Connect with us

BIG BOSS

ಈ ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಡಬಲ್ ಧಮಾಕ

Published

on

ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಮನೆ ಖಾಲಿ ಮಾಡುತ್ತಿದ್ದಾರೆ. ಆದರೆ ದೊಡ್ಮನೆಯಲ್ಲಿ ಉಳಿದಿರುವ 7 ಸ್ಪರ್ಧಿಗಳಲ್ಲಿ 16 ನೇ ವಾರ ಒಬ್ಬರಲ್ಲ, ಇಬ್ಬರೂ ಎಲಿಮಿನೇಟ್ ಆಗಿ ಹೊರ ಬರಬಹುದು ಎಂಬುದು ಖಚಿತವಾಗಿದೆ.

ವಿಕೇಂಡ್ ನಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಬಿಗ್ ಬಾಸ್ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈಗಗಾಲೇ ಹನುಮಂತ ಫೈನಲ್ ಪ್ರವೇಶಿಸಿದ್ದು, ರಜತ್, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಭವ್ಯಾ, ಮಂಜು, ಧನರಾಜ್ ಇವರಲ್ಲಿ ಯಾರು ಟಾಪ್ 5ರಲ್ಲಿ ಉಳಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್​ನಿಂದ ಸೇಫ್​ ಆಗಿದ್ದರು. ಬಿಗ್​ಬಾಸ್​ ಕೊಟ್ಟ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ಕನ್ನಡಿಯನ್ನು ನೋಡಿ ಫಜಲ್​ ಗೇಮ್ ಆಡಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಬಿಗ್​ಬಾಸ್​ ಮಿಡ್​ ವೀಕ್​ ಎಲಿಮಿನೇಷನ್​ ತಡೆ ಹಿಡಿದಿದ್ದರು.

ಇದನ್ನೂ ಓದಿ: ಫಿನಾಲೆಗೆ ಡೇಟ್‌ ಫಿಕ್ಸ್; ಈ ಸಲ ಬಿಗ್ ಬಾಸ್ ಗೆಲ್ಲುವವರು ಯಾರು ?

ಆದರೆ ವೀಕೆಂಡ್ ಡಬಲ್ ಎಲಿಮಿನೇಷನ್ ಸ್ಪರ್ಧಿಗಳ ಎದೆ ಬಡಿತ ಹೆಚ್ಚಿಸುವಂತೆ ಮಾಡಿದೆ. ನಾಳೆ ನಡೆಯುವ ಕಿಚ್ಚನ ಪಂಚಾಯ್ತಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಲಿದ್ದು, ಏಳು ಸ್ಪರ್ಧಿಗಳ ಪೈಕಿ ಯಾವ ಇಬ್ಬರೂ ಸ್ಪರ್ಧಿಗಳು ತಮ್ಮ ಆಟ ಅಂತ್ಯಗೊಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

BIG BOSS

ಮಾನ್ಸಿ ಜೋಶಿಯ ಅರಶಿಣ ಶಾಸ್ತ್ರದಲ್ಲಿ ಮಿಂಚಿದ ಮೋಕ್ಷಿತಾ ಪೈ

Published

on

ಪಾರು ದಾರಾವಾಹಿಯ ನಟಿ ಮೋಕ್ಷಿತಾ ಪೈ ಬಿಗ್‌ಬಾಸ್ ಸೀಸನ್ 11 ರಲ್ಲಿ ತಮ್ಮ ನಡೆ-ನುಡಿ, ಆಟದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಬಿಗ್‌ಬಾಸ್‌ನಿಂದ ಬಂದ ಬಳಿಕ ಇದೀಗ ತನ್ನ ಸ್ನೇಹಿತೆ ಮಾನ್ಸಿ ಜೋಶಿಯ ಅರಶಿಣ ಶಾಸ್ತ್ರದಲ್ಲಿ ಮಿಂಚಿದ್ದಾರೆ.

ಓಪನ್ ಹೇರ್ ಬಿಟ್ಕೊಂಡು, ಕಟ್ಟಿಗೆ ಗ್ಲಾಸ್ ಹಾಕೊಂಡು, ಹಳದಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿಫ್ರೆಂಟ್ ಲುಕ್‌ನಲ್ಲಿ ಬಂದಂತಹ ಮೋಕ್ಷಿತಾಳನ್ನು ನೋಡಿ ಅಲ್ಲಿಯ ಅತಿಥಿಗಳು ಖುಷಿ ಪಟ್ಟಿದ್ದಾರೆ.

ಇನ್ನು ಮಾನ್ಸಿ ಹಾಗೂ ಮೋಕ್ಷಿತಾ ಪಾರು ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಅಂದಿನಿಂದ ಇಂದಿನವರೆಗೆ ಇವರ ನಡುವಿನ ಗೆಳೆತನ ಮುಂದುವರಿದಿದೆ. ರಾಘವ್ ಎಂಬುವವನನ್ನು ಮಾನ್ಸಿ ವಿವಾಹವಾಗಲಿದ್ದು, ಫೆಬ್ರವರಿ 16 ರಂದು ಈ ಜೋಡೆಯ ಕಲ್ಯಾಣ ನಡೆಯಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿ, ಫಿನಾಲೆ ಸುತ್ತಿನವರೆಗೂ ಆಗಮಿಸಿದ ಮೋಕ್ಷಿತಾ, ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳೂ ಇದ್ದಾರೆ.

Continue Reading

BIG BOSS

ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಮೋಕ್ಷಿತಾ..! ಅದೇನು ಗೊತ್ತಾ..?

Published

on

ಬೆಂಗಳೂರು: ಬಿಗ್‌ಬಾಸ್ ಸೀಸನ್ 11 ರ ಟಾಪ್ 3 ಕಂಟೆಸ್ಟೆಂಟ್ ಆದ ಮೋಕ್ಷಿತಾ ಪೈ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಮೋಕ್ಷಿತಾ ಇದೀಗ ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಡುತ್ತಿದ್ದಾರೆ.

ಪಾರು ಸೀರಿಯಲ್ ನಟನೆಯ ಮೂಲಕ ಜನಮನ ಗೆದ್ದ ಮೋಕ್ಷಿತಾ ಬಳಿಕ ಇದೀಗ ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಿದ್ದಾರೆ. ಅಂಜನಾದ್ರಿ ಪ್ರೊಡಕ್ಷನ್ಸ್ ಫಸ್ಟ್ ಪ್ರಾಜೆಕ್ಟ್ ಅಡಿಯಲ್ಲಿ ಮೋಕ್ಷಿತಾ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾದ ಹೆಸರನ್ನು ರಿಲೀಸ್ ಮಾಡಲಿದ್ದಾರೆ.

ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಚಾರದ ಬಗ್ಗೆ ನಟಿ ಮೋಕ್ಷಿತಾ ಪೈ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅಂಜನಾದ್ರಿ ಪ್ರೊಡಕ್ಷನ್ಸ್ ಫಸ್ಟ್ ಪ್ರಾಜೆಕ್ಟ್ #MCR ನಿಂದ ಇಂದು ಸಂಜೆ 6:00 ಗಂಟೆಗೆ ಶೀರ್ಷಿಕೆಯನ್ನು ಪ್ರಾರಂಭಿಸಲು ನಮಗೆ ತುಂಬಾ ಸಂತೋಷವಾಗಿದೆ. ಜಯರಾಂ ಗಂಗಪ್ಪನಹಳ್ಳಿ ನಿರ್ಮಾಣ ಹಾಗೂ ಧನುಷ್ ಗೌಡ ವಿ ನಿರ್ದೇಶನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಮುಕೇನ ಇಂದು ಸಂಜೆ 6 ಗಂಟೆಗೆ ಮೋಕ್ಷಿತಾ ಪೈ ಅಭಿನಯದ ಮೊದಲ ಸಿನಿಮಾದ ಹೆಸರು ಅನೌನ್ಸ್ ಆಗಲಿದೆ.

Continue Reading

BIG BOSS

ಮದುವೆಯ ಬಗ್ಗೆ ಕ್ಲೂ ನೀಡಿದ ಬಿಗ್ ಬಾಸ್ ಐಶ್ವರ್ಯ

Published

on

ಬೆಂಗಳೂರು: ಬಿಗ್ ಬಾಸ್ ಸೀಸನ್ 11 ರಲ್ಲಿ ತನ್ನ ಕ್ಯೂಟ್ ಎಕ್ಸ್‌ಪ್ರೇಶನ್ ಮೂಲಕ ಕನ್ನಡ ಜನಮನ ಗೆದ್ದಿದ್ದಲ್ಲದೆ ಕರ್ನಾಟಕದ ಮನೆಮಗಳು ಎಂದೆನಿಸಿಕೊಂಡಿದ್ದಾರೆ. ಬಿಗ್ ಮನೆಯಲ್ಲಿ ಇವರ ಆಟ ನಡೆ ನುಡಿ ಜೊತೆಗೆ ಇವರ ಡ್ರೆಸ್ಸಿಂಗ್ ಸೆನ್ಸ್ ಬಹಳಷ್ಟು ಗಮನ ಸೆಳೆದಿತ್ತು. ಬರೋಬ್ಬರಿ 91 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗಿದ್ದ ಐಶ್ವರ್ಯ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇದೀಗ ಐಶ್ವರ್ಯನಲ್ಲಿ ಪ್ರತಿಯೊಬ್ಬರೂ ನಿಮಗೆ ಮದುವೆ ಯಾವಾಗ? ಬಾಯ್‌ಫ್ರೆಂಡ್ ಇದ್ದಾರಾ? ಶಿಶಿರ್‌ನ ಲವ್ ಮಾಡ್ತಿದ್ದೀರಾ? ಶಿಶಿರ್‌ ಕಡೆಯಿಂದ ಪ್ರಪೋಸಲ್ ಬಂದರೆ ನೀವು ಒಪ್ಪಿಕೊಳ್ಳುತ್ತೀರಾ ? ಹೀಗೆ ಹಲವು ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಈಗ ಅದಕ್ಕೆಲ್ಲಾ ಸ್ವತಃ ಐಶ್ವರ್ಯ ಅವರೇ ಉತ್ತರ ನೀಡಿದ್ದಾರೆ.

ಮದುವೆ ಆಗುವ ಯೋಚನೆ ಸದ್ಯಕ್ಕೆ ಇಲ್ಲ. ಒಳ್ಳೆಯ ಗುಣ, ನಡತೆ, ನನ್ನನ್ನು ಅತಿಯಾಗಿ ಪ್ರೀತಿಸುವ, ಕಾಳಜಿ ವಹಿಸುವ, ಗೌರವಿಸುವ ಹುಡುಗ ನನಗೆ ಬೇಕು. ಈ ಎಲ್ಲಾ ನಡತೆಗಳು ಇರುವ ಹುಡುಗ ಸಿಕ್ಕರೆ ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ತರಹದ ಹುಡುಗ ಸಿಕ್ಕರೆ ಬೇಗನೇ ಅವನ ಹೆಸರನ್ನು ರಿವೀಲ್ ಮಾಡಲ್ಲ ಎಂದು ಹೇಳಿದ್ದಾರೆ.

ಇದೀಗ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆಯೇ ಹೊಸ ರಿಯಾಲಿಟಿ ಶೋನಲ್ಲಿ ಐಶ್ವರ್ಯ ಶಿಂಧೋಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗಂತೂ ಬಹಳ ಸಂತೋಷ ತಂದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಐಶ್ವರ್ಯ ಶಿಂಧೋಗಿ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಆಗಾಗ ತಮ್ಮ ವೃತ್ತಿ ಬದುಕಿನ ಬಗೆಗಿನ ಬಹಳಷ್ಟು ಅಪ್ ಡೇಟ್‌ಗಳನ್ನು ನೀಡುತ್ತಿರುತ್ತಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page