Connect with us

LATEST NEWS

‘ಶಿವಲಿಂಗ’ ಪತ್ತೆ ಕುರಿತಂತೆ ಆಕ್ಷೇಪಾರ್ಹ ಪೋಸ್ಟ್: ದೆಹಲಿ ವಿವಿ ಪ್ರಾಧ್ಯಾಪಕನ ಬಂಧನ

Published

on

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ‘ಶಿವಲಿಂಗ’ ಪತ್ತೆ ಕುರಿತಂತೆ ಹೇಳಿಕೆಗಳನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ನಿನ್ನೆ ರಾತ್ರಿ ದೆಹಲಿಯ ಉತ್ತರ ಸೈಬರ್ ಪೊಲೀಸರು ಬಂಧಿಸಿದ್ದಾರೆ.


ದೆಹಲಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ದೂರಿನಲ್ಲಿ, ಲಾಲ್ ಇತ್ತೀಚೆಗೆ ‘ಶಿವಲಿಂಗ ಪತ್ತೆ ಕುರಿತಾಗಿ ಪ್ರಚೋದನಕಾರಿ ಟ್ವೀಟ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಸಿಕ್ಕಿದೆ ಎಂಬುದಾಗಿ ಪ್ರೊಫೆಸರ್ ಪೋಸ್ಟ್ ಮಾಡಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ನ್ಯಾಯಾಲಯದ ಮುಂದೆ ಬಾಕಿ ಇದೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘ಧರ್ಮ ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ದುರುದ್ದೇಶಪೂರಿತ ಪೋಸ್ಟ್ ಹಾಕಿರುವ ಕುರಿತು ಲಾಲ್ ವಿರುದ್ಧ ಮಂಗಳವಾರ ರಾತ್ರಿ ದೂರು ಸ್ವೀಕರಿಸಲಾಗಿದೆ’ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿರುವ ಲಾಲ್, ‘ಭಾರತದಲ್ಲಿ, ನೀವು ಯಾವುದರ ಬಗ್ಗೆ ಮಾತನಾಡಿದರೂ, ಯಾರಿಗಾದರೂ ಅಥವಾ ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದು ಹೊಸದೇನಲ್ಲ.

ನಾನು ಇತಿಹಾಸಕಾರ ಮತ್ತು ಹಲವಾರು ಅವಲೋಕನಗಳನ್ನು ಮಾಡಿದ್ದೇನೆ. ನಾನು ಯಾವಾಗಲೂ ಬಹಳ ಸಭ್ಯ ಭಾಷೆಯನ್ನು ಬಳಸಿದ್ದೇನೆ ಮತ್ತು ಈಗಲೂ ನನ್ನ ಪೋಸ್ಟ್‌ನಲ್ಲಿ ಅದೇ ಮಾಡಿದ್ದೇನೆ. ನಾನು ನನ್ನನ್ನು ರಕ್ಷಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

bangalore

ದೇವಾಲಯದಲ್ಲಿ ದೇವರ ತಾಳಿ ಕದ್ದ ಆರೋಪಿ ಅಂದರ್..

Published

on

ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್‌ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಸಂಜಯ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಸಂಜಯ್ ದೇವಸ್ಥಾನದಲ್ಲಿ ಮಾ.5 ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಕದ್ದಿದ್ದ. ನಂತರ ಈತ ಪರಾರಿಯಾಗಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಬಂಧನ ಮಾಡಲಾಗಿದೆ.

ಕಳ್ಳ ಸಂಜಯ್‌ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು, ವಾರೆಂಟ್‌ ಜಾರಿಯಾಗಿತ್ತು. ಆದರೆ ವಕೀಲರಿಗೆ ಕೊಡಲು ಹಣವಿಲ್ಲದ ಕಾರಣ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಸದ್ಯ ಪೊಲಿಸರು ಸಂಜಯ್‌ನನ್ನು ಬಮಧಿಸಿದ್ದು, ವಿಚಾರನರ ನಡೆಸುತ್ತಿದ್ದಾರೆ.

Continue Reading

FILM

ಮೊಮೊಸ್ ಫಾಸ್ಟ್ ಫುಡ್ ಆರಂಭಿಸಿದ ಬಾಲಿವುಡ್ ನಟ

Published

on

ಮಂಗಳೂರು/ಡೆಹ್ರಾಡೂನ್: 12ತಹ ಫೇಲ್ ಸೇರಿದಂತೆ ಬಾಲಿವುಡ್‌ನ ಹತ್ತಾರು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಟ ಭೂಪೇಂದ್ರ ತನೇಜಾ ಅವರು ತಮ್ಮ ಬಿಡುವನ ವೇಳೆಯಲ್ಲಿ ಡೆಹ್ರಾಡೂನ್ ಧರಂಪುರದಲ್ಲಿ ತಮ್ಮದೇ ಆದ ‘ಮೊಮೊ ಫಾಸ್ಟ್ ಫುಡ್’ ಸ್ಟಾಲ್ ನಡೆಸುತ್ತಿದ್ದಾರೆ.

ಹೌದು, ಭೂಪೇಂದ್ರ ತನೇಜಾ, ಡೆಹ್ರಾಡೂನ್‌ನ ಧರ್ಮಪುರದ ಮಾತಾ ಮಂದಿರ ರಸ್ತೆಯಲ್ಲಿ ತಮ್ಮ ಫಾಸ್ಟ್ ಫುಡ್ ಸ್ಟಾಲ್ ಹೊಂದಿದ್ದಾರೆ. ತನೇಜಾ ಶೂಟಿಂಗ್ ಇಲ್ಲದಿದ್ದಾಗ ಜನರಿಗೆ ರುಚಿಕರವಾದ ಫಾಸ್ಟ್ ಫುಡ್ ತಯಾರಿಸಿ ಉಣ ಬಡಿಸುತ್ತಿದ್ದಾರೆ. ಅವರಿಗೆ ಪತ್ನಿ ಸುಷ್ಮಾ ತನೇಜಾ ಕೂಡ ಈ ಕೆಲಸದಲ್ಲಿ ಅವರಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಇದನ್ನೂ ಓದಿ: ‘ಕೌನ್ ಬನೇಗಾ ಕರೋಡ್‌ಪತಿ-17’ರ ನಿರೂಪಕರ ಕುರಿತ ವದಂತಿಗೆ ತೆರೆ ಎಳೆದ ಬಿಗ್‌ ಬಿ

ಈ ಬಗ್ಗೆ ಮಾತನಾಡಿರುವ ಭೂಪೇಂದ್ರ ತನೇಜಾ ಅವರು, ನನಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ. ಆದರೆ ಅವರಿಗೆ ಏನನ್ನಾದರೂ ಹೊಸತನ್ನು ಮಾಡಬೇಕೆಂಬ ಬಯಕೆ ಇದೆ. ಹೀಗಾಗಿಯೇ ಮೊಮೊಸ್ ಫಾಸ್ಟ್ ಫುಡ್ ಆರಂಭಿಸಿದ್ದೇನೆ. ಇನ್ನು ತನೇಜಾ ಅವರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟವಂತೆ.

ಭೂಪೇಂದ್ರ ತನೇಜಾ ಅವರಿಗೆ ಉತ್ತಮ ಮನ್ನಣೆ ತಂದು ಕೊಟ್ಟ ಸಿನಿಮಾ ಎಂದರೆ 12 ಫೇಲ್. ಈ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಈ ಸಿನಿಮಾದಲ್ಲಿ ಅಭಿನಯಿಸಿದ್ದು ತನ್ನ ಅದೃಷ್ಟವೆಂದು ತನೇಜಾ ಹೇಳಿದ್ದಾರೆ.

ತನೇಜಾ ಅವರು ತಾಂಡವ್ ವೆಬ್ ಸರಣಿ, ಅಖ್ರಿ ಸಚ್, ಗನ್ಸ್ ಮತ್ತು ಗುಲಾಬ್, ಪಿಎಂ ನರೇಂದ್ರ ಮೋದಿ, ಬಟ್ಟಿ ಗುಲ್ ಮೀಟರ್ ಚಾಲು, ಲಾಲ್ ಸಿಂಗ್ ಚಡ್ಡಾ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

 

Continue Reading

bangalore

‘I LOVE YOU’ ಅಲ್ಲ.. ಕೇವಲ ಮೀನು ಕೊಟ್ಟು ಪ್ರಪೋಸ್ ಮಾಡ್ತಾರಂತೆ ‘ಕುಡ್ಲದ ಜನ’..! ಹೇಗೆ ಗೊತ್ತಾ ?

Published

on

ಪ್ರಸ್ತುತ ಝೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭವಾಗಿದ್ದು ಉತ್ತಮ ರಿತಿಯಲ್ಲಿ ನಡೆಯುತ್ತಿದೆ. ಬ್ಯಾಚುಲರ್ಸ್‌ಗಳಿಗೆ ಮೆಂಟರ್ಸ್‌ಗಳು ಕೂಡ ಸಿಕ್ಕಿದ್ದಾರೆ. ವಿವಿಧ ರೀತಿಯಲ್ಲಿ ತಮ್ಮ ಪಾರ್ಟ್ನರ್/ ಮೆಂಟರ್‌ಗಳಿಗೆ ಬ್ಯಾಚುಲರ್ಸ್ ಸರ್ಪ್ರೈಸ್ ನೀಡುವಂತೆ ಕಳೆದ ವಾರ ಸರ್ಪ್ರೈಸ್ ರೌಂಡ್ ಇತ್ತು. ಸಿನಿಮಾಗಳ ರೀಕ್ರಿಯೇಶನ್ ರೌಂಡ್ ಆಗಿದ್ದು ನಟಿ ಅಭಿಜ್ಞಾ ಭಟ್, ಸೂರ್ಯ ಕುಮಾರ್‌ಗೆ ಜೋಡಿಯಾಗಿದ್ದು, ಇವರು ಜೊತೆಯಾಗಿ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಹಾಗೂ ದೃಶ್ಯಗಳನ್ನು ರೀಕ್ರಿಯೇಟ್ ಮಾಡಿದ್ದಾರೆ.

ನಿರೂಪಕ ನಿರಂಜನ್ ದೇಶಪಾಂಡೆ ಮೀನುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅಭಿಜ್ಞಾ ಭಟ್ ಉತ್ತರಿಸಿದ್ದು, “ನಾನು ಮೀನು ತಿನ್ನೋದಿಲ್ಲ, ಆದರೆ ನಾನು ದಕ್ಷಿಣ ಕನ್ನಡದವಳು ಅಲ್ವಾ? ಹಾಗಾಗಿ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾವಾಗ ನೋಡಿದ್ರೂ ಮೀನು. ಮೀನು ಕಣ್ಣಿಗೆ ತುಂಬಾನೆ ಒಳ್ಳೆಯದು ಅಲ್ಲದೇ ಮೀನಿನ ಮಂಡೆ ತಿಂದ್ರೆ ನಮ್ಮ ಮಂಡೆಸ ಚುರುಕಾಗುತ್ತದೆ” ಎಂದರು . ಇಷ್ಟೇ ಅಲ್ಲ ಮೀನು ಕೊಟ್ಟು ಪ್ರಪೋಸ್ ಮಾಡುವ ಕುರಿತು ಸಹ ಅಭಿಜ್ಞಾ ಮಾಹಿತಿ ನೀಡಿದ್ದು, “ಇಲ್ಲೆಲ್ಲಾ ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡಲು, ಅಥವಾ ಇಂಪ್ರೆಸ್ ಮಾಡಲು ರೋಸ್, ಚಾಕ್ಲೆಟ್ ಎಲ್ಲಾ ಕೊಡ್ತಾರೆ, ಆದರೆ ನಮ್ ಕಡೆ ಹಾಗಲ್ಲ, ಮೀನು ಕೊಟ್ರೆ ಸಾಕು. ಇಲ್ಲೆಲ್ಲ ಐ ಲವ್ ಯೂ ಅಂದ್ರೆ ಮುಗೀತು, ಆದ್ರೆ ನಮ್ ಕಡೆ ‘ಹೇ ಭಾಗಿ ನಿನಗಾಗಿ ಮೀನು ತಂದಿದ್ದೇನೆ, ಸಾರು ಮಾಡಿಡು, ರಾತ್ರಿ ಬೇಗ ಬರ್ತೇನೆ’ ಎನ್ನುತ್ತಾರಂತೆ ಕುಡ್ಲದ ಜನ. ಹಾಗಾಗಿ ಭಾಗಿ ಮನೆಯಲ್ಲಿ ಮೀನು ಸಾರು ಅಂದ್ರೆ, ಇವತ್ತೇನೋ ಸ್ಪೆಷಲ್ ಇದೆ ಎಂದು ಕನೆಕ್ಟ್ ಮಾಡ್ಬೇಕು” ಎಂದಿದ್ದಾರೆ ಅಭಿಜ್ಞಾ.

ಕಾರ್ಯಕ್ರಮದ ಜಡ್ಜ್ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಜ್ಞಾಳ ಕತೆಯನ್ನೆಲ್ಲಾ ಕೇಳಿ, “ಯಾವ ಯಾವ ಮೀನು ಕೊಡಬೇಕು ? ಅದರ ಅರ್ಥ ಏನು ?” ಎಂದು ಕೇಳಿದ್ದಾರೆ. ಅದಕ್ಕೆ ಅಭಿಜ್ಞಾ, “ಬಂಗುಡೆ ಮೀನು ಕೊಟ್ರೆ, ಬರೀ ರೋಮ್ಯಾನ್ಸ್. ಕಾಣೆ ಫಿಶ್ ಕೊಟ್ರೆ ಸ್ವಲ್ಪ ಜಾಸ್ತಿನೇ ರೊಮ್ಯಾನ್ಸ್ , ಪಾಂಪ್ಲೆಟ್ ಮೀನು ಕೊಟ್ರೆ ಲವ್ ಮಾಡೋದು ಅಂತ ಅರ್ಥ, ಇನ್ನು ಏಡಿಯನ್ನು ತಂದು ಕೊಟ್ರೆ ಫಸ್ಟ್ ಸೆಕೆಂಡ್ ಸ್ಟೇಜ್ ಏನೂ ಇಲ್ಲ, ಡೈರೆಕ್ಟ್” ಎಂದ ಅಭಿಜ್ಞಾ ಕೊನೆಗೆ “ನಾನು ಸುಮ್ಮನೆ ಹೇಳಿದ್ದು, ಇವಳಿಗೇನು ಮಾಡೋದಕ್ಕೆ ಬೇರೆ ಕೆಲ್ಸ ಇಲ್ವಾ ಅಂತ ಹೇಳ್ಬೇಡಿ” ಎಂದು ಹೇಳಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page