Connect with us

3 ಗಂಟೆಯವರೆಗೆ ಸಾಮಗ್ರಿ ಖರೀದಿಸಿ ನಿರಾಳರಾದ ಜಿಲ್ಲೆಯ ಜನತೆ

Published

on

3 ಗಂಟೆಯವರೆಗೆ ಸಾಮಗ್ರಿ ಖರೀದಿಸಿ ನಿರಾಳರಾದ ಜಿಲ್ಲೆಯ ಜನತೆ

ಮಂಗಳೂರು : ಕೊರೊನಾ ಸೋಂಕು ಹರಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವನ್ನು ಪಾಲನೆ ಮಾಡಿ ಮನೆಯಲ್ಲಿ ಕುಳಿತುಕೊಂಡಿದ್ದ ಜನತೆ ಇಂದು ಬೆಳಿಗ್ಗಿನಿಂದಲೇ ಮಾರುಕಟ್ಟೆಗೆ ಆಗಮಿಸಿ ಖರೀದಿಯಲ್ಲಿ ತೊಡಗಿಸಿಕೊಂಡರು. ನಗರದ ಬಹುತೇಕ ಮಾರುಕಟ್ಟೆ, ದಿನಸಿ ಅಂಗಡಿಗಳಿಗೆ ಜನ ಮುಗಿ ಬಿದ್ದಿರುವುದು ಕಂಡು ಬಂತು.

ಹಲವು ಮಂದಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರೂಇನ್ನು ಕೆಲವರು ಮಾಸ್ಕ್‌ ಹಾಕದಿರುವುದೂ ಕಂಡು ಬಂತು. ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನತೆ ಎಲ್ಲಿ ಸಾಮಾನು ಮುಗಿದು ಹೋಗುವುದೋ ಎನ್ನುವ ಆಂತಕದಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು.

ಬೆಳಗ್ಗಿನಿಂದ ಸಂಜೆ 3 ಗಂಟೆಯವರೆಗೆ ಇದೇ ಮೊದಲ ಬಾರಿಗೆ ಎಂಬಂತೆ ದೀರ್ಘ ಅವಧಿಯ ವೇಳೆ ದಿನಸಿ ಸಾಮಗ್ರಿಗಳನ್ನು ಖರೀದಿಸಿಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು,. ಈ ಹಿನ್ನೆಲೆಯಲ್ಲಿ ನಗರದ ಪೆಟ್ರೋಲ್‌ ಬಂಕ್‌ಗಳು, ತರಕಾರಿ, ಹಾಲು, ಹಣ್ಣುಹಂಪಲು, ಮೀನು, ಮಾಂಸದ ಅಂಗಡಿಗಳೂ ಸೇರಿದಂತೆ ಬಹುತೇಕ ಎಲ್ಲಾ ಅಂಗಡಿಗಳೂ ತೆರೆದಿದ್ದವು. ಇನ್ನು ಮಧ್ಯಾಹ್ನ 3 ಗಂಟೆ ಆಗುತ್ತಿದ್ದಂತೆ ಕಾಲಾವಧಿ ಮುಗಿಯುತ್ತಾ ಬಂದಂತೆ ಎಲ್ಲಾ ಅಂಗಡಿಗಳೂ ಬಾಗಿಲು ಹಾಕತೊಡಗಿದವು.

ಹಲವು ಅಂಗಡಿಗಳಲ್ಲಿ ತಂದಿಟ್ಟ ಸಾಮಗ್ರಿಗಳು ಖಾಲಿಯಾಗಿರುವುದು ಕಂಡು ಬಂತು. ನಗರದ ಹಲವು ಕಡೆಗಳಲ್ಲಿ ಪೊಲೀಸರು ಸಾರ್ವಜನಿಕರನ್ನು ಮನೆಗೆ ಕಳುಹಿಸುತ್ತಿರುವುದು ಕಂಡು ಬಂತು. ಸಂಜೆ 4 ಗಂಟೆಯ ಬಳಿಕವಂತೂ ಮತ್ತೆ ಮಂಗಳೂರಿನ ರಸ್ತೆಗಳು ಬಿಕೋ ಅನ್ನತೊಡಗಿದವು.

ರಸ್ತೆ ಪೂರ್ತಿ ಖಾಲಿಯಾಗಿದ್ದು, ಅಲ್ಲಲ್ಲಿ ಪಹರೆ ಕಾಯುವ ಪೊಲೀಸರಷ್ಟೇ ಕಂಡು ಬಂದರು. ಜಿಲ್ಲಾಡಳಿತವೇ ದಿನಬಳಕೆ ಸಾಮಗ್ರಿಗಳನ್ನು ಮನೆಗೆ ತಲುಪಿಸಲಿದೆ ಎಂದು ಭರವಸೆ ನೀಡಿದ್ದ ಜನಪ್ರತಿನಿಧಿಗಳ ಮಾತನ್ನು ನಂಬಿದ್ದವರಲ್ಲಿ ಆಕ್ರೋಶ ಮೂಡಿದೆ.

ಜಿಲ್ಲೆಯ ಯಾವುದೇ ಭಾಗದಲ್ಲೂ ಜಿಲ್ಲಾಡಳಿತ ಮನೆ ಮನೆಗೆ ದಿನಸಿ ಸಾಮಗ್ರಿಗಳನ್ನು ತಲುಪಿಸಿದ ಬಗ್ಗೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತದ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಮಂಗಳೂರಿನ ಬಹುತೇಕ ಕಡೆಗಳಲ್ಲಿ ಬೆಳಗ್ಗಿನ ಜಾವದಿಂದಲೇ ವಾಹನಗಳು ತುಂಬಿದ್ದು, ಜನಸಾಗರವೇ ಕಂಡು ಬಂದಿದೆ. ನಗರದ ಕ್ಲಾಕ್‌ಟವರ್ ಬಳಿಯಲ್ಲಿಯೇ ವಾಹನಗಳನ್ನು ನಿಲ್ಲಿಸಲು ಪೊಲೀಸರು ಸೂಚಿಸಿದ್ದು, ಅಲ್ಲಿಂದ ಮುಂದೆ ಮಾರುಕಟ್ಟೆಗೆ ಎಲ್ಲರೂ ನಡೆದುಕೊಂಡು ಹೋಗುವ ದೃಶ್ಯ ಕಂಡು ಬಂತು. ಹಲವು ಕಡೆಗಳಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್‌ ನಿರ್ವಹಿಸಿದರು. ಅಲ್ಲದೆ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಹೋಗುವಂತೆಯೂ ಸಲಹೆ ಸೂಚನೆಗಳನ್ನು ನೀಡಿದರು. ಒಟ್ಟಿನಲ್ಲಿ ಜಿಲ್ಲಾಡಳಿತದ ಇಂದಿನ ಸುದೀರ್ಘ ಅವಧಿಯ ರಿಲಾಕ್ಸೇಶನ್‌ನಿಂದ ಜನ ಸಾಮಗ್ರಿ ಖರೀದಿಸಿ ಒಂದಷ್ಟು ನಿರಾಳರಾದರು.

Advertisement
Click to comment

Leave a Reply

Your email address will not be published. Required fields are marked *

BELTHANGADY

ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರಾಜ್ಯ ಗೃಹ ಇಲಾಖೆ ವೈಫಲ್ಯ ಕಾರಣ-ಶಾಸಕ ಪೂಂಜಾ

Published

on

ಬೆಳ್ತಂಗಡಿ: ಕೇವಲ ಬೆಳ್ತಂಗಡಿ ಮಾತ್ರವಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸೋತಿದೆ. ಈ ಘಟನೆ ಸಣ್ಣ ಘಟನೆಯೇನಲ್ಲ. ಇದರಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಇದರ ಹಿಂದಿರುವವರನ್ನು ಪತ್ತೆ ಹಚ್ಚಿ ಜನರ ಆತಂಕವನ್ನು ನಿವಾರಿಸುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪೊಲೀಸ್ ಇಲಾಖೆಯ ನಿಷ್ಟ್ರಿಯತೆಯನ್ನು ಗೃಹ ಇಲಾಖೆ ಸರಿಪಡಿಸದೇ ಇದ್ದಲ್ಲಿ ಇಂತಹ ಕಾನೂನು ಉಲ್ಲಂಘಿತ ದುಷ್ಕೃತ್ಯಗಳು ಹೆಚ್ಚಾಗುತ್ತಲೇ ಹೋಗುತ್ತದೆ.

ಅಶಾಂತಿ ನಿರ್ಮಾಣವಾಗುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

Continue Reading

BELTHANGADY

ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಕಿಡ್ನ್ಯಾಪ್ ತಪ್ಪಿಸಿ ಬಾಲಕಿಯನ್ನು ರಕ್ಷಿಸಿದ ಅಬ್ಬುಸಾಲಿ !

Published

on

ಬೆಳ್ತಂಗಡಿ: ಸ್ಕೂಟರ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಇಕೋ ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು, ಸಿನಿಮೀಯ ಶೈಲಿಯಲ್ಲಿ ಅಪಹರಣಕ್ಕೆ ಯತ್ನಿಸಿದ ಆತಂಕಕಾರಿ ಘಟನೆ ಇಂದು ಬೆಳ್ತಂಗಡಿಯಲ್ಲಿ  ನಡೆದಿದೆ. ಈ ಘಟನೆ ಊರಿನ ಜನತೆಯನ್ನು ತಲ್ಲಣಗೊಳಿಸಿದೆ.

ಆಕೆಯನ್ನು ಕಾರಿಗೆ ತಳ್ಳಿ ಅಪಹರಣ ಮಾಡಲು ಸಾಧ್ಯವಾಗದೇ ಇದ್ದಾಗ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಇದೇ ವೇಳೆ ಅದೇ ದಾರಿಯಾಗಿ ಬರುತ್ತಿದ್ದ ಅಬ್ಬುಸಾಲಿ ಎಂಬವರು ಬಾಲಕಿಯ ಪಾಲಿಗೆ ಆಪತ್ಭಾಂದವರಾಗಿದ್ದಾರೆ.

ಅಬ್ಬುಸಾಲಿಯನ್ನು ಕಂಡ ಮೂವರು ದುಷ್ಕರ್ಮಿಗಳು ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಕೂಡಲೇ ಅಬ್ಬುಸಾಲಿ  ಭಯಭೀತಗೊಂಡಿದ್ದ ಮತ್ತು ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸಮಯ ಪ್ರಜ್ಞೆ ಮೆರೆದ ಅಬ್ಬುಸಾಲಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬೆಳ್ತಂಗಡಿ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ದರೋಡೆ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

 

Continue Reading

kerala

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

Published

on

ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಕಾಸರಗೋಡಿನ ಯುವತಿ ಅಡೂರು ಮೂಲದ ಚಿನ್ನು ಪಾಪು ಎಂಬಾಕೆ ಸಾವನ್ನಪ್ಪಿದ್ದಾರೆ.

ಅವರ ಬಾಡಿಗೆ ಮನೆಯಲ್ಲಿ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page