Connect with us

LATEST NEWS

ಮಹಿಳಾ ನಾಗಸಾಧ್ವಿಗಳು ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಗೊತ್ತಾ ?

Published

on

ಮಂಗಳೂರು/ಉತ್ತರ ಪ್ರದೇಶ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಯಿಂದಲೂ ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. 13 ಅಖಾಡಗಳ ನಾಗಾ ಸಾಧುಗಳು ಮತ್ತು ಮಹಿಳಾ ಸಾಧ್ವಿಗಳು ಪ್ರಯಾಗರಾಜ್‌ ಗೆ ಈಗಾಗಲೇ ಬಂದಿದ್ದಾರೆ. ಮಹಾ ಕುಂಭ ಮೇಳಕ್ಕೆ ಬಂದ ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್‌ ಸಮಯದಲ್ಲಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಆಗಾಗ್ಗೆ ಉದ್ಭವಿಸಬಹುದು. ಈ ಪ್ರಶ್ನೆಗೆ ಉತ್ತರವನ್ನು ನಾವು ಇಂದು ನಿಮಗೆ ಹೇಳುತ್ತೇವೆ. ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್‌ ಇರದ ದಿನಗಳಲ್ಲಿ ಮಾತ್ರ ಗಂಗಾ ಸ್ನಾನ ಮಾಡುತ್ತಾರೆ. ಕುಂಭಮೇಳದ ಸಮಯದಲ್ಲಿ ಪಿರಿಯಡ್ಸ್‌ ಆದರೆ ತನ್ನ ಮೇಲೆ ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ಬರುತ್ತಾರೆ. ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದಿಲ್ಲ.


ಮಹಾಕುಂಭದಲ್ಲಿ ಪುರುಷ ನಾಗ ಸಾಧು ಸ್ನಾನ ಮಾಡಿದ ನಂತರ ಅಖಾಡದ ಮಹಿಳಾ ನಾಗಾ ಸಾಧುಗಳು ಸ್ನಾನ ಮಾಡುತ್ತಾರೆ. ನಾಗಾ ಸಾಧುಗಳಾಗುವ ಮೊದಲು ಅವರು ಜೀವಂತವಾಗಿರುವಾಗ ಪಿಂಡ ದಾನ ಮಾಡಬೇಕು. ತಲೆ ಬೋಳಿಸಿಕೊಳ್ಳಬೇಕು. 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಮಹಿಳಾ ನಾಗಾ ಸಾಧುಗಳು, ಪುರುಷ ನಾಗಾ ಸಾಧುಗಳಿಗಿಂತ ಭಿನ್ನವಾಗಿ ಇರುತ್ತಾರೆ. ಅವರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಹೀಗಾಗಿ ಪಿರಿಯಡ್ಸ್ ಸಮಯದಲ್ಲಿ ಸಮಸ್ಯೆ ಕಾಡುವುದಿಲ್ಲ. ಬೆಳಗಿನಿಂದ ಸಂಜೆಯವರೆಗೂ ಶಿವನ ಆರಾಧನೆಯಲ್ಲಿಯೇ ಕಾಲ ಕಳೆಯುತ್ತಾರೆ. ಪುರುಷ ನಾಗಾ ಸಾಧುಗಳಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ನಾಗಾ ಸಾಧುಗಳು ವಿವಸ್ತ್ರರಾಗಿ ಓಡಾಡಲು ಅವಕಾಶ ಇರುವುದಿಲ್ಲ. ದೀಕ್ಷೆ ಪಡೆದು ನಾಗಾ ಸಾಧುಗಳಾದ ಮಹಿಳೆಯರು ಹೊಲಿಗೆ ಹಾಕದ ಕೇಸರಿ ವಸ್ತ್ರ ಧರಿಸಬೇಕು. ಸ್ತ್ರೀ ನಾಗಾ ಸಾಧುಗಳು ಹಣೆಯ ಮೇಲೆ ತಿಲಕ ಇಡುತ್ತಾರೆ. ನಾಗ ಸಾಧು ಆಗಲು 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಮಹಿಳಾ ನಾಗ ಸಾಧು ಆಗಲು ಅರ್ಹಳು ಮತ್ತು ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾಳೆ ಎಂದು ಗುರುಗಳಿಗೆ ಭರವಸೆ ನೀಡಬೇಕು. ಇದಾದ ನಂತರ ಗುರುಗಳು ನಾಗ ಸಾಧು ಆಗಲು ಅನುಮತಿ ನೀಡುತ್ತಾರೆ.

ನಾಗ ಸಾಧುವಾಗುವ ಮೊದಲು ಮಹಿಳೆಯ ಹಿಂದಿನ ಜೀವನವನ್ನು ನೋಡಿ ದೇವರಿಗೆ ಭಕ್ತಿ ಹೊಂದಿದ್ದಾಳೋ ಇಲ್ಲವೋ ಮತ್ತು ನಾಗ ಸಾಧುವಾದ ನಂತರ ಅವಳು ಕಷ್ಟಕರವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ನಾಗಾ ಸಾಧುವಾಗುವ ಮೊದಲು, ಮಹಿಳೆ ಜೀವಂತವಾಗಿರುವಾಗಲೇ ತನಗೆ ತಾನೇ ಪಿಂಡ ದಾನ ಮಾಡಬೇಕು ಮತ್ತು ತಲೆ ಬೋಳಿಸಿಕೊಳ್ಳಬೇಕು. ಕ್ಷೌರದ ನಂತರ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತದೆ. ನಂತರ ಮಹಿಳಾ ನಾಗಾ ಸಾಧು ಇಡೀ ದಿನ ದೇವರ ಹೆಸರನ್ನು ಜಪಿಸುತ್ತಾರೆ. ಪುರುಷರಂತೆ ಮಹಿಳಾ ನಾಗಾ ಸಾಧುಗಳು ಸಹ ಶಿವನನ್ನು ಪೂಜಿಸುತ್ತಾರೆ. ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಶಿವನ ಹೆಸರನ್ನು ಜಪಿಸುತ್ತಾಳೆ. ಸಂಜೆ ದತ್ತಾತ್ರೇಯನನ್ನು ಪೂಜಿಸುತ್ತಾಳೆ. ಊಟದ ನಂತರ ಅವಳು ಮತ್ತೆ ಶಿವನನನ್ನು ಜಪಿಸುತ್ತಾಳೆ. ನಾಗಾ ಸಾಧುಗಳು ಹಣ್ಣುಗಳು, ಗಿಡಮೂಲಿಕೆಗಳು ಮತ್ತು ಹಲವು ಬಗೆಯ ಎಲೆಗಳನ್ನು ತಿನ್ನುತ್ತಾರೆ. ಮಹಿಳಾ ನಾಗಾ ಸಾಧುಗಳ ನಿವಾಸಕ್ಕಾಗಿ ಪ್ರತ್ಯೇಕ ಅಖಾಡಗಳನ್ನು ವ್ಯವಸ್ಥೆ ಮಾಡಲಾಗಿದೆ.

LATEST NEWS

ಆರಿಹೋಯ್ತು 46 ವರ್ಷಗಳಿಂದ ಉರಿಯುತ್ತಿದ್ದ ದೀಪನಾಥೇಶ್ವರ ದೇವಾಲಯದ 3 ದೀಪಗಳು

Published

on

ಮಂಗಳೂರು/ಮುಂಡಗೋಡ : ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರಕನ್ನಡ  ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿವೆ.

1979ರಲ್ಲಿ ಹಚ್ಚಿದ್ದ ದೀಪ :

ಚಿಗಳ್ಳಿ ಗ್ರಾಮದ ದೈವಜ್ಞೆ ಶಾರದಮ್ಮ ಎಂಬವರು 1979ರಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಅದು ಒಂದು ದಿನ ಕಳೆದರೂ ಆರಿರಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಒಂದು ವರ್ಷದ  ಬಳಿಕ 1980ರಲ್ಲಿ ಮತ್ತೊಂದು ದೀಪವನ್ನು ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು.

2ನೇ ದೀಪ ಹಚ್ಚಿದ 10-15 ದಿನಗಳ ನಂತರ  3ನೇ ದೀಪ ಬೆಳಗಿಸಿದರು. ಆಶ್ವರ್ಯ ಎಂಬಂತೆ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು ಎನ್ನಲಾಗಿದೆ. 1979 ರಿಂದ 2025ರ ಫೆಬ್ರವರಿ ವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿದ್ದು ಆತಂಕ ಹುಟ್ಟಿಸಿದೆ

ಗ್ರಾಮಸ್ಥರಲ್ಲಿ ಭಯದ ಛಾಯೆ : 

ದೀಪ ಹಚ್ಚಿದ್ದ ಶಾರದಮ್ಮ ಕೆಲವು ವರ್ಷಗಳ ಬಳಿಕ ಇಹಲೋಕ ತ್ಯಜಿಸಿದರು. ಆದರೂ ದೀಪಗಳು ಇಲ್ಲಿವರೆಗೆ ಉರಿದುಕೊಂಡು ಬಂದಿದೆ. 14 ದಿನದ ಹಿಂದೆ ಈ ದೀಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರ್ಚಕ ವೆಂಕಟೇಶ್ ನಿಧನರಾದರು. ಈ ಹಿನ್ನೆಲೆಯಲ್ಲಿ ಸೂತಕವಿದ್ದ ಕಾರಣ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಫೆ.5 ರಂದು ಪೂಜೆಗಾಗಿ ಗರ್ಭಗುಡಿ ತೆರೆದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ : ಮಡಿಕೇರಿಯಲ್ಲಿ ಇನ್ನು ಮುಂದಕ್ಕೆ ನೀರಿನ ಬಾಟಲ್ ಸಿಗುವುದಿಲ್ಲ

ದೀಪ ಆರಿರುವುದು ಸಹಜವಾಗಿಯೇ ಭಕ್ತರಿಗೆ ನೋವುಣಿಸಿದೆ. ಇಷ್ಟು ದಿನ ಆರದ್ದು ಈಗ ಆರಿರುವುದು ಅಪಶಕುಶ ಎಂದು ಹೇಳಲಾಗುತ್ತಿದೆ. ರಾಜ್ಯ ಆಳುವವರಿಗೂ ಕೆಡುಕಾಗಲಿದೆ. ಗ್ರಾಮಕ್ಕೂ ಕೆಡುಕು ಎಂಬ ಆತಂಕ ಮನೆಮಾಡಿದೆ. ಹಾಗಾಗಿ ಸದ್ಯ ದೇವಸ್ಥಾನವನ್ನು ಮುಚ್ಚಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.

Continue Reading

LATEST NEWS

ಗರ್ಭಿಣಿಗೆ ಲೈಂಗಿಕ ದೌರ್ಜನ್ಯ ಎಸಗಿ ಚಲಿಸುವ ರೈಲಿನಿಂದ ಎಸೆದ ಕಾಮುಕರು.. ಓರ್ವ ಆರೋಪಿ ಅರೆಸ್ಟ್

Published

on

ಚೆನ್ನೈ: 4 ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ಚೆನ್ನೈನ ತಿರುಪತ್ತೂರು ಜಿಲ್ಲೆ ಜೋಲಾರ್‌ಪೆಟ್ಟೆಯಲ್ಲಿ ನಡೆದಿದೆ. ಈ ಘಟನೆಯ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಇನ್ನೋರ್ವ ಆರೋಪಿಯನ್ನು ಪತ್ತೆ ಹಚ್ಚುತ್ತಿದ್ದಾರೆ.

ಮಹಿಳೆಯು ರೈಲಿನಲ್ಲಿ ಶೌಚಾಲಯಕ್ಕೆ ಹೋದಂತಹ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಆಕೆಯನ್ನು ಹಿಂಬಾಲಿಸಿ ಆತ್ಯಾಚಾರವೆಸಗಿದ್ದಾರೆ. ಬಳಿಕ ಮಹಿಳೆಯು ಜೋರು ಕಿರುಚಾಡಿದ್ದು, ಆಕೆಯನ್ನು ರೈಲಿನಿಂದ ತಳ್ಳಿದ್ದಾರೆ. ಮಹಿಳೆಯ ಕೈ-ಕಾಲು ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ.

ಮಹಿಳೆಯು ಆಂಧ್ರಪ್ರದೇಶದಿಂದ ಚಿತ್ತೂರು ಕಡೆಗೆ ಪ್ರಯಾಣಿಸುತ್ತಿದ್ದಳು. ಜೋಲಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಒರ್ವ ಆರೋಪಿಯನ್ನು ಬಂಧಿಸಿದ್ದಾರೆ. ಹೇಮರಾಜ್ ಬಂಧಿತ ಆರೋಪಿಯಾಗಿದ್ದಾನೆ. ಇನ್ನೋರ್ವ ಆರೋಪಿಯನ್ನು ಹುಡುಕುತ್ತಿದ್ದು, ಸಿಸಿಟಿವಿ ಯಲ್ಲಿ ಪರಿಶೀಲಿಸಲಾಗುತ್ತಿದೆ.

Continue Reading

LATEST NEWS

ಕುಂಭ ಮೇಳದಿಂದ ಹಿಂದಿರುಗುವಾಗ ದುರಂತ; ಕರ್ನಾಟಕದ ನಾಲ್ವರು ಸೇರಿ ಆರು ಮಂದಿ ಸಾ*ವು

Published

on

ಮಂಗಳೂರು/ಮಧ್ಯಪ್ರದೇಶ : ಕುಂಭ ಮೇಳದಿಂದ ಹಿಂದಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ನಾಲ್ವರು ಸೇರಿ ಒಟ್ಟು ಆರು ಮಂದಿ ಸಾ*ವನ್ನಪ್ಪಿದ್ದಾರೆ.

ಮಧ್ಯಪ್ರದೇಶದ ಇಂದೋರ್​ ಬಳಿ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ಸಾ*ವನ್ನಪ್ಪಿದ ಘಟನೆ ಜರುಗಿದೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ಹಿಂದಿರುಗುತ್ತಿದ್ದಾಗ ಈ ಅ*ವಘಡ ಸಂಭವಿಸಿದೆ.

ಮೃತರನ್ನು ಬೆಳಗಾವಿಯ ಶಹಾಪುರ ನಿವಾಸಿ ಡ್ರೈವರ್ ಸಾಗರ್ (55), ಗಣೇಶಪುರ ನಿವಾಸಿ ನಿತಿ ಪಾಟೀಲ್ (50) ಸೇರಿ ಒಟ್ಟು ಆರು ಮಂದಿ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಮತ್ತೆ ಅ*ಗ್ನಿ ಅವಘ*ಡ

ಟಿಟಿ ವಾಹನದಲ್ಲಿ 19 ಮಂದಿ ವಾಪಸಾಗುತ್ತಿದ್ದರು ಆಗ ಲಾರಿಗೆ ವಾಹನ ಡಿಕ್ಕಿ ಹೊಡೆದಿದೆ. ಬೆಳಗಾವಿಯ ನಾಲ್ವರು ಇಂದೋರ್​ನ ಇಬ್ಬರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನ್ಪುರ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page