Connect with us

DAKSHINA KANNADA

ಮಾಸ್ಕ್ ಹಾಕದೇ ರಂಪಾಟ ನಡೆಸಿದ ಮಂಗಳೂರಿನ ಖ್ಯಾತ ವೈದ್ಯ ಡಾ.ಕಕ್ಕಿಲ್ಲಾಯ..! ಪ್ರಕರಣ ದಾಖಲು..

Published

on

ಮಂಗಳೂರು: ಕೊರೊನಾ 2 ನೇ ಅಲೆಗೆ ಇಡೀ ದೇಶ ಕಂಗಾಲಾಗಿದೆ.  ಕರಾವಳಿ ಜಿಲ್ಲೆ ದಕ್ಷಿಣ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಕೇಸ್‌ ಗಳು ಜಾಸ್ತಿಯಾಗುತ್ತಿದ್ದು,  ಆನೇಕ ಸಾವು- ನೋವುಗಳು ಸಂಭವಿಸಿವೆ. ಈಗಾಗಲೇ ಲಾಕ್ ಡೌನ್ ಕೂಡ ಜಾರಿ ಮಾಡಲಾಗಿದೆಯಾದರೂ ಸದ್ಯಕ್ಕೆ ಪರಿಹಾರ ಕಾಣದ ಕಾರಣ ಸಾರ್ವಜನಿಕರಿಗೆ ಮಾಸ್ಕ್- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಮನವಿ ಮತ್ತು ಜಾಗೃತಿಯ ಕಾರ್ಯ ಮಾಡುತ್ತಿದೆ.ಈ ಮಧ್ಯೆ ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಕಕ್ಕಿಲ್ಲಾಯರು ಮಾಸ್ಕ್ ಹಾಕದೇ ಮಂಗಳೂರಿನ ಸೂಪರ್ ಮಾರ್ಕೆಟಿಗೆ ಅಗತ್ಯ ವಸ್ತುಗಳ ಖರೀದಿಗೆ ಹೋದ ವೀಡಿಯೊವೊಂದು  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಸ್ಕ್ ಹಾಕದ ಕಾರಣ ಸೂಪರ್ ಮಾರ್ಕೆಟ್ ವ್ಯವಸ್ಥಾಪಕರು ಮತ್ತು ವೈದ್ಯರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಜವಾಬ್ದಾರಿಯುತ ವೈದ್ಯರು ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

 

 

 

 

 

NEWS UPDATES

ಡಾ ಶ್ರೀನಿವಾಸ ಕಕ್ಕಿಲ್ಲಾಯರ ಮೇಲೆ ಪ್ರಕರಣ ದಾಖಲು..!

ಮಂಗಳೂರು:  ನಗರದ ಸೂಪರ್ ಮಾರ್ಕೆಟಿನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಹೋದಾಗ ಮಾಸ್ಕ್ ಹಾಕದೇ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಗರದ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲಾಯ ಅವರ ಮೇಲೆ ದೂರು ದಾಖಲು ಮಾಡಲಾಗಿದೆ.

ಜಿಮ್ಮೀಸ್ ಸೂಪರ್ ಮಾರ್ಕೆಟಿನ ಮಾಲಕರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಡಾ. ವಿರುದ್ದ ಲಿಖಿತ ದೂರು ನೀಡಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಾಮಾಜಿಕ ಜಾಲಜಾಣಗಳಲ್ಲಿ ಹರಿದಾಡಿದ ವಿಡಿಯೋ ಗಮನಿಸಿದ್ದೇವೆ. ಸೂಪರ್ ಮಾರ್ಕೆಟ್  ಮಾಲಕರು ದೂರು ನೀಡಿದ್ದಾರೆ.

ವೈದ್ಯರು ಮೇಲ್ನೋಟಕ್ಕೆ ಕೋವಿಡ್ ಗೈಡ್ ಲೈನ್ಸ್ ಗಳನ್ನು ಉಲ್ಲಂಘಿಸಿದ್ದು ಕಂಡು ಬಂದಿದೆ.  ಈ ಬಗ್ಗೆ ಕರ್ನಾಟಕ 2020 ಪ್ಯಾಂಡಮಿಕ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ. ವೈದ್ಯರಿಗೆ ನೋಟಿಸ್  ನೀಡಿ ತನಿಖಾಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರು: ಸ್ಪೀಕರ್ ಯು.ಟಿ ಖಾದರ್ ರವರಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

Published

on

ಮಂಗಳೂರು: ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಮಂಗಳೂರು ನೀರುಮಾರ್ಗ ಗ್ರಾಮ ಪಂಚಾಯತ್ ಮತ್ತು ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಇಂದು ಮಂಗಳೂರಿನ ನೀರುಮಾರ್ಗದಲ್ಲಿ ನಡೆಯಿತು.

ವಿಧಾನ ಸಭಾಸ್ಪೀಕರ್ ಯು.ಟಿ ಖಾದರ್ ರವರು ವಿವಿಧ ಕಾಮಗಾರಿಯ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ನೆರೆವೇರಿಸಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉಧ್ಘಾಟನೆಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಿದರು.

ನಾಡಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಬಳಿಕ ಎಸ್.ಎಸ್.ಎಲ್.ಸಿ ಯ ಕೆ.ರೂಪಾಲಿರಾವ್, ಇಜಾರ ಸಾಹಿಲ್, ಲಿಜಾ ರೂಜ್ ಮೊಂತೆರೊ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬಳಿಕ ವಿಕಲಚೇತರಿಗೆ ಹಾಗೂ ಕ್ರೀಡಾ ಸಾಧಕರಿಗೆ ಚೆಕ್ ವಿತರಣೆ ನಡೆಯಿತು.

ಬಳಿಕ ನೀರುಮಾರ್ಗ ಗ್ರಾಮ ಪಂಚಾಯತ್-ಹಸಿರು ದಳ ಮಂಗಳೂರು ವತಿಯಿಂದ ಸನ್ಮಾನಿಸಿದರು. ಯು.ಟಿ ಖಾದರ್ ಅವರು ಮಾತನಾಡಿ, ಗ್ರಾಮ ಪಂಚಾಯತ್ ಎಂದರೆ ಅದು ಗ್ರಾಮದ ಹೃದಯ, ಅ ಹೃದಯ ಭಾಗದ ಕಾಮಗಾರಿ ವೇಗವಾಗಿ ನಡೆದರೆ ಜಿಲ್ಲೆಯ ಕಾಮಗಾರಿಗೆ ವೇಗಪಡೆದಂತೆ ಎಂದರು.

ಇದನ್ನೂ ಓದಿ: ಮಂಗಳೂರು: ಎಂ.ಆರ್.ಪಿ.ಎಲ್ ನಿಂದ ಸ್ವಚ್ಛತಾ ಜಾಥಾ

ವಿಶಿಷ್ಟ ಸಾಧನೆಗೈದ ಮಹೇಶ್ ಕುಮಾರ್ ಹೊಳ್ಳ,ಮಹಮ್ಮದ್ ಬಾಷ, ಪದ್ಮನಾಭ ಕೋಟ್ಯಾನ್, ವಿಜಯ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮೋನು, ಸಲೀಂ, ಕೆ.ಡಿಪಿ ಸದಸ್ಯ ಮೆಲ್ವಿನ್ ಡಿಸೋಜಾ, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ ಮೊದಲಾದವರಿದ್ದರು.

Continue Reading

DAKSHINA KANNADA

ಮಂಗಳೂರು: ಎಂ.ಆರ್.ಪಿ.ಎಲ್ ನಿಂದ ಸ್ವಚ್ಛತಾ ಜಾಥಾ

Published

on

ಮಂಗಳೂರು: ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ ರೂಪಿಸುವ ಪ್ರಜೆಗಳು, ಸ್ವಚ್ಚತೆಯ ಬಗ್ಗೆ ಮುಖ್ಯವಾಗಿ ವಿದ್ಯಾರ್ಥಿಗಳು ಸಮಾಜಕ್ಕೆ ತಿಳಿಹೇಳಿ‌ಮಾದರಿಯಾಗಬೇಕು ಎಂದು ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್.ವಿಭಾಗದ ಕೇಶವ ಪಾಟಾಳಿ ಹೇಳಿದರು.

ಅವರು ಎಂ.ಆರ್.ಪಿ.ಎಲ್ ಮತ್ತು ಸರಕಾರಿ ಪ್ರಥಮ‌ದರ್ಜೆ ಕಾಲೇಜು ಕಾವೂರು ಇವರ ಸಹಯೋಗದೊಂದಿಗೆ ಎಂ.ಆರ್.ಪಿ.ಎಲ್ ನ ಸ್ವಚ್ಚತಾ ಪಕ್ವಾಡದ ಅಂಗವಾಗಿ ಸ್ವಚತಾ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಚ್ಚತೆ ಎಂಬುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂ.ಆರ್.ಪಿ.ಎಲ್ ಸಂಸ್ಥೆ ಸ್ವಚ್ಚತೆಗೆ ಪ್ರಮುಖ್ಯತೆ ನೀಡುತ್ತಿದ್ದು, ಮಾತ್ರವಲ್ಲದೆ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿದೆ ಎಂದರು.

ಇದನ್ನೂ ಓದಿ: ಮಂಗಳೂರು: 1 ಲಕ್ಷ ರೂ. ಮೌಲ್ಯದ ಬ್ರಾಸ್ಲೈಟ್‌ನ್ನು ವಾರಸುದಾರರಿಗೆ ಹಿಂದಿರುಗಿಸಿದ ಆಟೋ ಚಾಲಕ

ಕಾರ್ಯಕ್ರಮದಲ್ಲಿ ಕಾವೂರು ಪ್ರಥಮ ದರ್ಜೆ ಕಾಲೇಜಿನಿಂದ ಕಾವೂರು ಜಂಕ್ಷನ್ ವರೆಗೆ ವಿವಿಧ ಘೋಷಣೆಯೊಂದಿಗೆ ಜಾಥ ನಂತರ ಸ್ವಚ್ಚತೆಯ ಬೀದಿ‌ನಾಟಕ ನಡೆಯಿತು. ಈ ಸಂದರ್ಭ ಎಂ.ಆರ್.ಪಿ.ಎಲ್ ನ ಹರೀಶ್ ರಾವ್, ಶಾಲಾ ಪ್ರಾಂಶುಪಾಲೆ ಮಮತಾ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

DAKSHINA KANNADA

ಮಂಗಳೂರು: 1 ಲಕ್ಷ ರೂ. ಮೌಲ್ಯದ ಬ್ರಾಸ್ಲೈಟ್‌ನ್ನು ವಾರಸುದಾರರಿಗೆ ಹಿಂದಿರುಗಿಸಿದ ಆಟೋ ಚಾಲಕ

Published

on

ಮಂಗಳೂರು: 1 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಬ್ರಾಸ್ಲೈಟ್‌ನ್ನು ಮಂಗಳೂರಿನ ಆಟೋರಿಕ್ಷಾ ಚಾಲಕನೊಬ್ಬ ಅದರ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಗರದ ಜೆಪ್ಪು ಮಾರುಕಟ್ಟೆಯ ಬಳಿ ನಡೆದಿದೆ.

ಮುಳಿಹಿತ್ಲುವಿನ ವಾಮನ ನಾಯಕ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಇವರಿಗೆ ಸುಮಾರು 17.5 ಗ್ರಾಂ ತೂಕದ ಬಳೆ ರಸ್ತೆಯಲ್ಲಿ ಸಿಕ್ಕಿತ್ತು. ಅದರ ನಿಜವಾದ ಮಾಲೀಕರನ್ನು ಪತ್ತೆಹಚ್ಚಲು ಸಾಮಾಜಿಕ ಮಾಧ್ಯಮವನ್ನು ಬಳಸಿದರು.

ಇದನ್ನೂ ಓದಿ: ಜು.14 ರಂದು ಥೈಲ್ಯಾಂಡ್‌ ದೇಶಕ್ಕೆ ಹಾರಲಿದ್ದಾರೆ ನಟ ದರ್ಶನ್

ಬಳಿಕ ಜೆಪ್ಪಿನಮೊಗರುವಿನ ಚಂದ್ರಹಾಸ್ ಕೆ ಅವರಿಗೆ ಯಶಸ್ವಿಯಾಗಿ ಹಸ್ತಾಂತರಿಸಿದರು. ಅವರ ಸಮಗ್ರತೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page