Connect with us

DAKSHINA KANNADA

ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಚಂದ್ರನ ಕೈಚಳಕಕ್ಕೆ ಮಾಲೀಕ ಶಾಕ್

Published

on

ಪುತ್ತೂರು: ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೇ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.


ಕಡಬದ ಸಂಗೀತ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು. ಅಂಗಡಿಯಲ್ಲಿ ಕಳೆದ 9 ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಚಂದ್ರ, ಮಾಲೀಕನಿಲ್ಲದ ವೇಳೆ ಕ್ಯಾಶ್ ನಿಂದಲೆ ಹಣ ಎಗರಿಸುತ್ತಿದ್ದ. ಕ್ಯಾಶ್ ನಲ್ಲಿ ಹಣ ಮಿಸ್ ಆಗುತ್ತಿರುವ ಬಗ್ಗೆ ಅನುಮಾನಗೊಂಡ ಮಾಲೀಕ ಅಂಗಡಿಯ ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಚಂದ್ರನ ಕೈಚಳಕ ಸಿಕ್ಕಿ ಬಿದ್ದಿದೆ.

ಆರೋಪಿ ಚಂದ್ರ ಕಳೆದ ಹದಿನೈದು ದಿನಗಳಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಚ್ಚು ಹಣ ಕದ್ದಿರುವ ಶಂಕೆ ವ್ಯಕ್ತವಾಗಿದೆ. ಸಂಗೀತ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕರು ಕಡಬ ಠಾಣೆಗೆ ದೂರು ನೀಡಿದ್ದಾರೆ.


ಲಾಕ್ ಡೌನ್ ನಲ್ಲಿ ಕೆಲಸ ಇಲ್ಲದೆ ಒದ್ದಾಡುತ್ತಿರುವವರ ನಡುವೆ ಮಾಲೀಕನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.

DAKSHINA KANNADA

ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

Published

on

ಮಂಗಳೂರು : 114 ವರ್ಷಗಳ ಹಿಂದೆ 1912 ರ ಫೆ.21 ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಶಿವ ಲಿಂಗ ಪ್ರತಿಷ್ಠಾಪನೆ ಮಾಡಿ ಅವಕಾಶ ವಂಚಿತ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಹೊಸ ದಿಕ್ಕನ್ನು ತೋರಿಸಿದ ಪುಣ್ಯ ಕ್ಷಣದ ಸ್ಮರಣಾರ್ಥ ಇದೇ ಫೆ.21 ರಂದು ಮಂಗಳೂರಿನಲ್ಲಿ ‘ಗುರುವಿನೆಡೆಗೆ ನಮ್ಮ ನಡಿಗೆ… ಸಮಾಜದ ಬೆಳಕಿನೆಡೆಗೆ ನಮ್ಮ ಪಯಣ’ ಎಂಬ ಸಂಕಲ್ಪದೊಂದಿಗೆ ಶ್ರೀ ಕುದ್ರೋಳಿ ಕ್ಷೇತ್ರ ತೀರ್ಥಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ನಾರಾಯಣ ಗುರುಗಳು ನೀಡಿದ ಸಂದೇಶದ ಅನುಷ್ಠಾನ ಈ ಕಾರ್ಯಕ್ರಮದ ಉದ್ದೇಶ. ತೀರ್ಥಾಟನೆಯ ಪಾದಯಾತ್ರೆಯು ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟು ನೆಹರು ಮೈದಾನಕ್ಕೆ ಹಾಗೂ ಅಲ್ಲಿಂದ ಮುಂದುವರಿದು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕುದ್ರೋಳಿ ಕ್ಷೇತ್ರಕ್ಕೆ ತಲುಪಲಿದೆ. ಸುಮಾರು 10 ಸಾವಿರ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಶ್ರೀ ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರ ಧಾರಣೆಯೊಂದಿಗೆ ‘ಓಂ ಶ್ರೀ ನಾರಾಯಣ ಪರಮ ಗುರುವೇ ನಮ:’ ಎಂಬ ಮಂತ್ರೋಚ್ಛಾರಣೆಯೊಂದಿಗೆ ನಡೆಯುವ ಈ ಯಾತ್ರೆ ಕೇವಲ ಪಾದಯಾತ್ರೆಯಲ್ಲ. ಅದು ಆತ್ಮ ಶುದ್ಧಿಯ ಪಥ, ಸಮಾಜ ಜಾಗೃತಿಯ ಸಂಕಲ್ಪ ಎಂದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿ, ಅಭಿವೃದ್ಧಿ ಸಮಿತಿ, ಎಲ್ಲಾ ಶ್ರೀ ನಾರಾಯಣಗುರು ಅನುಯಾಯಿ ಸಂಘಗಳು, ಗರೋಡಿಗಳು ಮತ್ತು ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ತೀರ್ಥಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷಗಳಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭ ಇಂತಹ ತೀರ್ಥಾಟನೆಯನ್ನು ನಡೆಸುವ ಉದ್ದೇಶವಿದೆ ಎಂದು ಪದ್ಮರಾಜ್  ಆರ್. ತಿಳಿಸಿದರು.

ಇದನ್ನೂ ಓದಿ :ಸಾವಿನಲ್ಲೂ ಸಾರ್ಥಕತೆ ಮೆರೆದ ಪುಟ್ಟ ಕಂದಮ್ಮ: ದೇಶದ ಅತಿಕಿರಿಯ ಅಂಗಾಂಗ ದಾನಿ ಆಲಿನ್ ಶೆರಿನ್

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

 

Continue Reading

DAKSHINA KANNADA

ಲಕ್ಷಾಂತರ ಮೌಲ್ಯದ ಎಂಡಿಎಂಎ ಮಾರಾಟ ಯತ್ನ; ಮೂವರ ಬಂಧನ

Published

on

ಮಂಗಳೂರು : ಬೆಂಗಳೂರು ನಗರದಿಂದ ಎಂಡಿಎಂಎ ಮಾ*ದಕ ವಸ್ತುವನ್ನು ಖರೀದಿಸಿಕೊಂಡು ಬಂದು ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 11 ಲಕ್ಷದ 90 ಸಾವಿರ ರೂಪಾಯಿ ಮೌಲ್ಯದ 118.13 ಗ್ರಾಂ ತೂಕದ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್ ಮತ್ತು ಒಂದು ಸ್ವಿಫ್ಟ್‌ ಕಾರು ಸಹಿತ ಒಟ್ಟು 17 ಲಕ್ಷದ 95 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಉಳ್ಳಾಲದ ಬಸ್ತಿಪಡ್ಪು ನಿವಾಸಿ 34 ವರ್ಷದ ಮುಸ್ತಫಾ ಸೀದಿಯಬ್ಬ, ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿ 28 ವರ್ಷದ ಮೈಯದ್ದಿ ಮತ್ತು ಮುಕ್ಕಚ್ಚೇರಿಯ 28 ವರ್ಷದ ಮೊಹಮ್ಮದ್ ಶಿಫಾನ್ ಬಂಧಿತ ಆರೋಪಿಗಳು. ಈ ಮೂವರು ಸೇರಿಕೊಂಡು ಕಾರಿನಲ್ಲಿ ಉಳ್ಳಾಲ ತಾಲೂಕಿನ ತಲಪಾಡಿಯ ಪರಿಸರದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ : ತ್ರಿಕೋನ ಪ್ರೇಮಕಥೆ… ಮುಖಕ್ಕೆ ಗುಂ*ಡು ಹಾ*ರಿಸಿ ಯುವತಿಯ ಕೊ*ಲೆ!

ಆರೋಪಿ ಮುಸ್ತಫಾ ಸೀದಿಯಬ್ಬನ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಮತ್ತು ಮೈಯದ್ದಿ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಈ ಮಾ*ದಕ ವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮೂಡುಬಿದಿರೆ: ಖ್ಯಾತ ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಹಿಂಬದಿ ಸವಾರ ಸಾವು

Published

on

ಮೂಡುಬಿದಿರೆ: ಕಾಮಗಾರಿ ಹಂತದಲ್ಲಿರುವ ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದಲ್ಲಿ ಗುರುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.

ಖ್ಯಾತ ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಹಿಂಬದಿ ಸವಾರ, ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಕೋಟೆ ಬಾಗಿಲಿನ ಶ್ರವಣ್ ಎಸ್. ಸುವರ್ಣ (17)  ಸಾವನ್ನಪ್ಪಿದ್ದಾನೆ.

ಸದಾನಂದ ಸುವರ್ಣ – ರಾಜಶ್ರೀ ದಂಪತಿಯ ಪುತ್ರನಾಗಿರುವ ಶ್ರವಣ್ ಮೂಡುಬಿದಿರೆಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಅಪಘಾತದಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಉಡುಪಿ: ಪಿಕಪ್ ವಾಹನ ಚಲಿಸಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಸಾವು

ಕಂಟೆಂಟ್ ಕ್ರಿಯೇಟರ್ ಆಗಿ ಹೆಸರುವಾಸಿಯಾಗಿರುವ ಸೂರಜ್ ಅಂಚನ್ ಹಾಗೂ ಅವರ ಸಂಬಂಧಿ ಶ್ರವಣ್ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಕಾರ್ಕಳ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಶ್ರವಣ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page