Connect with us

LATEST NEWS

ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ

Published

on

ಕುಂದಾಪುರ: ಉಡುಪಿ ಕುಂದಾಪುರದ ಬೈಂದೂರಿನ ಮರವಂತೆಯಲ್ಲಿ ಉಂಟಾದ ಕಡಲ್ಕೊರೆತದ ಪ್ರದೇಶಗಳಿಗೆ ಮಾಜಿ ಶಾಸಕ ಗೋಪಾಲ ಪೂಜಾರಿಯವರು ಇಂದು ಭೇಟಿ ನೀಡಿ ಪರಿಶೀಲಿಸಿ , ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಬಳಿಕ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಅವರು ‘ಪರಿಸ್ಥಿತಿ ವಿವರಿಸಿ ತುರ್ತು ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಲು ಮನವಿ ಮಾಡಿದರು.


ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ‘ಅವರು ತೀವ್ರ ಕಡಲ್ಕೊರೆತದಿಂದ ಇಲ್ಲಿನ ಕಡಲ ತೀರದ ನಿವಾಸಿಗಳು ಆತಂಕದಲ್ಲಿದ್ದಾರೆ.

ಕಳೆದ ಮೂರು ದಿನಗಳಿಂದ ನನಗೆ ಕರೆ ಮಾಡಿ ತಮ್ಮ ನೋವುಗಳನ್ನು ಹೇಳುತ್ತಿದ್ದಾರೆ. ಜನರೇ ಹಣ ಸಂಗ್ರಹಿಸಿ ಮರಳು ಚೀಲಗಳನ್ನು ಜೋಡಿಸುತ್ತಿದ್ದಾರೆ.


ಬೈಂದೂರು ಶಾಸಕರು ಎಲ್ಲಿಗೆ ಹೋದರೂ ತಕ್ಷಣವೇ ಸಮಸ್ಯೆಗೆ ಸ್ಪಂದಿಸಬೇಕು. ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.

ತಕ್ಷಣವೇ ಜಿಲ್ಲಾಡಳಿತ ಮರವಂತೆ ನಿವಾಸಿಗಳ ನೋವಿಗೆ ಸ್ಪಂದಿಸಲಿ. ಸರ್ಕಾರ ದುಡ್ಡಿಲ್ಲ ಎಂದು ಮಾತನಾಡುವುದು ಹಾಸ್ಯಾಸ್ಪದ ಹಾಗೂ ವಿಪರ್ಯಾಸ.


ಯಾವುದೇ ಸರ್ಕಾರ ಇಲ್ಲಿಯ ತನಕ ಹಣ ಇಲ್ಲ ಎಂದು ಹೇಳಿದ್ದಿಲ್ಲ. ನಾನು ನಾಲ್ಕು ಬಾರಿ ಶಾಸಕನಾದಾಗಲೂ ತಕ್ಷಣವೇ ಸ್ಪಂದಿಸಿದ್ದೇನೆ ಎಂದರು.

LATEST NEWS

7 ವರ್ಷದ ಬಾಲಕಿಗೆ ಗಿಟಾರ್ ಗಿಫ್ಟ್ ನೀಡಿದ ಅಮಿತ್ ಶಾ; ಅಷ್ಟಕ್ಕೂ ಈ ಹುಡುಗಿ ಯಾರು ಗೊತ್ತಾ?

Published

on

ಮಂಗಳೂರು/ಐಜ್ವಾಲ್(ಮಿಜೋರಾಂ): ಕೇಂದ್ರ ಗೃಹ ಸಚಿವ ಅಮಿತ್ ಶಾ ಮಿಜೋರಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 7 ವರ್ಷದ ಬಾಲಕಿಗೆ ಗಿಟರ್ ಅನ್ನು ಗಿಫ್ಟ್ ನೀಡಿದ್ದಾರೆ.


ಗೃಹ ಸಚಿವ ಅಮಿತ್ ಶಾ 3 ದಿನಗಳ ಭೇಟಿಗಾಗಿ ಮಾರ್ಚ್ 14ರಿಂದ ಅಸ್ಸಾಂಗೆ ತೆರಳಿದ್ದಾರೆ. ಶನಿವಾರದಂದು (ಮಾ.15) ಮಿಜೋರಾಂಗೆ ಭೇಟಿ ನೀಡಿದರು. ಅಲ್ಲಿ ಅಸ್ಸಾಂ ರೈಫಲ್ಸ್‌ನಿಂದ ರಾಜ್ಯ ಸರ್ಕಾರಕ್ಕೆ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಿಜೋರಾಂನ 7 ವರ್ಷದ ಬಾಲಕಿ, ಅದ್ಭುತ ಹಾಡುಗಾರ್ತಿ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರಿಗೆ ಸಂಗೀತ ಸಾಧನ ಗಿಟಾರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಮಿತ್ ಶಾ ಉಪಸ್ಥಿತರಿದ್ದ ವೇದಿಕೆಯಲ್ಲಿ ಬಾಲಕಿ ‘ವಂದೇ ಮಾತರಂ’ ಹಾಡನ್ನು ಅದ್ಬುತವಾಗಿ ಹಾಡಿದರು.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಅಮಿತ್ ಶಾ “ಭಾರತದ ಮೇಲಿರುವ ಪ್ರೀತಿ ನಮ್ಮೆಲ್ಲರನ್ನೂ ಒಂದು ಮಾಡುತ್ತಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ವಂಡರ್‌ ಕಿಡ್ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರ ಸಿರಿಕಂಠದಲ್ಲಿ ಮೂಡಿಬಂದ ವಂದೇ ಮಾತರಂ ಹಾಡಿಗೆ ಬೆರಗಾದೆ. ಏಳು ವರ್ಷದ ಬಾಲಕಿಗೆ ಭಾರತ ಮಾತೆಯ ಮೇಲಿರುವ ಪ್ರೀತಿ ಹಾಡಿನಲ್ಲಿ ವ್ಯಕ್ತವಾಗುತ್ತಿದೆ. ಆಕೆಯ ಹಾಡು ಕೇಳುವುದೇ ಒಂದು ಅದ್ಭುತ ಅನುಭವ” ಎಂದು ಬರೆದುಕೊಂಡಿದ್ದಾರೆ.

ಯಾರು ಈ ವಂಡರ್‌ ಕಿಡ್ ?
7ವರ್ಷದ ಬಾಲಕಿ ಎಸ್ತರ್ ಲಲ್ದುಹವ್ಮಿ ಹಮ್ಟೆ ಮಿಜೋರಾಂನ ಅದ್ಬುತ ಗಾಯಕಿಯಾಗಿ ಬೆಳೆಯುತ್ತಿರುವ ಪ್ರತಿಭೆ. 2020ರಲ್ಲಿ ‘ಮಾ ತುಜೇ ಸಲಾಂ’ ಹಾಡಿನಿಂದ ದೇಶಾದ್ಯಂತ ಜನಪ್ರಿಯತೆ ಗಳಿಸಿದರು. ಆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ನಂತರ ಬಾಲಕಿಗೆ ಮಣಿಪುರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಅಲ್ಲದೆ ರಾಜ್ಯಪಾಲರಿಂದಲೂ ವಿಶೇಷ ಮೆಚ್ಚುಗೆ ಗಳಿಸಿದ್ದರು. ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ ಹೊಂದಿದ್ದಾರೆ.

 

Continue Reading

LATEST NEWS

ಮಣಿಪಾಲದ ಪಂಪ್‌ಹೌಸ್‌ ಬಳಿ ಹೊಂಡಕ್ಕೆ ಬಿದ್ದ ಕಾರು

Published

on

ಉಡುಪಿ: ಕಾರೊಂದು ಮಣಿಪಾಲದ ಪಂಪ್‌ಹೌಸ್‌ ಬಳಿ ದಿಕ್ಕು ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಶನಿವಾರ ಮಧ್ಯರಾತ್ರಿ ಮಣಿಪಾಲದಲ್ಲಿ ನಡೆದಿದೆ.

ವೀಕೆಂಡ್ ವೇಳೆ ನಗರ ಸಭೆಗೆ ಸೇರಿದ ಕುಡಿಯುವ ನೀರಿನ ಪಂಪ್‌ಹೌಸ್ ಬಳಿ ಅಪಘಾತದ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಕಾರು ಅಪಘಾತವಾಗಿದೆ.

ಕಾರಿನಲ್ಲಿ ನಾಲ್ಕು ಪ್ರಯಾಣಿಕರಿದ್ದು ಅವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಮಧ್ಯರಾತ್ರಿ ಪೊಲೀಸರು ಬಂದು ಹೊಂಡಕ್ಕೆ ಬಿದ್ದ ಕಾರನ್ನು ತೆಗೆಯುವಲ್ಲಿ ಸಹಕರಿಸಿದರು.

Continue Reading

LATEST NEWS

2028ರ ಆ ಒಂದು ಪಂದ್ಯಕ್ಕಾಗಿ ಟಿ20 ನಿವೃತ್ತಿಯನ್ನು ಹಿಂಪಡೆಯುತ್ತೇನೆ ಎಂದ ಕಿಂಗ್ ಕೊಹ್ಲಿ!

Published

on

ಮಂಗಳೂರು/ಬೆಂಗಳೂರು: ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ದೊಡ್ಡ ಇತಿಹಾಸ ನಿರ್ಮಿಸಿತ್ತು. ಆದರೆ ಭಾರತ ತಂಡದ ಅಭಿಮಾನಿಗಳಿಗೆ ಬೇಸರ ಮೂಡಿಸಿದ ಸಂಗತಿ ಎಂದರೆ ಟೀಂ ಇಂಡಿಯಾದ ತ್ರಿವಳಿಗಳು ಟಿ20ಗೆ ನಿವೃತ್ತಿ ಘೋಷಣೆ ಮಾಡಿದ್ದು. ಅದರಲ್ಲೂ ಕಿಂಗ್ ಕೊಹ್ಲಿಯ ವಿದಾಯ ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಆದರೆ ಇದೀಗ ರನ್ ಮೆಷಿನ್ 2028ರಲ್ಲಿ ನಡೆಯುವ ಆ ಒಂದು ಪಂದ್ಯಕ್ಕಾಗಿ ತಮ್ಮ ನಿವೃತ್ತಿಯನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.


ಹೌದು, ನಿನ್ನೆ (ಮಾ.15) ರಾಹುಲ್ ದ್ರಾವಿಡ್-ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಮತ್ತೊಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಈ ಹಿಂದಿನ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ನನಗೆ ತೃಪ್ತಿ ಇದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಈ ಹಿಂದಿನ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ನನಗೆ ತೃಪ್ತಿ ಇದೆ. ಹೀಗಾಗಿ ನಾನು ಮತ್ತೆ ಬಾರ್ಡರ್-ಗವಾಸ್ಕರ್ ಸರಣಿ ಆಡುವ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ.

ಸದ್ಯಕ್ಕಂತೂ ಕ್ರಿಕೆಟ್‌ನಿಂದ ನಿವೃತ್ತಿ ಇಲ್ಲ
ನಾನು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಅದನ್ನು ಆಡುವುದರ ಜೊತೆಗೆ ಆನಂದಿಸುತ್ತಿದ್ದೇನೆ. ಕ್ರಿಕೆಟ್‌ನಿಂದ ನಿವೃತ್ತಿ ಎನ್ನುವುದು ಸದ್ಯಕ್ಕಂತೂ ಇಲ್ಲವೇ ಇಲ್ಲ. ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡುತ್ತ ಆನಂದಿಸುತ್ತೇನೆ ಎಂದು ರಿಟೈರ್‌ಮೆಂಟ್ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಟಿ20ಗೆ ಕೊಹ್ಲಿ ಕಂಬ್ಯಾಕ್ ?
ಇನ್ನೂ 2028ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಸೇರ್ಪಡೆಯಾಗಲಿದೆ. ಇದರಲ್ಲಿ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟರೆ, ಅಂತಿಮ ಪಂದ್ಯಕ್ಕಾಗಿ ನಿವೃತ್ತಿಯನ್ನು ಹಿಂಪಡೆಯುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅಂದರೆ ಭಾರತ ತಂಡವು ಒಲಿಂಪಿಕ್ಸ್‌ ಟಿ20 ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದರೆ ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಯಬಹುದು.

ಇದನ್ನೂ ಓದಿ: 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ; ಸಿಕ್ಕ ಬಹುಮಾನ ಮೊತ್ತ ಎಷ್ಟು?

ಹಣಕ್ಕಾಗಿ ನನ್ನಲ್ಲಿನ ಮೌಲ್ಯ ಬಿಟ್ಟುಕೊಡಲ್ಲ
ಇನ್ನು ಕೊಹ್ಲಿ ನಿವೃತ್ತಿ ನಂತರ ಏನು ಮಾಡುತ್ತಾರೆ ಎಂದು ಅಭಿಮಾನಿಗಳನ್ನು ಕಾಡುತ್ತಿತ್ತು. ಈ ಬಗ್ಗೆ ಮಾತನಾಡಿದ ಕೊಹ್ಲಿ, ಕ್ರಿಕೆಟ್‌ನಿಂದ ನಿವೃತ್ತಿ ಆದ ಮೇಲೆ ಏನು ಮಾಡಬೇಕು ಎಂದು ಯಾವುದೇ ಯೋಜನೆ ರೆಡಿ ಮಾಡಿಕೊಂಡಿಲ್ಲ. ಆ ಸಮಯದಲ್ಲೇ ಅದನ್ನು ನಿರ್ಧಾರ ಮಾಡಲಾಗುತ್ತದೆ. ನಿವೃತ್ತಿ ನಂತರ ಏನು ಮಾಡಬೇಕು ಅಂತನೂ ನನಗೆ ಗೊತ್ತಿಲ್ಲ. ನನಗೆ ಎಷ್ಟು ಬೇಕು ಅಷ್ಟೇ ಹಣ ಸಂಪಾದನೆ ಮಾಡೋದು. ಹೆಚ್ಚಿಗೆ ಬೇಕಿಲ್ಲ, ಆಸೆನೂ ಇಲ್ಲ. ಹಣಕ್ಕಾಗಿ ನನ್ನಲ್ಲಿನ ಮೌಲ್ಯ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮುಂದಿನ ಎರಡು ಐಸಿಸಿ ಟೂರ್ನಿಗಳಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಈ ಎರಡು ಟೂರ್ನಿಗಳು ನಡೆಯುವುದು 2027ರಲ್ಲಿ. ಅಂದರೆ ಈ ಎರಡು ಟೂರ್ನಿಗಳ ಬಳಿಕ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸಾಧ್ಯತೆಯಿದೆ. ಅಲ್ಲದೆ 2028ರಲ್ಲಿ ನಡೆಯುವ ಒಲಿಂಪಿಕ್ಸ್ ಟಿ20 ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಮತ್ತೆ ಕಂಬ್ಯಾಕ್ ಮಾಡುವ ಸಣ್ಣ ಸುಳಿವು ಕೂಡ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page