Connect with us

FILM

ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿಂದ ಶಾರುಖ್ ಖಾನ್ ಪಡೆಯುತ್ತಿರುವ ಬಾಡಿಗೆ ಎಷ್ಟು ಗೊತ್ತಾ?

Published

on

ಮಂಗಳೂರು/ಮುಂಬೈ: ಬಾಲಿವುಡ್ ಕಿಂಗ್ ಶಾರುಖ್‌ ಖಾನ್ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಶ್ರೀಮಂತ ನಟ. ಇವರು ತಮ್ಮ ಐಷಾರಾಮಿ ಮನೆಯಾದ ಮನ್ನತ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ 2 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನ ಖರೀದಿ ಮಾಡಿದ್ದರು. ಈ 2 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನ ಶಾರುಖ್‌ ಖಾನ್‌ ಬಾಡಿಗೆಗೆ ನೀಡಿದ್ದಾರೆ. ಈ ಎರಡು ಅಪಾರ್ಟ್‌ಮೆಂಟ್‌ಗಳಿಂದ ತಿಂಗಳಿಗೆ ಲಕ್ಷಗಟ್ಟಲೇ ಬಾಡಿಗೆ ಪಡೆಯುತ್ತಿದ್ದಾರೆ.

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಶಾರುಖ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮುಂಬೈ ಪಾಲಿ ಹಿಲ್‌ನಲ್ಲಿರುವ ಪೂಜಾ ಖಾಸಾ ಎಂಬಲ್ಲಿ 2 ಲಕ್ಷುರಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳನ್ನ ಶಾರುಖ್ ಖಾನ್‌ ಖರೀದಿಸಿದ್ದರು. ಆ ಪೈಕಿ ಒಂದು ಅಪಾರ್ಟ್‌ಮೆಂಟ್‌ ಕಟ್ಟಡದ ಮೊದಲ ಹಾಗೂ ಎರಡನೇ ಮಹಡಿಯಲ್ಲಿದೆ. ಮತ್ತೊಂದು ಅಪಾರ್ಟ್‌ಮೆಂಟ್‌ ಕಟ್ಟಡದ ಏಳನೇ ಹಾಗೂ ಎಂಟನೇ ಮಹಡಿಯಲ್ಲಿದೆ.

3 ವರ್ಷಕ್ಕೆ ಅಗ್ರೀಮೆಂಟ್

ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ ಅನ್ನು ನಿರ್ಮಾಪಕ ಜ್ಯಾಕಿ ಭಗ್ನಾನಿ ಮತ್ತವರ ಸಹೋದರಿ ದೀಪ್‌ಶಿಖಾ ದೇಶ್‌ಮುಖ್ ಅವರಿಗೆ ನೀಡಲಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ಜ್ಯಾಕಿ ಭಗ್ನಾನಿ ಮತ್ತು ಸಹೋದರಿ ದೀಪ್‌ಶಿಖಾ ದೇಶ್‌ಮುಖ್‌ 11.54 ಲಕ್ಷ ರೂಪಾಯಿ ಬಾಡಿಗೆ ಕಟ್ಟಬೇಕಿದೆ. ಅಡ್ವಾನ್ಸ್ ರೂಪದಲ್ಲಿ (ಸೆಕ್ಯೂರಿಟಿ ಡೆಪಾಸಿಟ್‌) 32.97 ಲಕ್ಷ ರೂಪಾಯಿಯನ್ನ ಶಾರುಖ್‌ ಖಾನ್‌ಗೆ ಕೊಡಲಾಗಿದೆ. 3 ವರ್ಷಕ್ಕೆ ಅಗ್ರೀಮೆಂಟ್ ಆಗಿದೆ.

ಇದನ್ನೂ ಓದಿ: ಮೂರನೇ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ

ಏಳನೇ ಮತ್ತು ಎಂಟನೇ ಮಹಡಿಯಲ್ಲಿರುವ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ನ ನಿರ್ಮಾಪಕ ವಾಷು ಭಗ್ನಾನಿ ಅವರಿಗೆ ಶಾರುಖ್ ಖಾನ್‌ ಬಾಡಿಗೆಗೆ ಕೊಟ್ಟಿದ್ದಾರೆ. ಇದಕ್ಕಾಗಿ ವಾಷು ಭಗ್ನಾನಿ ಪ್ರತಿ ತಿಂಗಳು 12.61 ಲಕ್ಷ ರೂಪಾಯಿಯನ್ನ ಬಾಡಿಗೆಯಾಗಿ ನೀಡಬೇಕಿದೆ. ಅಡ್ವಾನ್ಸ್ ರೂಪದಲ್ಲಿ (ಸೆಕ್ಯೂರಿಟಿ ಡೆಪಾಸಿಟ್) ಬರೋಬ್ಬರಿ 36 ಲಕ್ಷ ರೂಪಾಯಿ ಕೊಟ್ಟಿದ್ದಾರೆ ವಾಷು ಭಗ್ನಾನಿ. ಹೀಗಾಗಿ ಶಾರುಖ್‌ ಖಾನ್ ಅವರಿಗೆ ಮೂರು ವರ್ಷಗಳಲ್ಲಿ ಬರೋಬ್ಬರಿ 8.67 ಕೋಟಿ ರೂಪಾಯಿ ಆದಾಯವಾಗಲಿದೆ ಎಂದು ಹೇಳಲಾಗುತ್ತಿದೆ.

 

FILM

ರಾಜ್ಯದಾದ್ಯಂತ ಡೆವಿಲ್ ಚಿತ್ರದ ಟ್ರೇಲರ್‌ ಔಟ್‌; ಗಿಲ್ಲಿ ಖಡಕ್‌ ಡೈಲಾಗ್‌

Published

on

ಮಿಲನ ಪ್ರಕಾಶ್‌ ನಿರ್ದೇಶನದ, ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಟ್ರೇಲರ್‌ ಇಂದು (ಡಿ.5)ಬೆಳಿಗ್ಗೆ 10.05 ಕ್ಕೆ ರಿಲೀಸ್‌ ಆಗಿದ್ದು, ಭಾರೀ ಮೆಚ್ಚುಗೆಯನ್ನು ಪಡೆದಿದೆ. ಈ ಟ್ರೇಲರ್‌ನಲ್ಲಿ ದರ್ಶನ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಬಿಗ್‌ಬಾಸ್‌ನಲ್ಲಿರೋ ಗಿಲ್ಲಿ ನಟ ಕೂಡ ಡೆವಿಲ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್‌ನಲ್ಲಿ ಗಿಲ್ಲಿ ಅವರ ಪಾತ್ರದ ಝಲಕ್‌ ತೋರಿಸಲಾಗಿದೆ. ಟ್ರೇಲರ್‌ನಲ್ಲಿ ತೋರಿಸಲಾದ ಒಂದು ಡೈಲಾಗ್‌ಗೆ ಮತ್ತು ಅವರ ಗೆಟಪ್ ನೋಡಿ ಫ್ಯಾನ್ಸ್‌ ಫುಲ್‌ ಖುಷಿಪಟ್ಟಿದ್ದಾರೆ.


ಖಡಕ್‌ ಲುಕ್‌ನಲ್ಲಿ ಪೊಲೀಸ್‌ ಠಾಣೆಗೆ ಬಂದು ಪೊಲೀಸ್‌ ಅಧಿಕಾರಿ ಮುಂದೆ ಕಾಲ್ಮೇಲೆ ಕಾಲಾಕಿ ಕೂತು, ‘ಎಕ್ಸ್‌ಕ್ಯೂಸ್‌ ಮೀ ಪಿಸಿ, ಎಸಿ ಹಾಕಮ್ಮ. ಲಾಟ್ಸ್‌ ಆಫ್‌ ಸೆಖೆ’ ಎಂದು ಡೈಲಾಗ್‌ ಹೊಡೆಯುತ್ತಾರೆ. ಸಿನಿಮಾದಲ್ಲಿ ಅವರ ಪಾತ್ರ ಎಷ್ಟು ಹೊತ್ತು ಇರುತ್ತದೆ ಎಂಬ ಕುತೂಹಲ ಇದೆ.

 

ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ಗೆ ಜತೆಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಹೇಶ್‌ ಮಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶರ್ಮಿಳಾ ಮಾಂಡ್ರೆ ಮೊದಲಾದವರಿದ್ದಾರೆ. ಶೋಭರಾಜ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ವಿನಯ್‌ ಗೌಡ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

 

ಇದನ್ನೂ ಓದಿ: ಡೆವಿಲ್ ಸಿನಿಮಾ ಸೆಟ್‌ನಲ್ಲಿ ಮರೆಯಲಾಗದ ಕ್ಷಣಗಳು ಇವು : ಚಂದು ಗೌಡ ಪೋಸ್ಟ್

 

ಡಿಸೆಂಬರ್ 11ರಂದು ಡೆವಿಲ್‌ ಸಿನಿಮಾ ರಾಜ್ಯಾದಾದ್ಯಂತ ಬಿಡುಗಡೆ ಆಗಲಿದೆ. ದರ್ಶನ್‌ ಜೈಲಿನಲ್ಲಿ ಇರುವಾಗಲೇ ಡೆವಿಲ್‌ ಸಿನಿಮಾ ತೆರೆಗೆ ಬರುತ್ತಿದೆ. ಎಲ್ಲರೂ ಪ್ಯಾನ್‌ ಇಂಡಿಯಾ ಹಿಂದೆ ಓಡುತ್ತಿರುವಾಗ ಡೆವಿಲ್‌ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ.

Continue Reading

FILM

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಬಾರೆಬೈಲ್‌ನಲ್ಲಿ ಹರಕೆ ನೇಮೋತ್ಸವ

Published

on

ಮಂಗಳೂರು: ಕಾಂತಾರ-1 ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದಿಂದ ಗುರುವಾರ ರಾತ್ರಿ ಹರಕೆಯ ಕೋಲ ಸಮರ್ಪಿಸಲಾಯಿತು.

ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿತು. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು.

 

ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು.

 

ಕಳೆದ ಏಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗವಹಿಸಿತ್ತು. ಗುರುವಾರ ಅದೇ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಲಾಯಿತು.

Continue Reading

FILM

ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕ ಸಾವು

Published

on

ಶಿವಮೊಗ್ಗ: ಸಾವು ಅನ್ನೋದು ಯಾವಾಗ ಹೇಗೆ ಬರುತ್ತದೆ ಎಂದು ಊಹಿಸೋದು ತುಂಬಾನೇ ಕಷ್ಟ. ಅದೆಷ್ಟೋ ಕಲಾವಿದರು ಅಭಿನಯ ಮಾಡುತ್ತಿರುವಾಗಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ಕನ್ನಡದ ನಿರ್ದೇಶಕರೊಬ್ಬರು ಸಿನಿಮಾ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದ ಪರಿಣಾಮ ಬುಧವಾರ (ಡಿ.03) ಮೃತಪಟ್ಟಿದ್ದಾರೆ. ಸಂಗೀತ್ ಸಾಗರ್ ಮೃತಪಟ್ಟ ನಿರ್ದೇಶಕ.


ಸಂಗೀತ್ ಸಾಗರ್ ಶಿವಮೊಗ್ಗ ಕೊಪ್ಪದಲ್ಲಿ ಪಾತ್ರಧಾರಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಆ ವೇಳೆ ನಿರ್ದೇಶಕ ಸಾಗರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಏನೂ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: ಮದುವೆ ಮನೆಯಲ್ಲಿ ರಾದ್ಧಾಂತ ಮಾಡಿದ ವರನ ಕುಟುಂಬ; ಕಾರಣ ಏನು ಗೊತ್ತಾ?

ಮೃತ ನಿರ್ದೇಶಕ ಸಂಗೀತ್ ಸಾಗರ್ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page