Connect with us

DAKSHINA KANNADA

ಮಳಲಿ ಮಸೀದಿ ಬಗ್ಗೆ ಯಾವುದೇ ಆದೇಶ ಹೊರಡಿಸುವಂತಿಲ್ಲ – ಕರ್ನಾಟಕ ಹೈಕೋರ್ಟ್

Published

on

ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿ ಬಗ್ಗೆ ಯಾವುದೇ ಆದೇಶ ಹೊರಡಿಸುವಂತಿಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿ ಬಗ್ಗೆ ಯಾವುದೇ ಆದೇಶ ಹೊರಡಿಸುವಂತಿಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಹೈಕೋರ್ಟ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದ್ದಾರೆ.

ಮಳಲಿ ಮಸೀದಿ ಬಗ್ಗೆ ಮಂಗಳೂರಿನ ಸಿವಿಲ್ ಕೋರ್ಟ್ ವಿಚಾರಣೆ ಮಾತ್ರವೇ ಮಾಡಬೇಕು. ಈ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸುವಂತಿಲ್ಲ ಎಂದು ಮಂಗಳೂರು ಜಿಲ್ಲಾ ಮೂರನೇ ಸಿವಿಲ್ ಕೋರ್ಟ್‌ಗೆ ಹೈಕೋರ್ಟ್ ಸೂಚನೆ ನೀಡಿದೆ.

ಮಳಲಿ ಮಸೀದಿ ಪುನರ್ ನಿರ್ಮಾಣಕ್ಕೆ ಮಸೀದಿ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಮಸೀದಿಯ ನಡೆಯನ್ನು ಪ್ರಶ್ನಿಸಿ ಮಂಗಳೂರು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಅರ್ಜಿ ವಿಚಾರಣೆ ಸಂದರ್ಭ ಮಸೀದಿ 700 ವರ್ಷಗಳ ಹಿಂದಿನಿಂದ ಇದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು.

ಮಸೀದಿಯೇ 700 ವರ್ಷಗಳಷ್ಟು ಹಳೆಯದಾಗಿದ್ದರೆ, ಅದರಲ್ಲೇ ಇದ್ದ ದೇವಾಯ ಅದಕ್ಕಿಂತಲೂ ಹಳೆಯದು ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ.

ದೇವಸ್ಥಾನ ಎಷ್ಟು ವರ್ಷಗಳ ಹಿಂದೆ ಇತ್ತು? ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆಯಾ? ಎಂಬೆಲ್ಲಾ ಪ್ರಶ್ನೆಗೆ ಉತ್ತರ ತಿಳಿಯಲು ಹಿಂದೂ ಸಂಘಟನೆ ಪರ ವಕೀಲರು ಕಮಿಷನ್ ಒಂದನ್ನು ನೇಮಕ ಮಾಡಲು ಮನವಿ ಮಾಡಿದ್ದರು.

ಕೆಳಹಂತದ ನ್ಯಾಯಾಲಯ ಮಳಲಿ ಮಸೀದಿಯ ವಾಸ್ತವ ಸ್ಥಿತಿಯನ್ನು ಮುಂದುವರೆಸಬಹುದು ಎಂದು ಸೂಚನೆ ನೀಡಿತ್ತು. ಆದರೆ ಕೆಳ ಹಂತದ ಸೂಚನೆಯನ್ನು ಒಪ್ಪದ ವಕೀಲರು ಹೈಕೋರ್ಟ್ ಮೆಟ್ಟಿಲು ಏರಿದ್ದರು ಹಾಗೂ ಸಾರ್ವಜನಿಕ ಪೂಜಾಸ್ಥಳ ಅಧಿನಿಯಮ 1991ರ ಪ್ರಕಾರ ಅರ್ಜಿ ಸಲ್ಲಿಸಿದ್ದರು.

100 ವರ್ಷ ಮೇಲ್ಪಟ್ಟ ದೇವಾಲಯಗಳಿಗೆ ಅಧಿನಿಯಮ ಅನ್ವಯವಾಗುತ್ತದೆ. ಹೀಗಾಗಿ 700 ವರ್ಷಗಳ ಹಿಂದೆ ಇದ್ದ ದೇವಾಲಯಕ್ಕೆ ಕಮಿಷನ್ ನೇಮಕ ಮಾಡಲು ವಿವೇಕ್ ರೆಡ್ಡಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು.ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಂಗಳೂರು ಕೋರ್ಟ್ಗೆ ಯಾವುದೇ ಆದೇಶವನ್ನು ನೀಡುವಂತಿಲ್ಲ ಎಂದು ಸೂಚನೆ ನೀಡಿದೆ.

ಮಸೀದಿಯ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದು, ವಿವರವಾದ ವಿಚಾರಣೆ ನಡೆಯುವವರೆಗೆ ಕೆಳಹಂತದ ನ್ಯಾಯಾಲಯ ಯಾವುದೇ ಆದೇಶ ನೀಡುವಂತಿಲ್ಲ ಎಂದಿದೆ.

ಮಳಲಿ ಮಸೀದಿ ವಿಚಾರಣೆ ಜ್ಞಾನವಾಪಿ ರೀತಿಯಲ್ಲಿ ನಡೆಯುತ್ತಿದ್ದು, ದೇವಾಲಯದ ಇತಿಹಾಸ ಮೊದಲು ತಿಳಿಯಬೇಕು, ಕಮಿಷನ್ ನೇಮಕವಾಗಿ ವರದಿ ಕೊಡುವ ತನಕ ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸಬಾರದು ಎಂದು ಆದೇಶಿಸಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

2024-25ರ ಆರ್ಥಿಕ ವರ್ಷದಲ್ಲಿ ಎಂಆರ್‌ಪಿಎಲ್‌ಗೆ 371 ಕೋಟಿ ರೂ. ಲಾಭ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌) ಕಂಪನಿಯು 2024-25ನೇ ಹಣಕಾಸು ವರ್ಷದ ತ್ರೈಮಾಸಿಕ ಲಾಭದ ಪ್ರಮಾಣ ಶೇ.20ರಷ್ಟು ಏರಿಕೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಸ್ಥೆ 371 ಕೋಟಿ ರೂ. ಲಾಭ ಗಳಿಸಿದೆ.

ಶನಿವಾರ ನಡೆದ ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ನಾಲ್ಕನೇ ತ್ರೈಮಾಸಿಕದ ವರದಿಗೆ ಅನುಮೋದನೆ ನೀಡಲಾಯಿತು.

ಸಂಸ್ಕರಣಾಗಾರದ ಕಾರ್ಯಾಚರಣೆಯಿಂದ ನಿವ್ವಳ ಆದಾಯವು ಶೇ.12.5ರಷ್ಟು ಏರಿಕೆಯಾಗಿ 24,596ಕ್ಕೆ ತಲುಪಿದೆ. 2025ನೇ ಹಣಕಾಸು ವರ್ಷದಲ್ಲಿ ಪ್ರತಿ ಬ್ಯಾರೆಲ್‌ಗೆ 4.45 ಡಾಲರ್ ಒಟ್ಟು ಸಂಸ್ಕರಣಾ ಲಾಭಾಂಶ ಗಳಿಸಿದೆ. ಕಳೆದ ವರ್ಷ ಇದು ಪ್ರತಿ ಬ್ಯಾರೆಲ್ ಕಚ್ಛಾ ತೈಲಕ್ಕೆ 10.36 ಡಾಲರ್ ಕಡಿಮೆಯಾಗಿತ್ತು.

ಇದನ್ನೂ ಓದಿ: ಎಂಆರ್‌ಪಿಎಲ್‌ 2ನೇ ತ್ತೈಮಾಸಿಕ ಅವಧಿ ಫಲಿತಾಂಶ; ನಷ್ಟ ಎಷ್ಟು ಗೊತ್ತಾ ?

ಅಲ್ಲದೆ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆಯಾಗಿರುವ ಈ ಸಂಸ್ಥೆಯು, ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲವನ್ನು ಇಂಧನವಾಗಿ ಪರಿವರ್ತಿಸುವ ಮೂಲಕ 6.23 ಡಾಲರ್ ಗಳಿಸಿದೆ. ಕಳೆದ ವರ್ಷ ಪ್ರತಿ ಬ್ಯಾರಲ್‌ಗೆ 11.35 ಡಾಲರ್ ಆಗಿತ್ತು.

ಪ್ರಸಕ್ತ ವರ್ಷದಲ್ಲಿ ಹೊಸದಾಗಿ 66 ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಈ ಸಂಸ್ಥೆಯ ಪೆಟ್ರೋಲ್ ಪಂಪ್‌ಗಳ ಸಂಖ್ಯೆ 167ಕ್ಕೆ ತಲುಪಿದೆ.

Continue Reading

DAKSHINA KANNADA

ಮನೆಗೆ ನುಗ್ಗಿ ತಲ್ವಾರ್ ಹಿಡಿದು ಬೆ*ದರಿಕೆ ಆರೋಪ; ಹಸಂತಡ್ಕ ವಿರುದ್ಧ FIR

Published

on

ಮಂಗಳೂರು : ವಿಶ್ವ ಹಿಂದೂ ಪರಿಷತ್ ರಾಜ್ಯ ನಾಯಕ ಮುರಳಿ ಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ. ಹಿಂದೂ ಮಹಿಳೆಯೊಬ್ಬರು ಒಂಟಿಯಾಗಿದ್ದ ಸಂದರ್ಭದಲ್ಲಿ ತ*ಲ್ವಾರು ಹಿಡಿದು ಮನೆಗೆ ನುಗ್ಗಿ ಬೆ*ದರಿಕೆ ಹಾಕಿದ ವಿಚಾರವಾಗಿ ಈ ಎಫ್ ಐ ಆರ್ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಹರೀಶ್ ಎಂಬವರು ನೀಡಿದ ದೂರಿನಂತೆ ನ್ಯಾಯಾಲಯದ ಆದೇಶ ಪ್ರಕಾರವಾಗಿ ವಿಟ್ಲ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 16 ರಂದು ಮನೆಯಲ್ಲಿ ತನ್ನ ಪತ್ನಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಪ್ರವೇಶ ಮಾಡಿ ಬೆದರಿಕೆ ಹಾಕಿದ್ದೂ ಅಲ್ಲದೆ ಏಪ್ರಿಲ್ 19 ರಂದು ಕೂಡ ದಂಪತಿಗೆ ತಲ್ವಾರ್ ಹಿಡಿದು ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಹೆಬ್ರಿ : ಕಾಲು ಜಾರಿ ನದಿಗೆ ಬಿದ್ದು ಯುವಕ ಸಾ*ವು

ವ್ಯವಹಾರದ ವಿಚಾರವಾಗಿ ಈ ಪ್ರಕರಣ ನಡೆದಿದ್ದು, ಸಾರಡ್ಕ ಪೆಟ್ರೋಲ್ ಪಂಪ್ ಬಿಟ್ಟು ಕೊಡುವ ವಿಚಾರವಾಗಿ ಹಸಂತಡ್ಕ ಈ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹರೀಶ್ ಪತ್ನಿ ಶ್ರೀದೇವಿ ಹಾಗೂ ಮುರಳೀಕೃಷ್ಣ ಹಸಂತಡ್ಕ ಸಾರಡ್ಕದ ಪೆಟ್ರೋಲ್ ಪಂಪ್‌ ನಲ್ಲಿ ಪಾಲುದಾರಿಕೆ ಹೊಂದಿದ್ದು, ಪಾಲುದಾರಿಕೆ ಬಿಟ್ಟುಕೊಡುವ ವಿಚಾರವಾಗಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.

 

Continue Reading

DAKSHINA KANNADA

ಬೆಳ್ಳಿ ಪರದೆ ಮೇಲೆ ರಾರಾಜಿಸಿದ ಯಕ್ಷಗಾನ ; ‘ವೀರ ಚಂದ್ರಹಾಸ’ ನ ಅಬ್ಬರಕ್ಕೆ ಎಲ್ಲರೂ ಫಿದಾ ..!

Published

on

ಉಡುಪಿ : ಕರಾವಳಿಯ ಗಂಡುಗಲೆ ಯಕ್ಷಗಾನ .. ಈ ಕಲೆ ಸಿನಿ ಪರದೆಗೆ ಎಂಟ್ರಿ ಕೊಟ್ರೆ ಹೇಗಿರುತ್ತೆ ಅಲ್ವಾ ..? ಅಬ್ಬಾ ..! ಊಹೆಯೇ ಎಷ್ಟೊಂದು ಸುಂದರವಾಗಿದೆ. ಆದರೆ ಇದೀಗ ಈ ಊಹೆ ವಾಸ್ತವಕ್ಕೆ ತಿರುಗಿದೆ. ಹೌದು ..! ಸಿನೆಮಾ ರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ  ಕರಾವಳಿ ಕರ್ನಾಟಕದ ಹೆಮ್ಮೆಯ ಯಕ್ಷಗಾನ ಕಲೆ ಬೆಳ್ಳಿತೆರೆಯಲ್ಲಿ ಮೂಡಿ ಬಂದಿದೆ. ಅದು ಯಾವ ಸಿನಿಮಾ ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

 “ಬಾಹುಬಲಿಯನ್ನು ಮೀರಿಸುವ ಎಲ್ಲಾ ಲಕ್ಷಣ ಈ ಸಿನೆಮಾ ಹೊಂದಿದ್ದು, ಕೇವಲ ಯಕ್ಷಗಾನ ಮಾತ್ರವಲ್ಲದೆ ಕಲಾವಿದರ ಬದುಕು ಕೂಡಾ ಅನಾವರಣ ಮಾಡಲಾಗಿದೆ. 1500 ಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯನ್ನು ವಿಜ್ರಂಭಣೆಯಿಂದ ವಿಶ್ವದ ಮುಂದೆ ಮೆರೆಸುವ ಒಂದು ಪ್ರಯತ್ನ ಇದಾಗಿದೆ. ಖ್ಯಾತ ನಟ ಶಿವರಾಜ್ ಕುಮಾರ್ ಸೇರಿದಂತೆ 900 ಕಲಾವಿದರು ಸಿನೆಮಾದಲ್ಲಿ ನಟಿಸಿದ್ದಾರೆ” ಎಂದು ನಿರ್ದೆಶಕ ರವಿ ಬಸ್ರೂರು ಹೇಳಿದ್ದಾರೆ.

‘ವೀರ ಚಂದ್ರಹಾಸ’ ಎಂಬ ನಾಮದೊಂದಿಗೆ ಏ.18 ರಂದು ಯಕ್ಷಗಾನ ಆಧಾರಿತ ಸಿನಿಮಾ ಬೆಳ್ಳಿ ಪರದೆಯಲ್ಲಿ ಮೂಡಿ ಬಂದಿದೆ. ಹನ್ನೆರಡು ವರ್ಷಗಳಿಂದ ಯಕ್ಷಗಾನವನ್ನು ಬೆಳ್ಳಿತೆರೆಗೆ ತರಬೇಕು ಎಂಬ ರವಿ ಬಸ್ರೂರು ಅವರ ಪ್ರಯತ್ನ ಕೊನೆಗೂ ಈಡೇರಿದೆ. “ಅದ್ಭುತ ಜ್ಞಾನ ಭಂಡಾರ ಹೊಂದಿರುವ ಯಕ್ಷಗಾನವನ್ನು ಬೆಳ್ಳಿ ಪರದೆ ಮೇಲೆ ಒಂದು ಸಿನೆಮಾವಾಗಿ ವೀಕ್ಷಿಸದ ನಮ್ಮ ಹೆಮ್ಮೆಯ ಕಲೆ ಎಂಬ ದೃಷ್ಟಿಕೋನದಲ್ಲೇ ವೀಕ್ಷಿಸಬೇಕು” ಎಂದು ನಿರ್ದೆಶಕರು ಮನವಿ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page