Connect with us

LATEST NEWS

ಜಾತ್ರೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಭಕ್ತನ ದಾರುಣ ಸಾವು

Published

on

ಚಾಮರಾಜನಗರ: ರಥದ ಚಕ್ರಕ್ಕೆ ಸಿಲುಕಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ನಡೆದಿದೆ.

ಸರ್ಪಭೂಷಣ (24) ಮೃತಪಟ್ಟ ದುರ್ದೈವಿ.


ಕೊರೊನಾ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ರಥೋತ್ಸವ ಸ್ಥಗಿತಗೊಂಡಿತ್ತು. ಎರಡು ವರ್ಷಗಳ ನಂತರ ನಡೆದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.

ಈ ರಥೋತ್ಸವದಲ್ಲಿ ನೂಕು ನುಗ್ಗಲಿನ ಉಂಟಾದ ಪರಿಣಾದ ಈ ದುರ್ಘಟನೆ ಸಂಭವಿಸಿದೆ.

ಇನ್ನು ರಥದ ಚಕ್ರಕ್ಕೆ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಕಬ್ಬಳ್ಳಿ ಸ್ವಾಮಿ (35) ಮತ್ತು ಇನ್ನೊಬ್ಬ ಅಪರಿಚಿತನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LATEST NEWS

ಬೈಂದೂರು: ಸ್ಕೂಟರ್ ಅಪಘಾತ ಸಂಭವಿಸಿ ಸವಾರ ಸಾವು

Published

on

ಬೈಂದೂರು: ಸ್ಕೂಟರ್ ಸ್ಟಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಳ ಘಟನೆ ಯಳಜಿತ್ ಗ್ರಾಮದ ಗೋವಿಂದ ಮಾಸ್ಟರ್ ಮನೆ ಸಮೀಪದ ತಿರುವು ರಸ್ತೆಯಲ್ಲಿ ನಡೆದಿದೆ.

ನಾಗರಾಜ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ಕೂಟರ್ ಅಪಘಾತದ ಸಂದರ್ಭ ಮೃತರ ಪತ್ನಿ, ಸಹಸವಾರೆ ಆಶಾ ಎಂಬವರು ಗಾಯಗೊಂಡಿದ್ದರು.

ಇದನ್ನೂ ಓದಿ : ಫುಟ್‌ಬಾತ್ ಮೇಲೆ ಹತ್ತಿದ ಕಾರು; ಸದ್ಯ ಪ್ರಯಾಣಿಕರು ಪಾರು

ದಂಪತಿಯು ಸ್ಕೂಟರಿನಲ್ಲಿ ಫೆ.3ರಂದು ಸಂಜೆ ಬೈಂದೂರು ಕಡೆಗೆ ಹೋಗುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.8ರಂದು ಮಧ್ಯಾಹ್ನ ವೇಳೆ ಇಹಲೋಕ ತ್ಯಜಿಸಿದ್ಧಾರೆ. ಈ ಘಟನೆ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಫುಟ್‌ಬಾತ್ ಮೇಲೆ ಹತ್ತಿದ ಕಾರು; ಸದ್ಯ ಪ್ರಯಾಣಿಕರು ಪಾರು

Published

on

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಫುಟ್‌ಬಾತ್ ಮೇಲೆ ಚಲಿಸಿದ ಘಟನೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಮುಂಭಾಗದ ನಂದಿನಿ ಸ್ಟಾಲ್ ಬಳಿ ನಿನ್ನೆ ರಾತ್ರಿ (ಫೆ.9) ಸಂಭವಿಸಿದೆ.

ಪುತ್ತೂರು ಕಡೆಯಿಂದ ಮಡಿಕೇರಿ ಕಡೆ ಹೋಗುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಫುಟ್‌ಬಾತ್ ಮೇಲೆ ಹತ್ತಿದ ಪರಿಣಾಮ ಅಲ್ಲೇ ಪಕ್ಕದಲ್ಲಿ ಇರಿಸಲಾಗಿದ್ದ ಹಾಲಿನ ಪ್ಯಾಕೇಟ್‍ನ ಖಾಲಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿದೆ.

ಇದನ್ನೂ ಓದಿ : ಮಲ್ಪೆ : ಸಮುದ್ರಕ್ಕೆ ಬಿದ್ದು ಮೀನುಗಾರ ದುರಂತ ಅಂತ್ಯ

ಅದೃಷ್ಟವಶಾತ್ ಸ್ಥಳದಲ್ಲಿ ಸಾರ್ವಜನಿಕರು ಯಾರು ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದೆ. ಕಾರಿನಲ್ಲಿ ಮಕ್ಕಳು, ಮಹಿಳೆಯರು ಇದ್ದು ಯಾರಿಗೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

Continue Reading

LATEST NEWS

ಮಲ್ಪೆ : ಸಮುದ್ರಕ್ಕೆ ಬಿದ್ದು ಮೀನುಗಾರ ದುರಂತ ಅಂತ್ಯ

Published

on

ಮಲ್ಪೆ: ಮೀನುಗಾರರೊಬ್ಬ ಮೀನುಗಾರಿಕೆ ಮಾಡುತ್ತಿರುವಾಗರು ಸಮುದ್ರಕ್ಕೆ ಬಿದ್ದು ದುರಂತ ಅಂತ್ಯನ ಕಂಡ ದಾರುಳ ಘಟನೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ಸಂಭವಿಸಿದೆ.

ಕೇರಳದ ರಾಜನ್(54) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮಲ್ಪೆಯ ಶ್ರೀರಾಮ ಭಜನಾಮಂದಿರದ ಎದುರು ಸಮುದ್ರದಲ್ಲಿ ಫೆ.7ರಂದು ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ರಾಜನ್ ನಾಪತ್ತೆಯಾಗಿದ್ದರು.

ಇದನ್ನೂ ಓದಿ : ಚಲಿಸುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿ; 10ಕ್ಕೂ ಹೆಚ್ಚು ಜನ ಗಂಭೀರ

ನೀರಿಗೆ ಬಿದ್ದ ರಾಜನ್ ಕುರಿತು ತೀವ್ರ ಹುಡುಕಾಟ ನಡೆಸಿದಾಗ, ಫೆ.8 ರ ಬೆಳಗಿನ ಜಾವ ಮಲ್ಪೆಪಡುಕೆರೆ ಸಮುದ್ರ ತೀರದಲ್ಲಿ ರಾಜನ್ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page