Connect with us

LATEST NEWS

ರಂಗಿನಾಟ ಪ್ರಕರಣ: ರತ್ನಾಕರ್ ಕಸ್ಟಡಿ ಇಂದಿಗೆ ಪೂರ್ಣ-10 ಮಂದಿಯ ವಿಚಾರಣೆ

Published

on

ಮಂಗಳೂರು: ಮಹಿಳಾ ಸಿಬ್ಬಂದಿಯೊಂದಿಗೆ ಹಾಡ ಹಗಲೇ ಪಲ್ಲಂಗದಾಟ ಆಡಿ ಸಿಕ್ಕಿ ಬಿದ್ದ ದ.ಕ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ರತ್ನಾಕರ್ ನನ್ನು ಪೊಲೀಸರು ಶನಿವಾರ ಕಸ್ಟಡಿಗೆ ಪಡೆದುಕೊಂಡಿದ್ದು,
ಎರಡು ದಿನಗಳ ಕಸ್ಟಡಿ ಅವಧಿ ಇಂದಿಗೆ ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರರು ಸೇರಿದಂತೆ 10 ಮಂದಿ ಮಹಿಳಾ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ರತ್ನಾಕರ್ ಮೊಬೈಕ್ ವಶಕ್ಕೆ ಪಡೆದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ಧಾರೆ.

DAKSHINA KANNADA

ಮಂಗಳೂರು: ಡ್ರಗ್ಸ್‌ ನಿರ್ಮೂಲನೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಬಸ್ಸು ಮಾಲಕರ ಸಂಘ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 110 ವರ್ಷಗಳ ಇತಿಹಾಸವನ್ನು ಹೊಂದಿರುವ ಅತ್ಯುತ್ತಮ ಸಾರಿಗೆ ಸೇವೆಯನ್ನು ನೀಡಿಕೊಂಡು ಬಂದಿರುವ ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ವತಿಯಿಂದ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಇದುವರೆಗೆ ಕೋಟಿಗಟ್ಟಲೆ ರೂಪಾಯಿಗಳ ರಿಯಾಯಿತಿ ದರದ ಬಸ್ಸು ಪಾಸುಗಳನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸ್‌ ಕಮಿಷನರ್‌ ಅವರ ಜೊತೆಗೆ ಜಿಲ್ಲಾ ಬಸ್ಸು ಮಾಲಕರ ಸಂಘವೂ ಕೈಜೋಡಿಸಿ ಡ್ರಗ್ ನಿರ್ಮೂಲನೆ ಮಾಡಲು ಬೀದಿ ನಾಟಕ ಪ್ರದರ್ಶನ ಮಾಡಲಿದ್ದೇವೆ ಎಂದು ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡ್ರಗ್ ಜಾಲಕ್ಕೆ ಕಡಿವಾಣ, ನಶೆಗೆ ಒಳಗಾಗುವ ವಿದ್ಯಾರ್ಥಿಗಳನ್ನು ಅದರಿಂದ ಹೊರತರುವ ಕೆಲಸ ಮಾಡುತ್ತಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು. ಅಲ್ಲದೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜೊತೆಗೆ ನಾವು ಕೈಜೋಡಿಸಿದ್ದೇವೆ. ಜನವರಿ 27ರ ಮಂಗಳವಾರ ರೋಶನಿ ನಿಲಯ ಕಾಲೇಜಿನ ಸಹಭಾಗಿತ್ವದೊಂದಿಗೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಹಲವು ಕಡೆ ಡ್ರಗ್‌ ವಿರೋಧಿ ಬೀದಿನಾಟಕ ಆಯೋಜನೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಮಂಗಳೂರು: ಹಂಚಿನ ಫ್ಯಾಕ್ಟರಿಯಲ್ಲಿ ಅ*ಗ್ನಿ ಅ*ವಘ*ಡ

ನಗರದ ಸೆಂಟ್ರಲ್‌ ಬಸ್ಸು ನಿಲ್ದಾಣ, ತೊಕ್ಕೊಟ್ಟು ಬಸ್ಸು ನಿಲ್ದಾಣ, ತಲಪಾಡಿ, ಉಳ್ಳಾಲ, ಲಾಲ್‌ಭಾಗ್‌ ಸೇರಿದಂತೆ ಹಲವು ಕಡೆಗಳ ಬಸ್ಸು ನಿಲ್ದಾಣಗಳಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಬಸ್ಸುಗಳಲ್ಲಿ ಸ್ಟಿಕ್ಕರ್‌ ಹಚ್ಚಿ ಜಾಗೃತಿ ಮೂಡಿಸಲಿದ್ದೇವೆ. ಇದಕ್ಕೆ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ ರಾಮಚಂದ್ರ ನಾಯ್ಕ , ರಾಮಚಂದ್ರ ಪಿಲಾರ್ ಹಾಗೂ ಜೊತೆ ಕಾರ್ಯದರ್ಶಿ ರಾಜೇಶ್ ಟಿ ಯವರು ಉಪಸ್ಥಿತರಿದ್ದರು.

Continue Reading

BIG BOSS

BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

Published

on

BBK12: ಟಾಪ್‌-06ನಲ್ಲಿ ಕಾವ್ಯಾ ಅವರು ಇರೋದಕ್ಕೆ ಅರ್ಹರಲ್ಲ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.


ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರ ಹೊಮ್ಮಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ ಕಾವ್ಯಾ ಶೈವ ಅವರ ಜೊತೆ ರಕ್ಷಿತಾ ಶೆಟ್ಟಿ ಅವರಿಗೆ ಅಷ್ಟೊಂದು ಒಡನಾಟವಿರಲಿಲ್ಲ.

ನಾಮಿನೇಶನ್‌ ವಿಚಾರದಲ್ಲೂ ಕಾವ್ಯಾ ಮತ್ತು ರಕ್ಷಿತಾ ಅವರಿಗೆ ಆಗ್ಗಾಗೇ ಜಗಳವಾಗುತ್ತಿತ್ತು. ಅಲ್ಲದೆ ಗಿಲ್ಲಿ ಕಾವ್ಯಾ ಫ್ರೆಂಡ್‌ಶಿಪ್ ಕುರಿತು ರಕ್ಷಿತಾ ಅವರಿಗೆ ಅಸಮಾಧಾನವಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ಕಾವ್ಯಾ ಅವರ ಜೊತೆ ಇರುವ ಮುನಿಸು ರಕ್ಷಿತಾ ಅವರಿಗೆ ಕಡಿಮೆಯಾಗಿಲ್ಲ ಎನ್ನಬಹುದು.

ಇದನ್ನೂ ಓದಿ: ರಕ್ಷಿತಾ ಕ್ಷಮಾಪಣೆ ಪತ್ರದ ಬಗ್ಗೆ ಧ್ರುವಂತ್ ಪೋಸ್ಟ್: ನಮ್ಮಿಬ್ಬರದ್ದು ಒಂದೇ ರಾಶಿ-ನಕ್ಷತ್ರ!

ಇದೀಗ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ಟಾಪ್‌ 6ನಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ, ಅವರ ಬದಲಿಗೆ ಜಾನ್ವಿ ಅವರು ಇರಬೇಕಿತ್ತು. ಮಾಲು ಅಣ್ಣ ಇರಬಹುದಿತ್ತು. ಮಾಲು ಅವರು ಮಾತನಾಡುವುದು ಕಡಿಮೆ. ಆದರೆ ಅವರದ್ದು ಒಳ್ಳೆಯ ವ್ಯಕ್ತಿತ್ವ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

Published

on

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026’ ಅಂತಾರಾಜ್ಯ ಪ್ರಶಸ್ತಿಯನ್ನು  ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆರಿಗೆ ಪ್ರದಾನ ಮಾಡಲಾಯಿತು.

ಕಾಸರಗೋಡು ನುಳ್ಳಿಪಾಡಿಯಲ್ಲಿ ನಡೆದ ಕನ್ನಡ ಭವನ ರಜತ ಸಂಭ್ರಮ – ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನುಅವರು  ಸ್ವೀಕರಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ  ಅಂಕಣಕಾರರಾಗಿ ಹಾಗೂ ಕ್ರೀಡಾ  ವಿಮರ್ಶಾತ್ಮಕ ಲೇಖನಗಳ  ಮೂಲಕ ಎಸ್. ಜಗದೀಶ್ಚಂದ್ರ ಅಂಚನ್ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ.ಕೆ.ವಾಮನ್ ರಾವ್, ನಿರ್ದೇಶಕ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕರ್ನಾಟಕ ಬ್ಯಾರಿ‌ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ , ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ , ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಸಾಹಿತಿ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು  ಮೊದಲಾದವರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page