Connect with us

FILM

ಖ್ಯಾತ ಬಾಲಿವುಡ್  ನಟ ಫರಾಜ್ ಖಾನ್ ನಿಧನ..! 

Published

on

ಖ್ಯಾತ ಬಾಲಿವುಡ್  ನಟ ಫರಾಜ್ ಖಾನ್ ನಿಧನ..! 

ಬೆಂಗಳೂರು: ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 50 ವರ್ಷ ವಯಸ್ಸಿನ ಖ್ಯಾತ ಬಾಲಿವುಡ್ ನಟ  ಫರಾಜ್ ಖಾನ್ ನಿಧನ ಹೊಂದಿದ್ದಾರೆ.

ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟ ಫರಾಜ್ ಖಾನ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಫರಾಜ್ ಖಾನ್ ಕಳೆದ ಒಂದು ವರ್ಷದಿಂದ ವಿಪರೀತ ಕೆಮ್ಮುಮತ್ತು  ತೀವ್ರ ಎದೆನೋವಿನಿಂದ ಬಳಲುತ್ತಿದ್ದರು.

ಕಳೆದ ಒಂದು ತಿಂಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಳಿಕ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.

 

.. 90ರ ದಶಕದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದ ಫರಾಜ್ ಖಾನ್ ಮೆಹಂದಿ, ಫರೇಬ್, ದುಲ್ಹಾನ್ ಬನೂ ಮೈನ್ ತೇರಿ ಮತ್ತು ಚಾಂದ್  ಬುಜ್ ಗಯಾ ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಫರಾಜ್ ಖಾನ್ ಸಹೋದರ ಅವರ ಆರೋಗ್ಯ ಸ್ಥಿತಿ ಬಗ್ಗೆ ಬಹಿರಂಗ ಪಡಿಸಿದ್ದರು ‘ಫರಾಜ್ ಸುಮಾರು ಒಂದು ವರ್ಷದಿಂದ ಕೆಮ್ಮು ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು.

ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.  ಮೆದುಳಿನಲ್ಲಿ ಹರ್ಪಿಸ್ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ’ ಎಂದು ವೈದ್ಯರು ತಿಳಿಸಿದ್ದರು. ಜೊತೆಗೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು.

ಫರಾಜ್ ಖಾನ್ ವಿಷಯ ತಿಳಿದು ಬಾಲಿವುಡ್ ನಟಿ ಪೂಜಾ ಭಟ್ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. ವಿಷಯ ತಿಳಿದ ನಟ ಸಲ್ಮಾನ್ ಖಾನ್ ಫರಾಜ್ ಖಾನ್ ಗೆ ಆರ್ಥಿಕ ಸಹಾಯ ಮಾಡಿದ್ದರು.

ಭಾರವಾದ ಹೃದಯದಿಂದ, ಫರಾಜ್ ಖಾನ್ ನಮ್ಮನ್ನು ಅಗಲಿದ್ದಾರೆ. ಅವರಿಗೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳು. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ ಬಾಲಿವುಡ್ ನಟಿ ಪೂಜಾ ಭಟ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ

Advertisement
Click to comment

Leave a Reply

Your email address will not be published. Required fields are marked *

FILM

ಶ್ರೀಗಂಧದ ಗುಡಿ ಧಾರಾವಾಹಿಯಿಂದ ಹೊರ ನಡೆದ ನಟಿ!

Published

on

ಬೆಂಗಳೂರು/ಮಂಗಳೂರು : ಶ್ರೀಗಂಧದ ಗುಡಿ ಜನಮನ ಗೆದ್ದಿರುವ ಧಾರಾವಾಹಿ. ಆರಂಭದಿಂದಲೂ ಮನರಂಜನೆ ಉಣಬಡಿಸುತ್ತಿರುವ ಸೀರಿಯಲ್. ಅಣ್ಣ ತಮ್ಮಂದಿರ ಕಥೆಯನ್ನೊಳಗೊಂಡ ಈ ಧಾರಾವಾಹಿ ಶುರುವಾದಾಗಿನಿಂದಲೇ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಆದರೆ, ಈಗ ಧಾರಾವಾಹಿ ವಿಚಾರವಾಗಿ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ.

ಧಾರಾವಾಹಿಯಿಂದ ಹೊರನಡೆದ ನಟಿ :

ಧಾರಾವಾಹಿಯ ಕಥಾಹಂದರದ ಜೊತೆಗೆ ಪಾತ್ರವರ್ಗವೂ ಎಲ್ಲರಿಗೂ ಇಷ್ಟವಾಗಿತ್ತು. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ‘ಚಂದನಾ’ ಆಗಿ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ ನಟಿಸುತ್ತಿದ್ದರು. ಆದರೆ, ಅಚ್ಚರಿ ಎಂಬಂತೆ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ತಮಿಳು ಧಾರಾವಾಹಿಯೊಂದರ ರಿಮೇಕ್ ಆಗಿರುವ ಶ್ರೀಗಂಧದ ಗುಡಿ ಉತ್ತಮ ಟಿಆರ್‌ಪಿಯೊಂದಿಗೆ ಸಾಗುತ್ತಿತ್ತು. ಚಂದನಾ ಆಗಿ ಸಂಜನಾ ಪಾತ್ರ, ನಟನೆ ಎಲ್ಲವೂ ಜನಮನ ಗೆದ್ದಿತ್ತು. ಆದರೆ, ಸಂಜನಾ ಧಾರಾವಾಹಿ ತೊರೆದಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಆಗಿ ಜನಪ್ರಿಯರಾಗಿದ್ದ ಸಂಜನಾ ಆ ಧಾರಾವಾಹಿಯನ್ನು ಅರ್ಧದಲ್ಲೆ ತೊರೆದಿದ್ದರು. ಶಿಕ್ಷಣದ ಕಾರಣ ನೀಡಿ ಧಾರಾವಾಹಿಯಿಂದ ಹೊರ ಬಂದಿದ್ದರು. ಇದೀಗ ಶ್ರೀಗಂಧದ ಗುಡಿಯಿಂದಲೂ ಹೊರಗಡಿ ಇಟ್ಟಿದ್ದು, ಮದುವೆ ಕಾರಣದಿಂದ ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಇದರಿಂದ ಅವರ ಅಭಿಮಾನಿಗಳಿಗೆ ಬಹಳ ಬೇಸರವಾಗಿದೆ.

ಚಂದನಾ ಆಗಿ ‘ಸ್ನೇಹಾ’ :

ಸಂಜನಾ ಬುರ್ಲಿ ಧಾರಾವಾಹಿ ತೊರೆದಿದ್ದು, ಆ ಜಾಗಕ್ಕೆ ಹೊಸ ನಟಿಯ ಆಯ್ಕೆಯೂ ಆಗಿದೆ. ಸ್ನೇಹಾ ಮಂಜುನಾಥ್ ಇನ್ಮುಂದೆ ಚಂದನಾ ಆಗಿ ನಟಿಸಲಿದ್ದಾರೆ.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ರಾಮಾಚಾರಿ, ಶುಭಸ್ಯ ಶೀಘ್ರಂ ಧಾರಾವಾಹಿಗಳಲ್ಲಿ ಸ್ನೇಹಾ ನಟಿಸಿ ಗಮನ ಸೆಳೆದಿದ್ದಾರೆ. ಇನ್ನು ಮುಂದೆ ಶ್ರೀಗಂಧದ ಗುಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

FILM

ಮೊನಾಲಿಸಾ-ಫರ್ಮಾನ್ ಖಾನ್ ವಿವಾಹ: ‘ಮತಾಂತರವಿಲ್ಲ’ ಎಂದು ಸ್ಪಷ್ಟಪಡಿಸಿದ ದಂಪತಿ!

Published

on

ಕುಂಭಮೇಳದ ವೇಳೆ ಫೋಟೋಗಳ ಮೂಲಕ ದೇಶಾದ್ಯಂತ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ, ಇತ್ತೀಚೆಗೆ ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ ಅಂತರ್ಜಾತಿ ವಿವಾಹವಾಗಿದ್ದಾರೆ. ಮತಾಂತರ ಹಾಗೂ ಲವ್ ಜಿಹಾದ್ ಆರೋಪಗಳ ಕುರಿತು ದಂಪತಿ ಸ್ಪಷ್ಟನೆ ನೀಡಿದ್ದಾರೆ.


ನಮ್ಮ ಮದುವೆಯಲ್ಲಿ ಯಾವುದೇ ಧರ್ಮ ಬದಲಾವಣೆ ಅಥವಾ ಮತಾಂತರ ನಡೆದಿಲ್ಲ ಎಂದು ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಈ ವಿವಾಹವು ಕೇರಳದ ತಿರುವನಂತಪುರಂನ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆಯೇ ನಡೆದಿದೆ ಎಂದು ದಂಪತಿ ತಿಳಿಸಿದ್ದಾರೆ.


ಮೊನಾಲಿಸಾ ಅವರು ಮಾತನಾಡುತ್ತಾ, “ಇದು ನನ್ನ ಸ್ವಂತ ನಿರ್ಧಾರ. ಫರ್ಮಾನ್ ಅವರನ್ನು ಮದುವೆಯಾಗಲು ನಾನೇ ಪಟ್ಟು ಹಿಡಿದಿದ್ದೆ. ಮನೆಯವರು ನನ್ನನ್ನು ಚಿಕ್ಕಮ್ಮನ ಮಗನ ಜತ ಮದುವೆ ಮಾಡಿಕೊಡಲು ಬಯಸಿದ್ದರು. ಆತ ನನಗೆ ಸಹೋದರ ಆಗುತ್ತಾನೆ. ಆದರೆ ನನಗೆ ಅದು ಇಷ್ಟವಿರಲಿಲ್ಲ” ಎಂದು ಹೇಳಿದ್ದಾರೆ.

“ಇದನ್ನು ಲವ್ ಜಿಹಾದ್ ಎನ್ನಲಾಗದು. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಮತ್ತು ಮಾನವೀಯತೆಯಲ್ಲಿ ನಂಬಿಕೆಯಿಟ್ಟಿದ್ದೇವೆ. ಅಲ್ಲದೇ ಆಕೆಯನ್ನು ಮುಸ್ಲಿಂಗೆ ಮತಾಂತರ ಮಾಡುತ್ತೇನೆ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ಆದರೆ ಅದೆಲ್ಲ ಶುದ್ಧ ಸುಳ್ಳು. ನಾವು ಯಾವುದೇ ಧರ್ಮವನ್ನು ಬದಲಾಯಿಸಿಕೊಳ್ಳುವುದಿಲ್ಲ. ವಾಸ್ತವ ತುಂಬಾ ವಿಭಿನ್ನವಾಗಿದೆ. ನಾನು ಹಿಂದೂ ಸಂಪ್ರದಾಯದಂತೆ ಮದುವೆಯಾದೆ. ಯಾಕೆಂದರೆ ಮೊನಾಲಿಸಾ ಹಿಂದೂ. ಮೊನಾಲಿಸಾ ಸೂಚಿಸಿದ ಹಾಗೆಯೇ ಎಲ್ಲವನ್ನೂ ಮಾಡಿದೆ. ಯಾಕೆಂದರೆ ನನಗೆ ಅವಳು ಮುಖ್ಯ. ಅವಳ ಸಂತೋಷ ಮುಖ್ಯ” ಎಂದು ಫರ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ

ದಕ್ಷಿಣ ಭಾರತದ ರಾಜ್ಯಗಳು ಜಾತಿ ಮತ್ತು ಧರ್ಮವನ್ನು ಮೀರಿದವು ಹಾಗೂ ಇಲ್ಲಿನ ಜನರು ಬಹಳ ಬೆಂಬಲ ನೀಡುತ್ತಾರೆ ಎಂಬ ಕಾರಣಕ್ಕೆ ಕೇರಳದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾಗಿ ದಂಪತಿ ತಿಳಿಸಿದ್ದಾರೆ.

Continue Reading

FILM

ಕಳೆದ ಎಂಟು ವರ್ಷಗಳಿಂದ ಮೌನವಾಗಿದ್ದೆ…ಇನ್ನು ಸಾಧ್ಯವಿಲ್ಲ…ಬ್ರೇಕಪ್ ಆಡಿಯೋ ವೈರಲ್ ಬಗ್ಗೆ ರಶ್ಮಿಕಾ ಮಂದಣ್ಣ ಪೋಸ್ಟ್!

Published

on

ಮಂಗಳೂರು/ಬೆಂಗಳೂರು : ನಟಿ ರಶ್ಮಿಕಾ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ , ನಟ ವಿಜಯ್ ದೇವರಕೊಂಡ ಜೊತೆ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದರು. ಇದರ ಬೆನ್ನಲ್ಲೆ ಅವರ ತಾಯಿ ಸುಮನ್‌ರದ್ದು ಎನ್ನಲಾದ ಹಳೇ ಆಡಿಯೋ ಕ್ಲಿಪ್‌ ಒಂದು ವೈರಲ್ ಆಗಿ, ವಿವಾದಕ್ಕೆ ಕಾರಣವಾಗಿದೆ. ಇದೀಗ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದಾರೆ.

ಸುಳ್ಳು ಮಾಹಿತಿ, ಕಿರುಕುಳ, ದಾ*ಳಿ…

ನನ್ನ ಸಿನಿಮಾ ರಂಗದ ಈ ಅದ್ಭುತ ಪಯಣದಲ್ಲಿ ಇಲ್ಲಿಯವರೆಗೆ ನನ್ನ ಜೊತೆಗಿರುವ ನನ್ನ ಪ್ರೀತಿಯ ಜನರಿಗೆ, ಇದಕ್ಕೆ ಸಂಬಂಧಪಟ್ಟ ಉಳಿದವರಿಗೂ ನಮಸ್ಕಾರಗಳು. ಕಳೆದ 8 ವರ್ಷಗಳಿಂದ ಮಾಧ್ಯಮದ ಒಂದು ವರ್ಗ, ಕೆಲವು ವ್ಯಕ್ತಿಗಳಿಂದ ನನ್ನ ವಿರುದ್ಧ ಸುಳ್ಳು ಮಾಹಿತಿ, ಕಿರುಕುಳ ಆಗುತ್ತಿದೆ, ದಾಳಿ ಮಾಡುತ್ತಿದ್ದಾರೆ.

ನಾನು ಹೇಳಿದ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವುದಿಲ್ಲ, ಬದಲಾಗಿ ತಿರುಚಲಾಗಿದೆ. ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿ ಮಾಡಲಾಗಿದೆ. ಕೇವಲ ವ್ಯೂಸ್‌ಗಾಗಿ ಎಂಗೇಜ್‌ಗಾಗಿ ದ್ವೇಷ ಹರಡುವುದನ್ನು ನಾನು ಗಮನಿಸಿದ್ದೇನೆ. ಇವೆಲ್ಲ ನನಗೆ ನೋವು ಕೊಟ್ಟಿದೆ. ಆದರೂ ನಾನು ತಾಳ್ಮೆಯಿಂದ, ಮೌನದಿಂದ ಇದ್ದೆ.

ಪಬ್ಲಿಕ್‌ನಲ್ಲಿದ್ದಾಗ ಕೆಲವೊಮ್ಮೆ ಇಂತಹ ಅನ್ಯಾಯದ ಟೀಕೆಗಳು ಬರುತ್ತವೆ ಎಂದು ನಾನು ಒಪ್ಪಿಕೊಂಡಿದ್ದೆ. ನಾನು ಪ್ರಾಮಾಣಿಕವಾಗಿದ್ದು, ಸುತ್ತ ಮುತ್ತ ಇರುವವರಿಗೆ ಸಂತೋಷದಿಂದ ಇದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ನಂಬಿದ್ದೆ. ಕಳೆದ 24 ಗಂಟೆಗಳಲ್ಲಿ ನಡೆದಿರುವುದು ಮಿತಿ ಮೀರಿದೆ, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ  ಎಂದು ಬರೆದುಕೊಂಡಿದ್ದಾರೆ.

ವಿವಾದ ಸೃಷ್ಟಿಸಲು ಆಡಿಯೋ ಬಳಕೆ :

ಸುಮಾರು 8 ವರ್ಷಗಳ ಹಿಂದಿನ ಹಳೆಯ ಖಾಸಗಿ ಸಂಭಾಷಣೆಯನ್ನು, ಸಂಬಂಧಪಟ್ಟವರ ಅರಿವಿಲ್ಲದೆ ಅಥವಾ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ರಿಲೀಸ್‌ ಮಾಡಲಾಗಿದೆ. ಆ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಉದ್ದೇಶಪೂರ್ವಕವಾಗಿ ಸಂದರ್ಭಕ್ಕೆ ತಕ್ಕಂತೆ ಬಳಸದೆ, ಮತ್ತೊಂದು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ನನ್ನ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆ ಜೊತೆಯಲ್ಲೇ ಇದೆಲ್ಲ ನಡೆದಿದೆ.

ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರು? ಹೀಗೆ ಮಾಡಿ ನನ್ನ ಕುಟುಂಬವನ್ನು, ಈ ವಿಷಯಕ್ಕೆ ಸಂಬಂಧವಿಲ್ಲದವರನ್ನು ಅನಗತ್ಯವಾಗಿ ಮುಜುಗರಕ್ಕೆ ದೂಡಿದ್ದಾರೆ. ಇದು ಗೌಪ್ಯತೆಯ ಗಂಭೀರ ಉಲ್ಲಂಘನೆ, ದಾರಿ ತಪ್ಪಿಸುವ, ಮಾನಹಾನಿಕರ ವಿಷಯಗಳ ಪ್ರಸಾರವಾಗಿದೆ.

ಕಳೆದ ಎಂಟು ವರ್ಷಗಳಿಂದ ಮೌನವಾಗಿದ್ದೆ…ಇನ್ನು ಸಾಧ್ಯವಿಲ್ಲ…

ನಾವು ಜೀವನದಲ್ಲಿ ಮುಂದೆ ಸಾಗುತ್ತ, ಬೆಳೆಯುತ್ತ, ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತ ಪಾಸಿಟಿವಿಟಿ ಹರಡುತ್ತಿರುವಾಗ, ಕೆಲವರು ಇನ್ನೊಬ್ಬರ ಘನತೆ, ಶಾಂತಿಯ ವೆಚ್ಚದಲ್ಲಿ ದ್ವೇಷ, ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ. ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿ ಮಾಡಿದಾಗ ನಾನು ಮೌನವಾಗಿದ್ದೆ. ಆದರೆ ಇಂದು ಬೇರೆಯವರನ್ನು ಇದಕ್ಕೆ ಎಳೆದು ತಂದಾಗ, ನಾನು ಸುಮ್ಮನಿರಲು ಸಾಧ್ಯವಿಲ್ಲ.

ಇದನ್ನೂ ಓದಿ : ಬಿಗ್‌ ಬಾಸ್‌ ವಿನ್ನರ್‌ಗೆ ಕೈ ಸೇರದ ವಿನ್ನಿಂಗ್‌ ಅಮೌಂಟ್‌! ಕಾರಣವೇನು?

ಇಲ್ಲಿ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರಿ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ನಿಸ್ತಿದೆ.  ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು, ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ಗಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ ಎಂದು ಖಾರವಾಗಿಯೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page