Connect with us

LATEST NEWS

ದೇಶದ ಮೊದಲ ಭಿಕ್ಷಾಟನೆ ಮುಕ್ತ ನಗರ ಯಾವುದು ಗೊತ್ತಾ?

Published

on

ಈ ಒಂದು ನಗರದಲ್ಲಿ ಭಿಕ್ಷುಕರೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಇಲ್ಲಿನ ಜಿಲ್ಲಾಡಳಿತ ಕೈಗೊಂಡ ಕಠಿಣ ನಿರ್ಧಾರ. ನಗರದಲ್ಲಿ ಭಿಕ್ಷುಕರಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ, ಜಿಲ್ಲಾಡಳಿತವು ಕಳೆದ ವರ್ಷವೇ ಅಭಿಯಾನ ಒಂದು ಆರಂಭಿಸಿತ್ತು. ಇದರ ಪರಿಣಾಮ ದೇಶದ ಮೊದಲ ಭಿಕ್ಷಾಟನೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ನಗರ. ಅಷ್ಟಕ್ಕೂ ಆ ನಗರ ಯಾವುದು ಅಂತ ತಿಳಿದುಕೊಂಡು ಬರೋಣ…

ಹೌದು, ಮಧ್ಯಪ್ರದೇಶದ ಇಂದೋರ್‌ ದೇಶದ ಮೊದಲ ಭಿಕ್ಷಾಟನೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾಧಿಕಾರಿ ಆಶೀಷ್ ಸಿಂಗ್ ತಳಿಸಿದ್ದಾರೆ.

ಕಳೆದ ವರ್ಷ ಜಿಲ್ಲಾಡಳಿತ ಈ ಸಂಬಂಧ ಅಭಿಯಾನವನ್ನು ಕೈಗೆತ್ತಿಕೊಂಡಾಗ ನಗರದಲ್ಲಿ 500 ಮಕ್ಕಳ ಸಹಿತ ಸುಮಾರು 5,000 ಮಂದಿ ಭಿಕ್ಷುಕರಿದ್ದರು. ಇವರೆಲ್ಲರಿಗೆ ಉದ್ಯೋಗ ಲಭಿಸುವಂತೆ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿದೆ. ಇನ್ನು ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಮಕ್ಕಳನ್ನು ಸ್ಥಳೀಯ ಶಾಲೆಗಳಿಗೆ ದಾಖಲಿಸಲಾಗಿದೆ. ಈ ಮೂಲಕ ಈಗ ಇಂದೋರ್ ನಗರ ಸಂಪೂರ್ಣ ಭಿಕ್ಷಾಟನೆ ಮುಕ್ತ ನಗರವಾಗಿದೆ ಎಂದವರು ಹೇಳಿದರು.

ದೇಶದಲ್ಲಿ ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ದೇಶದ 10 ನಗರಗಳಲ್ಲಿ ಈ ಸಂಬಂಧ ಪೈಲಟ್ ಯೋಜನೆಯನ್ನು ಆರಂಭಿಸಿದ್ದು ಈ ಪೈಕಿ ಇಂದೋರ್ ಕೂಡ ಸೇರಿದೆ. ನೆರೆಯ ರಾಜ್ಯವಾದ ರಾಜಸ್ಥಾನದಿಂದ ಭಾರೀ ಸಂಖ್ಯೆಯಲ್ಲಿ ಜನರು ಭಿಕ್ಷಾಟನೆಗಾಗಿಯೇ ಇಂದೋರ್‌ಗೆ ವಲಸೆ ಬಂದಿರುವುದು ಕ್ಷೇತ್ರಕಾರ್ಯ ನಡೆಸಿದ ವೇಳೆ ಗಮನಕ್ಕೆ ಬಂದಿತು.

ಇದನ್ನೂ ಓದಿ: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ನಿಯಮ ಉಲ್ಲಂಘಿಸಿದವರ ವಿರುದ್ದ ಎಫ್‌ಐಆರ್‌
ಈ ಅಭಿಯಾನದ ಮೊದಲ ಹಂತದಲ್ಲಿ ಭಿಕ್ಷಾಟನೆ ಕುರಿತಂತೆ ಜನಜಾಗೃತಿ ಮೂಡಿಸಲಾಯಿತು. ಆ ಬಳಿಕ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿಕೊಡಲಾಯಿತು ಎಂದು ಇದೇ ವೇಳೆ ಭಿಕ್ಷಾಟನೆ ನಡೆಸುವುದು, ಭಿಕ್ಷುಕರಿಗೆ ಹಣ ನೀಡುವುದು, ಭಿಕ್ಷುಕರಿಂದ ವಸ್ತುಗಳ ಖರೀದಿಸುವುದನ್ನು ನಗರದಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಈವರೆಗೆ ನಗರದಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದಲ್ಲದೆ ನಗರದಲ್ಲಿ ಭಿಕ್ಷೆ ಬೇಡುತ್ತಿರುವವರ ಬಗೆಗೆ ಮಾಹಿತಿ ನೀಡಿದವರಿಗೆ 1,000 ಬಹುಮಾನವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವಬ್ಯಾಂಕ್
ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯ ಹಾಗೂ ವಿಶ್ವಬ್ಯಾಂಕ್ ತಂಡ ಕೂಡ ನಗರದ ಈ ಸಾಧನೆಯನ್ನು ಗುರುತಿಸಿದ್ದು, ಅಭಿಯಾನದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ. ಜಿಲ್ಲಾಡಳಿತ ಕೈಗೊಂಡ ಈ ಅಭಿಯಾನ ಈಗ ದೇಶ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು ಮಾದರಿ ಅಭಿಯಾನವಾಗಿ ಹೊರಹೊಮ್ಮಿದೆ.

 

LATEST NEWS

ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ: ಆದಂಪುರ್‌ ವಾಯುನೆಲೆಯಲ್ಲಿ ಪ್ರಧಾನಿ ಮೋದಿ

Published

on

ಮಂಗಳೂರು/ಆದಂಪುರ್: ಆಪರೇಷನ್ ಸಿಂಧೂರ್ ನಂತರ ಪ್ರಧಾನಿ ಮೋದಿ ನಿನ್ನೆ ಮೊದಲ ಬಾರಿಗೆ ಸಾರ್ವಜನಿಕ ಭಾಷಣ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬಿನ ಆದಂಪುರ್ ವಾಯುನೆಲೆಗೆ ಭೇಟಿ ನೀಡಿದರು.

ಪ್ರಧಾನಿ ಮೋದಿ ಅದಂಪುರ್ ಭೇಟಿ ಹೆಚ್ಚು ಮಹತ್ವ ಪಡೆದಿದ್ದು ಏಕೆಂದರೆ, ಪಾಕಿಸ್ತಾನದವರು ನಾವು ಆದಂಪುರ್‌ ವಾಯುನೆಲೆಯನ್ನು ಛಿದ್ರಗೊಳಿಸಿದ್ದೇವೆ ಎಂಬ ಸುಳ್ಳು ಸುದ್ದಿ ಹರಡಿದ್ದರು. ಆದರೆ, ಇಂದು ಬೆಳಿಗ್ಗೆ  ಪಂಜಾಬ್‌ನ  ಅದೇ ಆದಂಪುರ್ ವಾಯುನೆಲೆಯಲ್ಲಿ ಪ್ರಧಾನಿ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ!

ವಾಯುನೆಲೆಯಲ್ಲಿ ಐಎಎಫ್ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ ಎಂದಿದ್ದಾರೆ. ಅಲ್ಲದೆ ಯಾವುದೇ ಭಯೋತ್ಪಾದಕ ದಾಳಿಗೆ ನಮ್ಮದೇ ಆದ ಷರತ್ತುಗಳ ಮೇಲೆ ನಿರ್ಣಾಯಕ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿ ಪಾಕ್ ಸೇನೆಯ ಬೆವರಿಳಿಸಿದ್ದಾರೆ.

ಒಂದು ದಾಳಿ ಪಾಕಿಸ್ತಾನದಲ್ಲಿ ಮಹಾವಿನಾಶಕ್ಕೆ ಕಾರಣ!

“ನಾವು ಗಾಡ್‌ಫಾದರ್‌ಗಳು ಮತ್ತು ಭಯೋತ್ಪಾದನೆಯ ರಾಜ್ಯ ಪ್ರಾಯೋಜಕರ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಅವರು ಅಮಾಯಕರನ್ನು ಕೊಂದರೆ ಅವರಿಗೆ ವಿನಾಶವೊಂದೇ ಪರಿಹಾರ ಎಂದು ತಿಳಿದಿದೆ. ಪಾಕಿಸ್ತಾನದವರು ಹೇಡಿಗಳಂತೆ ಬಂದರು. ಆದರೆ ಅವರು ಎದುರಿಸಬೇಕಾಗಿದ್ದು ಭಾರತೀಯ ಸೇನೆಯನ್ನು ಎಂಬುದನ್ನು ಮರೆತಿದ್ದಾರೆ. ಪಾಕಿಸ್ತಾನದ 9 ಭಯೋತ್ಪಾದಕ ಪಡೆಗಳು ನಾಶವಾದವು. 100ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಅವರ ಒಂದು ದಾಳಿ ಪಾಕಿಸ್ತಾನದಲ್ಲಿ ಮಹಾವಿನಾಶಕ್ಕೆ ಕಾರಣವಾಯಿತು. ಈಗ ಪಾಕಿಸ್ತಾನದವರು ನಮ್ಮ ಕ್ಷಿಪಣಿ, ಡ್ರೋನ್​ಗಳ ಬಗ್ಗೆ ಯೋಚನೆ ಮಾಡಿದರೆ ಸಾಕು ಕಣ್ಣುಮುಚ್ಚಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ ನಿವಾಸದ ಮೇಲೆ ಬಾಂ*ಬ್ ದಾಳಿ ಆಗಬೇಕು ಎಂದಿದ್ದ ವ್ಯಕ್ತಿಯ ಬಂಧನ

ಇದೇ ವೇಳೆ ಪಾಕಿಸ್ತಾನದ ಬಗ್ಗೆ ಭಾರತಕ್ಕಿರುವ ಮೂರು ಪ್ರಮುಖ ನೀತಿಗಳ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಭಾರತದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಭಾರತವು ಪರಮಾಣು ಬ್ಲ್ಯಾಕ್‌ಮೇಲ್‌ಗಳನ್ನು ಸ್ವೀಕರಿಸವುದಿಲ್ಲ. ಇನ್ನೂ ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕ್ ಸರ್ಕಾರ ಕೂಡ ಭಯೋತ್ಪಾದಕರೇ ಆಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಭಾರತೀಯ ಯೋಧರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

“ಇದು ಹೊಸ ಭಾರತ, ಶಾಂತಿಯನ್ನು ಬಯಸುತ್ತದೆ. ಆದರೆ ಪಾಕಿಸ್ತಾನದಿಂದ ಮಾನವೀಯತೆಯ ಮೇಲೆ ದಾಳಿ ನಡೆದರೆ, ನಾವು ನಿಮ್ಮನ್ನು ನಿರ್ನಾಮ ಮಾಡುತ್ತೇವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಶಾಂತಿಯುತವಾಗಿ ಬದುಕಲು ಯಾವುದೇ ಸ್ಥಳವೂ ಉಳಿದಿಲ್ಲ ಎಂಬ ಸಂದೇಶವನ್ನು ನಾವು ಅವರಿಗೆ ನೀಡಿದ್ದೇವೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ” ಎಂದು ಭಾರತೀಯ ಯೋಧರನ್ನು ಶ್ಲಾಘಿಸಿದ್ದಾರೆ.

 

Continue Reading

LATEST NEWS

ಬದಲಾಯ್ತು ಗೂಗಲ್ ಲೋಗೋ; 10 ವರ್ಷಗಳ ಬಳಿಕ ಆಧುನಿಕ ಟಚ್

Published

on

ನವದೆಹಲಿ: ಸುಮಾರು 10 ವರ್ಷಗಳ ನಂತರ ಗೂಗಲ್ ಮತ್ತೊಮ್ಮೆ ತನ್ನ ಐಕಾನಿಕ್ ‘G’ ಲೋಗೋವನ್ನು ಬದಲಾಯಿಸಿದೆ.

2015 ರಲ್ಲಿ, ಗೂಗಲ್ ತನ್ನ ಕ್ಲಾಸಿಕ್ ಲೋಗೋವನ್ನು ಆಧುನಿಕ ಟೈಪ್‌ಫೇಸ್ ಪ್ರಾಡಕ್ಟ್ ಸ್ಯಾನ್ಸ್ ಗೆ ಬದಲಾಯಿಸಿತು. ಈಗ 2025 ರಲ್ಲಿ, ಕಂಪನಿಯು ಇದಕ್ಕೆ ಹೊಸ ದೃಶ್ಯ ತಿರುವನ್ನು ಸೇರಿಸಿದೆ.

ಹೊಸ ಲೋಗೋದಲ್ಲಿ ಗೂಗಲ್ ತನ್ನ ಬ್ರ್ಯಾಂಡ್‌ನ ಗುರುತಾಗಿರುವ ನೀಲಿ, ಕೆಂಪು, ಹಸಿರು ಮತ್ತು ಹಳದಿ ಎಂಬ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಉಳಿಸಿಕೊಂಡಿದೆ. ಆದರೆ ಈ ಬಾರಿ ವಿನ್ಯಾಸದಲ್ಲಿ ಹೊಸ ತಿರುವು ಇದೆ.

ಇದನ್ನೂ ಓದಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗೆ ನೀರು ಹಾಕಲು ಹೋಗಿ ಬಾಲಕಿ ಸಾವು

ಮೊದಲು ಈ ಬಣ್ಣಗಳನ್ನು G ಲೋಗೋದಲ್ಲಿ ಬ್ಲಾಕ್ ಶೈಲಿಯಲ್ಲಿ ಕಾಣಲಾಗುತ್ತಿತ್ತು. ಈಗ ಅದೇ ಬಣ್ಣಗಳನ್ನು ಗ್ರೇಡಿಯಂಟ್‌ನಲ್ಲಿ ಅಂದರೆ ಬೆಳಕಿನಿಂದ ಗಾಢ ಛಾಯೆಗಳವರೆಗೆ ಕಾಣಬಹುದು. ಇದು ಜನರಿಗೆ ಕ್ರಿಯಾತ್ಮಕ ಮತ್ತು ಆಧುನಿಕ ಅನುಭವವನ್ನು ನೀಡುತ್ತದೆ. ಗೂಗಲ್‌ನ ಈ ಹೊಸ ಲೋಗೋ ಕಂಪನಿಯು ಈಗ ತನ್ನ ಹಳೆಯ ನೋಟವನ್ನು ಮೀರಿ ಹೆಚ್ಚು ಸ್ಮಾರ್ಟ್, ಫ್ಯೂಚರಿಸ್ಟಿಕ್ ಮತ್ತು ಎಐ-ಪವರ್ಡ್​ ಬ್ರ್ಯಾಂಡಿಂಗ್‌ನತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

Continue Reading

LATEST NEWS

ಆರ್‌ಸಿಬಿ ತಂಡಕ್ಕೆ ಮೊದಲ ಮ್ಯಾಚ್; ಇಲ್ಲಿದೆ ನೋಡಿ IPL 2025ರ ಪರಿಷ್ಕೃತ ವೇಳಾಪಟ್ಟಿ

Published

on

ಮಂಗಳೂರು/ಮುಂಬೈ: ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಡಿಮೆಯಾಗಿದ್ದು, ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಶನಿವಾರದಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ.


ಹೌದು, ಈಗಾಗಲೇ ಗುಜರಾತ್ ಟೈಟನ್ಸ್ ಸೇರಿದಂತೆ ಕೆಲ ತಂಡಗಳು ಐಪಿಎಲ್‌ನ ಉಳಿದ ಪಂದ್ಯಗಳಿಗಾಗಿ ಸಿದ್ದತೆಗಳನ್ನು ಆರಂಭಿಸಿವೆ. ಈ ಸಿದ್ದತೆಗಳ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅದೇನೆಂದರೆ.. ಐಪಿಎಲ್ ಪುನರಾಂಭಗೊಳ್ಳುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದೊಂದಿಗೆ ಎಂಬುದು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಈ ಸುದ್ದಿ ಮತ್ತಷ್ಟು ಖುಷಿ ಕೊಟ್ಟಿದೆ. ಇನ್ನು ಈ ಬಾರಿಯ ಫೈನಲ್ ಪಂದ್ಯವನ್ನು ಜೂನ್ 3ರಂದು ಆಯೋಜಿಸಲು ನಿರ್ಧರಿಸಲಾಗಿದೆ.

ಐಪಿಎಲ್ 2025ರ ಪರಿಷ್ಕೃತ ವೇಳಾಪಟ್ಟಿ

Continue Reading
Advertisement

Trending

Copyright © 2025 Namma Kudla News

You cannot copy content of this page