Connect with us

BANTWAL

ಬಾಲವಿಕಾಸದಲ್ಲಿ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Published

on

ವಿಟ್ಲ: ಪೆರಾಜೆ, ಮಾಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮಾಣಿ ಸ್ಥಳೀಯ ಸಂಸ್ಥೆ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವರ ಸಹಭಾಗಿತ್ವದಲ್ಲಿ ಫೆ. 28 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪೆರಾಜೆ, ಮಾಣಿ ಇಲ್ಲಿ 2023-24 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕ ಹಾಗೂ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಪ್ರಹ್ಲಾದ್ ಶೆಟ್ಟಿ ಜೆ  ಪರೀಕ್ಷಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವಿದ್ದಾಗ ಮುಂದಿನ ದಿನಗಳಲ್ಲಿ ಸದೃಢ ದೇಶ ಕಟ್ಟಬಲ್ಲರು ಎಂದು ಹೇಳಿ ಪರೀಕ್ಷಾ ಶಿಬಿರಕ್ಕೆ ಶುಭ ಹಾರೈಸಿದರು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ ಸ್ವಾಗತಿಸಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಬ್ ವಿಭಾಗದ ಶಿಬಿರ ನಾಯಕಿ ಯಮುನಾ,ಬುಲ್ ಬುಲ್ ವಿಭಾಗದ ಶಿಬಿರ ನಾಯಕಿ ಯಶೋಧ ಕೆ (HWB) ರವರು ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಸಹಾಯಕರಾಗಿ ಕಬ್ ಮಾಸ್ಟರ್ ಮತ್ತು ಫ್ಲಾಕ್ ಲೀಡರ್ ಗಳಾದ ಕಾಂತಪ್ಪ, ಸುಮಾ, ಅಮಿತಾ ಎಸ್, ಪ್ರಮೀಳಾ, ಕುರ್ಶಿದ, ಯೋಗಿನಿ, ಚಿತ್ರ ಕೆ, ವೀಣಾ, ಶೀಲಾವತಿ, ಪ್ರಮೀಳಾ ಕ್ರಾಸ್ತಾ, ಸೌಮ್ಯ ಹಾಗೂ ಸ್ಕೌಟ್ ಮತ್ತು ಗೈಡ್ ಶಿಕ್ಷಕಿ ಸಪ್ನ, ಅನಿತಾ ಗೌರಿ, ಲೀಲಾರವರು ಸಹಕರಿಸಿದರು. ಕಬ್ ವಿಭಾಗದಲ್ಲಿ 77 ವಿದ್ಯಾರ್ಥಿಗಳು ಹಾಗೂ ಬುಲ್ ಬುಲ್ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಾಗಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸಹಕರಿಸಿದರು. ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು.

BANTWAL

ಅಪ್ರಾಪ್ತೆಯ ಜೊತೆ ಅನುಚಿತ ವರ್ತನೆ ಪ್ರಕರಣ; ಆರೋಪಿಯ ಬಂಧಿಸುವಂತೆ ಒತ್ತಾಯ

Published

on

ಬಂಟ್ವಾಳ : ಪ್ರಮುಖ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕನಾಗಿದ್ದ ವ್ಯಕ್ತಿಯೊಬ್ಬರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿತನ ಮನೆಯಲ್ಲಿ ಕೆಲಸಕ್ಕಿದ್ದ ದಲಿತ ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿ ದೈಹಿಕ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗದ ಹಿನ್ನೆಲೆಯಲ್ಲಿ ಶಿಕ್ಷಕರು ವಿಚಾರಿಸಲು ಬಂದಿದ್ದರು. ಈ ವೇಳೆ ಆರೋಗ್ಯ ಸರಿ ಇಲ್ಲ ಎಂದು ಬಾಲಕಿಯ ಬೇಟಿಗೂ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದರು.

ಆದರೆ ಇದೀಗ ಈ ವಿಚಾರವಾಗಿ ಆರೋಪಿತನ ಗ್ರಾಮದ ಜನರೇ ಘಟನೆಯ ತನಿಖೆಗೆ ಒತ್ತಾಯಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿತ ಹೆಸರಿನಲ್ಲಿ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿತ ಪ್ರಭಲ ರಾಜಕೀಯ ಪಕ್ಷದವನಾಗಿದ್ದು, ಬ್ರಾಹ್ಮಣ ಸಮೂದಾಯಕ್ಕೆ ಸೇರಿದವನಾಗಿರುವ ಕಾರಣ ಹಲವರು ತಲೆ ತಗ್ಗಿಸುವಂತಾಗಿದೆ.

Continue Reading

BANTWAL

ಎರಡನೇ ವರ್ಷದ ಮೂಳೂರು-ಅಡ್ಡೂರು ಕಂಬಳದ ಆಹ್ವಾನ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಎರಡನೇ ವರ್ಷದ ಮೂಳೂರು-ಅಡ್ಡೂರು ಜೋಡು ಕರೆ ಕಂಬಳ ಎಪ್ರಿಲ್ 12 ರ ಶನಿವಾರ ನಡೆಯಲಿದೆ.


ಸಮಾಜ ಸೇವಕ ಹಾಗೂ ರಾಜಕೀಯ ನಾಯಕ ಇನಾಯತ್ ಅಲಿಯವರ ನೇತೃತ್ವದಲ್ಲಿ ಈ ಕಂಬಳ ಆಯೋಜನೆಯಾಗಿದೆ. ವಿಜೃಂಭಣೆಯಿಂದ ನಡೆಯುವ ಮೂಳುರು-ಅಡ್ಡೂರು ಜೋಡುಕರೆ ಕಂಬಳದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮಕ್ಷಮದಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಎರಡನೇ ವರ್ಷದ ಕಂಬಳವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾಡಲಿದ್ದಾರೆ.

ಇದನ್ನೂ ಓದಿ: ಈ ದಿನದಂದು ನಿಮ್ಮ ಖಾತೆಗೆ ಸೇರಲಿದೆ 2 ತಿಂಗಳ ಗೃಹಲಕ್ಷ್ಮೀ ಹಣ 

ಸರ್ವ ಧರ್ಮಗಳ ಪ್ರಮುಖರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಅವರು ಭಾಗವಹಿಸಲಿದ್ದಾರೆ. ಹಲವಾರು ಚಲನ ಚಿತ್ರ ನಟ ನಟಿಯರು ಕೂಡಾ ಸಂಜೆಯ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿರುವುದಾಗಿ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಮಾಹಿತಿ ನೀಡಿದ್ದಾರೆ.

Continue Reading

BANTWAL

ಮಂಗಳೂರು : ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬಸ್ ಪೊಲೀಸರ ವಶಕ್ಕೆ

Published

on

ಮಂಗಳೂರು : ವಿಟ್ಲ -ಮುಡಿಪು ಮಧ್ಯೆ 2 ದಿನಗಳಿಂದ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದನ್ನು ತಡೆದು ಸಾರ್ವಜನಿಕರು ನಿನ್ನೆ (ಮಾ.23) ವಿಟ್ಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಒಂದೇ ಟಯರಲ್ಲಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸೊಂದು ಹಿಂದಿನ ಎಡಬದಿ ಟಯರ್‌ನಲ್ಲಿ ಮಾತ್ರ ಸಂಚರಿಸುತ್ತಿತ್ತು‌. ಇನ್ನೊಂದು ಟಯರ್ ಒಡೆದು ಕರ್ಕಶ ಶಬ್ದ ಬರುತ್ತಿತ್ತು.ಬಸ್‌ನ ಚಾಲಕ, ಕಂಡಕ್ಟರ್ ಮುಂಜಾಗ್ರತೆ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ಶನಿವಾರ (ಮಾ.22) ಮಧ್ಯಾಹ್ನದಿಂದ ನಿನ್ನೆ (ಮಾ.23) ಮಧ್ಯಾಹ್ನ ತನಕ ವಿಟ್ಲ – ಮುಡಿಪು – ಮಂಗಳೂರು ಮಧ್ಯೆ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದರೆಂದು ಪ್ರಯಾಣಿಕರೇ ಆರೋಪಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆ ಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಆದಷ್ಟು ಶೀಘ್ರವೇ ಈ ನಿರ್ಲಕ್ಷ್ಯದ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page