Connect with us

ತೆಂಗಿನಕಾಯಿ ತುರಿಯಲು ಕಷ್ಟ ಆಗ್ತಿದ್ಯಾ? ಜಸ್ಟ್​ ಹೀಗೆ ಮಾಡಿದರೆ ಸಾಕು..!

Published

on

ತೆಂಗಿನಕಾಯಿ ಹಾಕಿ ಮಾಡುವ ಸಾಂಬಾರ್‌ ರುಚಿ ಎನಿಸಿದರೂ, ಕಾಯಿ ಒಡೆದು ಅದನ್ನು ತುರಿದು ಸಾಂಬಾರ್‌ ಮಾಡೋಕೆ ಹಲವರಿಗೆ ಬೇಸರ. ತೆಂಗಿನಕಾಯಿ ಒಡೆಯಲು ಸ್ವಲ್ಪ ಬಲ ಪ್ರಯೋಗ ಮಾಡಬೇಕು. ಆಗ ಅದು ಈಸಿಯಾಗಿ ತೆರೆದುಕೊಳ್ಳುತ್ತದೆ. ಇನ್ನೂ ಅದರ ಚಿಪ್ಪು (Coconut Shell) ಮತ್ತು ತಿರುಳನ್ನು ಬೇರ್ಪಡಿಸಲು ನೀವು ಬಲ ಪ್ರಯೋಗ ಮಾಡಬೇಕು ಅಂತಿಲ್ಲ, ಸ್ವಲ್ಪ ಬುದ್ಧಿ ಉಪಯೋಗಿಸಿ ಕೆಲ ವಿಧಾನಗಳನ್ನು ಅನುಸರಿಸಿದರೆ, ಸುಲಭವಾಗಿ ಚಿಪ್ಪಿನಿಂದ ಕಾಯಿ ಬಿಟ್ಟುಕೊಳ್ಳುತ್ತದೆ. ಹೀಗಾಗಿ ತೆಂಗಿನ ಚಿಪ್ಪಿನಿಂದ ಕಾಯಿ ಹೊರ ತೆಗೆಯಲು ಇಲ್ಲಿ ನಾವು ಹೇಳಿರೋ ಈ ಟಿಪ್ಸ್‌ ಫಾಲೋ ಮಾಡಿ ಸಾಕು.

ಶೆಲ್‌ನಿಂದ ತೆಂಗಿನಕಾಯಿ ತಿರುಳನ್ನು ಸುಲಭವಾಗಿ ತೆಗೆಯುವ ವಿಧಾನಗಳು:

ತೆಂಗಿನಕಾಯಿಯನ್ನು ಒಡೆಯಿರಿ:

ಮೊದಲನೇಯದಾಗಿ ತೆಂಗಿನ ಕಾಯಿಯನ್ನು ಅದರ ಮಧ್ಯಭಾಗದಲ್ಲಿ ಸುತ್ತಿಗೆಯಂತಹ ವಸ್ತು ಬಳಸಿ ಸರಿಯಾಗಿ ಭಾಗ ಮಾಡಿಕೊಳ್ಳಿ. ಆಗ ಇದು ಎರಡು ಭಾಗವಾಗುತ್ತದೆ. ನಂತರ ಈ ಕಾಯಿಯ ತಿರುಳನ್ನು ನಯವಾದ ಚಾಕುಗಳನ್ನು ಬಳಸುವ ಮೂಲಕ ಚಿಪ್ಪಿನಿಂದ ಬೇರ್ಪಡಿಸಬಹುದು. ತದನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳುವ ಮೊದಲು ಸಣ್ಣ, ಸಣ್ಣ ಪೀಸ್‌ ಮಾಡಿಕೊಂಡು ಮಸಾಲೆ ಹಾಕಿ ಮಿಶ್ರಣ ಮಾಡಿ. ಆಗ ನಿಮಗೆ ಕಾಯಿ ನಯವಾಗಿ ರುಬ್ಬಿಕೊಳ್ಳುತ್ತದೆ.

ಒಲೆಯನ್ನು ಬಳಸಿ:

ಶೆಲ್‌ ತುಂಬಾ ಗಟ್ಟಿ ಇದ್ದು, ಇವೆರೆಡನ್ನು ಬೇರ್ಪಡಿಸಲು ಕಷ್ಟವಾಗ್ತಿದ್ದರೆ ಒಲೆಯನ್ನು ಬಳಸಿ. ಒಲೆಯ ಶಾಖವು ಶೆಲ್ ಅನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ತೆಂಗಿನ ತಿರುಳನ್ನು ತೆಗೆಯಲು ಸುಲಭವಾಗುತ್ತದೆ. ಇಲ್ಲಿ ತೆಂಗಿನಕಾಯಿ ಕಣ್ಣುಗಳಲ್ಲಿ ರಂಧ್ರ ಮಾಡಿ, ನೀರನ್ನು ಹೊರ ತೆಗೆಯಿರಿ. ನಂತರ ತೆಂಗಿನಕಾಯಿಯನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ. ತೆಂಗಿನಕಾಯಿಯನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟಿರುವ ಒಲೆಯಲ್ಲಿ ಹಾಕಿ ಮತ್ತು ಸುಮಾರು 10-15 ನಿಮಿಷಗಳ ಕಾಲ ಅದನ್ನು ಬಿಸಿ ಮಾಡಿ.

ಹೀಗೆ ಮಾಡೋದರಿಂದ ಚಿಪ್ಪು ಮತ್ತು ಕಾಯಿ ಸುಲಭವಾಗಿ ಬೇರ್ಪಡುತ್ತದೆ. ತೆಂಗಿನಕಾಯಿ ತಣ್ಣಗಾದ ನಂತರ ಅದರ ಮೇಲೆ ಸುತ್ತಿಗೆಯಿಂದ ಸ್ವಲ್ಪ ಟ್ಯಾಪ್‌ ಮಾಡುವ ಮೂಲಕವೂ ನೀವು ಚಿಪ್ಪಿನಿಂದ ಸುಲಭವಾಗಿ ಕಾಯಿಯನ್ನು ತೆಗೆದುಕೊಳ್ಳಬಹುದು.

ತೆಂಗಿನಕಾಯಿಯನ್ನು ಫ್ರೀಜ್‌ ಮಾಡಿ:

ತೆಂಗಿನ ಕಾಯಿಯನ್ನು ಅದರ ಚಿಪ್ಪಿನಿಂದ ಬೇರ್ಪಡಿಸಲು ಇದೊಂದು ಸುಲಭ ವಿಧಾನ. ಕಾಯಿಯನ್ನು ಒಡೆದ ನಂತರ ಸ್ವಲ್ಪ ಹೊತ್ತು ಆ ಹೋಳುಗಳನ್ನು ಡೀಪ್‌ ಫ್ರೀಜರ್‌ನಲ್ಲಿಡಿ. ಈ ತಂಪಾದ ತಾಪಮಾನವು ತೆಂಗಿನ ತಿರುಳನ್ನು ಸ್ವಲ್ಪಮಟ್ಟಿಗೆ ಸಂಕುಚಿತಗೊಳಿಸುತ್ತದೆ ಮತ್ತು ಶೆಲ್‌ನಿಂದ ತಿರುಳನ್ನು ಹೊರ ತೆಗೆಯಲು ಸುಲಭ ಮಾಡುತ್ತದೆ ಈ ವಿಧಾನಗಳು ನಿಮಗೆ ಕಾಯಿ ತುರಿಯುವ ತಾಪತ್ರಯವನ್ನು ಕಮ್ಮಿ ಮಾಡಿ, ನಿಮ್ಮ ಕೆಲಸವನ್ನು ಸುಲಭ ಮಾಡುತ್ತದೆ.

Advertisement
Click to comment

Leave a Reply

Your email address will not be published. Required fields are marked *

BIG BOSS

ಮದುವೆಯ ಬಗ್ಗೆ ಕ್ಲೂ ನೀಡಿದ ಬಿಗ್ ಬಾಸ್ ಐಶ್ವರ್ಯ

Published

on

ಬೆಂಗಳೂರು: ಬಿಗ್ ಬಾಸ್ ಸೀಸನ್ 11 ರಲ್ಲಿ ತನ್ನ ಕ್ಯೂಟ್ ಎಕ್ಸ್‌ಪ್ರೇಶನ್ ಮೂಲಕ ಕನ್ನಡ ಜನಮನ ಗೆದ್ದಿದ್ದಲ್ಲದೆ ಕರ್ನಾಟಕದ ಮನೆಮಗಳು ಎಂದೆನಿಸಿಕೊಂಡಿದ್ದಾರೆ. ಬಿಗ್ ಮನೆಯಲ್ಲಿ ಇವರ ಆಟ ನಡೆ ನುಡಿ ಜೊತೆಗೆ ಇವರ ಡ್ರೆಸ್ಸಿಂಗ್ ಸೆನ್ಸ್ ಬಹಳಷ್ಟು ಗಮನ ಸೆಳೆದಿತ್ತು. ಬರೋಬ್ಬರಿ 91 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗಿದ್ದ ಐಶ್ವರ್ಯ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇದೀಗ ಐಶ್ವರ್ಯನಲ್ಲಿ ಪ್ರತಿಯೊಬ್ಬರೂ ನಿಮಗೆ ಮದುವೆ ಯಾವಾಗ? ಬಾಯ್‌ಫ್ರೆಂಡ್ ಇದ್ದಾರಾ? ಶಿಶಿರ್‌ನ ಲವ್ ಮಾಡ್ತಿದ್ದೀರಾ? ಶಿಶಿರ್‌ ಕಡೆಯಿಂದ ಪ್ರಪೋಸಲ್ ಬಂದರೆ ನೀವು ಒಪ್ಪಿಕೊಳ್ಳುತ್ತೀರಾ ? ಹೀಗೆ ಹಲವು ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಈಗ ಅದಕ್ಕೆಲ್ಲಾ ಸ್ವತಃ ಐಶ್ವರ್ಯ ಅವರೇ ಉತ್ತರ ನೀಡಿದ್ದಾರೆ.

ಮದುವೆ ಆಗುವ ಯೋಚನೆ ಸದ್ಯಕ್ಕೆ ಇಲ್ಲ. ಒಳ್ಳೆಯ ಗುಣ, ನಡತೆ, ನನ್ನನ್ನು ಅತಿಯಾಗಿ ಪ್ರೀತಿಸುವ, ಕಾಳಜಿ ವಹಿಸುವ, ಗೌರವಿಸುವ ಹುಡುಗ ನನಗೆ ಬೇಕು. ಈ ಎಲ್ಲಾ ನಡತೆಗಳು ಇರುವ ಹುಡುಗ ಸಿಕ್ಕರೆ ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ತರಹದ ಹುಡುಗ ಸಿಕ್ಕರೆ ಬೇಗನೇ ಅವನ ಹೆಸರನ್ನು ರಿವೀಲ್ ಮಾಡಲ್ಲ ಎಂದು ಹೇಳಿದ್ದಾರೆ.

ಇದೀಗ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆಯೇ ಹೊಸ ರಿಯಾಲಿಟಿ ಶೋನಲ್ಲಿ ಐಶ್ವರ್ಯ ಶಿಂಧೋಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗಂತೂ ಬಹಳ ಸಂತೋಷ ತಂದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಐಶ್ವರ್ಯ ಶಿಂಧೋಗಿ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಆಗಾಗ ತಮ್ಮ ವೃತ್ತಿ ಬದುಕಿನ ಬಗೆಗಿನ ಬಹಳಷ್ಟು ಅಪ್ ಡೇಟ್‌ಗಳನ್ನು ನೀಡುತ್ತಿರುತ್ತಾರೆ.

Continue Reading

LATEST NEWS

ಕುಂಭಮೇಳದಲ್ಲಿ ಕೇಸರಿ ಅಂಗಿ ತೊಟ್ಟು ಮಿಂಚಿದ ಮಿಸ್ ಇಂಡಿಯಾ; ಯಾರು ಗೊತ್ತಾ ಆ ಬ್ಯೂಟಿ ?

Published

on

ಮಂಗಳೂರು/ಪ್ರಯಾಗ್‌ರಾಜ್ : 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾಜಕಾರಣಿಗಳು ಮಾತ್ರವಲ್ಲದೆ, ವ್ಯಾಪಾರ, ಸಿನಿಮಾ ಮತ್ತು ಕ್ರೀಡಾ ಪ್ರಮುಖರು ಸಹ ಭಾಗವಹಿಸುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಾರು ಗೊತ್ತಾ?

ಮಹಾ ಕುಂಭಮೇಳದಲ್ಲಿ ಪ್ರಸಿದ್ಧ ನಟಿ, ಒಂದು ಕಾಲದ ಮಿಸ್ ಇಂಡಿಯಾ ಈಶಾ ಗುಪ್ತಾ ಕೇಸರಿ ಬಟ್ಟೆ ಧರಿಸಿ ಭಾಗವಹಿಸಿದ್ದಾರೆ. ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಸಂದರ್ಭದ ಫೋಟೋಗಳು ವೈರಲ್ ಆಗುತ್ತಿವೆ. ಆಕೆಯೇ ಸ್ವತಃ ಪ್ರಯಾಗ್‌ರಾಜ್ ಮಹಾ ಕುಂಭದಿಂದ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಆ ಫೋಟೋಗಳಲ್ಲಿ ಅವರು ಕೇಸರಿ ಬಣ್ಣದ ಸೀರೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಸ್ನಾನದ ನಂತರ ಗಂಗಾ ಮಾತೆಗೆ ಪ್ರಣಾಮಗಳನ್ನು ಅರ್ಪಿಸಿದ್ದು, ಕುಂಭಮೇಳದ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.

Continue Reading

LATEST NEWS

ಗೃಹಲಕ್ಷ್ಮೀಯರಿಗೆ ಗೂಡ್ ನ್ಯೂಸ್ !

Published

on

ಮಂಗಳೂರು/ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದೆ. ಆದರೆ ಎರಡ್ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಪಾವತಿಯಾಗಿಲ್ಲ. ಯಾಕೆ ತಡವಾಗುತ್ತಿರಬಹುದು ಎಂಬ ಕುರಿತು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಆದರೆ ಈಗ ಸಂತೋಷದ ಸುದ್ದಿ ಒಂದು ಸಿಕ್ಕಿದೆ.

ಕಳೆದ ಕೆಲವು ತಿಂಗಳುಗಳಿಂದ ಗೃಹಲಕ್ಷ್ಮೀ ಹಣ ಬರದೇ ಬೇಸರಗೊಂಡಿರುವ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಇಲ್ಲಿಯವರೆಗೆ ರಾಜ್ಯ ಕಾರ್ಯದರ್ಶಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣ ಪಾವತಿಯಾಗುತಿತ್ತು. ಆದರೆ ಇನ್ನು ಮುಂದೆ ರಾಜ್ಯ ಕಾರ್ಯದರ್ಶಿಯಿಂದ ತಾಲೂಕು ಪಂಚಾಯಿತಿಗೆ ಹಣ ಪಾವತಿ ಆಗಲಿದೆ. ತಾಲ್ಲೂಕು ಪಂಚಾಯಿತಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಇಲಾಖೆಯದ್ದೇ ಬಹಳಷ್ಟು ಜವಾಬ್ದಾರಿಯಿದೆ. ಈಗ ಗೃಹಲಕ್ಷ್ಮಿ ನಿಭಾಯಿಸುವುದು ಮತ್ತಷ್ಟು ಹೊರೆಯಾಗುತ್ತಿದೆ. ಈ ಹೊರೆ ತಪ್ಪಿಸಲು ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದೆಹಲಿ ಮತ ಏಣಿಕೆ ಆರಂಭ; ಗದ್ದುಗೆ ಏರುವವರು ಯಾರು?

ಈಗಾಗಲೇ ರಾಜ್ಯ ಸರ್ಕಾರ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಾವತಿ ಮಾಡಿಲ್ಲ. ಈಗ ಹಣ ಪಾವತಿಯ ಕಾರ್ಯವಿಧಾನದಲ್ಲೇ ಬದಲಾವಣೆ ಮಾಡಲು ಮುಂದಾಗಿದೆ. ಈ ವಿಚಾರದ ಬಗ್ಗೆ ಈಗ ಇಲಾಖೆ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಗ್ಯ ಸ್ಥಿತಿ ಸುಧಾರಣೆಯಾದ ಬಳಿಕ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.

ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಾಗಿದೆ ಎಂದು ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಗೃಹಲಕ್ಷ್ಮಿ ಕಂತು ಪಾವತಿಗೂ ಹಣದ ಕೊರತೆ ಉಂಟಾಗಿದೆ. ಹೀಗಾಗಿ 3 ಕಂತು ಪಾವತಿ ಮಾಡಿಲ್ಲ ಎಂದು ಎಂದು ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದಾರೆ..

ತಾಲೂಕು ಪಂಚಾಯಿತಿಯಿಂದ ಹಣ ಬಿಡುಗಡೆಯಾದರೆ ಇದು ಅಕ್ರಮಕ್ಕೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಿನಲ್ಲಿ ಈ ಸುದ್ದಿ ಗೃಹಲಕ್ಷ್ಮೀಯರಿಗೆ ಸಾಕಷ್ಟು ಖುಷಿ ತಂದು ಕೊಟ್ಟಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page