Connect with us

INTERNATIONAL

ಗಡಿ ಘರ್ಷಣೆ; 58 ಪಾಕ್‌ ಸೈನಿಕರು ಸಾ*ವು: ತಾಲಿಬಾನ್ ವಕ್ತಾರ ಹೇಳಿದ್ದೇನು?

Published

on

ನವದೆಹಲಿ: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ಭೀಕರ ಗಡಿ ಘರ್ಷಣೆಯಲ್ಲಿ ಪಾಕ್‌ನ 58 ಸೈನಿಕರನ್ನು ಹ*ತ್ಯೆ ಮಾಡಿದ್ದೇವೆ ಎಂದು ಅಫ್ಘಾನಿಸ್ತಾನ ಹೇಳಿದೆ.


ಕಾರ್ಯಾಚರಣೆ ವೇಳೆ 58 ಪಾಕ್ ಯೋಧರು ಮೃ*ತಪಟ್ಟಿದ್ದು. 30 ಮಂದಿ ಗಾಯಗೊಂಡಿದ್ದಾರೆ. ಪಾಕ್ ಸೈನಿಕರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, 20 ಪಾಕ್ ಭದ್ರತಾ ಶಿಬಿರಗಳನ್ನು ನಾಶಪಡಿಸಲಾಗಿದೆ ಎಂದು ಮುಜಾಹಿದ್ ತಿಳಿಸಿದ್ದಾರೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಪಾಕಿಸ್ಥಾನವು ಅಡಗಿರುವ ಪ್ರಮುಖ ಐಸಿಸ್ ಸದಸ್ಯರನ್ನು ತನ್ನ ನೆಲದಿಂದ ಹೊರಹಾಕಬೇಕು ಇಲ್ಲವೇ ಅವರನ್ನು ಇಸ್ಲಾಮಿಕ್ ಎಮಿರೇಟ್‌ಗೆ ಹಸ್ತಾಂತರಿಸಬೇಕು. ಐಸಿಸ್ ಗುಂಪು ಅಫ್ಘಾನಿಸ್ಥಾನ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಅಪಾಯಕಾರಿಯಾಗುತ್ತಿದೆ” ಎಂದು ಹೇಳಿದ್ದಾರೆ.

“ಕತಾರ್ ಮತ್ತು ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ ಅಫ್ಘಾನಿಸ್ಥಾನ-ಪಾಕಿಸ್ಥಾನ ಗಡಿಯಾದ ಡ್ಯುರಾಂಡ್ ಲೈನ್‌ನಲ್ಲಿ ರಾತ್ರಿಯಿಡೀ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ” ಎಂದು ಜಬಿಹುಲ್ಲಾ ಮುಜಾಹಿದ್ ಹೇಳಿಕೊಂಡಿದ್ದಾರೆ. ಇನ್ನೂ ಗಡಿ ಘರ್ಷಣೆಯಲ್ಲಿ ಕನಿಷ್ಠ 20 ತಾಲಿಬಾನ್ ಸೈನಿಕರು ಸಾ*ವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*ಪ್; ಮೂವರ ಬಂಧನ

ಅಫ್ಘಾನಿಸ್ತಾನದ ಸಾರ್ವಭೌಮತ್ವದ ಯಾವುದೇ ಉಲ್ಲಂಘನೆಗೆ ಉತ್ತರಿಸದೆ ಸುಮ್ಮನೆ ಇರುವುದಿಲ್ಲ. ಅಲ್ಲದೆ ಐಸಿಸ್ ಭಯೋತ್ಪಾದಕರಿಗೆ ಆಶ್ರಯ ನೀಡುವುದರ ವಿರುದ್ದ ಪಾಕಿಸ್ತಾನಕ್ಕೆ ತಾಲಿಬಾನ್ ಎಚ್ಚರಿಕೆಯನ್ನೂ ನೀಡಿದೆ.

INTERNATIONAL

VIDEO: ವೇಟರ್ ಮುಖಕ್ಕೆ ಬಿಸಿ ಕಾಫಿಯನ್ನು ಎರಚಿದ ಮಹಿಳೆ! ಕಾರಣ?

Published

on

ಏನೂ ತಪ್ಪೇ ಮಾಡದ ವೈಟರ್ ಮೇಲೆ ಮಹಿಳೆ ಬಿಸಿ ಬಿಸಿ ಕಾಫಿ ಎರಚಿರುವ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ಇಂದಿನ ದಿನಗಳಲ್ಲಿ ಮನುಷ್ಯನಲ್ಲಿ ಮಾನವೀಯತೆ ಅನ್ನೋದು ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಅಮೆರಿಕದಲ್ಲೊಂದು ಘಟನೆ ನಡೆದಿದ್ದು, ಇದರ ವೀಡಿಯೋವನ್ನು ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ಹಂಚಿಕೊಂಡಿದೆ.

ವೀಡಿಯೋದಲ್ಲೇನಿದೆ?
ಮಹಿಳೆ ಅಂಗಡಿಯ ವೈಟರ್‌ನೊಂದಿಗೆ ವಾಗ್ವಾಧ ನಡೆಸುತ್ತಿರುತ್ತಾಳೆ. ಸಿಬ್ಬಂದಿ ಆ ಮಹಿಳೆಯನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ಸಮಾಧಾನವಾಗದೇ ವಾದ ಮಾಡುವುದನ್ನ ವೀಡಿಯೋದಲ್ಲಿ ನೋಡಬಹುದು.

ಅಷ್ಟಕ್ಕೂ ಆಗಿದ್ದೇನು?
ಮಹಿಳೆ ತಾನೂ ಆರ್ಡರ್ ಮಾಡಿದ ಕಾಫಿ 1 ಗಂಟೆಯಾದರೂ ನೀಡಿಲ್ಲ ಎಂಬ ಕಾರಣಕ್ಕೆ ಮೆಕ್‌ಡೊನಾಲ್ಡ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿಯುತ್ತಾಳೆ. ವೈಟರ್‌ನ್ನು ಸುಳ್ಳುಗಾರ ಎಂದು ದೂಷಿಸುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಸಿಬ್ಬಂದಿ ನಿಮ್ಮ ಕಾಫಿ ಬಂದಿದೆ. ಇದಕ್ಕೆ ಶುಲ್ಕ ವಿಧಿಸಲಾಗಿದೆ. ನಿಮ್ಮ ಮರುಪಾವತಿಗೆ 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ ಹೋಗುತ್ತಾರೆ. ಇದಕ್ಕೆ ಕೋಪಗೊಂಡ ಆರೋಪಿ ಮಹಿಳೆ ಬಿಸಿ ಕಾಫಿಯನ್ನು ಸಿಬ್ಬಂದಿ ಮೈಮೇಲೆ ಎರಚಿದ್ದಾಳೆ.

ಘಟನೆಯ ಕುರಿತು ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿ ಮಹಿಳೆಯ ನಡವಳಿಕೆಯ ವಿರುದ್ದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Continue Reading

INTERNATIONAL

ವಿಶ್ವದ ಅತ್ಯಂತ ದುಬಾರಿ ಟಾಯ್ಲೆಟ್ “ಅಮೆರಿಕ” ಹರಾಜು! ಇದರ ಬೆಲೆ ಎಷ್ಟು ಗೊತ್ತಾ?

Published

on

ವಾಷಿಂಗ್ಟನ್: ವಿಶ್ವದ ಅತ್ಯಂತ ಬೆಲೆಬಾಳುವ ಹಾಗೂ ದುಬಾರಿ ಮೌಲ್ಯದ ಶೌಚಾಲಯ ಶೀಘ್ರದಲ್ಲಿಯೇ ಹರಾಜು ಪ್ರಕ್ರಿಯೆಗೆ ಬರಲಿದೆ ಎಂದು ವರದಿಯಾಗಿದೆ.

ಹೌದು, ಇಟಲಿಯ ಕಲಾವಿದ ಮೊರಿಜಿಯೊ ಕ್ಯಾಟಲನ್ ಸಿದ್ದಪಡಿಸಿರುವ “ಅಮೆರಿಕ” ಹೆಸರಿನ ದುಬಾರಿ ಟಾಯ್ಲೆಟ್ ಅನ್ನು ಅಮೆರಿಕದ ಸೋಥಬೀಸ್ ಸಂಸ್ಥೆಯು ಹರಾಜಿಗೆ ಇರಿಸಲಿದೆ.

ಮೌರಿಜಿಯೊ ಕ್ಯಾಟೆಲನ್ ವಿನ್ಯಾಸಗೊಳಿಸಿರುವ ಎರಡನೇ ಚಿನ್ನದ ಶೌಚಾಲಯ ಇದಾಗಿದೆ. ಚಿನ್ನದ ಕಮೋಡ್ ಅನ್ನು ಸುಮಾರು 101.2 ಕೆಜಿಯಷ್ಟು ತೂಕವಿದ್ದು, 18 ಕ್ಯಾರೆಟ್ ಗಟ್ಟಿ ಚಿನ್ನದಿಂದ ರೂಪಿಸಲಾಗಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್!

ಇದು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಟಾಯ್ಲೆಟ್ ಆಗಿದೆ. ಅಸಲಿಗೆ ಇದರ ಬೆಲೆ ಸುಮಾರು 10 ಮಿಲಿಯನ್ ಡಾಲರ್ (ಅಂದರೆ ಸುಮಾರು 83 ಕೋಟಿ ರೂ.) ಎಂದು ಹೇಳಲಾಗಿದೆ. ಇದೇ ನವೆಂಬರ್ ತಿಂಗಳ 18ರಂದು ನ್ಯೂಯಾರ್ಕ್‌ ಸೋಥೆಬಿಸ್ ಸಂಸ್ಥೆಯು ಈ ಹರಾಜನ್ನು ನಡೆಸಲಿದೆ. ಇದಕ್ಕೆ ಸುಮಾರು 88 ಕೋಟಿ ಆರಂಭಿಕ ಬೆಲೆ ನಿಗದಿ ಮಾಡಿದೆ.

Continue Reading

INTERNATIONAL

ಅಮೆರಿಕ-ಚೀನಾ ದ್ವೀಪಕ್ಷೀಯ ಮಾತುಕತೆ; ಟ್ಯಾರಿಫ್‌ ಬಗ್ಗೆ ವರಸೆ ಬದಲಿಸಿದ ಡೊನಾಲ್ಡ್ ಟ್ರಂಪ್!

Published

on

ನವದೆಹಲಿ: ಚೀನಾದಿಂದ ಅಮೆರಿಕಾಗೆ ರಫ್ತಾಗುವ ಎಲ್ಲ ವಸ್ತುಗಳ ಮೇಲೆ 100ರಷ್ಟು ಸುಂಕ ಹೇರಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮ ವರಸೆ ಬದಲಿಸಿದ್ದಾರೆ.


ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಮೇಲಿನ ಆಮದು ಸುಂಕವನ್ನು ಶೇ. 10ರಷ್ಟು ಕಡಿಮೆಗೊಳಿಸಿದ್ದೇವೆ ಎಂದಿದ್ದಾರೆ.

ಆರು ವರ್ಷಗಳ ನಂತರ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನ ಭೇಟಿಯಾಗಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ. ಎರಡು ದೇಶಗಳ ನಡುವೆ ಅಪರೂಪದ ಭೂಮಿಯ ನಿಕ್ಷೇಪಗಳ ಪೂರೈಕೆಗೆ ಒಪ್ಪಂದವಾಗಿದೆ.

ಚೀನಾ ಅಧ್ಯಕ್ಷರ ಭೇಟಿಯನ್ನು ಅದ್ಬುತ ಎಂದು ಹೊಗಳಿದ ಡೊನಾಲ್ಡ್‌ ಟ್ರಂಪ್, ತಮ್ಮಿಬ್ಬರ ದೇಶಗಳ ಮಧ್ಯೆ ವ್ಯಾಪಾರ ಮತ್ತು ಸಹಕಾರ ಕ್ಷೇತ್ರದಲ್ಲಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಷ್ಯಾದಿಂದ ಕಚ್ಚಾತೈಲ ಪೂರೈಕೆ ನಡುವೆ ಚೀನಾದಿಂದ ಆಮದು ಮಾಡುವ ಸರಕುಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು 57% ನಿಂದ 47%ಗೆ ಕಡಿಮೆ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಇದನ್ನೂ ಓದಿ: 17 ವರ್ಷಗಳ ನಂತರ ಪೊಡವಿಗೊಡೆಯನ ಸನ್ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ!

ಎಲ್ಲಾ ಅಪರೂಪದ ಭೂಮಿಯ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ. ಇನ್ನು ಮುಂದೆ ಚೀನಾದ ರಫ್ತುಗಳನ್ನು ಅಮೆರಿಕಕ್ಕೆ ಸಾಗಿಸಲು ಯಾವುದೇ ಅಡೆತಡೆಗಳು ಇರುವುದಿಲ್ಲ ಎಂದು ಟ್ರಂಪ್ ಹೇಳಿದರು.

ಚೀನಾ ಅಪರೂಪದ ಭೂಮಿಯ ರಫ್ತುಗಳನ್ನು ಒಂದು ವರ್ಷದ ಅವಧಿಗೆ ಮುಂದುವರಿಸಲು ಒಪ್ಪಿಕೊಂಡಿದೆ. ಈ ಒಪ್ಪಂದವನ್ನು ಎರಡೂ ಕಡೆಯವರು ವಿಸ್ತರಿಸಲು ನಿರೀಕ್ಷಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ಕೆಲ ತಿಂಗಳುಗಳಿಂದ ಅಮೆರಿಕದ ತಂತ್ರಜ್ಞಾನ ಮತ್ತು ರಕ್ಷಣಾ ಸಂಸ್ಥೆಗಳನ್ನು ಕಾಡುತ್ತಿದ್ದ ಪೂರೈಕೆ ಸರಪಳಿ ಕಳವಳಗಳನ್ನು ಈ ಒಪ್ಪಂದವು ಕಡಿಮೆ ಮಾಡಬಹುದು ಎನ್ನಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page