಣದಲ್ಲಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ನಿನ್ನೆ ರಾತ್ರಿ ಕನಕಮಜಲು ಶ್ರೀ ಆತ್ಮಾರಾಂ ಭಜನಾ ಮಂದಿರದಲ್ಲಿ ಏಕಾಹ ಭಜನೆ ನಡೆಯುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ಬರುತ್ತಿದ್ದವರು ಗಾಯಗೊಂಡಿದ್ದ ಇಬ್ಬರುನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ನಡೆದುಕೊಂಡು ಬರುತ್ತಿದ್ದ ವೇಳೆ ವೇಗವಾಗಿ ಬಂದ ಕಾರೋಂದು ಇಬ್ಬರಿಗೂ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ ಎನ್ನಲಾಗಿದೆ.

ಜನಾರ್ಧನ ಶೆಟ್ಟಿ ಹಾಗೂ ರಾಮಯ್ಯ ಶೆಟ್ಟಿ ಎಂಬವರು ಮೃತ ದುರ್ಧೈವಿಗಳಾಗಿದ್ದು ಇವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ರಾಮ ಶೆಟ್ಟಿ ಅವರನ್ನು ಮೊದಲು ಗಮನಿಸಿ ಜನರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಸ್ವಲ್ಪ ಸಮಯದ ಬಳಿಕ ಜನಾರ್ಧನ ಶೆಟ್ಟಿ ಅವರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ಇಬ್ಬರೂ ಗಂಭೀರ ಸ್ಥಿತಿಯಲ್ಲಿ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತ ಪಟ್ಟಿದ್ದಾರೆ.

ಡಿಕ್ಕಿ ಹೊಡೆದ ಕಾರು ಯಾವುದು ಎನ್ನುವುದು ಇದುವರೆಗೂ ಪತ್ತೆಯಾಗಿಲ್ಲ ಆದ್ರೆ ಇಲ್ಲೇ ಜಾಲ್ಸೂರು ಸಮೀಪ ಚಕ್ ಪೋಸ್ಟ್ ಇದ್ದು ಅದರಲ್ಲಿ ಅಪಘಾತದ ಸಮಯದಲ್ಲಿ ಸಂಚರಿಸಿದ ವಾಹನದ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Continue Reading

BELTHANGADY

ಬೆಳ್ತಂಗಡಿ: ಮಾಲಾಡಿ ಮನೆಯಲ್ಲಿ ಮಾಯವಾದ ಭೂತ

Published

on

ಬೆಳ್ತಂಗಡಿ: ಸಾಕಷ್ಟು ಸುದ್ದಿ ಮಾಡಿರುವ ಬೆಳ್ತಂಗಡಿ ತಾಲೂಕಿನ ಮಾಲಾಡಿ ಮನೆಯಲ್ಲಿನ ಭೂತದ ಕಾಟ ನಿಂತು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಭೂತದ ಕಾಟದಿಂದ ಮನೆಯವರು ನಿದ್ದೆ ಕಳೆದುಕೊಂಡಿದ್ದರು. ಮನೆಯಲ್ಲಿ ಬಟ್ಟೆಗಳಿಗೆ ಬೆಂಕಿ ಬೀಳುವುದು, ಪಾತ್ರಗಳ ಉರುಳಿ ಬೀಳುವುದು ಹಾಗೂ ಮನೆಯಲ್ಲಿ ಯಾರೋ ಅಡ್ಡಾಡಿದಂತ ಅನುಭವದಿಂದ ಮನೆಯವರು ಭಯಭೀತರಾಗಿದ್ದರು.

ಸುದ್ದಿ ತಿಳಿದು ಈ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದ ಕಾರಣದಿಂದ ಎರಡು ದಿನಗಳ ಹಿಂದೆ ಇಡೀ ಕುಟುಂಬ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದರು. ಫೆ. 8 ರಂದು ಶನಿವಾರ ಮತ್ತೆ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡಿದ್ದಾಗಿ ಮಾಹಿತಿ ಇದೆ. ಇದು ಕುಟುಂಬ ದೈವದ ತೊಂದರೆಯಿಂದ ಆಗಿದ್ದ ಸಮಸ್ಯೆ ಎಂಬ ಮಾಹಿತಿ ಲಭ್ಯವಾಗಿದ್ದು, ಮನೆಯಲ್ಲಿ ಕಳೆದು ಹೋಗಿದ್ದ ಚಿನ್ನ ಕೂಡಾ ಸಿಕ್ಕಿದೆ.

ಮನೆಯಲ್ಲಿನ ದೇವರ ಫೋಟೋದ ಹಿಂಭಾಗದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಈ ಹಿಂದೆ ಭೂತವೇ ಚಿನ್ನವನ್ನು ಅಡಗಿಸಿಟ್ಟಿದೆ ಎನ್ನಲಾಗಿತ್ತು. ಭಾನುವಾರ ಈ ಮನೆಗೆ ಪವಾಡ ರಹಸ್ಯ ತಜ್ಞ ಹುಲಿಕಲ್ ನಟರಾಜ್ ಅವರು ಬರುವುದಾಗಿ ಹೇಳಿದ್ದು ಅವರಿಗೆ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬ ಮಾಹಿತಿಯನ್ನು ಉಮೇಶ್ ಶೆಟ್ಟಿ ಕುಟುಂಬದವರು ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page