Connect with us

DAKSHINA KANNADA

ಡಾ.ಎಂ.ಎನ್.ರಾಜೇಂದ್ರ ಕುಮಾರ್‌ ಅವರಿಗೆ “ಗ್ಲೋಬಲ್ ಅಚೀವರ್ಸ್” ಪ್ರಶಸ್ತಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಗಮ ಇದರ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾ‌ರ್ ಅವರು ಹೊಸದಿಲ್ಲಿಯ ಫ್ರೆಂಡ್‌ಶಿಪ್ ಫೋರಂ ನೀಡುವ ಪ್ರತಿಷ್ಠಿತ “ಗ್ಲೋಬಲ್ ಅಚೀವರ್ಸ್” ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ಡಾ| ರಾಜೇಂದ್ರ ಕುಮಾರ್ ಅವರ ಸಹಕಾರ, ಸಮಾಜಸೇವೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಸಂಸ್ಥೆ ಅವರನ್ನು ಆಯ್ಕೆ ಮಾಡಿದೆ. ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ 31 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಬ್ಯಾಂಕನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ್ದಾರೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಶಕ್ತಿಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ, ಆರ್ಥಿಕ ಚೈತನ್ಯವನ್ನು ತುಂಬಿದ್ದಾರೆ.

ರಾಜೇಂದ್ರ ಕುಮಾರ್ ಅವರ ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ರಾಜ್ಯದ ಮೊದಲ ಸಹಕಾರಿ ನಾಯಕ ಇವರು.

READ IN ENGLISH : https://www.nammakudlaenglish.com/dr-m-n-rajendra-kumar-honored-with-global-achievers-award/

ಇದನ್ನೂ ಓದಿ: ಡಾ।ಎಂ.ಎನ್‌.ರಾಜೇಂದ್ರ ಕುಮಾರ್ ಹುಟ್ಟುಹಬ್ಬ..! 76 ತುಂಬಿದ ಹಿನ್ನೆಲೆಯಲ್ಲಿ 76 ಜನರಿಗೆ ಸವಲತ್ತು ವಿತರಣೆ..!

ಕರ್ನಾಟಕ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ, ಸಹಕಾರ ವಿಶ್ವ ಬಂಧುಶ್ರೀ, ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ, ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ, ಬೆಸ್ಟ್ ಚೇರ್ಮನ್ ನ್ಯಾಷನಲ್ ಅವಾರ್ಡ್, ನ್ಯಾಷನಲ್ ಎಕ್ಸಲೆನ್ಸ್‌ ಅವಾರ್ಡ್, ಔಟ್ ಸ್ಟ್ಯಾಂಡಿಂಗ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್ ಸಹಿತ ಹಲವು ಪ್ರಶಸ್ತಿಗಳು ದಕ್ಕಿವೆ.

DAKSHINA KANNADA

‘ಎಲ್ಲಾ ಆದ ಮೇಲೆ ಶಾಂತಿಸಭೆ’: ಸಂಸದ ಕೋಟ

Published

on

ಉಡುಪಿ: ಚರ್ಚೆ, ವಾದ-ವಿವಾದ, ಪ್ರಕರಣಗಳು ಆದ ಬಳಿಕ ಶಾಂತಿ ಸಭೆ ಇಷ್ಟು ದಿನಗಳ ನಂತರವಾ.. ಎಂಬ ಚರ್ಚೆ ಸಮಾಜದಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇವತ್ತು ಎಲ್ಲಾ ಶಾಂತಿ ಸಭೆಗಳು, ಪೊಲೀಸ್ ಕ್ರಮಗಳು ಹಾಗೂ ಪೊಲೀಸ್ ಫೋರ್ಸ್‌ಗಳು ಎಲ್ಲವೂ ಕೂಡ ಈ ಸಮಾಜದ ಮುಖ್ಯ ವಾಹಿನಿಯಿಂದ ಬದುಕುತ್ತಿರುವಂತಹ ಹಿಂದೂಗಳ ಮೇಲೆ ಗಧಾ-ಪ್ರಹಾರ ಮಾಡಲು ರೂಪಿಸಿದ್ದಾರೆಯೇ ಎಂಬ ಭಾವನೆ ಮೂಡುತ್ತಿದೆ. ಇಂದು ಯಾವ ರೀತಿಯ ವಾತಾವರಣ ಇದೆ ಎಂದರೆ ಯಾರೇ ಒಬ್ಬ ಕಾರ್ಯಕರ್ತ ಅದು ಬಿಜೆಪಿ ಕಾರ್ಯಕರ್ತನೋ, ಹಿಂದೂತ್ವದ ಬಗ್ಗೆ ಮಾತನಾಡುವ ಸಾಮಾನ್ಯ ಕಾರ್ಯಕರ್ತ ಆಗಿರಬಹುದು, ಅವನ ಬದುಕಿನ ಹಕ್ಕನ್ನೇ ಮೊಟಕುಗೊಳಿಸುವಂತಹ ಪ್ರಯತ್ನಗಳು, ರೌಡಿಶೀಟರ್ ಹಾಕುವಂತಹ ಕೆಲಸಗಳು ನಡೆಯುತ್ತಿವೆ. ಪರಮೇಶ್ವರ್ ಅವರು ತಿಳುವಳಿಕೆ ಇರುವಂತಹ ಮಂತ್ರಿ. ಒಂದು ಸಮಾಜವನ್ನು ಒಡೆಯುವ, ಸಮಾಜದ ಮೇಲೆ ಗಧಾಪ್ರಹಾರ ಮಾಡುವ, ಸಮಾಜದ ಮೇಲೆ ದೌರ್ಜನ್ಯ ಮಾಡುವ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

WATCH VIDEO

Continue Reading

DAKSHINA KANNADA

ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡ್ಲ್‌ ಈಸ್ಟ್- 2025; ತುಳುನಾಡಿನ ಮಹಿಳೆಯರಿಗಾಗಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ

Published

on

ಉಡುಪಿ: ಘೋಷನ್ ಇವೆಂಟ್ಸ್ ಮೀಡಿಯಾ ಮತ್ತು ಪ್ರಿಯಾ ಫ್ಯಾಶನ್ ದುಬೈ ಇದರ ಆಶ್ರಯದಲ್ಲಿ ತುಂಬೆ ಮೆಡಿ ಸಿಟಿ ಅಜ್ಮನ್ ಇದರ ಸಹಯೋಗದಲ್ಲಿ “ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025” ಅಂತಾರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾಗಿದೆ.


ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಘೋಷನ್ ಇವೆಂಟ್ಸ್ ಮೀಡಿಯಾದ ದೆಚಮ್ಮ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ತುಳುನಾಡಿನ ಮಹಿಳೆಯರಿಗೆ ವೇದಿಕೆ‌ ಒದಗಿಸುವ ನಿಟ್ಟಿನಲ್ಲಿ ಈ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. “ಮಿಸ್ ಮಂಗಳೂರು ದಿವಾ” ಸ್ಪರ್ಧೆಯಲ್ಲಿ 18ರಿಂದ 35ವರ್ಷದೊಳಗಿನ ಅವಿವಾಹಿತ ಮಹಿಳೆಯರು ಭಾಗವಹಿಸ ಬಹುದು. ಮಿಸಸ್ ಮಂಗಳೂರು ದಿವಾ ಸ್ಪರ್ಧೆಯಲ್ಲಿ ಎಲ್ಲ ವಯೋಮಿತಿಯ ವಿವಾಹಿತ ಮಹಿಳೆಯರು ಪಾಲ್ಗೊಳ್ಳಬಹುದು ಎಂದರು. ಆಗಸ್ಟ್ ಅಂತ್ಯಕ್ಕೆ ನೋಂದಣಿ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಆ ಬಳಿಕ ಮಂಗಳೂರಿನಲ್ಲಿ ಅಡಿಷನ್ ನಡೆಯಲಿದ್ದು, ಅಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ನವೆಂಬರ್ ತಿಂಗಳು ದುಬೈನಲ್ಲಿ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಫೈನಲ್ ಗೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ವಿಸಾ, ವಿಮಾನ ಟಿಕೆಟ್, ಮೂರು ದಿನಗಳ ವಾಸ್ತವ್ಯವನ್ನು ಒದಗಿಸಲಾಗುವುದು. ಅಲ್ಲದೆ, ಊಟ, ಪ್ರಯಾಣ, ಫೋಟೋ ಶೂಟ್‌, ರ್ಯಾಂಪ್ ವಾಕ್ ತರಬೇತಿ, ಮೇಕಪ್ ಹಾಗೂ ಕಾಸ್ಟ್ಯೂಮ್ ಅನ್ನು ಉಚಿತವಾಗಿ ಆಯೋಜಕರು ಒದಗಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ತಲೆ ಸಿಮಿಯಾ ರೋಗಿಗಳಿಗೆ ನ್ಯೂಟ್ರಿಶಿಯನ್‌ ಬಾರ್‌ ಕೊಡುಗೆ ನೀಡಿದ ಎಂಆರ್‌ಪಿಎಲ್‌

ಘೋಷನ್ ಇವೆಂಟ್ಸ್ ಮೀಡಿಯಾದ ಸಬಿತಾ ಕರ್ಲೋ ಮಾತನಾಡಿ, ಫೈನಲ್ ನಲ್ಲಿ ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಸುತ್ತಿನಲ್ಲಿ ಸಾಂಪ್ರದಾಯಿಕ ವಸ್ತ್ರ ಧರಿಸಿ ಪ್ರದರ್ಶನ ನೀಡಬೇಕು. ಎರಡನೇ ಸುತ್ತಿನಲ್ಲಿ ಫಿಜನ್ ಹಾಗೂ ಮೂರನೇ ಸುತ್ತಿನಲ್ಲಿ ಗೌನ್ ಧರಿಸಿ ವಾಕ್ ಮಾಡಬೇಕು. ಮೂರನೇ ಸುತ್ತಿನ ಬಳಿಕ ಪ್ರಶ್ನಾವಳಿ ಸುತ್ತು ನಡೆಯಲಿದೆ. ಟಾಪ್ ಮೂವರು ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಫ್ಯಾಶನ್ ಮಾಲಕಿ ಪ್ರಿಯಾ ಫೆರ್ನಾಂಡಿಸ್, ಮಿಸ್ಟರ್ ಯುಎಇ ವಿನ್ನರ್ ಗೌತಮ್ ಬಂಗೇರ, ವಿಷ್ಣುವರ್ಧನ್ ಭಟ್ ಇದ್ದರು.

Continue Reading

DAKSHINA KANNADA

ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Published

on

ಮಂಗಳೂರು: ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ದ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.


ಈ ಸಭೆಯನ್ನು ನಾವು ಯಾವುದೇ ದುರುದ್ದೇಶದಿಂದ ಕರೆದಿಲ್ಲ ಅಥವಾ ‌ದ.ಕ ಜಿಲ್ಲೆಗೆ ಯಾವುದೇ ಲೇಬಲ್ ಹಚ್ಚಲು ನಾವು ಕರೆದಿಲ್ಲ. ಇತಿಹಾಸ ನೋಡಿದ್ರೆ ಇಡೀ ರಾಜ್ಯದಲ್ಲಿ ದ.ಕ ಜಿಲ್ಲೆಯಂಥ ಜಿಲ್ಲೆ ಮತ್ತೊಂದಿಲ್ಲ. ನೀವು ಬುದ್ದಿವಂತರು ಮಾತ್ರವಲ್ಲ, ಬಹಳಷ್ಟು ಕ್ರಿಯಾಶೀಲರು, ಪ್ರಪಂಚದ ಯಾವುದೇ ಮೂಲೆಯಲ್ಲಿ ಬದುಕಬಹುದಾದ ಚಾಕಚಕ್ಯತೆ ಉಳ್ಳವರು. ಇಡೀ ದೇಶದ ಶಿಕ್ಷಣ ವ್ಯವಸ್ಥೆನ್ನ ನಿಯಂತ್ರಣ ಮಾಡೋರು ನೀವು, ಎಂದು ಮಂಗಳೂರು ಶಾಂತಿ ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರಾವಳಿಯನ್ನು ಹಾಡಿ ಹೊಗಳಿದ್ದಾರೆ.

ಲಕ್ಷಾಂತರ ಜನರು ವಿದ್ಯಾರ್ಥಿಗಳು ಇಲ್ಲಿ ಕಲಿತು ಹೋಗಿ ಜೀವನ ಕಟ್ಟುಕೊಂಡಿದ್ದಾರೆ. ದೇಶದ ಮೊದಲ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ಕೊಡುಗೆ ಕೊಟ್ಟ ಜಿಲ್ಲೆ ದ.ಕ. ಸುಮಾರು‌ 38 ಜನರು ಇಂದು ತಮ್ಮ ಅಭಿಪ್ರಾಯ ಹೇಳಿದ್ದೀರಿ. ಬಹಳಷ್ಟು ಜನರು ಒಳ್ಳೆಯ ಸಲಹೆ ಕೊಟ್ಟಿದ್ದೀರಿ, ಸರ್ಕಾರದ ಜವಾಬ್ದಾರಿ ತಿಳಿಸಿದ್ದೀರಿ. ಹರೀಶ್ ಪೂಂಜಾ, ಭರತ್ ಶೆಟ್ಟಿ, ಕಾಮತ್ ಸತ್ಯ ಹೇಳಿದ್ದೀರಿ ಇದೊಂದು ಸೈದ್ದಾಂತಿಕ ಜಗಳ ಅಂತ ನಿಜವಾದ ಸತ್ಯ ಹೇಳಿದ್ದೀರಿ, ಆದರೆ ನಮ್ಮ‌‌ ಮಕ್ಕಳು ಇಂಥ ಭಯದಲ್ಲೇ ಬದುಕಬೇಕಾ? ನಾನು ನೆಹರೂ ಮೈದಾನಕ್ಕೆ ಚಿಕ್ಕಂದಿನಲ್ಲಿ ಅಥ್ಲೀಟ್ ಆಗಿ ಬಂದಿದ್ದೆ, ಆಗ ಯಾರೂ ಇಲ್ಲಿ ಹಿಂದೂ ಮುಸ್ಲಿಂ ಅಂದಿದ್ದನ್ನ ನಾನು ನೋಡಿಲ್ಲ. ಹಾಗಾಗಿ ಇತಿಹಾಸ ಸ್ಮರಿಸಿಕೊಳ್ಳಿ, ದ.ಕ ಜಿಲ್ಲೆಯ ಅವಶ್ಯಕತೆ ಇದೆ. ನಾವು ನಿಮ್ಮ ಸಲಹೆಗಳನ್ನು ತೆಗೆದುಕೊಂಡು ಚರ್ಚೆ ಮಾಡಬೇಕಿದೆ. ಆ ಬಳಿಕ ಏನೆಲ್ಲಾ ಕ್ರಮ ವಹಿಸಬೇಕೋ ಅದನ್ನ ವಹಿಸ್ತೇನೆ. ಮುಖ್ಯಮಂತ್ರಿಗಳು ಸದನದಲ್ಲೇ ಡ್ರಗ್ಸ್ ವಿರುದ್ದ ಯುದ್ದ ಸಾರಿದ್ದಾರೆ. ನಾವು ಯಾವುದೇ ಕಾರಣಕ್ಕೂ ಮತ್ತೊಂದು ಉಡ್ತಾ ಪಂಜಾಬ್ ಆಗಲು ಬಿಡಲ್ಲ. ಮಂಗಳೂರು ಕಮಿಷನರ್, ಎಸ್ಪಿಗೂ ಅದನ್ನ ಖಡಕ್ ಆಗಿ ಹೇಳಿದ್ದೇನೆ.

ಇದನ್ನೂ ಓದಿ: ಸುಳ್ಯ: ಘನತ್ಯಾಜ್ಯ ಘಟಕಕ್ಕೆ ಬೆಂಕಿ; ನಾಲ್ಕು ಲಕ್ಷ ಮೌಲ್ಯದ ಯಂತ್ರ ಹಾನಿ

ಬಹಳ ಸಾಂಸ್ಕೃತಿಕವಾಗಿ ಐಶ್ವರ್ಯವಂತ ಜಿಲ್ಲೆ ದ.ಕ ಜಿಲ್ಲೆಯಲ್ಲಿ ಸೌಹಾರ್ದ ಸಮಾವೇಶ ಮಾಡುವ ಬಗ್ಗೆಯೂ ಚಿಂತನೆ ಇದ್ದು, ಶಾಂತಿಯ ವಾತಾವರಣ ಕರಾವಳಿ ಪ್ರದೇಶದಲ್ಲಿ ಬರಬೇಕು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬಾರದು. ಪೊಲೀಸರು ಇನ್ನೂ ಕಠಿಣವಾಗಿ ಹೋಗಲು ಅವಕಾಶ ಕೊಡಬೇಡಿ. ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ. ಮುಂದಿನ ಅಧಿವೇಶನದಲ್ಲಿ ಹೊಸ ಕಾನೂನು ಮಂಡನೆ ಮಾಡ್ತೇವೆ ಎಂದು ಪರಮೇಸ್ವರ್ ಇದೇ ಸಂಧರ್ಭ ತಿಳಿಸಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page