Connect with us

ಸ್ಥಳೀಯರ ಆಕ್ರೋಶಕ್ಕೆ ಎಚ್ಚೆತ್ತುಕೊಂಡ ಮಂಗಳೂರು ನಗರ ಪಾಲಿಕೆ: ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿ

Published

on

ಸ್ಥಳೀಯರ ಆಕ್ರೋಶಕ್ಕೆ ಎಚ್ಚೆತ್ತುಕೊಂಡ ಮಂಗಳೂರು ನಗರ ಪಾಲಿಕೆ: ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿ

ಮಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿತ್ತು. ಅದರಲ್ಲೂ ಕೊರೊನಾ ಬಂದ ಬಳಿಕ ಯಾವುದೇ ಚರಂಡಿಗಳ ಹೂಳೆತ್ತುವ ಕೆಲಸಗಳು ನಡೆದಿರಲಿಲ್ಲ.

ನಗರದ ಬಹುತೇಕ ಚರಂಡಿ, ರಾಜಕಾಲುವೆಗಳು ಮುಚ್ಚಿ ಹೋಗಿದ್ದು, ಅದರ ಹೂಳು ತೆಗೆಯುವ ಕೆಲಸಗಳು ನಡೆಯಬೇಕಾಗಿತ್ತು.

ಇದೀಗ ಮಳೆಗಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೂಳು ಎತ್ತುವ ಕಾರ್ಯಾಚರಣೆ ನಡೆಸಲಾಗಿದೆ.

ಇಂದು (ಮೇ 26) ಜಪ್ಪಿನಮೊಗರು ಪ್ರದೇಶದಲ್ಲಿ, ಮಳೆಗಾಲದ ಕೃತಕ ನೆರೆಯ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ

ಸ್ಥಳೀಯ ನಿವಾಸಿಗಳ ಒತ್ತಾಯದ ಮೇರೆಗೆ ರಾಜಕಾಲುವೆಗಳ ಮೇಲೆ ಇರುವಂತಹ ಅತಿಕ್ರಮಿತ ರಸ್ತೆಗಳನ್ನು ತೆರವುಗೊಳಿಸಲಾಯಿತು.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜೆಪ್ಪು ಮಹಾಕಾಳಿ ಪಡ್ಪುವಿನ ಬಳಿ ಇರುವ ರಾಜ ಕಾಲುವೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಿದ ಪರಿಣಾಮ, ಇಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಸ್ಥಳೀಯರು ಸಮಸ್ಯೆಯನ್ನು ಎದುರಿಸುವಂತಾಗಿತ್ತು.

ಮಂಗಳೂರಿನ ಮೊರ್ಗನ್ ಗೇಟ್ ನಿಂದ ಕೆಳ ಭಾಗಕ್ಕೆ ಇಳಿದು ಬರುವ ಕೊಳೆಗೆ ನೀರು ರೈಲ್ವೇ ಅಂಡರ್ ಪಾಸ್ ನಲ್ಲಿ ಹರಿದು ಹೋಗಬೇಕಾಗಿರುವುದು ಸಹಜ ಪ್ರಕ್ರಿಯೆ.

ಆದರೆ ಇಲ್ಲಿ ರಾಜ ಕಾಲುವೆಯನ್ನು ರಸ್ತೆಯನ್ನಾಗಿ ಮಾಡಿದ್ದಾರೆ. ಯಾವುದೋ ತುರ್ತು ಕೆಲಸಕ್ಕೆ ರಸ್ತೆಯನ್ನು ಮಾಡಿದ್ದರು.

ಬಳಿಕ ತೆರವುಗೊಳಿಸುತ್ತೇವೆ ಎಂದು ಹೇಳಿದ್ದವರು ಇದೀಗ ಅದನ್ನು ತೆರೆಯುತ್ತಿಲ್ಲ. ಇದನ್ನು ಸರಿಪಡಿಸಲು ಯಾರು ಮುಂದಾಗುತ್ತಿಲ್ಲ.

ಈ ಬಗ್ಗೆ ಸ್ಥಳೀಯ ಶಾಸಕ ವೇದವ್ಯಾಸ್ ಅವರ ಗಮನಕ್ಕೂ ತಂದಿದ್ದೇವೆ. ಶಾಸಕರು ಸರಿಪಡಿಸುತ್ತಾರೆನ್ನುವ ಭರವಸೆ ಇದೆ.

ಎಂದು ಸ್ಥಳೀಯ ನಿವಾಸಿ ರಾಜರತ್ನ ಸನಿಲ್ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಸ್ಥಳೀಯರ ಒತ್ತಾಯದ ಮೇರೆಗೆ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದ್ದು, ಸ್ಥಳದಲ್ಲಿ ಮ.ನ.ಪಾ ಕಮಿಷನರ್ ಶಾನಡಿ ಅಜಿತ್ ಕುಮಾರ್ ಹೆಗ್ಡೆ,

ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್, ಸ್ಥಳೀಯ್ ಮ.ನ.ಪಾ ಸದಸ್ಯೆ ವೀಣಾ ಮಂಗಳ, ಅಧಿಕಾರಿಗಳ ತಂಡ ಹಾಗೂ ಸ್ಥಳೀಯರು ಹಾಜರಿದ್ದರು.

Advertisement
Click to comment

Leave a Reply

Your email address will not be published. Required fields are marked *

kerala

ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ

Published

on

ತಿರುವನಂತಪುರ: 2024ರಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ  ರುದ್ರಾಕ್ಷಿ ಮಾರುತ್ತ ತನ್ನ ಸುಂದರ ಕಣ್ಣುಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಬೋಂಸ್ಲೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮೊನಾಲಿಸಾ ತನ್ನ ಗೆಳೆಯನ ಜೊತೆ ಬಂದು ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ದೈಹಿಕ ಕಿರುಕುಳ ನಡೆದಿಲ್ಲ. ಪ್ರಾಥಮಿಕವಾಗಿ ಬಲವಂತದ ವಿವಾಹ ಪ್ರಸ್ತಾಪವಾಗಿದೆ. ಮೊನಾಲಿಸಾ ತಂದೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದುದರಿಂದ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ಆದ ಬಳಿಕ ಮೊನಾಲಿಸಾ ಅವರ ಬದುಕೇ ಬದಲಾಗಿದೆ. ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿದೆ. ಪ್ರಸ್ತುತ ಶೂಟಿಂಗ್ ಗಾಗಿ ತಿರುವನಂತಪುರಕ್ಕೆ ಬಂದಿದ್ದ ಮೊನಾಲಿಸಾ ಇದೀಗ ಗೆಳೆಯನ ಜೊತೆ ಬಮದು ದೂರನ್ನು ನೀಡಿದ್ದಾರೆ.

Continue Reading

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page