ಮಂಗಳೂರು/ಬೆಂಗಳೂರು : ‘ಕನ್ನಡ ಬಿಗ್ ಬಾಸ್ ಸೀಸನ್ 11’ ಇದೀಗ ಫಿನಾಲೆ ಹಂತಕ್ಕೆ ತಲುಪುತ್ತಿದ್ದು, ಎಲಿಮಿನೇಷನ್ ನಿಂದ ಪಾರಗಲು ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗಳನ್ನು ಆಡುತ್ತಿದ್ದಾರೆ. ಆದರೆ, ಎಲಿಮಿನೇಷನ್ ನಿಂದ ಸೇಫ್ ಆಗಿದ್ದ ಧನರಾಜ್ ಅವರು ಟಾಸ್ಕ್ ನ ಮೋಸದಿಂದ ಗೆದ್ದ ಆರೋಪ ಇದೆ.

ಕನ್ನಡದ ಬಿಗ್ ಬಾಸ್ ಶುರುವಾಗಿ ಇಂದಿಗೆ 109 ದಿನಗಳು ಆಗಿವೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದ್ರೆ, ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲೇ ಮೋಸದಾಟ ಆಡಿದ್ದಾರೆ.
ಸದ್ಯ, ಬಿಗ್ ಬಾಸ್ ಮನೆಯಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಗೌಡ, ಮಂಜು, ಗೌತಮಿ, ರಜತ್, ಹನುಮಂತ ಹಾಗೂ ಧನರಾಜ್ ಇದ್ದಾರೆ. ಆದರೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್ ವೊಂದು ಎದುರಾಗಿದೆ.
ಈ ವಾರದ ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಫಿನಾಲೆಗೆ ಡೇಟ್ ಫಿಕ್ಸ್; ಈ ಸಲ ಬಿಗ್ ಬಾಸ್ ಗೆಲ್ಲುವವರು ಯಾರು ?
ಹೀಗಾಗಿ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನು ಸ್ಪರ್ಧಿಗಳು ಕಷ್ಟಪಟ್ಟು ಆಡುತ್ತಿದ್ದರು. ಇದರಲ್ಲಿ ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್ ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ಮಿಡ್ ವೀಕ್ ನಾಮಿನೇಷನ್ ನಿಂದ ಸೇಫ್ ಆಗಿದ್ದರು.
ನಿನ್ನೆ (ಜ.15) ನಡೆದ ಎಪಿಸೋಡ್ ನಲ್ಲಿ ಯಾವುದೇ ಮಿಡ್ ವೀಕ್ ಎಲಿಮಿನೇಷನ್ ನಡೆಸಿರಲಿಲ್ಲ ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸದಾಟ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಈ ಬಗ್ಗೆ ಖುದ್ದು ಬಿಗ್‌ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚಿಟ್ಟಿದ್ದಾರೆ. ಬಿಗ್‌ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಕನ್ನಡಿಯನ್ನು ನೋಡಿ ಫಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿದೆ. ಬಿಗ್‌ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಜೊತೆಗೆ ಬಿಗ್‌ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಗಲಿಲ್ಲ. ಆ ಗೆಲುವು ನನ್ನದಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಧನರಾಜ್ ಅವರಿಗೆ ಎಲಿಮಿನೇಷನ್ ಶಿಕ್ಷೆ ಸಿಕ್ಕಿತೇ ಎನ್ನುವ ಪ್ರಶ್ನೆ ಉಂಟಾಗಿದೆ.