Connect with us

LATEST NEWS

ಪಪ್ಪಾಯ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ ??

Published

on

ಆರೋಗ್ಯವನ್ನು ಕಾಪಾಡುವಲ್ಲಿ ಪಪ್ಪಾಯ ಮಹತ್ವದ ಪಾತ್ರ ವಹಿಸುತ್ತದೆ. ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಯಾವರಲ್ಲಾ ಪ್ರಯೋಜನ ಇದೆ ? ಖಾಲಿ ಹೊಟ್ಟೆಗೆ ಪಪ್ಪಾಯ ತಿಂದ್ರೆ ಏನಾಗುತ್ತೆ ? ಎಂಬೆಲ್ಲಾ ಅಂಶಗಳನ್ನು ಇಲ್ಲಿ ತಿಳಿಯೋಣ .

ಸಾಮಾನ್ಯವಾಗಿ ತರಕಾರಿ ಮತ್ತು ಹಣ್ಣುಗಳು ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಡುವಲ್ಲಿ ಸಹಕಾರಿಯಾಗಿದೆ. ಅದರಲ್ಲಿಯೂ ಕೆಲವು ಹಣ್ಣುಗಳು ಆರೋಗ್ಯವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಅದರಲ್ಲಿ ಪಪ್ಪಾಯಿ ಹಣ್ಣು ಅಗ್ರ ಸ್ಥಾನದಲ್ಲಿರುತ್ತದೆ. ನಿಯಮಿತವಾಗಿ ಅದನ್ನು ಸೇವನೆ ಮಾಡಿದಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ರುಚಿಕರ ಮಾತ್ರವಲ್ಲ, ಪೌಷ್ಠಿಕಾಂಶದಿಂದ ಕೂಡಿರುತ್ತದೆ. ಜೊತೆಗೆ ಪಪ್ಪಾಯಿ ವರ್ಷದ 12 ತಿಂಗಳು ಲಭ್ಯವಿರುವ ಹಣ್ಣುಗಳಲ್ಲಿ ಒಂದಾಗಿದೆ. ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುವ ಸಾಮಾನ್ಯ ಹಣ್ಣು ಇದಾಗಿದ್ದು, ಖಾಲಿ ಹೊಟ್ಟೆಯಲ್ಲಿ ಇದರ ಸೇವನೆಯಿಂದ ಅನೇಕ ರೀತಿಯ ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ. ಪಪ್ಪಾಯ ಸೇವನೆಯಿಂದ ಉಂಟಾಗುವ ಪ್ರಮುಖ ಲಾಭಾಂಶಗಳು :

    1. ಪಪ್ಪಾಯ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಅದರಲ್ಲಿಯೂ ಹಸಿ ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮತ್ತು ಬೇಯಿಸಿದ ಪಪ್ಪಾಯಿ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಜೊತೆಗೆ ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
    2. ಪಪ್ಪಾಯಿಯಲ್ಲಿ ಕಂಡು ಬರುವ ಜೀರ್ಣಕಾರಿ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಆಮ್ಲೀಯತೆ, ಗ್ಯಾಸ್ ಮತ್ತು ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
    3. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಮಾಡುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಜೊತೆಗೆ ಇದು ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
    4. ಪಪ್ಪಾಯಿ ಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳಿವೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೃದ್ರೋಗದ ಅಪಾಯ ಕಡಿಮೆ ಆಗುತ್ತದ
    5. ಪಪ್ಪಾಯಿಯಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳಿವೆ, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ವಿಶೇಷವಾಗಿ ಕೊಲೊರೆಕ್ಟಲ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಇದು ಬಹಳ ಮುಖ್ಯ ಪಾತ್ರ ವಹಿಸುತ್ತದೆ
    6. ಪಪ್ಪಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದ್ದು, ಇದು ಕರುಳಿನ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
    7. ಅದರಲ್ಲಿಯೂ ಪಪ್ಪಾಯಿ ಹಣ್ಣಿನಲ್ಲಿರುವ ಫೈಬರ್ ಆರೋಗ್ಯಕರ ಕರುಳಿಗೆ ಪ್ರಯೋಜನಕಾರಿಯಾಗಿದೆ, ಇದು ಡೈವರ್ಟಿಕ್ಯುಲಿಟಿಸ್ ನಂತಹ ಕರುಳಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಪಪ್ಪಾಯಿ ಹಣ್ಣು ತನ್ನ ಶಕ್ತಿ, ಪೋಷಣೆ ಮತ್ತು ನೈಸರ್ಗಿಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
    8. ಪಪ್ಪಾಯಿಯಲ್ಲಿ ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ಇದ್ದು, ಮೂಳೆಯ ಆರೋಗ್ಯವನ್ನು ಸುಧಾರಿಸಿ ಅವುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಹಣ್ಣು, ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಇರುವ ಆಹಾರವಾಗಿದ್ದು, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

BELTHANGADY

ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

Published

on

ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.

ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Continue Reading

LATEST NEWS

ಆರಿಹೋಯ್ತು 46 ವರ್ಷಗಳಿಂದ ಉರಿಯುತ್ತಿದ್ದ ದೀಪನಾಥೇಶ್ವರ ದೇವಾಲಯದ 3 ದೀಪಗಳು

Published

on

ಮಂಗಳೂರು/ಮುಂಡಗೋಡ : ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರಕನ್ನಡ  ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿವೆ.

1979ರಲ್ಲಿ ಹಚ್ಚಿದ್ದ ದೀಪ :

ಚಿಗಳ್ಳಿ ಗ್ರಾಮದ ದೈವಜ್ಞೆ ಶಾರದಮ್ಮ ಎಂಬವರು 1979ರಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಅದು ಒಂದು ದಿನ ಕಳೆದರೂ ಆರಿರಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಒಂದು ವರ್ಷದ  ಬಳಿಕ 1980ರಲ್ಲಿ ಮತ್ತೊಂದು ದೀಪವನ್ನು ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು.

2ನೇ ದೀಪ ಹಚ್ಚಿದ 10-15 ದಿನಗಳ ನಂತರ  3ನೇ ದೀಪ ಬೆಳಗಿಸಿದರು. ಆಶ್ವರ್ಯ ಎಂಬಂತೆ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು ಎನ್ನಲಾಗಿದೆ. 1979 ರಿಂದ 2025ರ ಫೆಬ್ರವರಿ ವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿದ್ದು ಆತಂಕ ಹುಟ್ಟಿಸಿದೆ

ಗ್ರಾಮಸ್ಥರಲ್ಲಿ ಭಯದ ಛಾಯೆ : 

ದೀಪ ಹಚ್ಚಿದ್ದ ಶಾರದಮ್ಮ ಕೆಲವು ವರ್ಷಗಳ ಬಳಿಕ ಇಹಲೋಕ ತ್ಯಜಿಸಿದರು. ಆದರೂ ದೀಪಗಳು ಇಲ್ಲಿವರೆಗೆ ಉರಿದುಕೊಂಡು ಬಂದಿದೆ. 14 ದಿನದ ಹಿಂದೆ ಈ ದೀಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರ್ಚಕ ವೆಂಕಟೇಶ್ ನಿಧನರಾದರು. ಈ ಹಿನ್ನೆಲೆಯಲ್ಲಿ ಸೂತಕವಿದ್ದ ಕಾರಣ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಫೆ.5 ರಂದು ಪೂಜೆಗಾಗಿ ಗರ್ಭಗುಡಿ ತೆರೆದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ : ಮಡಿಕೇರಿಯಲ್ಲಿ ಇನ್ನು ಮುಂದಕ್ಕೆ ನೀರಿನ ಬಾಟಲ್ ಸಿಗುವುದಿಲ್ಲ

ದೀಪ ಆರಿರುವುದು ಸಹಜವಾಗಿಯೇ ಭಕ್ತರಿಗೆ ನೋವುಣಿಸಿದೆ. ಇಷ್ಟು ದಿನ ಆರದ್ದು ಈಗ ಆರಿರುವುದು ಅಪಶಕುಶ ಎಂದು ಹೇಳಲಾಗುತ್ತಿದೆ. ರಾಜ್ಯ ಆಳುವವರಿಗೂ ಕೆಡುಕಾಗಲಿದೆ. ಗ್ರಾಮಕ್ಕೂ ಕೆಡುಕು ಎಂಬ ಆತಂಕ ಮನೆಮಾಡಿದೆ. ಹಾಗಾಗಿ ಸದ್ಯ ದೇವಸ್ಥಾನವನ್ನು ಮುಚ್ಚಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.

Continue Reading

LATEST NEWS

ಗರ್ಭಿಣಿಗೆ ಲೈಂಗಿಕ ದೌರ್ಜನ್ಯ ಎಸಗಿ ಚಲಿಸುವ ರೈಲಿನಿಂದ ಎಸೆದ ಕಾಮುಕರು.. ಓರ್ವ ಆರೋಪಿ ಅರೆಸ್ಟ್

Published

on

ಚೆನ್ನೈ: 4 ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ಚೆನ್ನೈನ ತಿರುಪತ್ತೂರು ಜಿಲ್ಲೆ ಜೋಲಾರ್‌ಪೆಟ್ಟೆಯಲ್ಲಿ ನಡೆದಿದೆ. ಈ ಘಟನೆಯ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಇನ್ನೋರ್ವ ಆರೋಪಿಯನ್ನು ಪತ್ತೆ ಹಚ್ಚುತ್ತಿದ್ದಾರೆ.

ಮಹಿಳೆಯು ರೈಲಿನಲ್ಲಿ ಶೌಚಾಲಯಕ್ಕೆ ಹೋದಂತಹ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಆಕೆಯನ್ನು ಹಿಂಬಾಲಿಸಿ ಆತ್ಯಾಚಾರವೆಸಗಿದ್ದಾರೆ. ಬಳಿಕ ಮಹಿಳೆಯು ಜೋರು ಕಿರುಚಾಡಿದ್ದು, ಆಕೆಯನ್ನು ರೈಲಿನಿಂದ ತಳ್ಳಿದ್ದಾರೆ. ಮಹಿಳೆಯ ಕೈ-ಕಾಲು ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ.

ಮಹಿಳೆಯು ಆಂಧ್ರಪ್ರದೇಶದಿಂದ ಚಿತ್ತೂರು ಕಡೆಗೆ ಪ್ರಯಾಣಿಸುತ್ತಿದ್ದಳು. ಜೋಲಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಒರ್ವ ಆರೋಪಿಯನ್ನು ಬಂಧಿಸಿದ್ದಾರೆ. ಹೇಮರಾಜ್ ಬಂಧಿತ ಆರೋಪಿಯಾಗಿದ್ದಾನೆ. ಇನ್ನೋರ್ವ ಆರೋಪಿಯನ್ನು ಹುಡುಕುತ್ತಿದ್ದು, ಸಿಸಿಟಿವಿ ಯಲ್ಲಿ ಪರಿಶೀಲಿಸಲಾಗುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page