Connect with us

bangalore

ಮಾಜಿ ಸಚಿವ ಮುನಿರತ್ನ ತಲೆಗೆ ಮೊಟ್ಟೆ ಹೊಡೆತ !

Published

on

ಮಂಗಳೂರು/ಬೆಂಗಳೂರು: ಜಾತಿ ನಿಂದನೆ ಹಾಗೂ ಹಲವು ಆರೋಪಗಳ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಿರುವ ಮಾಜಿ ಶಾಸಕ ಹಾಗೂ ಕನ್ನಡ ಚಿತ್ರ ನಿರ್ಮಾಪಕ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆದ ಘಟನೆ ಲಗ್ಗೆರೆ ಸಮೀಪದ ಲಕ್ಷೀದೇವಿನಗರದಲ್ಲಿ ನಡೆದಿದೆ.

ಲಕ್ಷ್ಮೀ ದೇವಿ ನಗರ ವಾರ್ಡ್ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕ ಮುನಿರತ್ನ ಹೋಗುತ್ತಿದ್ದ ವೇಳೆ ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ; ಉಡುಪಿ ಮೂಲದ ಯೋಧ ಸೇರಿ ಐವರು ಹುತಾತ್ಮ

ಈ ವೇಳೆ ಶಾಸಕ ಮುನಿರತ್ನ ಅವರು ತಮ್ಮ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಅವರು ಅಲ್ಲಿಂದ ತೆರಳಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು 2ರಿಂದ 3 ಕಾರು ಜಖಂ ಆಗಿ ಹಲವರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಶಾಸಕ ಮುನಿರತ್ನ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

bangalore

ದೇವಾಲಯದಲ್ಲಿ ದೇವರ ತಾಳಿ ಕದ್ದ ಆರೋಪಿ ಅಂದರ್..

Published

on

ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್‌ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಸಂಜಯ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಸಂಜಯ್ ದೇವಸ್ಥಾನದಲ್ಲಿ ಮಾ.5 ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಕದ್ದಿದ್ದ. ನಂತರ ಈತ ಪರಾರಿಯಾಗಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಬಂಧನ ಮಾಡಲಾಗಿದೆ.

ಕಳ್ಳ ಸಂಜಯ್‌ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು, ವಾರೆಂಟ್‌ ಜಾರಿಯಾಗಿತ್ತು. ಆದರೆ ವಕೀಲರಿಗೆ ಕೊಡಲು ಹಣವಿಲ್ಲದ ಕಾರಣ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಸದ್ಯ ಪೊಲಿಸರು ಸಂಜಯ್‌ನನ್ನು ಬಮಧಿಸಿದ್ದು, ವಿಚಾರನರ ನಡೆಸುತ್ತಿದ್ದಾರೆ.

Continue Reading

bangalore

‘I LOVE YOU’ ಅಲ್ಲ.. ಕೇವಲ ಮೀನು ಕೊಟ್ಟು ಪ್ರಪೋಸ್ ಮಾಡ್ತಾರಂತೆ ‘ಕುಡ್ಲದ ಜನ’..! ಹೇಗೆ ಗೊತ್ತಾ ?

Published

on

ಪ್ರಸ್ತುತ ಝೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭವಾಗಿದ್ದು ಉತ್ತಮ ರಿತಿಯಲ್ಲಿ ನಡೆಯುತ್ತಿದೆ. ಬ್ಯಾಚುಲರ್ಸ್‌ಗಳಿಗೆ ಮೆಂಟರ್ಸ್‌ಗಳು ಕೂಡ ಸಿಕ್ಕಿದ್ದಾರೆ. ವಿವಿಧ ರೀತಿಯಲ್ಲಿ ತಮ್ಮ ಪಾರ್ಟ್ನರ್/ ಮೆಂಟರ್‌ಗಳಿಗೆ ಬ್ಯಾಚುಲರ್ಸ್ ಸರ್ಪ್ರೈಸ್ ನೀಡುವಂತೆ ಕಳೆದ ವಾರ ಸರ್ಪ್ರೈಸ್ ರೌಂಡ್ ಇತ್ತು. ಸಿನಿಮಾಗಳ ರೀಕ್ರಿಯೇಶನ್ ರೌಂಡ್ ಆಗಿದ್ದು ನಟಿ ಅಭಿಜ್ಞಾ ಭಟ್, ಸೂರ್ಯ ಕುಮಾರ್‌ಗೆ ಜೋಡಿಯಾಗಿದ್ದು, ಇವರು ಜೊತೆಯಾಗಿ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಹಾಗೂ ದೃಶ್ಯಗಳನ್ನು ರೀಕ್ರಿಯೇಟ್ ಮಾಡಿದ್ದಾರೆ.

ನಿರೂಪಕ ನಿರಂಜನ್ ದೇಶಪಾಂಡೆ ಮೀನುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅಭಿಜ್ಞಾ ಭಟ್ ಉತ್ತರಿಸಿದ್ದು, “ನಾನು ಮೀನು ತಿನ್ನೋದಿಲ್ಲ, ಆದರೆ ನಾನು ದಕ್ಷಿಣ ಕನ್ನಡದವಳು ಅಲ್ವಾ? ಹಾಗಾಗಿ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾವಾಗ ನೋಡಿದ್ರೂ ಮೀನು. ಮೀನು ಕಣ್ಣಿಗೆ ತುಂಬಾನೆ ಒಳ್ಳೆಯದು ಅಲ್ಲದೇ ಮೀನಿನ ಮಂಡೆ ತಿಂದ್ರೆ ನಮ್ಮ ಮಂಡೆಸ ಚುರುಕಾಗುತ್ತದೆ” ಎಂದರು . ಇಷ್ಟೇ ಅಲ್ಲ ಮೀನು ಕೊಟ್ಟು ಪ್ರಪೋಸ್ ಮಾಡುವ ಕುರಿತು ಸಹ ಅಭಿಜ್ಞಾ ಮಾಹಿತಿ ನೀಡಿದ್ದು, “ಇಲ್ಲೆಲ್ಲಾ ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡಲು, ಅಥವಾ ಇಂಪ್ರೆಸ್ ಮಾಡಲು ರೋಸ್, ಚಾಕ್ಲೆಟ್ ಎಲ್ಲಾ ಕೊಡ್ತಾರೆ, ಆದರೆ ನಮ್ ಕಡೆ ಹಾಗಲ್ಲ, ಮೀನು ಕೊಟ್ರೆ ಸಾಕು. ಇಲ್ಲೆಲ್ಲ ಐ ಲವ್ ಯೂ ಅಂದ್ರೆ ಮುಗೀತು, ಆದ್ರೆ ನಮ್ ಕಡೆ ‘ಹೇ ಭಾಗಿ ನಿನಗಾಗಿ ಮೀನು ತಂದಿದ್ದೇನೆ, ಸಾರು ಮಾಡಿಡು, ರಾತ್ರಿ ಬೇಗ ಬರ್ತೇನೆ’ ಎನ್ನುತ್ತಾರಂತೆ ಕುಡ್ಲದ ಜನ. ಹಾಗಾಗಿ ಭಾಗಿ ಮನೆಯಲ್ಲಿ ಮೀನು ಸಾರು ಅಂದ್ರೆ, ಇವತ್ತೇನೋ ಸ್ಪೆಷಲ್ ಇದೆ ಎಂದು ಕನೆಕ್ಟ್ ಮಾಡ್ಬೇಕು” ಎಂದಿದ್ದಾರೆ ಅಭಿಜ್ಞಾ.

ಕಾರ್ಯಕ್ರಮದ ಜಡ್ಜ್ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಜ್ಞಾಳ ಕತೆಯನ್ನೆಲ್ಲಾ ಕೇಳಿ, “ಯಾವ ಯಾವ ಮೀನು ಕೊಡಬೇಕು ? ಅದರ ಅರ್ಥ ಏನು ?” ಎಂದು ಕೇಳಿದ್ದಾರೆ. ಅದಕ್ಕೆ ಅಭಿಜ್ಞಾ, “ಬಂಗುಡೆ ಮೀನು ಕೊಟ್ರೆ, ಬರೀ ರೋಮ್ಯಾನ್ಸ್. ಕಾಣೆ ಫಿಶ್ ಕೊಟ್ರೆ ಸ್ವಲ್ಪ ಜಾಸ್ತಿನೇ ರೊಮ್ಯಾನ್ಸ್ , ಪಾಂಪ್ಲೆಟ್ ಮೀನು ಕೊಟ್ರೆ ಲವ್ ಮಾಡೋದು ಅಂತ ಅರ್ಥ, ಇನ್ನು ಏಡಿಯನ್ನು ತಂದು ಕೊಟ್ರೆ ಫಸ್ಟ್ ಸೆಕೆಂಡ್ ಸ್ಟೇಜ್ ಏನೂ ಇಲ್ಲ, ಡೈರೆಕ್ಟ್” ಎಂದ ಅಭಿಜ್ಞಾ ಕೊನೆಗೆ “ನಾನು ಸುಮ್ಮನೆ ಹೇಳಿದ್ದು, ಇವಳಿಗೇನು ಮಾಡೋದಕ್ಕೆ ಬೇರೆ ಕೆಲ್ಸ ಇಲ್ವಾ ಅಂತ ಹೇಳ್ಬೇಡಿ” ಎಂದು ಹೇಳಿಕೊಂಡಿದ್ದಾರೆ.

Continue Reading

bangalore

ಆಸ್ತಿಯಲ್ಲಿ ಪಾಲು ಬೇಕೆಂದರೆ ಅಪ್ಪ, ಅಮ್ಮ ಹಾಗೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೆಕು : ಕೃಷ್ಣ ಬೈರೇಗೌಡ

Published

on

ಮಂಗಳೂರು/ಬೆಂಗಳೂರು : “ಹೆಚ್ಚಿನ ಕುಟುಂಬಗಳಲ್ಲಿ ತಂದೆ- ತಾಯಿ ಅಥವಾ ಹಿರಿಯರು ಯಾರೇ ಇದ್ದರೂ ಅವರ ಆರೈಕೆ ಮಾಡದ ಸಂಬಂಧಿಕರು ಆಸ್ತಿಗಾಗಿ ಬೇಗ ಮುಂದೆ ಬರುತ್ತಾರೆ. ಆದರೆ ಯಾರು ಅಪ್ಪ-ಅಮ್ಮ ಹಾಗೂ ಹಿರಿಯರನ್ನು ಆರೈಕೆ ಮಾಡುವುದಿಲ್ಲವೋ ಅಂತಹ ಮಕ್ಕಳು ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್-ದಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರಕಾರದ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007’ ನೀಡಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ನಿನ್ನೆ (ಮಾ.12) ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಿಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ , “ಪ್ರಸ್ತುತ ಮಕ್ಕಳು ಸ್ವಂತ ತಂದೆ-ತಾಯಿಯನ್ನೇ ಆರೈಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಒಂದು ವೇಳೆ ಮಕ್ಕಳು ಅಥವಾ ಸಂಬಂಧಿಕರು ಆರೈಕೆ ಮಾಡದಿದ್ದರೆ ಅವರ ಹೆಸರಿಗೆ ಮಾಡಿರುವ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಹಿರಿಯ ನಾಗರಿಕರಿಗೆ ಇದೆ. ಕೇಂದ್ರ ಸರಕಾರ 2007ರಲ್ಲೇ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ ಯನ್ನು ಜಾರಿಗೆ ತಂದಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದಲೇ ಪರಿಷತ್‍ನಲ್ಲಿ ಈ ಕಾಯ್ದೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ” ಎಂದರು.

“ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಸೆಕ್ಷನ್ 09ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು. ಹಿರಿಯ ನಾಗರಿಕರ ದೂರು ಸಾಬೀತಾದರೆ, ತಂದೆ ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೇ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page