Connect with us

LATEST NEWS

ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಆಗಿದ್ದು ಎಲ್ಲಿ ಗೊತ್ತಾ ?

Published

on

ಮಂಗಳೂರು/ಪ್ರಯಾಗ್‌ ರಾಜ್ : ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಹೊಸ ಹೊಸ ದಾಖಲೆ ಬರೆಯುತ್ತಿದೆ. ಫೆಬ್ರವರಿ 26ಕ್ಕೆ ಮಹಾಕುಂಭ ಮೇಳ ಅಂತ್ಯವಾಗಲಿದೆ. ಹೀಗಾಗಿ ಪ್ರಯಾಗ್‌ ರಾಜ್‌ನತ್ತ ಭಕ್ತಸಾಗರವೇ ಹರಿದು ಬರುತ್ತಿದ್ದು, ಟ್ರಾಫಿಕ್ ಜಾಮ್ ವಿಚಾರದಲ್ಲೂ ದಾಖಲೆ ಬರೆದಿದೆ.

ಮಹಾ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಬರುತ್ತಿರುವ ಕಾರಣ ನೂರಾರು ಕಿ.ಮೀ. ಟ್ರಾಫಿಕ್​ಜಾಮ್​ ಉಂಟಾಗಿದೆ. ಪ್ರಯಾಗರಾಜ್ -ವಾರಾಣಾಸಿ ಮಾರ್ಗದಲ್ಲಿ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್​ ಆಗಿದ್ದು, ಸುಮಾರು 48 ಗಂಟೆವರೆಗೂ ವಾಹನಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಳ್ತಿವೆ. ಇನ್ನು ಪ್ರಯಾಗರಾಜ್-ಕಾನ್ಪುರ ಮಾರ್ಗದಲ್ಲೂ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ಮಧ್ಯಪ್ರದೇಶ ರಾಜ್ಯದಲ್ಲೇ ಪ್ರಯಾಗರಾಜ್​ನತ್ತ ಬರುವ ವಾಹನಗಳ ಸಂಚಾರವನ್ನು ಬಂದ್‌ ಮಾಡಲಾಗಿದೆ. ಟ್ರಾಫಿಕ್​ನಿಂದಾಗಿ ಸುಮಾರು 50 ಕಿ.ಮೀ.ಸಂಚರಿಸಲು 10-12 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಒಂದೆರೆಡು ಕಿ.ಮೀ.ಸಂಚಾರಕ್ಕೂ ಹೆಚ್ಚಿನ ಸಮಯ ಬೇಕೇ ಬೇಕು. ಆದ್ದರಿಂದ ಮಧ್ಯಪ್ರದೇಶದ ನಗರವಾದ ಕಟ್ನಿಗೂ ಬರಬೇಡಿ ಎಂದು ಭಕ್ತರಲ್ಲಿ ಪೊಲೀಸರ ಮನವಿ ಮಾಡ್ತಿದ್ದಾರೆ.

ರೈಲ್ವೇ ಸ್ಟೇಷನ್ ಬಂದ್

ಬಸಂತ ಪಂಚಮಿಯ ಬಳಿಕ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇತ್ತು. ಆದ್ರೆ ಅದೆಲ್ಲವೂ ಉಲ್ಟಾ ಆಗಿದ್ದು, ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಳವಾಗಿದೆ. ಸದ್ಯ ಪ್ರಯಾಗರಾಜ್‌ನಲ್ಲಿ ಸಾರ್ವಜನಿಕರಿಂದ ಭಾರೀ ಜನದಟ್ಟಣೆಯಿಂದಾಗಿ ಸಂಗಮ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ. ಸಂಗಮ ರೈಲ್ವೇ ಸ್ಟೇಷನ್​ನಿಂದ ಹೊರ ಹೋಗಲು ಪ್ರಯಾಣಿಕರಿಗೆ ತೊಂದರೆಯಾದ ಕಾರಣ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರ ಹರಸಾಹಸ

ಇನ್ನು ಉತ್ತರಪ್ರದೇಶದ ವಾರಾಣಸಿ, ಲಖನೌ, ಮತ್ತು ಕಾನ್ಪುರ್​ಗಳಲ್ಲಿ ಪ್ರಯಾಗರಾಜ್​ಗೆ ಹೋಗುವ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಸುಮಾರು 25 ಕಿಲೋ ಮೀಟರ್​ವರೆಗೂ ಟ್ರಾಫಿಕ್ ಜಾಮ್ ಹರಡಿದೆ. ಪ್ರಯಾಗರಾಜ್​ನಲ್ಲಿಯೇ ಸುಮಾರು 7 ಕಿಲೋ ಮೀಟರ್​ ರಸ್ತೆಯಲ್ಲಿ ವಾಹಗನಗಳು ಅಲುಗಾಡದೆ ಹಾಗೆಯೇ ನಿಂತಿವೆ.

ಇದನ್ನೂ ಓದಿ: ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

ಚೀನದ ದಾಖಲೆ ಮುರಿದ ಭಾರತ

ಇನ್ನು ಪ್ರಯಾಗರಾಜ್​ನಿಂದ 400 ಕಿಲೋ ಮೀಟರ್ ದೂರದಲ್ಲಿರುವ ಜಬಲಾಪುರ್​ನಲ್ಲಿಯೂ ಕೂಡ ಸುಮಾರು 15 ಕಿಲೋ ಮೀಟರ್ ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲ ನೆರೆಯ ರಾಜ್ಯಗಳಿಂದ ಪ್ರಯಾಗರಾಜ್​ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿಯೂ ಕೂಡ ಇದೇ ಸ್ಥಿತಿ ಇದೆ. ಸದ್ಯ ಇದನ್ನು ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಚೀನಾದಲ್ಲಿ 2010ರಲ್ಲಿ ಬೀಜಿಂಗ್ ಟಿಬೆಟ್​ ಎಕ್ಸ್​ಪ್ರೆಸ್​ ಹೈವೇನಲ್ಲಿ ಇದೇ ರೀತಿಯ 100 ಕಿಲೋ ಮೀಟರ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ಕ್ಲೀಯರ್ ಆಗಲು ಸುಮಾರು 12 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಅದಾದ ಬಳಿಕ ಅತಿದೊಡ್ಡ ಟ್ರಾಫಿಕ್ ಜಾಮ್ ಸಂಭವಿಸಿದ್ದು ಈಗಲೇ ಎನ್ನಲಾಗುತ್ತಿದೆ.

ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್

ಇನ್ನು ಮಹಾರಾಷ್ಟ್ರದಲ್ಲಿ ಸಾವಿರಾರು ಕಾರುಗಳು ಒಂದು ಒಂದು ಇಂಚು ಕೂಡ ಮೂವ್ ಆಗದ ಮಟ್ಟಕ್ಕೆ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿವೆ. ಮಧ್ಯಪ್ರದೇಶದ ಅನೇಕ ಜಿಲ್ಲೆಗಳು ಕತ್ನಿ, ಮಲ್ಹಾರ್​, ಮತ್ತು ರೇವಾ ಜಿಲ್ಲೆಗಳಲ್ಲಿ ಟ್ರಾಫಿಕ್ ಜಾಮ್ ಸುಮಾರು 200 ಕಿಲೋ ಮೀಟರ್​ನಿಂದ 300 ಕಿಲೋ ಮೀಟರ್​ ವರೆಗೂ ಹಬ್ಬಿದೆ. ಸುಮಾರು 48 ಗಂಟೆಗಳ ಕಾಲದಿಂದ ಟ್ರಾಫಿಕ್ ಹಾಗೆಯೇ ಇದೆ. ಇದು ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕೂಡ ಹೇಳಲಾಗುತ್ತಿದೆ.

LATEST NEWS

ಎ. 1 ರಿಂದ ಮನೆ ಕಸಕ್ಕೂ ಕಟ್ಟಬೇಕು ಹಣ.. ಎಷ್ಟು ಗೊತ್ತಾ..?

Published

on

ಬೆಂಗಳೂರು: ಬಸ್ ಟಿಕೆಟ್ ದರ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ನಡುವೆ ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಎ. 1 ರಿಂದ ಪ್ರತಿ ಮನೆಯ ಕಸಕ್ಕೂ ಜನರು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಸರ್ಕಾರ ಅನುಮೋದನೆ ನೀಡಿದೆ.

ತ್ಯಾಜ್ಯ ಸಂಸ್ಕರಣೆ ಮಾಡದ ಅಪಾರ್ಟೆಂಟ್ಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ಕೆ.ಜಿ. ತ್ಯಾಜ್ಯಕ್ಕೂ 12 ರೂ. ಬಳಕೆದಾರ ಶುಲ್ಕ ವಿಧಿಸಲು ಸರ್ಕಾರವು ಅವಕಾಶ ನೀಡಿದೆ. ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರ ಶುಲ್ಕ ನಿರ್ಧರಿಸಲಾಗುತ್ತದೆ.

600 ಚದರ ಅಡಿ ವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ. ವರ್ಷಕ್ಕೆ 120 ರೂ. ಪಾವತಿಸಬೇಕು. 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ 400 ರೂ. ವರ್ಷಕ್ಕೆ 4,800 ರೂ. ಪಾವತಿಸಬೇಕಾಗುತ್ತದೆ.

Continue Reading

LATEST NEWS

ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ ಇನ್ನಿಲ್ಲ

Published

on

ಮಂಗಳೂರು : ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ(81) ಇಂದು(ಮಾ.15) ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದವರಾದ ವಾಮನ ಅವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸರಾಗಿ ಸಾಧನೆ ಮೆರೆದಿದ್ದಾರೆ.

ನವೆಂಬರ್ 15, 1944 ರಲ್ಲಿ ವಾಮನ ನಂದಾವರ ಜನಿಸಿದರು. ಅವರ ತಂದೆ ಬಾಬು ಬಾಳೆಪುಣಿ, ತಾಯಿ ಪೂವಮ್ಮ.  ಪ್ರಾಥಮಿಕ ಶಿಕ್ಷಣವ್ನನು ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ ಸರಿಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್‌ವಿಎಸ್ ಹೈಯರ್ ಎಲಿಮೆಂಟರಿ ಶಾಲೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಬೋರ್ಡ್ ಹೈಸ್ಕೂಲ್ ಕುರ್ನಾಡ್, ಆನಂದಾಶ್ರಮ ಪ್ರರೌಏಧಾಲೆ ಕೋಟೆಕಾರ್‌ನಲ್ಲಿ ಪಡೆದರು.

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾನಿಯದಲ್ಲಿ ಬಿ.ಇಡಿ ಪದವಿ ಪಡೆದರು.  ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಪದವಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಯದ ಬಿ.ಎ ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ‘ ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಗಳಿಸಿದರು.

ಬೆಂಗಳೂರು ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸೇಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ, ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿದ್ದ ಅವರು ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ ಹಾಗೂ ಮಂಗಳೂರು ದರ್ಶನ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಕೊನೆಗೂ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಕೃತಿ ವಿವರ :

ತಾಳಮೇಳ (ಕನ್ನಡ ಕವನ ಸಂಕಲನ) ೧೯೭೫, ಓಲೆಪಟಾಕಿ (ಸ್ವತಂತ್ರ ತುಳು ಕನ್ನಡ ಒಗಟುಗಳ ಸಂಕಲನ)೧೯೮೦, ತುಳುವೆರೆ ಕುಸಾಲ್ ಕುಸೆಲ್ (ತುಳು ಜಾನಪದ ಪ್ರಬಂಧ) ೧೯೮೭/೧೯೮೮, ಸಿಂಗದನ (ತುಳು ಜಾನಪದ ಅಧ್ಯಯನ ಪ್ರಬಂಧ) ೧೯೮೭/೧೯೮೮, ತುಳುಟು ಪನಿಕತೆ (ತುಳುತ್ತ ದಂತ ಕತೆಕುಲು) ೧೯೮೮, ಅವಳಿ ವೀರರೆ ಕುರಿತ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ’, ‘ಜಾನಪದ ಸುತ್ತಮುತ್ತ’, ಡಿ.ವಿ.ಜಿ.ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’, ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’, ಸ್ಮರಣ ಸಂಚಿಕೆ ‘ಪೆಂಗದೂಮ’, ಬರಹಗಾರರ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’, ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’, ‘ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ, ತುಳು ಜಾನಪದದ ಆಚರಣೆ, ತುಳು ಭಾಷಾ ಸಾಹಿತ್ಯ ಡಿ.ಕೆ. ಚೌಟ ಇಂಚಿತಿ ವ್ಯಕ್ತಿ ಚಿತ್ರ, ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್‌’, ‘ಬೀರ’(ತುಳು ಕವನ ಸಂಕಲನ), ತುಳು ದಂತಕತೆ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’, ‘ಕಿಡಿಗೇಡಿಯ ಕೀಟಲೆ’(ತುಳು ಜಾನಪದ ಕತೆ), ‘ಕೋಟಿ ಚೆನ್ನಯ’ (ಮಕ್ಕಳ ಕಥೆ).

ಪ್ರಶಸ್ತಿ ವಿವರ :

ಡಾ.ವಾಮನ ನಂದಾವರ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಬಂಟ್ವಾಳ ತಾಲ್ಲೂಕು 12ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ಸಾಧನೆಗೆ  ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರ ದೊರೆತಿವೆ.

Continue Reading

LATEST NEWS

ಇಂದು ಮುಂಬೈ-ಡೆಲ್ಲಿ ಡಬ್ಲ್ಯೂಪಿಎಲ್ ಫೈನಲ್; ಚೊಚ್ಚಲ ಬಾರಿಗೆ ಕಪ್ ಎತ್ತುವ ನಿರೀಕ್ಷೆಯಲ್ಲಿ ಕ್ಯಾಪಿಟಲ್ಸ್

Published

on

ಮಂಗಳೂರು/ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯ ಇಂದು (ಮಾ.10) ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡಬ್ಲ್ಯೂಪಿಎಲ್‌ನ 3ನೇ ಆವೃತ್ತಿಯ ಪ್ರಶಸ್ತಿ ಸಮರಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸಜ್ಜಾಗಿವೆ. ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲವಾಗಿ ಗೋಚರಿಸುತ್ತಿವೆ. ಮುಂಬೈ ಈ ಕೂಟದಲ್ಲಿ ಪ್ರಶಸ್ತಿ ಗೆಲ್ಲಬಲ್ಲ ಮೆಚ್ಚಿನ ತಂಡವಾದರೂ, ಡೆಲ್ಲಿ ಕೂಡ ಅಷ್ಟೇ ಪ್ರಬಲವಾಗಿದೆ.

ಸತತ 3ನೇ ಸಲ ಫೈನಲ್‌ಗೆ ನೆಗೆದಿರುವ ಡೆಲ್ಲಿ ಇಲ್ಲಿ ಗೆದ್ದರೆ ಅಚ್ಚರಿ ಪಡುವಂತಹದ್ದೇನಿಲ್ಲ. ಏಕೆಂದರೆ ಮುಂಬೈ 2023ರ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದಾಗ, ಬ್ರೆಬೋರ್ನ್ ಅಂಗಳದಲ್ಲಿ ಡೆಲ್ಲಿಯನ್ನೇ ಮಣಿಸಿತ್ತು. ಡೆಲ್ಲಿ ಈಗ ಪ್ರತೀಕಾರಕ್ಕೆ ಕಾದಿದೆ.

ಇದನ್ನೂ ಓದಿ: ಡೆಲ್ಲಿ ತಂಡದ ನಾಯಕನಾಗಿ ಅಕ್ಷರ್‌ ಪಟೇಲ್ ಆಯ್ಕೆ

ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 7 ಬಾರಿ ಮುಖಾಮುಖಿ ಆಗಿವೆ. ದೆಹಲಿ ನಾಲ್ಕು ಬಾರಿ ಮತ್ತು ಮುಂಬೈ ಮೂರು ಬಾರಿ ಜಯಗಳಿಸಿದೆ. ಈ ವರ್ಷ ಎರಡು ಬಾರಿ ಮುಖಾಮುಖಿಯಾಗಿದ್ದವು, ದೆಹಲಿ ತಂಡ ಎರಡರಲ್ಲೂ ಗೆದ್ದು ಬೀಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page