Connect with us

LATEST NEWS

ಪ್ರೀತಿಸಿದ ಹುಡುಗ ಬೇಡ; ಯಾವ ಹೀರೋಗೂ ಕಮ್ಮಿ ಇರದವನು ಸಿಗಲಿ; ಬನಶಂಕರಿ ದೇವಿಗೆ ಬಂದಿವೆ ವಿಚಿತ್ರ ಬೇಡಿಕೆಯ ಪತ್ರಗಳು!

Published

on

ಬೆಂಗಳೂರು : ದೇವಾಲಯಗಳ ಹುಂಡಿಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ನೋಟಿನಲ್ಲೋ ಅಥವಾ ಚೀಟಿಯಲ್ಲಿ ಬರೆದೋ ಹಾಕಿರುವುದು ಸಿಗುತ್ತದೆ. ಪರೀಕ್ಷೆಯಲ್ಲಿ ನನ್ನನ್ನು ಪಾಸ್ ಮಾಡು ದೇವರೇ ಎಂಬ ಕೋರಿಕೆ ಅಥವಾ ಪ್ರೀತಿಸಿದ ಹುಡುಗ/ ಹುಡುಗಿ ಸಿಗಲಿ ಎಂಬ ನಿವೇದನೆಯೂ ಇರುತ್ತದೆ. ಪ್ರಸಿದ್ಧ ದೇವಾಲಯಗಳ ಹುಂಡಿಗಳಲ್ಲಿ ಸಾಮಾನ್ಯವಾಗಿ ಪತ್ರ ಸಿಗುತ್ತಿರುತ್ತದೆ.

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ಈ ಬಾರಿ ವಿಭಿನ್ನ ಬೇಡಿಕೆಗಳ ಪತ್ರ ಸಿಕ್ಕಿವೆ. ಇಲ್ಲಿ ಸಿಕ್ಕಿರುವ ಪತ್ರಗಳಲ್ಲಿ ಒಂದೊಂದು, ಒಂದೊಂದು ತೆರನಾದ ನಿವೇದನೆಯುಳ್ಳ ಪತ್ರಗಳು.

ಈಗ ಅವನು ಬೇಡ, ಯಾವ ಹೀರೋಗೂ ಕಮ್ಮಿ ಇರದವನು ಸಿಗಲಿ :

ಈ ಬಾರಿ ಸಿಕ್ಕಿರುವ ಪತ್ರದಲ್ಲಿ ವಿಭಿನ್ನ ಬೇಡಿಕೆಯಿದೆ. ಈ ಪತ್ರಗಳನ್ನು ನೋಡಿ ಆಡಳಿತ ಮಂಡಳಿಯವರು ಶಾಕ್ ಆಗಿದ್ದಾರೆ. “ಅಮ್ಮ ನಾನು ತಪ್ಪು ಮಾಡಿದ್ದೇನೆ ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ಟರೇ ಯಾರನ್ನು ಮದುವೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ ನನ್ನ ಮದುವೆಯನ್ನು, ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರುವ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ಮಾಡಿಸು‌” ಎಂದು ಪತ್ರವೊಂದರಲ್ಲಿ ಬರೆಯಲಾಗಿದೆ.

ಅಲ್ಲದೇ, “ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ನನ್ನನ್ನು ಹೆಚ್ಚಾಗಿ ಪ್ರೀತಿ ಮಾಡಬೇಕು‌. ನಾನೆಂದರೇ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು, ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಾ ಅಂತ ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕು ಅಂತ ಹುಡುಗನ ಜೊತೆ ಮದುವೆ ಮಾಡಿಸು” ಎಂದು ಯುವತಿಯೊಬ್ಬಳು ದೇವರಿಗೆ ಪತ್ರ ಬರೆದಿದ್ದಾಳೆ.

ರಮ್ಯ ಮತ್ತು ಉಮೇಶ್ ದೂರವಾಗಲಿ…ತಾಯಿ ಆಸ್ತಿ ನನಗೇ ಸಿಗಲಿ…

ಸಿಕ್ಕಿರುವ ಪತ್ರವೊಂದರಲ್ಲಿ ಆಸ್ತಿಯ ಬಗ್ಗೆ ಬರೆಯಾಗಲಿ. ‘ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ನನಗೆ ಯಾವುದೇ ಅಡ್ಡಿಯಾಗದೆ ಬರುವಂತೆ ಮಾಡು. ಯಾವುದೇ ಅಡ್ಡಿ ಇಲ್ಲದೇ ನನಗೆ ಸಿಗೋಥರ ಮಾಡು ತಾಯಿ ಎಂದು ಬರೆಯಾಗಲಿದೆ.

ಮತ್ತೊಂದು ಪತ್ರದಲ್ಲಿ ಅಮ್ಮ ತಾಯಿ, ರಮ್ಯ ಮತ್ತು ಉಮೇಶ್ ಇಬ್ಬರು ದೂರ ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗುತ್ತದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ ಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ಕಾರು ಪಲ್ಟಿ; ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದ ನಾಲ್ವರು ಸಾ*ವು

ಇನ್ನೊಂದು ಪತ್ರದಲ್ಲಿ ತಾಯಿ ಮಗನ ಬಗ್ಗೆ ಆತನ ಸಾಂಸಾರಿಕ ಬದುಕಿನ ಬಗ್ಗೆ ಪ್ರಾರ್ಥಿಸಿದ್ದಾಳೆ. ಅಮ್ಮ ತಾಯಿ ನಿನ್ನಲ್ಲಿ ನನ್ನದು ಒಂದು ಕೋರಿಕೆ, ನನ್ನ ಮಗ ಶಶಾಂಕ್​ನ ನಿಶ್ಚಿತಾರ್ಥ ಆಗಿದೆ. ನನ್ನ ಮಗನನ್ನು ಮದುವೆ ಆಗುತ್ತಿರುವ ಹುಡುಗಿ ರಮ್ಯ ನನ್ನ ಮಗನ ಜೊತೆ ಚೆನ್ನಾಗಿದೆ ಇರುವಂತೆ ಮಾಡು. ನನ್ನ ಜೊತೆ, ನಮ್ಮ ಮನೆಯವರ ಜೊತೆ ಸಂತೋಷದಿಂದ ಇರುವಂತೆ ಮಾಡು ಯಾವುದೇ ಬೇಜಾರು ಇಲ್ಲದೆ ಸಂಸಾರ ನಡೆಸಿಕೊಂಡು ಹೋಗುವಂತೆ ಮಾಡು ತಾಯಿ ಎಂದು ಬರೆಯಲಾಗಿದೆ.

 

LATEST NEWS

ಮಹಾ ಕುಂಭಮೇಳ: ಇಂದು ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನ

Published

on

ಮಂಗಳೂರು/ಪ್ರಯಾಗ್‌ರಾಜ್ : ಮಹಾಕುಂಭ ಮೇಳದ ಪ್ರಯುಕ್ತ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಭಕ್ತಾಧಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂದು ಮುಂಜಾನೆ ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.

ಪುಣ್ಯ ನದಿಯ ತಟದಲ್ಲಿ ನಿರ್ದಿಷ್ಟ ಸಮಯದವರೆಗೆ ನೆಲೆಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ದೀಕರಣ ಮಾಡಿಕೊಳ್ಳುವ ಪ್ರಕ್ರಿಯೆಗೆ ‘ಕಲ್ಪವಾಸ’ ಎನ್ನಲಾಗುತ್ತದೆ. ಮಾಹಾಕುಂಭಮೇಳದ ಅವಧಿಯಲ್ಲಿ ನಡೆಸುವ ‘ಕಲ್ಪವಾಸ’ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಲ್ಪವಾಸ ಎನ್ನುವುದು ಸಂಪೂರ್ಣವಾಗಿ ಹಾಗೂ ಆಳವಾಗಿ ಹಿಂದೂ ಧರ್ಮದಲ್ಲಿ ಬೇರೂರಿರುವ ಒಂದು ಆಚರಣೆ. ಮಾಘಿ ಪೂರ್ಣಿಮೆವರೆಗೂ ತ್ರಿವೇಣಿ ಸಂಗಮದಲ್ಲಿ ನೆಲೆ ನಿಂತು ಸತತವಾಗಿ ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕಾಗಿ ಕೈಗೊಳ್ಳುವ ಒಂದು ಕಠಿಣ ವ್ರತವಿದು. ಗಂಗಾ, ಯಮುನಾ ಮತ್ತು ಸರಸ್ವತಿಯ ತ್ರಿವೇಣಿ ಸಂಗಮದ ಪವಿತ್ರ ಜಲದ ತಟದಲ್ಲಿ ಕುಳಿತು ನಮ್ಮನ್ನೇ ನಾವು ಅರಿಯುವ ಆಚರಣೆಯಿದು.

Continue Reading

LATEST NEWS

ಪೋಷಕರ ಲೈಂ*ಗಿಕತೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ರಣವೀರ್ ಅಲ್ಹಾಬಾದಿಯಾಗೆ ಸಂಕಷ್ಟ!

Published

on

ನವದೆಹಲಿ :  ‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಜನಪ್ರಿಯ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ, ಹಾಸ್ಯನಟ ಸಮಯ್ ರೈನಾ ಮತ್ತು ಇತರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೋಷಕರು ಮತ್ತು ಲೈಂ*ಗಿಕತೆ ಕುರಿತು ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಯಲ್ ಬೈಸೆಪ್ಸ್ ಹೆ ಎಂದೇ ಖ್ಯಾತರಾಗಿರುವ ರಣವೀರ್ ವೀಡಿಯೋ ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದರು. ಹೇಳಿಕೆ ತೀವ್ರತೆ ಪಡೆಯುತ್ತಿದ್ದಂತೆ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಮತ್ತು ಇತರರ ವಿರುದ್ಧ ಪೊಲೀಸರು ಸೋಮವಾರ(ಫೆ.10) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು(ಫೆ.11) ರಣವೀರ್ ಅಲಹಾಬಾದಿಯಾ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಪ್ರಕರಣ?

‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಭಾಗವಹಿಸಿದ್ದರು.  ಈ ವೇಳೆ ರಣವೀರ್ ಅಲ್ಹಾಬಾದಿಯಾ ಪೋಷಕರ ಲೈಂ*ಗಿಕತೆ ಬಗ್ಗೆ ಯುವಕನೊಬ್ಬನಲ್ಲಿ ಪ್ರಶ್ನೆ ಕೇಳಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ರಣವೀರ್ ಪ್ರಶ್ನೆ ಬಗ್ಗೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ಗಣ್ಯರೂ  ಆಕ್ಷೇ*ಪ ವ್ಯಕ್ತಪಡಿಸಿದ್ದರು.

ಸಂಚಿಕೆ ಪ್ರಸಾರಕ್ಕೆ ನಿರ್ಬಂಧ :

ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆ ಅವರು ಭಾಗಿಯಾಗಿದ್ದ ಇಂಡಿಯಾ ಗಾಟ್  ಲ್ಯಾಟೆಂಟ್‌ನ ಸಂಚಿಕೆಯ ಪ್ರಸಾರಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ : ಈ ರಾಶಿಯವರು ಮದುವೆಯಾದರೆ ಭೂಲೋಕದಿ ಸಾಕ್ಷಾತ್ ಶಿವ-ಪಾರ್ವತಿ ವಿವಾಹವಾದಂತೆ

ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.  ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ರಣವೀರ್ ಅಲ್ಹಾಬಾದಿಯಾ ಅವರ ಆಕ್ಷೇಪಾರ್ಹ ಹೇಳಿಕೆ ಇರುವ ಸಂಚಿಕೆ ಪ್ರಸಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

LATEST NEWS

ಆರ್‌ಸಿಬಿಗೆ ಮತ್ತೆ ಕೊಹ್ಲಿಯೇ ನಾಯಕ ?

Published

on

ಮಂಗಳೂರು/ಬೆಂಗಳೂರು : ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ವಿರಾಟ್ ಕ್ಯಾಪ್ಟನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2021ರಲ್ಲಿ ಆರ್‌ಸಿಬಿ ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ ಇದೀಗ ಮತ್ತೆ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ಯಾರು ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಇಂಗ್ಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಸುರೇಶ್ ರೈನಾ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ರೈನಾ ಸಂಭಾಷಣೆ ನಡೆಸಿದ್ದಾರೆ. ಇಂಗ್ಲೆಂಡ್ ಆಟಗಾರ ಆರ್‌ಸಿಬಿ ನಾಯಕನ ಕುಶಲೋಪರಿ ವಿಚಾರಿಸಿದ್ದಾರೆ ಎಂದು ಕಾಮೆಂಟರಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಗಂಡ ಮಾಡಿದ ಸಾಂಬಾರನ್ನು ಎರಡು ವರ್ಷಗಳ ಬಳಿಕ ತಿಂದ ಹೆಂಡತಿ..!

ಇತ್ತ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಅವರಿಗೆ ಆರ್‌ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದು ಗೊತ್ತಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದಾರೆ.

9 ವರ್ಷಗಳ ಕಾಲ ಆರ್‌ಸಿಬಿ ಕ್ಯಾಪ್ಟನ್ ಆಗಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೇ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್‌ಸಿಬಿ 2016ರಲ್ಲಿ ಫೈನಲ್‌ಗೆ ಪ್ರವೇಶಿಸಿದರೆ, 3ಬಾರಿ ಪ್ಲೇಆಫ್ಸ್ ಆಡಿತ್ತು.

 

 

Continue Reading
Advertisement

Trending

Copyright © 2025 Namma Kudla News

You cannot copy content of this page