Connect with us

LATEST NEWS

ಕಡಲುಕೋಳಿಗಳಲ್ಲಿ ಹೆಚ್ಚುತ್ತಿದೆ ಡೈವೋರ್ಸ್‌: ಕಾರಣ ಕೇಳಿದರೆ ಅಚ್ಚರಿ ಪಡುತ್ತೀರಾ

Published

on

ಲಂಡನ್‌: ಡೈವೋರ್ಸ್‌ ಎಂದರೆ ಮನುಷ್ಯರಲ್ಲಿ ಮಾತ್ರವೇ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ದಕ್ಷಿಣ ಅಟ್ಲಾಂಟಿಕ್‌ ಫಾಕ್‌ಲ್ಯಾಂಡ್‌ ದ್ವೀಪದ ಕಪ್ಪು-ಕಂದು ಕಡಲುಕೋಳಿಗಳು (Black-Browed Albatrosses) ಹೆಚ್ಚು ಡೈವೋರ್ಸ್‌ ಪಡೆಯುತ್ತಿವೆಯಂತೆ. ಕಾರಣ ಏಕೆ ಗೊತ್ತೇ? ಹವಾಮಾನ ವೈಪರಿತ್ಯ. ಅಚ್ಚರಿಯಾದರೂ ನೀವು ನಂಬಲೇಬೇಕು.


ಈ ಬಗ್ಗೆ ಲಂಡನ್‌ನ ‘ಪ್ರೊಸೀಡಿಂಗ್ಸ್‌ ಆಫ್‌ ರಾಯಲ್‌ ಸೊಸೈಟಿ’ ಈ ಅಧ್ಯಯನ ವರದಿಯನ್ನು ಬಹಿರಂಗಪಡಿಸಿದೆ.

ಹವಾಮಾನ ವೈಪರೀತ್ಯವು ಪಕ್ಷಿಗಳ ಸಂಬಂಧದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಈ ವರದಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲಿ ಇದೀಗ ವಿಪರೀತ ವ್ಯತ್ಯಾಸ ಉಂಟಾಗುತ್ತಿದೆ. ಇದು ಹಲವು ದೇಶಗಳಲ್ಲಿ ಭಾರಿ ಏರುಪೇರು ಉಂಟುಮಾಡುತ್ತಿದೆ.

ಯಾವ್ಯಾವ ಕಾಲಕ್ಕೆ ಏನೇನಾಗಬೇಕೋ ಅವು ಆಗದೇ ಹವಾಮಾನದಲ್ಲಿ ವೈಪರೀತ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇದು ಕೆಲವೊಂದು ವರ್ಗದ ಪಕ್ಷಿಗಳ ಸಂತಾನೋತ್ಪತ್ತಿ ಮೇಲೆ ಭಾರಿ ಪರಿಣಾಮ ಬೀರಿದೆ.

ಆದ್ದರಿಂದ ಜೋಡಿ ಹಕ್ಕಿಗಳು ಪರಸ್ಪರ ಬೇರೆಯಾಗಿ ಒಂಟಿಯಾಗಿ ಇರುತ್ತಿವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಸದಾ ಜೋಡಿಯಾಗಿರುವ ಇರುವ ಈ ಪಕ್ಷಿಗಳು ಹವಾಮಾನ ವೈಪರೀತ್ಯದಿಂದಾಗಿ ಪ್ರತ್ಯೇಕವಾಗಿರುತ್ತಿತ್ತು.

ಸಂತಾನೋತ್ಪತ್ತಿಯಲ್ಲಿ ಆಸಕ್ತಿ ಹೊಂದುತ್ತಿಲ್ಲ. ಈ ಪಕ್ಷಿಗಳೀಗ ವಿಚ್ಛೇದನ ಪಡೆದುಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಈ ಕಡಲುಕೋಳಿಗಳು ಇತರ ಪಕ್ಷಿಗಳಂತಲ್ಲ. ಇವು ದೀರ್ಘಕಾಲ ಏಕ ಸಂಗಾತಿಯನ್ನು ಹೊಂದಿರುತ್ತವೆ.

ಒಂದೇ ಗಂಡು-ಹೆಣ್ಣು ಬಹುದೀರ್ಘದವರೆಗೆ ಒಟ್ಟಿಗೇ ನೆಲೆಸುತ್ತವೆ. ಜೋಡಿ ಸತ್ತರೆ ಮಾತ್ರ ಗಂಡು ಅಥವಾ ಹೆಣ್ಣು ಇನ್ನೊಂದು ಸಂಬಂಧ ಹೊಂದುತ್ತವೆ.

ಒಂದು ರೀತಿಯಲ್ಲಿ ಮನುಷ್ಯರಂತೆ ಇವುಗಳ ಜೀವನ. ಆದರೆ ಇದೀಗ ಮನುಷ್ಯರಂತೆಯೇ ಈ ಹಕ್ಕಿಗಳು ಕೂಡ ಡಿವೋರ್ಸ್‌ ಪಡೆಯತೊಡಗಿವೆ.

ತಮ್ಮ ದೀರ್ಘಕಾಲದ ಸಂಗಾತಿಯನ್ನು ತೊರೆದು ಸಂತಾನೋತ್ಪತ್ತಿಗೆ ಬೇರೆ ಪ್ರದೇಶಗಳನ್ನು ಅರಸಿ ಅಲ್ಲಿರುವ ಹಕ್ಕಿಗಳನ್ನು ಕೂಡಿಕೊಳ್ಳಲು ಮುಂದಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ.


2003ರಿಂದ ಫಾಕ್‌ಲ್ಯಾಂಡ್‌ ದ್ವೀಪದಲ್ಲಿ ವಾಸವಾಗಿರುವ ಸುಮಾರು 15,500 ಜೋಡಿ ಕಡಲುಕೋಳಿಗಳ ಸಂತಾನೋತ್ಪತ್ತಿ ನಡುವಳಿಕೆಯನ್ನು ಸಂಗ್ರಹಿಸಿ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ.

LATEST NEWS

ಜೈಲಿನಲ್ಲಿ ಚಿಗುರೊಡೆದ ಪ್ರೇಮ, 15 ದಿನಗಳ ತುರ್ತು ಪೆರೋಲ್ ಪಡೆದು ಮದ್ವೆಯಾದ ಜೋಡಿ..!

Published

on

ಪ್ರೀತಿ ಅನ್ನುವಂತದ್ದು ಒಂದು ಸುಂದರವಾದ ಸಂಬಂಧ. ಅದು ಹೇಗೆ, ಎಲ್ಲಿ, ಯಾವಾಗ ಹುಟ್ಟುತ್ತೆ ಅಂತ ಹೇಳತೀರದು. ಈ ಪ್ರೇಮ ಕಥೆಗಳೇ ಒಂದು ವಿಚಿತ್ರ. ಇಲ್ಲೊಂದು ಅಪರೂಪದ ಪ್ರೇಮ ಕಥೆ ಅಚ್ಚರಿ ಉಂಟು ಮಾಡೋದಂತೂ ಸತ್ಯ. ಯಾಕಂದ್ರೆ ಈ ಪ್ರೀತಿ ಚಿಗುರೊಡೆದದ್ದು ಜೈಲಿನಲ್ಲಿ. ಎರಡು ಖೈದಿಗಳ ಮಧ್ಯೆ.

ಡೇಟಿಂಗ್ ಆ್ಯಪ್ ​ನಲ್ಲಿ ಭೇಟಿಯಾಗಿದ್ದ ಗೆಳೆಯನನ್ನು ಕೊಂದು ಜೈಲಿಗೆ ಸೇರಿದ್ದ ಯುವತಿ ಹಾಗು ಐದು ಕೊಲೆ ಮಾಡಿ ಅದೇ ಜೈಲಿಗೆ ಸೇರಿದ್ದ ವ್ಯಕ್ತಿ ನಡುವೆ ಪ್ರೇಮಾಂಕುರವಾಗಿದೆ. ಈ ಘಟನೆ ಅಲ್ವಾರ್​ನಲ್ಲಿ ನಡೆದಿದೆ.

ಅಲ್ವಾರ್‌ ನ ಬರೋಡಮೇವ್‌ನಲ್ಲಿ ಇಂದು ಈ ಇಬ್ಬರ ವಿವಾಹ ಜರುಗಿದೆ. ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಹನುಮಾನ್ ಪ್ರಸಾದ್ ಮದುವೆಗಾಗಿ ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್‌ಗಳನ್ನು ಪಡೆದಿದ್ದಾರೆ. ಡೇಟಿಂಗ್ ಆ್ಯಪ್‌ ನಲ್ಲಿ ಭೇಟಿಯಾದ ದುಷ್ಯಂತ್ ಶರ್ಮಾ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ರೂಪದರ್ಶಿ ಪ್ರಿಯಾ ಸೇಠ್‌ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವರು ಸಂಗನೇರ್ ಓಪನ್ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅದೇ ಜೈಲಿನಲ್ಲಿ ಪ್ರಸಾದ್ ಅವರನ್ನು ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಳನ್ನು ಪೊಲೀಸರು ಬಂಧಿಸಿದ್ದರು. ಮೇ 3 2018 ರಿಂದ ಪ್ರಿಯಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ, ಪ್ರಿಯಾ ತನ್ನ ಮಾಜಿ ಗೆಳೆಯ ದೀಕ್ಷಾಂತ್ ನನ್ನು ಅಲ್ಲ, ಬದಲಾಗಿ ತನ್ನ ಹೊಸ ಗೆಳೆಯ ಹನುಮಾನ್ ಪ್ರಸಾದ್ ನನ್ನು ಮದುವೆಯಾಗಲಿದ್ದಾರೆ.

ಹನುಮಾನ್ ಪ್ರಸಾದ್ ಕೂಡ ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಐದು ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪ ಅವರ ಮೇಲಿದೆ ಎಂದು ವರದಿಯಾಗಿದೆ. ಮುಕ್ತ ಜೈಲಿನಲ್ಲಿದ್ದಾಗ, ಅವರು ಮತ್ತು ಪ್ರಿಯಾ ಹತ್ತಿರವಾದರು ಮತ್ತು ಮದುವೆಯಾಗಲು ನಿರ್ಧರಿಸಿದರು. ಪ್ರಿಯಾ ಸೇಠ್ ಜೈಪುರದ ಅತ್ಯಂತ ಪ್ರಮುಖ ಮಹಿಳಾ ಗ್ಯಾಂಗ್​ ಸ್ಟರ್ ಆಗಬೇಕೆಂಬ ಕನಸು ಕಂಡಿದ್ದಳು. ಅಧ್ಯಯನ ಮಾಡಲು ಜೈಪುರಕ್ಕೆ ಬಂದಳು, ಆದರೆ ಶೀಘ್ರದಲ್ಲೇ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದಳು.

ಇಬ್ಬರೂ ಬೇರೆ ಬೇರೆ ಕೃತ್ಯಗಳ ಮುಖೇನ ಜೈಲು ಸೇರಿದ್ದರೂ ಇದೀಗ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.

 

 

 

 

Continue Reading

LATEST NEWS

ಸೈಕಲ್ ನಲ್ಲಿ ಆಟವಾಡುತ್ತಿದ್ದಾಗ ಕಾರು ಢಿಕ್ಕಿ, ಬಾಲಕ ಸ್ಥಳದಲ್ಲೇ ಸಾವು

Published

on

ಮುಂಬೈ: ಪುಣೆಯ ಅಪಾರ್ಟ್‌ಮೆಂಟ್ ಆವರಣದಲ್ಲಿ ಸೈಕಲ್ ಸವಾರಿ ಮಾಡುತ್ತಾ ಆಟವಾಡುತ್ತಿದ್ದ ಐದು ವರ್ಷದ ಬಾಲಕನ ಮೇಲೆ ಕಾರು ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಂಬೈಯಲ್ಲಿ ನಡೆದಿದೆ.

ನಿಷ್ಕರ್ಷ್ ಅಶ್ವತ್ ಸ್ವಾಮಿ (5) ಮೃತ ಬಾಲಕ. ಬಾಲಕ ತನ್ನ ಕುಟುಂಬದೊಂದಿಗೆ ಜಾಯ್ ನೆಸ್ಟ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ. ಮಧ್ಯಾಹ್ನ ವೇಳೆ ನಿಷ್ಕರ್ಷ್ ಕಟ್ಟಡದ ಮುಂಭಾಗದ ಆವರಣದಲ್ಲಿ ತನ್ನ ತನ್ನ ಅಜ್ಜಿಯೊಂದಿಗೆ ಆಟವಾಡುತ್ತಿದ್ದ.

ಈ ವೇಳೆ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಗುದ್ದಿ ಆತನ ಮೇಲೆ ಹರಿದಿದೆ. ಘಟನೆಯ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಆದರೆ ಅಷ್ಟು ಹೊತ್ತಿಗಾಗಲೇ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಸಂಬಂಧ ಮಗುವಿನ ತಂದೆ ಅಶ್ವತ್ ನಾರಾಯಣ್ ಸ್ವಾಮಿ ನೀಡಿದ ದೂರಿನ ಆಧಾರದ ಮೇಲೆ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 

Continue Reading

LATEST NEWS

ಕಾರ್ಕಳ: ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ; ಆರು ಮಂದಿ ಗಾಯ

Published

on

ಕಾರ್ಕಳ: ಖಾಸಗಿ ಬಸ್‌ ಮತ್ತು ತೂಫಾನ್‌ ವಾಹನ ಮಧ್ಯೆ ನಡೆದ ಭಿಕರ ಅಪಘಾತಕ್ಕೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆರು ಮಂದಿ ಗಂಭಿರ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಕಂಬಳ ಕ್ರಾಸ್‌ ಬಳಿ ಇಂದು ನಡೆದಿದೆ.


ಧರ್ಮಸ್ಥಳದಿಂದ ಕಾರ್ಕಳದ ಕಡೆಗೆ ಅತೀ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್‌ ಮುಂಭಾಗದಿಂದ ಬರುತ್ತಿದ್ದ ತೂಫಾನ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ತೂಫಾನ್‌ ವಾಹನದ ಮುಂಭಾಗ ಮುಂಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಇದನ್ನೂ ಓದಿ: ವೈರಲ್ ವೀಡಿಯೋಗೆ ಮತ್ತೊಂದು ಬ*ಲಿ; ಔಷಧಿ ವಿತರಕ ಆ*ತ್ಮಹ*ತ್ಯೆ

ತಕ್ಷಣ ಗಾಯಗೊಂಡ ಆರು ಮಂದಿಯನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕಾರ್ಕಳ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page