Connect with us

LATEST NEWS

ಮುಂಬೈ ಟು ದುಬೈಗೆ ಓರ್ವನ ಪ್ರಯಾಣಕ್ಕಾಗಿ 17 ಟನ್ ಇಂಧನ ವ್ಯಯಿಸಿದ ಎಮಿರೇಟ್ಸ್ ಏರ್ ಲೈನ್ಸ್..!

Published

on

ಮುಂಬೈ: ಕೇವಲ ಓರ್ವ ವ್ಯಕ್ತಿಗಾಗಿ ಮುಂಬೈಯಿಂದ ದುಬೈಗೆ ವಿಮಾನ ಹಾರಾಟ ನಡೆಸಿದ ವಿದ್ಯಾಮಾನ ವರದಿಯಾಗಿದೆ. ಪ್ರತಿಷ್ಟಿತ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ಈ ಕಾರ್ಯವನ್ನು ಮಾಡಿದ್ದು, ಮುಂಬೈ ಮೂಲದ ಉದ್ಯಮಿ ಅನಿವಾಸಿ ಭಾರತೀಯ 40 ವರ್ಷದ ಭವೇಶ್ ಜವೇರಿ ಏಕ ವ್ಯಕ್ತಿಯಾಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಎಮಿರೇಟ್ಸ್ ಫ್ಲೈಟ್ ಟಿಕೆಟ್ ಅನ್ನು ರೂ 18,000 ತೆತ್ತು ಖರೀದಿಸಿದ್ದ 40 ವರ್ಷದ ಭವೇಶ್ ಜವೇರಿ 360 ಸೀಟಿನ ಬೋಯಿಂಗ್ 777 ವಿಮಾನದಲ್ಲಿ ಮೇ 19ರಂದು ಏಕೈಕ ಪ್ರಯಾಣಿಕನಾಗಿದ್ದರು.

ಮುಂಬೈಯಿಂದ ದುಬೈಗೆ ಇಲ್ಲಿಯ ತನಕ 240ಕ್ಕೂ ಅಧಿಕ ಬಾರಿ ಪ್ರಯಾಣಿಸಿರುವ ಅವರು ಇದೇ ಮೊದಲ ಬಾರಿಗೆ ಇಂತಹ ವಿಶೇಷ ಸವಲತ್ತು ಪಡೆದರು.ಕಳೆದ 20 ವರ್ಷಗಳಿಂದ ಅವರು ದುಬೈ ನಿವಾಸಿಯಾಗಿದ್ದಾರೆ. ಜೀವನದಲ್ಲಿ ಅದೆಷ್ಟೋ ಬಾರಿ ವಿಮಾನದಲ್ಲಿ ಸಂಚರಿಸಿರುವ ಅವರಿಗೆ ಈ ಒಂದು ಪ್ರಯಾಣ ಬಹಳ ರೋಮಾಂಚನ ತಂದಿದ್ದು, ಈ ಪ್ರಯಾಣದ ಸುದ್ದಿ ಭಾರಿ ವೈರಲ್‌ ಆಗಿದೆ.

ಇದಕ್ಕೆ ಕಾರಣ, ಇವರು ದುಬೈನಿಂದ ಮುಂಬೈಗೆ ವಿಮಾನದಲ್ಲಿ ಒಬ್ಬರೇ ಕುಳಿತು ಬಂದಿದ್ದಾರೆ. ಅದೂ 360 ಸೀಟುಗಳಿರುವ ಬೋಯಿಂಗ್ 777 ಎಮಿರೇಟ್ಸ್  ವಿಮಾನದಲ್ಲಿ ಕೇವಲ 18 ಸಾವಿರ ರೂಪಾಯಿ ಕೊಟ್ಟು!

ಈ ರೋಚಕ ಪ್ರಯಾಣವನ್ನು ಅವರು ಮಾಧ್ಯಮಗಳ ಜತೆ ಹಂಚಿಕೊಂಡಿದ್ದು, ಈ ಎರಡೂವರೆ ಗಂಟೆಗಳ ಪ್ರಯಾಣ ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.

ಯುಎಇಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳ ಪ್ರಕಾರ, ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾ ಹೊಂದಿರುವವರು ಮತ್ತು ರಾಜತಾಂತ್ರಿಕ ಯೋಜನೆಯ ಸದಸ್ಯರು ಮಾತ್ರವೇ ಭಾರತದಿಂದ ಯುಎಇಗೆ ತೆರಳಬಹುದಾಗಿದೆ.

ಭವೇಶ್ ಅವರು ತಮ್ಮ ಬಳಿ ಗೋಲ್ಡನ್ ವೀಸಾ ಹೊಂದಿದ್ದ ಕಾರಣ ಇಂಥದ್ದೊಂದು ಅವಕಾಶ ಅವರಿಗೆ ಸಿಕ್ಕಿದೆ. ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ…

”ನಾನು ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆಯೇ ಗಗನಸಖಿಯರು ಜೋರಾಗಿ ಚಪ್ಪಾಳೆ ತಟ್ಟಿ ನಗುಮೊಗದಿಂದ ಸ್ವಾಗತಿಸಿದರು. ಇಂಥ ಅನುಭವ ಸಾಮಾನ್ಯ ಆದರೆ ಈ ಪಯಣದಲ್ಲಿನ ಅನುಭವ ವಿಶೇಷವೇ ಆಗಿತ್ತು.

ಇದು ಏಕಾಂಗಿ ಪಯಣ. ಈಗಾಗಲೇ  ದುಬೈ ಮತ್ತು ಮುಂಬೈ ನಡುವೆ 240 ಬಾರಿ ಸಂಚರಿಸಿದ್ದೇನೆ. ಆದರೆ ಇಂಥ ಸ್ವಾಗತ ಇದೇ ಮೊದಲು ನೋಡಿದ್ದು’ ಎಂದಿದ್ದಾರೆ.

ವಿಮಾನ ಇಳಿದ ಬಳಿಕ ಬ್ಯಾಗ್ ಸಂಗ್ರಹಿಸಲು ತೆರಳಿದಾಗಲೂ ಕನ್ವೇಯರ್ ಬೆಲ್ಟ್‌ನಲ್ಲಿ ಇದ್ದಿದ್ದು ನನ್ನ ಬ್ಯಾಗ್‌ ಮಾತ್ರ ಎಂದಿದ್ದಾರೆ. ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಮುಂಬೈ ವಿಮಾನ ನಿಲ್ದಾಣ ಒಂದಾಗಿದೆ.

ಸುಮಾರು 180 ಟನ್ ತೂಕದ ಬೋಯಿಂಗ್ ವಿಮಾನವನ್ನು ಒಬ್ಬರೇ ಒಬ್ಬ ಎಕಾನಮಿ ದರ್ಜೆಯ ಪ್ರಯಾಣಿಕನ ಎರಡೂವರೆ ಗಂಟೆ ಪ್ರಯಾಣಕ್ಕಾಗಿ ಸುಮಾರು ಎಂಟು ಲಕ್ಷ ರೂ ಮೌಲ್ಯದ 17 ಟನ್ ಇಂಧನ ಉರಿಸಿದ್ದು ಅಚ್ಚರಿಯ ಸಂಗತಿ.

ಆದರೆ ಮುಂಬೈನಿಂದ ದುಬೈಗೆ ವಿಮಾನ ಹೋದ ಮೇಲೆ ಅಲ್ಲಿಂದ ವಾಪಸ್‌ ಬರಲೇಬೇಕಿರುವುದು ಅನಿವಾರ್ಯ. ಆದ್ದರಿಂದ ಪ್ರಯಾಣಿಕರು ಇಲ್ಲದಿದ್ದರೂ ಬರಲೇಬೇಕಿತ್ತು ಎಂದು ವಿಮಾನಯಾನ ಸ್ಪಷ್ಟನೆ ಕೊಟ್ಟಿದೆ.

LATEST NEWS

ಏಪ್ರಿಲ್ 1ರಿಂದ ಪ್ರತಿ ಯೂನಿಟ್ ವಿದ್ಯುತ್‌ಗೆ ಹೊಸ ದರ ಜಾರಿ !

Published

on

ಮಂಗಳೂರು/ಬೆಂಗಳೂರು: ಈಗಾಗಲೇ ದರ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ.


ಹೌದು, ರಾಜ್ಯದಲ್ಲಿ ಏಪ್ರೀಲ್ 1ರಿಂದಲೇ ಹೊಸ ವಿದ್ಯುತ್ ದರವನ್ನು ಏರಿಕೆ ಮಾಡಲಾಗುತ್ತಿದೆ. ಈಗಾಗಲೇ ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರ ಹಾಗೂ ದಿನಸಿ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ವಿದ್ಯುತ್ ದರ ಬಿಸಿ ತುಪ್ಪವಾಗಲಿದೆ.

ಇದನ್ನೂ ಓದಿ: 2,000 ದಿಂದ 4,000ಕ್ಕೆ ಗೃಹಲಕ್ಷ್ಮಿ ಹಣ ಏರಿಕೆ ; ಯಾವಾಗದಿಂದ ಜಾರಿಯಾಗುತ್ತೆ ಈ ನೂತನ ಬದಲಾವಣೆ ?

ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ವಿಚಾರವಾಗಿ ನಿರ್ಣಯ ಕೈಗೊಳ್ಳಲಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ದರ ಏರಿಕೆ ಆದೇಶವನ್ನು ಹೊರಡಿಸಿದೆ. ಕೆಇಆರ್‌ಸಿ ಗುರುವಾರ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್ ವಿದ್ಯುತ್ ದರವು 36 ಪೈಸೆಗಳಷ್ಟು ಏರಿಕೆಯಾಗಲಿದೆ. ಈ ಹೊಸ ದರ ಏಪ್ರೀಲ್ 1ರಿಂದಲೇ ಜಾರಿಗೆ ಬರಲಿದೆ.

 

Continue Reading

LATEST NEWS

ಇಷ್ಟವಿದ್ದರೂ ಚಿಂತೆಯಿಲ್ಲ… ಕ್ಯಾನ್ಸರ್‌ಗೆ ಕಾರಣವಾಗುವ ಈ 6 ತಿಂಡಿಯಿಂದ ದೂರವಿರಿ…

Published

on

ಇಷ್ಟ ಇದೆ ಎಂಬ ಕಾರಣಕ್ಕೆ ಎಲ್ಲ ಆಹಾರವನ್ನು ಸೇವಿಸುವುದು ಸೂಕ್ತವಲ್ಲ. ನಾವು ಸೇವಿಸುವ ಕೆಲವು ತಿಂಡಿಗಳು ಕ್ಯಾನ್ಸರ್‌ಗೂ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಆಹಾದ ಸೇವನೆ ಮಾಡುವುದು ಒಳ್ಳೆಯದು. ಹಾಗಾದರೆ ಕ್ಯಾನ್ಸರ್‌ಗೆ ಕಾರಣವಾದ ಆ ಪ್ರಮುಖ 6 ಆಹಾರಗಲು ಯಾವುವು ? ಇಲ್ಲಿದೆ ನೋಡಿ ….

ನಮಗೆ ತಿಳಿಯದೆಯೇ ಅದೆಷ್ಟೋ ಬಾರಿ ನಾವು ಸೇವಿಸುವ ಆಹಾರಗಳು ಆರೋಗ್ಯಕ್ಕೆ ಮಾರಕವಾಗಿರುತ್ತದೆ. ಇದೀಗ ಉಲ್ಲೇಖ ಮಾಡಲಾಗಿರುವ ಈ 6 ಆಹಾರಗಳು ನಮಗೆ ಗೊತ್ತಿಲ್ಲದಂತೆಯೇ ನಮ್ಮ ವಿನಾಶಕ್ಕೆ ಕಾರಣವಾಗಬಹುದು. ಆದುದರಿಂದ ಈ 6 ಆಹಾರಗಳಿಂದ ದೂರವಿರುವುದು ಒಳ್ಳೆಯದು. ಹಾಗಾದರೆ ಅ ಆಹಾರಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.

  1. ಸಂಸ್ಕರಿಸಿದ ಮಾಂಸ
  2. ಕೆಂಪು ಮಾಂಸ
  3. ಸಕ್ಕರೆ
  4. ಎಣ್ಣೆಯಲ್ಲಿ ಕರಿದ ಆಹಾರಗಳು
  5. ಅತಿಯಾಗಿ ಬೇಯಿಸಿದ ಆಹಾರ
  6. ಮದ್ಯ

ಆರೋಗ್ಯ ತಜ್ಞರು ಅಥವಾ ಪೌಷ್ಟಿಕಾಂಶ ತಜ್ಞರ ಸಲಹೆ ಪಡೆದ ನಂತರವೇ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ. ಜೊತೆಗೆ ಉತ್ತಮ ಆರೋಗ್ಯ ಪಾಲನೆಗಾಗಿ ಮೇಲೆ ನೀಡಲಾಗಿರುವ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದನ್ನು ನಿಲ್ಲ್ಯಕ್ಷಿಸುವುದು ಬೆಸ್ಟ್…

Continue Reading

LATEST NEWS

ಬಿಡದಿ ಕಾರ್ಖಾನೆಯಲ್ಲಿ ಪಾಕ್ ಪರ ಗೋಡೆ ಬರಹ; ಇಬ್ಬರು ಅರೆಸ್ಟ್

Published

on

ಮಂಗಳೂರು/ರಾಮನಗರ ಬಿಡದಿಯ ಪ್ರತಿಷ್ಠಿತ ಕಂಪನಿಯ ಕಾರ್ಖಾನೆಯ ಶೌಚಾಲಯದ ಗೋಡೆಯಲ್ಲಿ ಪಾಕಿಸ್ತಾನದ ಪರ ಬರಹ ಬರೆದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರ ಕರ್ನಾಟಕದ ಹೈಮದ್ ಹುಸೇನ್ (24) ಮತ್ತು ಸಾದಿಕ್ (20) ಬಂಧಿತ ಆರೋಪಿಗಳು. ಇವರಿಬ್ಬರು ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮಾರ್ಚ್ 15 ರಂದು ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆದಿದ್ದ ಆರೋಪಿಗಳು ಜೊತೆಗೆ ಕನ್ನಡಿಗರನ್ನು ಅವಹೇಳನಕಾರಿ ಭಾಷೆಯಲ್ಲಿ ನಿಂದಿಸಿದ್ದರು. ಹೀಗಾಗಿ ದೇಶದ್ರೋಹದ ಆರೋಪದಡಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ಬಟ್ಟೆ ಅಂಗಡಿಯಲ್ಲಿನ ದರೋಡೆ ಪ್ರಕರಣಕ್ಕೆ ಟ್ವಿಸ್ಟ್; ಅಸಲಿ ಕಥೆನೇ ಬೇರೆ!

ಪ್ರಕರಣ ಗಮನಕ್ಕೆ ಬರುತ್ತಲೇ ಈ ಅಪರಾಧವನ್ನು ಕಂಪನಿ ಮುಚ್ಚಿ ಹಾಕಲು ಪ್ರಯತ್ನಿಸಿತ್ತು. ಅಲ್ಲದೇ, ನೋಟಿಸ್ ಬೋರ್ಡ್‌ನಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ಕೊಡಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಗೋಡೆ ಬರಹದ ಫೋಟೋ ವೈರಲ್ ಆಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ  ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page