Connect with us

DAKSHINA KANNADA

ಲೋಕಾಯುಕ್ತ ದಾಳಿ ಬೆನ್ನಲ್ಲೇ ಪಾಲಿಕೆಗೆ ಜಿಲ್ಲಾಧಿಕಾರಿ ಭೇಟಿ

Published

on

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಅವ್ಯವಸ್ಥೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಸೋಮವಾರ ಮಹಾನಗರಪಾಲಿಕೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪಾಲಿಕೆಯ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲಿಸಿದ ಅವರು ಬಳಿಕ ನಗರಪಾಲಿಕೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದಲ್ಲಿ ಚಾಲನೆಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದ ಅವರು, ಪ್ರವಾಹ ನಿಯಂತ್ರಣಕ್ಕೆ ನಡೆದಿರುವ ಕಾಮಗಾರಿಗಳ ಕುರಿತು ಚರ್ಚಿಸಿದರು. ನಂತರ, ಸ್ಮಾರ್ಟ್ ಸಿಟಿ ಕಚೇರಿಗೆ ಭೇಟಿ ಕೊಟ್ಟು ಇದುವರೆಗೆ ನಡೆದಿರುವ ಯೋಜನೆಗಳ ಮಾಹಿತಿ ಪಡೆದರು.

ಇದನ್ನೂ ಓದಿ: ಮಂಗಳೂರು: ತಾಯಿಯ ಸ್ಮರಣಾರ್ಥ ಉಚಿತ ವೈದ್ಯಕೀಯ ಶಿಬಿರ ನೆರವೇರಿಸಿದ ಜ್ಯೋತಿಷಿ

ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಸ್ಮಾರ್ಟ್ ಸಿಟಿ ಎಂ ಡಿ ರಾಜು ಮತ್ತಿತರರು ಇದ್ದರು.

DAKSHINA KANNADA

ಕುದ್ರೋಳಿ ಕ್ಷೇತ್ರದಲ್ಲಿ ಇಂದು ಭೈರವಾಷ್ಟಮಿ

Published

on

ಮಂಗಳೂರು : ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಇಂದು(ನ.12) ಭೈರವಾಷ್ಟಮಿ ಪ್ರಯುಕ್ತ ಬೆಳಿಗ್ಗೆ ಭೈರವ ದೇವರಿಗೆ ಅಭಿಷೇಕ, ಮಹಾಪೂಜೆ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್ ಸೋಮಸುಂದರಂ ಮತ್ತು ಕಾರ್ಯದರ್ಶಿ ಮಾಧವ ಸುವರ್ಣ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕಟೀಲು ಏಳನೇ ಮೇಳದ ಪದಾರ್ಪಣೆ ಸಂಭ್ರಮ; ನ.15ರಂದು ನಡೆಯಲಿದೆ ವೈಭವದ ಮೆರವಣಿಗೆ

ಕ್ಷೇತ್ರದಲ್ಲಿ ಇಂದು(ನ.12) ಸಂಜೆ 7.30 ಕ್ಕೆ ಭೈರವ ತರ್ಪಣ ಮತ್ತು ಮಹಾಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಯಲ್ಲಿ ಆಗಮಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಸಮಿತಿ ವಿನಂತಿಸಿಕೊಂಡಿದೆ.

Continue Reading

DAKSHINA KANNADA

ನಂದಿಗುಡ್ಡೆಯಲ್ಲಿ ಕೊರಗಜ್ಜ ಚಿತ್ರ ತಂಡದಿಂದ ಹರಕೆಯ ಕೋಲ ಸೇವೆ

Published

on

ಮಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಮೂಡಿ ಬಂದಿರುವ 6 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿರುವ ಕೊರಗಜ್ಜ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮುನ್ನ ಚಿತ್ರ ತಂಡ ಮಂಗಳೂರಿನ ನಂದಿಗುಡ್ಡೆ ಕೊರಗಜ್ಜನ ಸಾನಿಧ್ಯದಲ್ಲಿ ಹರಕೆಯ ಕೋಲ ಸೇವೆ ಮಾಡಿ ಚಿತ್ರದ ಯಶಸ್ವಿಗೆ ಪ್ರಾರ್ಥನೆ ಮಾಡಿದೆ.


ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಶ್ರುತಿ, ಭವ್ಯ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಶ್ರುತಿ ತಂದೆ, ತಾಯಿ ಸಹಿತ ಚಿತ್ರರಂಗದ ಹಲವು ಮಂದಿ ಸೇರಿ ಸುಮಾರು 1500 ಅಧಿಕ ಮಂದಿ ಭಕ್ತರು ಕೊರಗಜ್ಜನ ಕೋಲದಲ್ಲಿ ಭಾಗಿಗಳಾಗಿದ್ದರು.

ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಸಕ್ಸಸ್ ಫಿಲ್ಮ್ಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣವಾಗಿದ್ದು, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಕೆಲಸ ಮಾಡಿದ್ದಾರೆ.


ತುಳು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ. ಇನ್ನು ಸಿನೆಮಾದಲ್ಲಿ ನಟಿಸಿರುವ ಖ್ಯಾತ ನಟಿ ಶ್ರುತಿ ಅವರು ಚಿತ್ರದ ಅಭಿನಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

 

Continue Reading

DAKSHINA KANNADA

ಕಟೀಲು ಏಳನೇ ಮೇಳದ ಪದಾರ್ಪಣೆ ಸಂಭ್ರಮ; ನ.15ರಂದು ನಡೆಯಲಿದೆ ವೈಭವದ ಮೆರವಣಿಗೆ

Published

on

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಸಲ್ಪಡುವ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳ ತಿರುಗಾಟದ ಆರಂಭೋತ್ಸವ ನ.15 ರಂದು ನಡೆಯಲಿದ್ದು,7ನೇ ಮೇಳದ ಪದಾರ್ಪಣೆ ನ.16 ರಂದು ಭಾನುವಾರ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ, ನವೆಂಬರ್ 15ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಎಂಟು ಸ್ಥಬ್ಧಚಿತ್ರಗಳಲ್ಲಿ ಕಟೀಲೀನ ಏಳೂ ಮೇಳಗಳ ದೇವರು, ತೊಟ್ಟಿಲು, ಚಿನ್ನ ಬೆಳ್ಳಿಗಳ ಕಿರೀಟ ಇತ್ಯಾದಿ ಪರಿಕರಗಳನ್ನು ವೈಭವದ ಮೆರವಣಿಗೆಯಲ್ಲಿ ಬಜಪೆಯಿಂದ ಕಟೀಲಿಗೆ ತಂದು ದೇವರಿಗೆ ಒಪ್ಪಿಸಲಾಗುತ್ತದೆ. ಏಳನೇ ಮೇಳಕ್ಕೆ ಭಕ್ತರು ಸುಮಾರು ಒಂದು ಕೋಟಿ ರೂಪಾಯಿ ವಚ್ಚದಲ್ಲಿ ನೀಡಿರುವ ದೇವರ ಕಿರೀಟಗಳು, ತೊಟ್ಟಿಲು ಚಿನ್ನ ಬೆಳ್ಳಿಗಳ ಆಯುಧ, ಆಭರಣ ಸೇರಿದೆ ಎಂದರು.

ಬಜಪೆ ಬಸ್ಸು ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಉದ್ಘಾಟನೆ ಮಾಡಲಿದ್ದು, ಶ್ಯಾಂ ಭಟ್, ರಾಜಶೇಖರಾನಂದ ಸ್ವಾಮೀಜಿ, ಉಮಾನಾಥ ಕೋಟ್ಯಾನ್‌, ಅಭಯಚಂದ್ರ ಜೈನ್‌, ಕೃಷ್ಣಪಾಲೇಮಾರ್ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. 3000 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವೈಭವದ ಮೆರವಣಿಗೆ ನಡೆಯಲಿದೆ. ಸುಮಾರು 15 ರಿಂದ 20 ಸಾವಿರ ಮಂದಿ ಯಕ್ಷ ಪ್ರೇಮಿಗಳು ಸೇರುವ ನಿರೀಕ್ಷೆ ಇದೆ. ನವೆಂಬರ್ 16 ರಂದು ಬೆಳಿಗ್ಗೆ ವಿಶೇಷ ಪೂಜೆ, ಮಧ್ಯಾಹ್ನ 3 ಗಂಟೆ ಬಳಿಕ ತಾಳಮದ್ದಲೆ, ಗೆಜ್ಜೆಕಟ್ಟುವ ಪ್ರಕ್ರಿಯೆ, ಪ್ರಸಾದ ವಿತರಣೆ, ಇತ್ಯಾದಿ ಕಾರ್ಯಕ್ರಮಗಳು ನಡೆದ ಬಳಿಕ ಮೇಳಗಳ ಉದ್ಘಾಟನೆ ನಡೆಯಿದ್ದು, ಪೂಜ್ಯ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥರು ಆಶೀರ್ವಚನ ನೀಡುವರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ನೆರವೇರಿಸುವರು.  ಏಳನೇ ಮೇಳದ ಪದಾರ್ಪಣೆ ಹಿನ್ನೆಲೆಯಲ್ಲಿ ಯಕ್ಷ ಸಪ್ತಾಹವನ್ನೂ ಆಯೋಜನೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ : ಈ ಬಾರಿ ಡಿಕೆಡಿಯಲ್ಲಿ ಸೆಲೆಬ್ರೆಟಿಗಳದ್ದೇ ಹವಾ… ಭವ್ಯಾ ಗೌಡ ಅದ್ದೂರಿ ಎಂಟ್ರಿ!

ಕ್ಷೇತ್ರದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರು ಸನತ್‌ ಕುಮಾರ್ ಶೆಟ್ಟಿ,  ಬಿಪಿನ್ ಚಂದ್ರ ಶೆಟ್ಟಿ, ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page