Connect with us

bangalore

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಡಿಕೆಸಿ ಸ್ವಾಗತ..!

Published

on

ಬೆಂಗಳೂರು: ನಗರದ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಮತ್ತು ಟೆಕ್ನಾಲಜಿ ಸೆಂಟ‌ರ್ ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದರು.


ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಮಯದಲ್ಲಿ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಸೇರಿದಂತೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್, ಭಾರತೀಯ ಜನತಾ ಪಾರ್ಟಿ ರಾಜ್ಯಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಶಾಸಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

bangalore

ಕಾನೂನು ಕಾಯುವವರೇ ಕಾಮುಕರಾದ್ರೆ..! ಹಿರಿಯ ಪೊಲೀಸ್ ಅಧಿಕಾರಿ ರಾಸಲೀಲೆ ವೀಡಿಯೋ ವೈರಲ್..!

Published

on

ಬೆಂಗಳೂರು: ರಾಜ್ಯದಲ್ಲಿ ಕಾನೂನು ಇಲಾಖೆಯೇ ತಲೆ ತಗ್ಗಿಸುವ ಪ್ರಕರಣವೊಂದು ನಡೆದಿದೆ. ಚಿನ್ನ ಸ್ಮಂಗ್ಲಿಗ್ ಕೇಸ್ ನಲ್ಲಿ ಜೈಲಿನಲ್ಲಿರುವ ನಟಿ ರನ್ಯಾ  ರಾವ್ ತಂದೆ ಹಿರಿಯ ಪೊಲೀಸ್​​ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್  ತನ್ನ ಕಚೇರಿಯಲ್ಲೇ ಪೊಲೀಸ್ ಡ್ರೆಸ್ ನಲ್ಲೇ ಮಹಿಳೆಯರ ಜೊತೆಗೆ ರಾಸಲೀಲೆ ನಡೆಸಿರುವುದು ಬೆಳಕಿಗೆ ಬಂದಿದೆ. ರಾಮಚಂದ್ರರಾವ್ ಮಹಿಳೆಯರನ್ನು ಅಪ್ಪಿಕೊಂಡು, ತಬ್ಬಿಕೊಂಡು, ಮುತ್ತು ನೀಡುವ ದೃಶ್ಯಗಳ ವಿಡಿಯೋ ರೀಲೀಸ್ ಆಗಿದೆ.

 

 

ಕಚೇರಿಯಲ್ಲಿ ಡ್ಯೂಟಿಯಲ್ಲಿರುವ ಸಂದರ್ಭವೇ ಇವರು ದೂರು ನೀಡಲು ಬರುವ ಬೇರೆ ಬೇರೆ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವ ದೃಶ್ಯ ಸೀಕ್ರೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಪೊಲೀಸ್ ಇಲಾಖೆಯ ಶಿಸ್ತು, ಘನತೆ, ಗೌರವಕ್ಕೆ ಧಕ್ಕೆ ತರುವ ವಿಷಯ. ಮಹಿಳೆಯರನ್ನು ಬಲವಂತ ಮಾಡಿಲ್ಲದೇ ಇದ್ದರೂ, ಕಚೇರಿಯ ವೇಳೆಯಲ್ಲಿ ಪೊಲೀಸ್ ಡ್ರೆಸ್ ಧರಿಸಿ ರಾಮಚಂದ್ರ ರಾವ್ ರಾಸಲೀಲೆ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ರಾಮಚಂದ್ರರಾವ್ ಸದ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದಾರೆ.

 

ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಬಗ್ಗೆ ನನಗೆ ಬೆಳಗ್ಗೆಯಷ್ಟೇ ಗೊತ್ತಾಗಿದೆ. ಎಷ್ಟೇ ದೊಡ್ಡವರಾದ್ರು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ ಎಂದು ಹೇಳಿದರು.

Continue Reading

bangalore

ಚಲಿಸುತ್ತಿದ್ದ ಕಾರು ಅಗ್ನಿಗಾಹುತಿ; ಪ್ರಾಣಾಪಾಯದಿಂದ ಪಾರಾದ ಚಾಲಕ

Published

on

ಬೆಂಗಳೂರು: ಚಲಿಸುತ್ತಿದ್ದ ಕಾರಿಗೆ ರಸ್ತೆಮಧ್ಯೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸುಮಾರು 7 ಗಂಟೆಗೆ ನಡೆದಿದೆ.


ಯಶವಂತಪುರದಿಂದ ಮಲ್ಲೇಶ್ವರಂ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನ ಇಂಜಿನ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್‌, ಚಾಲಕ ತಕ್ಷಣ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಕಾರಿಗೆ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ.

Continue Reading

bangalore

ಕೆಎಸ್ಆರ್‌ಟಿಸಿ ಬಸ್‌-ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕನ ಜೀವ ಉಳಿದಿದ್ದೇ ಒಂದು ಪವಾಡ

Published

on

ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಪಿಕ್‌-ಅಪ್‌ ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಘಟನೆ ನೆಲಮಂಗಲ ತಾಲೂಕಿನ ಕೆರೆಕತ್ತಗಿನೂರು ಗೇಟ್‌ ಬಳಿ ಬುಧವಾರ(ಜ.14) ನಡೆದಿದೆ.


ಅದೃಷ್ಟವಶಾತ್‌, ಬೊಲೆರೋ ಪಿಕ್‌-ಅಪ್‌ ಚಾಲಕ ಪವಾಡ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಪಿಕ್‌-ಅಪ್‌ನ ಮುಂಬಾಗ ಹಾನಿಗೊಳಗಾಗಿದೆ. ಎರಡು ದಿನದ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಭೀಕರ ಅಪ*ಘಾತಕ್ಕೆ ಮೂವರು ವಿದ್ಯಾರ್ಥಿಗಳು ಬ*ಲಿ

ಈ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ನಡೆದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page