Connect with us

FILM

ಸದ್ದು ಮಾಡುತ್ತಿದೆ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಚಿತ್ರದ ಪೋಸ್ಟರ್‌

Published

on

ಮಂಗಳೂರು: ವೇಗವಾಗಿ ಮುನ್ನುಗ್ಗುತ್ತಿರುವ ಈ ಜಗತ್ತಿನಲ್ಲಿ ಅತ್ತಿತ್ತ ಕಡೆಯ ಸುಖ ದುಃಖಗಳ ಬಗ್ಗೆ ಯೋಚಿಸದೇ ಹಗಲು ರಾತ್ರಿ ಕಷ್ಟ ಪಟ್ಟು ಒಬ್ಬ ವ್ಯಕ್ತಿ ದುಡೀತಾನೆ ಅಂತ ಆದ್ರೆ ಅದು ಹೊಟ್ಟೆಗಾಗಿ.

ಅದೇ ರೀತಿ ಹೊಟ್ಟೆ ಪಾಡಿಗಾಗಿ ಹಾಗೂ ಕನಸಿನ ಪಾಡಿಗಾಗಿ ಸಿನಿಮಾದ ಬೆನ್ನು ಬಿದ್ದ ಕೆಲವರು ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದು ಹೇಳೋಕೆ ಹೊರಟಿದ್ದಾರೆ.


ಮಂಗಳೂರಿನ ಸಿನಿ ತಂಡವೊಂದು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂಬ ಶೀರ್ಷಿಕೆಯ ಹೊಚ್ಚ ಹೊಸ ಕಿರು ಚಿತ್ರದೊಂದಿಗೆ ಸಧ್ಯದಲ್ಲೇ ನಿಮ್ಮ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

ಈ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ನಿನ್ನೆ ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬಾರ್, ಅವರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಬಿಡುಗಡೆ ಮಾಡಿದ್ದು ಸಧ್ಯಕ್ಕೆ ಪೋಸ್ಟರ್ ಬಹಳ ಸದ್ದು ಮಾಡುತ್ತಿದೆ.
ವಿಕ್ರಮ್ ರಾವ್ ಈ ಚಿತ್ರದ ನಿರ್ಮಾಪಕರಾಗಿದ್ದು ರಕ್ಷಿತ್ ಚಿನ್ನು ಅವರು ಆಕ್ಷನ್ ಕಟ್ ಹೇಳಿದ್ದಾರೆ.

ಕೋಸ್ಟಲ್ ವುಡ್ ಸ್ಟಾರ್ ಡೈರೆಕ್ಟರ್ ಕೆ ಸೂರಜ್ ಶೆಟ್ಟಿಯವರು ಈ ಚಿತ್ರಕ್ಕೆ ಕಥೆ ಬರೆದಿದ್ದು ಪ್ರಪ್ರಥಮವಾಗಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚುವ ಮೂಲಕ ನಟನೆಗೆ ಕಾಲಿಟ್ಟಿದ್ದಾರೆ.

ಇವರ ಜೊತೆಗೆ RJ ತ್ರಿಶೂಲ್,

ಮಧುರಾ ಆರ್. ಜೆ , ರಾಘವ್ ಸೂರಿ ಹಾಗೂ ಪ್ರವೀಣ್ ಬೇಕಲ್ ಇತರ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತೀ ಶೀಘ್ರದಲ್ಲಿ ತಂಡ ತಮ್ಮ ಚಿತ್ರದೊಂದಿಗೆ ನಿಮ್ಮ ಮುಂದೆ ಬರಲಿದ್ದಾರೆ.

FILM

ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟ ರಾಮ್ ಚರಣ್; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ತೆಲಂಗಾಣ : ಸದ್ಯ ನಟ ರಾಮ್ ಚರಣ್ ಮನೆಯಲ್ಲಿ ಡಬಲ್ ಸಂಭ್ರಮವಿದೆ. ಇತ್ತೀಚೆಗಷ್ಟೆ ರಾಮ್  ಚರಣ್ ಪತ್ನಿ ಉಪಾಸನಾ ಕೊನಿಡೆಲ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಹೆಣ್ಣು, ಒಂದು ಗಂಡು ಮಗು ಆಗಿರುವ ಬಗ್ಗೆ ನಟ ಚಿರಂಜೀವಿ  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದೀಗ ಮಕ್ಕಳ ಹೆಸರನ್ನು ರಿವೀಲ್ ಮಾಡಲಾಗಿದೆ. ಸಾಂಪ್ರದಾಯಿಕ ಹೆಸರನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ ದಂಪತಿ. ಮಕ್ಕಳ ಸುಂದರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಸರೇನು?

ಗಂಡು ಮಗುವಿಗೆ ಶಿವರಾಮ್ ಎಂದು ಹೆಸರಿಟ್ಟರೆ,  ಹೆಣ್ಣು ಮಗುವಿಗೆ ಅನ್ವೀರಾ ದೇವಿ ಎಂದು ನಾಮಕರಣ ಮಾಡಲಾಗಿದೆ.  ಹೆಸರಿನ ವಿಶೇಷತೆ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಅಪರಿಮಿತ ಸಂತೋಷ ಮತ್ತು ದೈವಿಕ ಅನುಗ್ರಹದಿಂದ ನಮ್ಮ ಎರಡು  ಪುಟ್ಟ ಆಶೀರ್ವಾದಗಳ ಸುಂದರ ಹೆಸರುಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ

‘ಶಿವ ರಾಮ ಕೊನಿಡೆಲ  ಮತ್ತು ಅನ್ವೀರಾ ದೇವಿ ಕೊನಿಡೆಲ’

ಶಿವ ರಾಮ ಎರಡು ಶಾಶ್ವತ ಆದರ್ಶಗಳ ಆಳವಾದ ಸಂಗಮವಾಗಿದೆ. ‘ಶಿವ’ ಶಿವ ಶಂಕರ ವರ ಪ್ರಸಾದ್(ಮೆಗಾಸ್ಟಾರ್ ಚಿರಂಜೀವಿ ಅವರ ಮೂಲ ಹೆಸರು) ಅವರಿಂದ ಪ್ರೇರಿತವಾಗಿದೆ. ಇದು ಆಂತರಿಕ ಶಕ್ತಿ, ಆಧ್ಯಾತ್ಮಿಕ ಆಳ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ.

ರಾಮ್ ಚರಣ್ ಹೆಸರಿನ ‘ರಾಮ’ ಪದವನ್ನು ಆಯ್ಕೆ ಮಾಡಲಾಗಿದ್ದು, ರಾಮ ಎನ್ನುವುದು ಸದಾಚಾರ, ಕರುಣೆ ಮತ್ತು ನೈತಿಕ ಧೈರ್ಯವನ್ನು ಸಾಕಾರಗೊಳಿಸುತ್ತದೆ. ಒಟ್ಟಿನಲ್ಲಿ, ಈ ಹೆಸರು ಆಂತರಿಕ ಶಕ್ತಿ ಮತ್ತು ಜವಾಬ್ದಾರಿಯುತ ಕ್ರಿಯೆಯ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ.

ಅನ್ವೀರಾ ದೇವಿ ದೈವಿಕ ಸ್ತ್ರೀತ್ವದ ಅಪರೂಪದ ಮತ್ತು ಶಕ್ತಿಯುತ ಅಭಿವ್ಯಕ್ತಿ. ಕನಕ ದುರ್ಗಾ ದೇವಿಯ ಆಶೀರ್ವಾದದಿಂದ ಪ್ರೇರಿತವಾದ ಅನ್ವೀರಾ ನಿರ್ಭಯತೆ, ಸ್ಥಿತಿಸ್ಥಾಪಕತ್ವ ಮತ್ತು ದೈವಿಕ ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಅನುಗ್ರಹ, ಧೈರ್ಯ ಮತ್ತು ಅಚಲ ಶಕ್ತಿಯನ್ನು ಪ್ರತಿಬಿಂಬಿಸುವ ಹೆಸರು.

ಇದನ್ನೂ ಓದಿ : ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

ಶಿವ ರಾಮ ಮತ್ತು ಅನ್ವೀರಾ ದೇವಿ ತಮ್ಮ ಸುಂದರ ಜೀವನ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಾವು ಅವರಿಗೆ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.

Continue Reading

FILM

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ರೀಲೀಲಾ…ಫೋಟೋ, ವೀಡಿಯೋ ವೈರಲ್!

Published

on

ಮಂಗಳೂರು/ಬೆಂಗಳೂರು : ಶ್ರೀಲೀಲಾ  ಸಿನಿರಸಿಕರ ಮನಗೆದ್ದಿರುವ ಚೆಲುವೆ. ತನ್ನ ನಟನೆ, ನೃತ್ಯ ಎಲ್ಲದರ ಮೂಲಕ ಗಮನ ಸೆಳೆದಿರುವ ನಟಿ. ಇದೀಗ ಕಿಸ್ ಬೆಡಗಿ ಡಾಕ್ಟರ್ ಆಗಿದ್ದಾರೆ.

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಸಿನಿಮಾಗಳಲ್ಲಿ ಬಿಝಿ ಆಗಿದ್ದರೂ, ಮತ್ತೊಂದೆಡೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಡಾಕ್ಟರ್ ಶ್ರೀಲೀಲಾ ಆಗಿದ್ದಾರೆ.

ಒಂದೆಡೆ ಸಿನಿಮಾ, ಮತ್ತೊಂದೆಡೆ ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು  ಬಂದಿರುವ ಶ್ರೀಲೀಲಾ, ಎಂಬಿಬಿಎಸ್ ಮಾಡಿದ್ದಾರೆ. ಘಟಿಕೋತ್ಸವದಲ್ಲಿ ಅವರು ಕಾಣಿಸಿಕೊಂಡ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ

ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಶ್ರೀಲೀಲಾ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೆಲ್ಲಿ ಸಂದಡಿ ಚಿತ್ರದ ಮೂಲಕ ಗಮನ ಸೆಳೆದರು. ಪುಷ್ಪ 2 ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದರು. ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶ್ರೀಲೀಲಾ ಸದ್ಯ ಧನುಷ್ ಜೊತೆ D55ನಲ್ಲಿ ನಟಿಸುತ್ತಿದ್ದಾರೆ.

Continue Reading

FILM

ಮೋಕ್ಷಿತಾ ಪೈ ಈಗ ‘ಜಗದ್ಧಾತ್ರಿ’: ಜೀ ಕನ್ನಡದಲ್ಲಿ ಶುರುವಾಗಲಿದೆ ಹೊಸ ಪಯಣ

Published

on

‘ಪಾರು’ ಧಾರಾವಾಹಿಯ ಮೂಲಕ ಮನೆಮಾತಾದ ಮೋಕ್ಷಿತಾ ಪೈ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿಯಾಗಿದ್ದರು. ಆದಾದ ಬಳಿಕ ಯಾವುದೇ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಹೋಸ ಧಾರವಾಹಿ ಮೂಲಕ ಜೀ ಕನ್ನಡಕ್ಕೆ ಮತ್ತೆ ಕಾಲಿಡುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದಾರೆ.


ಜೀ ಕನ್ನಡ ವಾಹಿನಿಯ ‘ಜಗದ್ಧಾತ್ರಿ’ ಎಂಬ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ. ನಾಯಕನಾಗಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಮ್ಮನೆ ಯುವರಾಣಿ’ ನಾಯಕ ಹಾಗೂ ವೀಕ್ಷಕರ ಮೆಚ್ಚಿನ ಅನಿಕೇತ್ ಖ್ಯಾತಿಯ ದೀಪಕ್ ಗೌಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಸಖತ್ ಖುಷಿಯಾಗಿದ್ದಾರೆ.


ಇದನ್ನೂ ಓದಿ: 11 ವರ್ಷದ ಮಗಳ ಕತ್ತು ಹಿಸುಕಿ ಕೊಂ*ದ ತಾಯಿ!


ಪಾರು’ ಸೀರಿಯಲ್‌ನಲ್ಲಿ ಸುಮಾರು 5 ವರ್ಷಗಳ ಕಾಲ ನಟಿಸಿದ್ದ ಮೋಕ್ಷಿತಾ, ನಂತರ ಬಿಗ್ ಬಾಸ್‌ನಲ್ಲಿ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈಗ ಮತ್ತೆ ಕಿರುತೆರೆಗೆ ಮರಳುತ್ತಿದ್ದು, ಈ ಹೊಸ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್‌ ಕಾಯುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page