Connect with us

ಮಕರ ಜ್ಯೋತಿ ಯಾವ ಹೊತ್ತಲ್ಲಿ ಕಾಣುತ್ತದೆ ಗೊತ್ತಾ ?

Published

on

ಮಂಗಳೂರು/ಪತ್ತಿನಂತಿಟ್ಟ: ಬಹಳ ಭಕ್ತಿ-ಭಾವದಿಂದ ದೇಶಾದ್ಯಂತ ಮಕರ ಸಂಕ್ರಾಂತಿಯನ್ನ ಆಚರಿಸಲಾಗುತ್ತಿದೆ. ಒಂದೆಡೆ ಪವಿತ್ರ ನದಿಗಳಿಗೆ ತೆರಳಿ ಭಕ್ತಿಭಾವದಿಂದ ಮಿಂದು ಪೂಣ್ಯಸ್ನಾನ ಮಾಡಿದರೆ, ಇನ್ನೊಂದೆಡೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಅದೃಶ್ಯ ಜ್ಯೋತಿಯ ವಿಸ್ಮಯಕ್ಕೆ ಜಾಗರಣೆ ನಡೆಯುತ್ತಿದೆ. ಮತ್ತೊಂದೆಡೆ, ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯ ನಮಸ್ಕಾರದ ಘಳಿಗೆ ನೋಡಲು ಜನ ಕಾತರದಿಂದ ಕಾದಿದ್ದಾರೆ

ಎಳ್ಳು-ಬೆಲ್ಲದ ಸಮ್ಮಿಶ್ರಣವಾದ ಸಂಕ್ರಾಂತಿ ಸಮೃದ್ಧಿಯ ಸಂಕೇತ. ಮನೆ-ಮನಗಳಲ್ಲಿ ಶಾಂತಿ-ನೆಮ್ಮದಿ ಬೇಡುವ ಸಂಭ್ರಮದ ಹಬ್ಬ. ಇಂಗ್ಲೀಷ್ ಕ್ಯಾಲೆಂಡರ್‌ನ ವರ್ಷದ ಮೊದಲ ಹಬ್ಬ. ಸಂಕ್ರಾಂತಿ ಸೂರ್ಯದೇವ ತನ್ನ ಪಥ ಬದಲಿಸುವ ಘಳಿಗೆ. ಮಕರ ಸಂಕ್ರಾಂತಿ ಸಂಭ್ರಮ- ಸಡಗರ ಇಂದು (ಜ.14) ದೇಶಾದ್ಯಂತ ಎಲ್ಲೆಡೆ ಬೀರಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಉತ್ತರಾಯಣದಲ್ಲಿ ತೆರೆಯುತ್ತದೆ ಎಂಬ ನಂಬಿಕೆ ಇದೆ. ಹಗಲು ಜಾಸ್ತಿಯಾಗಿ, ಕತ್ತಲು ಕರಗುವ ಕಾಲ ಆರಂಭ ಆಗಲಿದೆ. ಈ ಬಾರಿ ಸಂಕ್ರಾಂತಿ ಬಲು ವಿಶೇಷವಾಗಿದೆ. 30 ವರ್ಷಗಳ ಬಳಿಕ ಹುಣ್ಣಿಮೆ ಮರುದಿನವೇ ಮಕರ ಸಂಕ್ರಾಂತಿ ಆಗಮಿಸಿದೆ. ಮಕರ ಜ್ಯೋತಿಯನ್ನು ಕಂಡು ಕಣ್ತುಂಬಿಸಿಕೊಳ್ಳಲು ಶಬರಿಮಲೆಯ ಅಯ್ಯಪ್ಪನ ಸನ್ನಿಧಾನಯಲ್ಲಿ ಭಕ್ತಸಾಗರ ನೆರೆದಿದೆ.

 

ಇದನ್ನೂ ಓದಿ : ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಮುಗಿಬಿದ್ದ ಮಾಲಾಧಾರಿಗಳು

 

ಈ ವರ್ಷದ ಮಂಡಲ ಪೂಜೆ ಆರಂಭವಾದಾಗಿನಿಂದ ಶಬರಿಮಲೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಕರ ಜ್ಯೋತಿ ಎಂದು ಕರೆಯಲ್ಪಡುವ ಪೊನ್ನಂಬಲಮೇಡಿನ ಕರ್ಪೂರದ ಪೂಜೆಯೇ ಮಕರವಿಳಕ್ಕು ಹಬ್ಬವಾಗಿದೆ. ದೇಶದ ನಾನಾ ಭಾಗಗಳಿಂದ ಅಯ್ಯಪ್ಪ ಮಾಲಾಧಾರಿಗಳು ಆಗಮಿಸಿ ಮಕರ ಜ್ಯೋತಿ ಕಣ್ತುಂಬಿಕೊಳ್ಳುತ್ತಾರೆ. ಮಕರ ಜ್ಯೋತಿಯ ಕಣ್ತುಂಬಿಸಿಕೊಳ್ಳಲು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬೆಟ್ಟದ ದೇವಾಲಯವಾದ ಶಬರಿಮಲೆಯಲ್ಲಿ ಸೇರಿದ್ದಾರೆ. ಸಾರ್ವಜನಿಕ ಹಿತ ದೃಷ್ಠಿಯಿಂದ ಇಂದು 40,000 ಬುಕಿಂಗ್ ಗೆ ಮಿತಿಗೊಳಿಸಲಾಗಿದೆ. ಮಕರ ಜ್ಯೋತಿ ದರ್ಶನವು ಇವತ್ತು ಸಂಜೆ 6 ಗಂಟೆಗೆ ಪ್ರಾರಂಭವಾಗಿ 7 ಗಂಟೆಗೆ ಕೊನೆಗೊಳ್ಳಲಿದೆ. ಶಬರಿಮಲೆಯಲ್ಲಿ ಭಕ್ತಸಂದಣಿಯನ್ನು ನಿಯಂತ್ರಿಸಲು ದೇವಸ್ವಂ ನಿರ್ಬಂಧಗಳನ್ನ ಜಾರಿಗೊಳಿಸಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಜಾರಕಿಹೊಳಿ ಮಗ ಆಯ್ಕೆ

Published

on

ಮಂಗಳೂರು/ಬೆಳಗಾವಿ: ಮಗಳು ಪ್ರಿಯಾಂಕಾ ಜಾರಕಿಹೊಳಿಯನ್ನು ಲೋಕಸಭೆ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸುವಂತೆ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಇದೀಗ ಮಗನನ್ನೂ ರಾಜಕೀಯ ಅಖಾಡಕ್ಕಿಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಪುತ್ರ ರಾಹುಲ್‌ ಜಾರಕಿಹೊಳಿ ರಾಜ್ಯ ಯುವ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿ ಆಯ್ಕೆಯಾಗಿದ್ದಾರೆ.

ರಾಹುಲ್‌ ಜಾರಕಿಹೊಳಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಗೋಕಾಕ್​ನ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ನಡೆದಿದೆ. ರಾಹುಲ್ ಬೆಂಬಲಿಗರು ಪಟಾಕಿ ಸಿಡಿಸಿ‌‌ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿ‌, ರಾಹುಲ್ ಜಾರಕಿಹೊಳಿ‌ ಪರ ಘೋಷಣೆ ಮೊಳಗಿದೆ.

ಇದನ್ನೂ ಓದಿ : ಆನ್ಲೈನ್ ವಂಚನೆ ; ಕೊನೆಗೂ ಪೊಲೀಸರ ಕೈವಶವಾದ ಖದೀಮ

ಇದೀಗ ರಾಹುಲ್‌ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದಂತಾಗಿದೆ. ಸತೀಶ್ ಜಾರಕಿಹೊಳಿ ಈಗಾಗಲೇ ಮಗಳನ್ನು ಸಂಸದೆ ಮಾಡಿದ್ದು, ಮಗನಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡುವ ಮುಖಾಂತರ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಮಾಸ್ಟರ್​ಪ್ಲ್ಯಾನ್ ಮಾಡಿದ್ದಾರೆ.

Continue Reading

LATEST NEWS

ನೈಟ್ ನಿದ್ದೆ ಬರಲ್ವಾ ? ಸುಖ ನಿದ್ರೆಗೆ ಬೆಸ್ಟ್ ಆಯುರ್ವೇದಿಕ್ ಟಿಪ್ಸ್ ಇಲ್ಲಿದೆ..

Published

on

ಪ್ರಸ್ತುತ ದಿನಗಳಲ್ಲಿ ಒತ್ತಡ ಮತ್ತು ಬ್ಯುಸಿ ಲೈಫ್‌ನಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ನಿದ್ರಾಹೀನತೆ ಒಂದಾಗಿದ್ದು, ಇದನ್ನು ಎದುರಿಸೋದು ಸುಲಭವಲ್ಲ. ತಕ್ಷಣ ಇದರ ಬಗ್ಗೆ ನೋಡಿಕೊಳ್ಳದಿದ್ದರೆ ದೊಡ್ಡ ಹೆಲ್ತ್ ಪ್ರಾಬ್ಲಮ್ ಆಗುತ್ತೆ. ನಿದ್ರಾಹೀನತೆ ಸಮಸ್ಯೆ ಕಡಿಮೆ ಮಾಡಲು ಈ ಆಯುರ್ವೇದಿಕ್ ಟಿಪ್ಸ್ ಫಾಲೋ ಮಾಡುವುದು ಉತ್ತಮ.

ಸ್ಲೀಪ್ ಡಿಸಾರ್ಡರ್ ಎಂದು ಕರೆಯುವ ಈ ನಿದ್ರಾಹೀನತೆಯಿಂದ , ತಕ್ಷಣ ನಿದ್ದೆ ಬರದಿರುವುದು, ಕಡಿಮೆ ನಿದ್ದೆ, ಮೂಡ್ ಸರಿ ಇಲ್ಲದಿರುವುದು, ಕಡಿಮೆ ಏಕಾಗ್ರತೆ ಇಂತಹ ಹಲವು ಹೆಲ್ತ್ ಪ್ರಾಬ್ಲಮ್ಸ್ ಇರುತ್ತದೆ.ಹಾಗಾಗಿ ಇದನ್ನು ತಡೆಯಲು ಆಯುರ್ವೇದದಲ್ಲಿ ಕೆಲವು ಸಲಹೆಗಳಿದ್ದು, ಅದರಲ್ಲಿ ಪ್ರಮುಖ ಅಂಶಗಳು ಇಲ್ಲಿದೆ.

ಸ್ಲೀಪ್ ಡಿಸಾರ್ಡರ್ ತಡೆಯಲು 6 ಆಯುರ್ವೇದ ಸಲಹೆಗಳು :

ಆಹಾರ: ನಿದ್ರಾಹೀನತೆ ಇಲ್ಲದ ಲೈಫ್‌ಗೆ ಆಹಾರದಲ್ಲಿ ಪೌಷ್ಟಿಕಾಂಶ ಇರಬೇಕು. ನಿದ್ದೆಗೆ ಒಂದು ಗಂಟೆ ಮೊದಲು ಬಿಸಿ ಹಾಲು, ಬಾದಾಮಿ ಮತ್ತು ಕ್ಯಾಮೊಮೈಲ್/ಹರ್ಬಲ್ ಟೀ ಕುಡಿಯಿರಿ.
ಮಸಾಜ್: ತಲೆ ಮತ್ತು ದೇಹದ ಮಸಾಜ್ ಮನಸ್ಸು ಮತ್ತು ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ. ಬೃಂಗರಾಜ್ ಎಣ್ಣೆಯಿಂದ ತಲೆಗೆ ಮಸಾಜ್ ಮತ್ತು ಬಾದಾಮಿ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದು ಒಳ್ಳೆಯದು.
ನಿದ್ದೆ ವಾತಾವರಣ: ಹಾಸಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕ್ಲೀನ್ ಆಗಿರಬೇಕು ಮತ್ತು ಡಿಜಿಟಲ್ ಗ್ಯಾಜೆಟ್ಸ್ ಇರಬಾರದು. ಓದುವುದು, ಧ್ಯಾನ ಅಥವಾ ವಾಕಿಂಗ್ ಮಾಡಿ.
ವೈದ್ಯಕೀಯ ಸಹಾಯ: ನಿದ್ರಾಹೀನತೆಗೆ ಪರಿಹಾರ ಹುಡುಕುವಾಗ ಮತ್ತು ಆಯುರ್ವೇದ ಫಾಲೋ ಮಾಡುವಾಗ, ಕಾರಣಗಳನ್ನು ತಿಳಿದುಕೊಳ್ಳಲು ಮತ್ತು ಮೆಡಿಸಿನ್ ಬೇಕಿದ್ದರೆ ಡಾಕ್ಟರ್ ನೋಡಿ.
ಕೆಫೀನ್ ಅಥವಾ ಆಲ್ಕೋಹಾಲ್: ನಿದ್ದೆಗೆ ಮೊದಲು ಟೀ ಅಥವಾ ಕಾಫಿ ಕುಡಿಯಬೇಡಿ. ಇವೆರಡರಲ್ಲೂ ಕೆಫೀನ್ ಇರುವುದರಿಂದ ನಿದ್ದೆಗೆ ತೊಂದರೆ ಆಗುತ್ತದೆ. ಆಲ್ಕೋಹಾಲ್ ಕೂಡ ಒಂದು ಕಾರಣ.
ನಿದ್ದೆ ರೂಟೀನ್: ನಿದ್ದೆಗೆ ಮೊದಲು ಸ್ನಾನ ಮಾಡುವುದು ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ. ಲೂಸ್ ಡ್ರೆಸ್ ಹಾಕಿಕೊಳ್ಳಿ. ಕಣ್ಣಿಗೆ ಮಾಸ್ಕ್ ಹಾಕಿಕೊಳ್ಳಿ.

Continue Reading

LATEST NEWS

ಪ್ರೇಮ ನಿವೇದನೆ ದಿನ : ಮನದ ಪ್ರೀತಿ ಹೇಳುವ ಮುನ್ನ ಅದರ ಮಹತ್ವ ಅರಿಯಿರಿ…

Published

on

ಈಗಾಗಲೇ ಫೆ.7 ರಿಂದ ಫೆ.14ರವರೆಗಿನ ‘ವ್ಯಾಲೆಂಟೈನ್ಸ್ ವೀಕ್’ ಆರಂಭವಾಗಿದೆ, ಪ್ರೇಮಿಗಳ ವಾರದ ಎರಡನೇ ದಿನವಾದ ಇಂದು (ಫೆಬ್ರವರಿ 8) ಪ್ರೇಮ ನಿವೇದನೆ ದಿನ. ಮನದಾಳದ ಪ್ರೀತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತಾಪಿಸುವ ಮೂಲಕ ಪ್ರೀತಿಯನ್ನು ಅಧಿಕೃತಗೊಳಿಸುವ ದಿನ. ಹಾಗಾದರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೇಮ ನಿವೇದನೆ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿ ವಿಶೇಷವಾಗಿರುತ್ತದೆ. ಜೀವನ ಪರ್ಯಂತ ಸದಾ ನೆನಪಿನಲ್ಲಿ ಉಳಿಯುವ ಕಾರಣ ವಿಭಿನ್ನವಾಗಿ ನಿವೇದನೆ ಮಾಡಲು ಬಯಸುತ್ತಾರೆ. ಪ್ರೇಮ ಪಯಣಕ್ಕೆ ಹೊಸ ಹೆಜ್ಜೆ ಇಡಲು ಬಯಸುವವರಿಗೆ ಈ ದಿನ ಬೆಸ್ಟ್.

ಪ್ರೇಮ ನಿವೇದನೆ ದಿನದ ಇತಿಹಾಸ :

ವ್ಯಾಲೆಂಟೈನ್ಸ್ ವೀಕ್ ಆಚರಣೆಯ ಭಾಗವಾಗಿ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ಆಚರಣೆಯೂ ಮೊದಲಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾರಂಭವಾಯಿತು, ತದನಂತರದಲ್ಲಿ ಭಾರತ ಸೇರಿದಂತೆ ಇತರ ದೇಶಗಳಿಗೂ ಹರಡಿತು. ಆದರೆ ಈ ದಿನದ ಆಚರಣೆ ಯಾವಾಗ ಶುರುವಾಯಿತು ಎನ್ನುವ ಬಗ್ಗೆ ನಿಖರವಾದ ಇತಿಹಾಸವಿಲ್ಲ. ಆದರೆ ಕೆಲ ಮಾಹಿತಿಯ ಪ್ರಕಾರ 1477ರಲ್ಲಿ ಆಸ್ಟಿಯನ್ ರಾಜಕುಮಾರ ಮ್ಯಾಕ್ಸಿಮಿಲಿಯನ್ ಬರ್ಗಂಡಿಯ ಮೇರಿಗೆ ವಜ್ರದ ಉಂಗುರವನ್ನು ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದನು ಎನ್ನಲಾಗಿದೆ. 1816ರಲ್ಲಿ ತನ್ನ ಭಾವಿ ಪತಿಯೊಂದಿಗೆ ರಾಜಕುಮಾರಿ ಷಾರ್ಲೆಟ್ ಅವರ ನಿಶ್ವಿತಾರ್ಥವು ಮಹತ್ವದ ಚರ್ಚೆಯಲ್ಲಿತ್ತು. ಹೀಗಾಗಿ ಈ ದಿನವನ್ನು ವ್ಯಾಲೆಂಟೈನ್ಸ್ ವೀಕ್‌ನ ಪ್ರಪೋಸ್ ಡೇ ಆಗಿ ಆಚರಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಪ್ರಪೋಸ್ ಡೇ ಆಚರಣೆ ಹೆಚ್ಚು ಜನಪ್ರಿಯವಾಗಿದ್ದು, ಜಗತ್ತಿನದಾದಂತ್ಯ ಈ ದಿನವನ್ನು ಆಚರಿಸಲಾಗುತ್ತದೆ.

ಪ್ರಪೋಸ್ ಡೇ ಮಹತ್ವ :

ಪ್ರಪೋಸ್ ಡೇ ಪ್ರೇಮಿಗಳ ವಾರದ ಅತ್ಯಂತ ಅರ್ಥಪೂರ್ಣ ದಿನಗಳಲ್ಲಿ ಒಂದಾಗಿದೆ. ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭದ ಮಾತಲ್ಲ ಏಕೆಂದರೆ ಅಲ್ಲಿ ನಿರಾಕರಣೆಯ ಭಯವಿರುತ್ತದೆ, ಆದರೂ ಈ ದಿನ ಏನೋ ಧೈರ್ಯ ಮಾಡಿ ಪ್ರೇಮಿಯು ಪ್ರೇಮ ನಿವೇದನೆ ಮಾಡುತ್ತಾನೆ. ಇಲ್ಲಿಂದ ಹೊಸ ಸಂಬಂಧವು ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಪ್ರಾರಂಭವಾಗುತ್ತವೆ. ನವ ಪ್ರೇಮ ಪ್ರಯಾಣವನ್ನು ಪ್ರಾರಂಭಿಸುವುದು ಅಥವಾ ತಮಗೆ ತಾವೇ ಹೃತ್ತೂರ್ವಕ ಭರವಸೆಗಳನ್ನು ನೀಡುವಂತಹ ದಿಟ್ಟ ಹೆಜ್ಜೆಗಳನ್ನು ಇಡಲು ಪ್ರೇರೇಪಿಸುವುದೇ ಪ್ರಪೋಸ್ ಡೇ ಮಹತ್ವ.

Continue Reading
Advertisement

Trending

Copyright © 2025 Namma Kudla News

You cannot copy content of this page