ಮಂಗಳೂರು/ಬ್ಯಾಂಕಾಕ್: ಮಾರ್ಚ್ 2022ರಲ್ಲಿ ಶೇನ್ ವಾರ್ನ್ ಅವರ ಸಾವಿನ ಸುದ್ದಿ ಕ್ರಿಕೆಟ್ ಜಗತ್ತಿಗೆ ಬರ ಸಿಡಿಲಿನಂತೆ ಬಂದೆರಗಿತ್ತು. ಅವರು ನಿಧ*ನವಾದ ಮೂರು ವರ್ಷಗಳ ಬಳಿಕ ಇತ್ತೀಚೆಗೆ ವರದಿಯೊಂದು ಬಹಿರಂಗಗೊಂಡಿದ್ದು, ವಾರ್ನ್ ಮೃ*ತದೇಹ ಪತ್ತೆಯಾದ ಜಾಗದಲ್ಲಿ ‘ಬಾಟಲಿ’ಯೊಂದು ದೊರೆತಿರುವುದರ ಕುರಿತ ರಹಸ್ಯವನ್ನು ವರದಿ ದೃಢಪಡಿಸಿದೆ.

ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಥೈಲ್ಯಾಂಡ್‌ನಲ್ಲಿದ್ದ ಶೇನ್ ವಾರ್ನ್ ಇದ್ದಕ್ಕಿದ್ದಂತೆ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾ*ವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯನ್ ನ್ಯೂಸ್ ಚಾನೆಲ್ ಫಾಕ್ಸ್ ಸ್ಪೋರ್ಟ್ ವರದಿ ಮಾಡಿತ್ತು. ವಾರ್ನ್ ಅವರು ಥಾಯ್ಲೆಂಡ್‌ನ ವಿಲ್ಲಾದಲ್ಲಿ ನೆಲೆಸಿದ್ದರು. ಬೆಳಿಗ್ಗೆ ಅವರು ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ವೈದ್ಯಕೀಯ ತಂಡದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಬದುಕುಳಿಸಲು ಸಾಧ್ಯವಾಗಿರಲಿಲ್ಲ ಎಂದು ವಾರ್ನ್ ಅವರ ಆಪ್ತ ವಲಯ ಹೇಳಿಕೊಂಡಿತ್ತು.
ವಾರ್ನ್ ಸಾ*ವಿನ ಸುತ್ತ ಅನುಮಾನದ ಹುತ್ತ
ಇತ್ತೀಚಿನ ವರದಿಯೊಂದು ಶೇನ್ ವಾರ್ನ್ ಅವರ ಸಾವಿನ ಕುರಿತು ರಹಸ್ಯವೊಂದನ್ನು ತೆರೆದಿಟ್ಟಿದ್ದು, ಶೇನ್ ವಾರ್ನ್ ಅವರ ಮೃತದೇಹ ಪತ್ತೆಯಾದ ಜಾಗದಲ್ಲಿ ಅನುಮಾನ ಹುಟ್ಟಿಸುವಂತಹ ಬಾಟಲಿಯೊಂದು ಕಾಣಿಸಿಕೊಂಡಿತ್ತು. ಇದರಲ್ಲಿ ‘ಸೂಪರ್-ಸ್ಟ್ರಾಂಗ್ ಸೆಕ್ಸ್ ಡ್ರಗ್’ ಎಂದು ಹೇಳಲಾಗುವ ಕಾಮ ಉದ್ರೇಕ ಮಾದಕ ದ್ರವ್ಯ ಪತ್ತೆಯಾಗಿದ್ದು, ಇದು ಶೇನ್ ವಾರ್ನ್ ಅವರ ಸಾ*ವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಹೇಳಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ದಿವಂಗತ ಕ್ರಿಕೆಟಿಗ ಶೇನ್ ವಾರ್ನ್ ಅವರ ಮೃತದೇಹದ ಪಕ್ಕದಲ್ಲಿ ‘ಕಾಮಗ್ರ’ ಎಂಬ ಮಾದಕವಸ್ತು ಪತ್ತೆಯಾಗಿತ್ತು. ಆದರೆ ಪೊಲೀಸರ ವರದಿಯಲ್ಲಿ ಈ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ.
ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳ ಕೈವಾಡ
ಈ ಕುರಿತು ಹೆಸರು ಬಹಿರಂಗಪಡಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು,” ನಮ್ಮ ಹಿರಿಯ ಅಧಿಕಾರಿಗಳು ಮೃತದೇಹದ ಪಕ್ಕದಲ್ಲೇ ಸಿಕ್ಕ ಬಾಟಲಿಯನ್ನು ತೆಗೆದುಹಾಕಲು ಸೂಚಿಸಿದರು. ಅಧಿಕಾರಿಗಳಿಗೆ ಆಗಾಗೇ ಮೇಲಿನಿಂದ ಒತ್ತಡ ಬರುತ್ತಿದ್ದವು. ಈ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳ ಕೈವಾಡ ಇರಬಹುದು ಎಂದು ನಾನು ಭಾವಿಸುತ್ತೇನೆ”.
“ಕೊನೆಯಲ್ಲಿ ವಾರ್ನ್ ಅವರಿಗೆ ಹೃದಯಾಘಾತವಾಗಿದೆ ಎಂದು ಅಧಿಕೃತ ವರದಿ ಹೊರಬಿತ್ತು ಮತ್ತು ಅದಕ್ಕೆ ಕಾರಣವೇನು ಎಂಬುದರ ಕುರಿತು ಯಾವುದೇ ವರದಿ ಬಂದಿಲ್ಲ. ಬಾಟಲಿಯಲ್ಲಿ ಪತ್ತೆಯಾದ ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್ ಎಂಬ ಮಾದಕ ವಸ್ತು ಸೂಕ್ಷ್ಮ ವಿಷಯವಾಗಿ ಉಳಿದು ಬಿಟ್ಟಿದೆ. ಇದನ್ನು ತನಿಖೆ ನಡೆಸಲು ಯಾರು ಮುಂದೆ ಬರುವುದಿಲ್ಲ. ಏಕೆಂದರೆ ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ” ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಕ್ರಿಕೆಟ್ ಮಾಂತ್ರಿಕ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತಕ್ಕೆ ಬಲಿ..!
ಕ್ರಿಕೆಟ್ ದಂತಕಥೆ ಸಾ*ವಿಗೆ ಕಾರಣ ಏನು?
ಅಲ್ಲದೆ ಘಟನಾ ಸ್ಥಳದಲ್ಲಿ ವಾಂತಿ ಮತ್ತು ರಕ್ತದ ಕಲೆ ಪತ್ತೆಯಾಗಿತ್ತು. ಇದನ್ನು ಯಾರಿಗೂ ತಿಳಿಯದಂತೆ ಮೊದಲೇ ಸ್ವಚ್ಛಮಾಡಲಾಗಿತ್ತು ಎಂದು ಹೇಳಲಾಗಿದೆ.
ಆದರೆ ‘ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್’ ಎಂಬ ಕಾಮ ಉದ್ರೇಕ ಮಾದಕ ದ್ರವ್ಯ ಥೈಲ್ಯಾಂಡ್‌ನಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದ್ದು, ಆದರೂ ಕೆಲವು ಕಡೆಗಳಲ್ಲಿ ಕಳ್ಳ ಮಾರಾಟ ದಂಧೆ ನಡೆಯುತ್ತಿದೆ. ಈ ಮಾದಕ ದ್ರವ್ಯ ಹೃದಯ ಸಮಸ್ಯೆ ಇರುವವರಿಗೆ ತುಂಬಾ ಅಪಾಯಕಾರಿಯಾಗಿದ್ದು, ಇದರಿಂದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.
ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಾರ್ನ್ ‘ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್’ ಎಂಬ ಕಾಮ ಉದ್ರೇಕ ಮಾದಕ ದ್ರವ್ಯ ಸೇವಿಸುತ್ತಿದ್ದರೆ ಎಂಬ ಅನುಮಾನ ಈ ವರದಿಯ ಬಳಿಕ ಉಟ್ಟಿಕೊಂಡಿದೆ.
ಆದರೆ ಧೂಮಪಾನ, ಕಳಪೆ ಆಹಾರ ಕ್ರಮಗಳೇ ವಾರ್ನ್ ಅವರ ಸಾವಿಗೆ ಕಾರಣ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವೈದ್ಯರೊಬ್ಬರು ಹೇಳಿದ್ದರು.