Connect with us

FILM

ದುನಿಯಾ ವಿಜಯ್ ಡಿವೋರ್ಸ್ ಅರ್ಜಿ ವಜಾ..!

Published

on

ಬೆಂಗಳೂರು/ಮಂಗಳೂರು: ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಹಾಗೂ ನಾಗರತ್ನಿ ದಂಪತಿ ಮಧ್ಯೆ ಬಿರುಕು ಕಂಡಿದ್ದು, ವರ್ಷಗಳ ಹಿಂದೆಯೇ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. 2018ರಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು ಇದೀಗ ಫ್ಯಾಮಿಲಿ ಕೋರ್ಟ್ ಅರ್ಜಿ ವಜಾಗೊಂಡಿದೆ.

ನಟ ದುನಿಯಾ ವಿಜಯ್‌ಗೆ ನಾಗರತ್ನರವರೊಂದಿಗೆ ಬಾಳ್ವೆ ಮಾಡಲು ಇಷ್ಟವಿಲ್ಲದೇ ಇದ್ದು ವಿಚ್ಚೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಾಗರತ್ನ ಮಾತ್ರ ನನಗೆ ಗಂಡ ಬೇಕು ಎಂದು ಪಟ್ಟು ಹಿಡಿದ್ದಿದ್ದರು.  ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಹಲವು ವರ್ಷಗಳ ಹಿಂದೆಯೇ ಬಿರುಕು ಮೂಡಿತ್ತು. ಹಾಗಾಗಿ 2018ರಲ್ಲಿ ವಿಜಯ್ ಅವರು ಡಿವೋರ್ಸ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದ್ದರು. ಅಲ್ಲದೇ ಪತ್ನಿಗೆ ಜೀವನಾಂಶವನ್ನು ನೀಡುವುದಾಗಿಯೂ ಹೇಳಿದ್ದರು. ಆದರೆ ಪತ್ನಿ ನಾಗರತ್ನಿ ಪತಿಯನ್ನು ಬಿಡಲು ಸಿದ್ಧರಿರಲಿಲ್ಲ. ಹಾಗಾಗಿ ಪ್ರಕರಣ ಮುಂದೂಡುತ್ತಾ ಬಂದಿದೆ.

Read More..; ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ನಿರ್ಮಾಪಕರಿಂದ ಹಗರಣ..! ನೋಟೀಸ್ ಜಾರಿ..!!

ಜೂ.13ರಂದು ದುನಿಯಾ ವಿಜಯ್​ ಮತ್ತು ನಾಗರತ್ನ ಅವರು ವಿಚ್ಛೇನದ ಅಂತಿಮ ತೀರ್ಪು ಹೊರಬರಲಿದೆ ಎಂಬ ಕಾರಣಕ್ಕೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಕೌಟುಂಬಿಕ ನ್ಯಾಯಾಲಯವು ವಿಜಯ್​ಗೆ ವಿಚ್ಛೇನದ ನೀಡಿಲ್ಲ. ನಟನಾಗಿ, ನಿರ್ದೇಶಕನಾಗಿ ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಟಾಲಿವುಡ್​ನಲ್ಲೂ ಅವರಿಗೆ ಬೇಡಿಕೆ ಇದೆ.

Advertisement
Click to comment

Leave a Reply

Your email address will not be published. Required fields are marked *

FILM

ದಿ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ; ಚಾಲೆಂಜ್ ಹಾಕಿದ ದಾಸ

Published

on

ಮಂಗಳೂರು/ಬೆಂಗಳೂರು : ನಟ ದರ್ಶನ್ ಅವರಿಗೆ ಇಂದು (ಫೆ.16) ಜನ್ಮದಿನದ ಸಂಭ್ರಮ. ಆದರೆ ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡುತ್ತಿಲ್ಲ. ಅದಕ್ಕೆ ಅನಾರೋಗ್ಯ ಕಾರಣ. ಹಾಗಂತ ಅಭಿಮಾನಿಗಳ ವಲಯದಲ್ಲಿ ಸಡಗರ ಕಮ್ಮಿ ಆಗಿಲ್ಲ. ಆ ಸಂಭ್ರಮವನ್ನು ಜಾಸ್ತಿ ಮಾಡಲು ‘ದಿ ಡೆವಿಲ್’ ಸಿನಿಮಾದ ಟೀಸರ್​ ರಿಲೀಸ್ ಆಗಿದೆ.

ನಟ ದರ್ಶನ್ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದ ದರ್ಶನ್, ತಮ್ಮ ಫ್ಯಾನ್ಸ್‌ ಖುಷಿ ಪಡುವ ಡೆವಿಲ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ದರ್ಶನ್ ಅಭಿನಯದ ಡೆವಿಲ್ ಟೀಸರ್ ಬಿಡುಗಡೆಯಾಗಿದ್ದು ದಾಸನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಟೀಸರ್ ಮೂಲಕ ಆ ನಿರೀಕ್ಷೆಯನ್ನು ಡಬಲ್ ಮಾಡಲಾಗಿದೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಈ ಟೀಸರ್​ ವೈರಲ್ ಆಗುತ್ತಿದೆ.

ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ?

‘ದಿ ಡೆವಿಲ್’ ಸಿನಿಮಾದ ಟೀಸರ್​ನ ಅವಧಿ 1 ನಿಮಿಷ 4 ಸೆಕೆಂಡ್​ ಇದೆ. ಇಡೀ ಟೀಸರ್​ನಲ್ಲಿ ‘ಚಾಲೆಂಜ್’ ಎಂಬ ಪದ ಬಿಟ್ಟರೆ ಬೇರೆ ಯಾವುದೇ ಡೈಲಾಗ್ ಇಲ್ಲ. ಕೇವಲ ಆ್ಯಕ್ಷನ್ ಮೂಲಕವೇ ದರ್ಶನ್ ಅವರು ಅಬ್ಬರಿಸಿದ್ದಾರೆ. ಗನ್ ಹಿಡಿದು ಅವರು ಗತ್ತು ತೋರಿಸಿದ್ದಾರೆ. ಅವರ ಖದರ್ ನೋಡಿ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ದರ್ಶನ್ ಅವರ ಡೆವಿಲ್ ಸಿನಿಮಾ ನಿಜಕ್ಕೂ ಒಂದು ಚಾಲೆಂಜ್‌ ಆಗಿದ್ದು, ಮಾಸ್ ಲುಕ್‌ನಲ್ಲಿ ಚಾಲೆಂಜ್ ಒಪ್ಪಿಕೊಂಡು ಅಖಾಡಕ್ಕೆ ಧುಮುಕಿದ್ದಾರೆ. ಸದ್ಯಕ್ಕೆ ಡೆವಿಲ್ ಟೀಸರ್‌ನಲ್ಲಿ ದರ್ಶನ್ ಅವರ ಉಗ್ರರೂಪ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

 

Continue Reading

FILM

ಖ್ಯಾತ ನಟ ಯೋಗಿ ಬಾಬು ಕಾರು ಅಪ*ಘಾತ

Published

on

ಮಂಗಳೂರು/ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಅವರ ಕಾರು ಅಪಘಾ*ತಕ್ಕೀಡಾಗಿರುವ ಬಗ್ಗೆ ವರದಿಯಾಗಿದೆ. ಭಾನುವಾರ ಮುಂಜಾನೆ ವಾಲಾಜಪೇಟೆ ಟೋಲ್ ಪ್ಲಾಜಾ ಬಳಿ ನಟ ಯೋಗಿ ಬಾಬು ಅವರ ಕಾರು ಅಪಘಾ*ತ ಸಂಭವಿಸಿದೆ. ವಾಹನವು ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗೆ ಡಿ*ಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.


ನಟ ಯೋಗಿ ಬಾಬು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಾಲಾಜಪೇಟೆ ಟೋಲ್ ಬೂತ್ ಬಳಿ ತಲುಪುತ್ತಿದ್ದಂತೆ ಕಾರು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಮಧ್ಯದಲ್ಲಿರುವ ತಡೆಗೋಡೆಗೆ ಡಿ*ಕ್ಕಿ ಹೊಡೆದಿದೆ.

ಇದನ್ನೂ ಓದಿ : ನೀರಿನಲ್ಲಿ ಯೋಗಮಾಡುತ್ತಲೇ ಕೊನೆಯುಸಿರೆಳೆದ ಯೋಗಪಟು

ನಟ ಯೋಗಿ ಬಾಬು ಯಾವುದೇ ಗಾ*ಯಗಳಿಲ್ಲದೆ ಅಪಾ*ಯದಿಂದ ಪಾರಾಗಿದ್ದಾರೆ. ಬಳಿಕ ಮತ್ತೊಂದು ಕಾರನ್ನು ಸ್ಥಳಕ್ಕೆ ಕರೆಸಿ ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಮತ್ತು ನಾನು ಸುರಕ್ಷಿತವಾಗಿದ್ದೇನೆ ಎಂದು ಯೋಗಿ ಬಾಬು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

 

Continue Reading

BIG BOSS

ಇನ್ನೊಂದು ಹೊಸ ಕಾರು ಖರೀದಿಸಿದ ತುಕಾಲಿ ಸಂತೋಷ್..!

Published

on

ಬಿಗ್‌ ಬಾಸ್‌ ಖ್ಯಾತಿಯ ತುಕಾಲಿ ಸಂತೋಷ್‌ ಮತ್ತು ಮಾನಸ ಇದೀಗ ಮತ್ತೊಂದು ಕಾರನ್ನು ಖರೀದಿ ಮಾಡಿದ್ದಾರೆ. ಕಳೆದ ಬಾರೀ ಕಿಯಾ ಕಾರ್ ಅನ್ನು ಖರೀದಿಸಿದ್ದರು. ಬಳಿಕ ಅದು ಆಕ್ಸಿಡೆಂಟ್ ಆದ ಕಾರಣ ಇದೀಗ ಮತ್ತೊಂದು ಕಾರನ್ನು ಖರೀದಿಸಿದ್ದಾರೆ. ಕಾರು ತೆಗೆದುಕೊಳ್ಳುವ ಫೋಟೊವನ್ನು ನಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ತುಕಾಲಿ ಹಾಗೂ ಮಾನಸ ಬಿಗ್‌ಬಾಸ್ ಮನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಮೊದಲು ಕುಣಿಗಲ್ ಹೈವೆಯಲ್ಲಿ ತುಕಾಲಿ ಸಂತು ಹೊಸ ಕಾರ್ ಆಕ್ಸಿಡೆಂಟ್ ನಡೆದಿತ್ತು. ತುಕಾಲಿ ಸಂತೋಷ್ ಕಾರಿಗೆ ಆಟೋ ಚಾಲಕನೇ ಬಂದು ಗುದ್ದಿದ್ದಾನೆ ಎನ್ನಲಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಹಂಚಿದ ಫೋಟೋಗೆ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ. ಈ ಗಾಡಿಯನ್ನಾದರೂ ಪ್ರೀತಿಸಿ, ಆಕ್ಸಿಡೆಂಟ್‌ ಮಾಡಬೇಡಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ, ಅದಕ್ಕೆ ಮಾನಸಾ ಅವರು “ಆಕ್ಸಿಡೆಂಟ್‌ ಮಾಡೋಕೆ ಖುಷಿನಾ? ಎಲ್ಲ ನಮ್ಮ ಗ್ರಹಚಾರ” ಎಂದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page