Connect with us

bengaluru

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಚ್ ಡಿ ದೇವೇಗೌಡ ಭೇಟಿ

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಎಚ್ ಡಿ ದೇವೇಗೌಡ ದಂಪತಿ ಇಂದು ಭೇಟಿ ನೀಡಿದರು.

ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆಯನ್ನು ಅವರು ಕ್ಷೇತ್ರದಲ್ಲಿ ನೆರವೇರಿಸಲಿದ್ದು, ದೇವೇಗೌಡರ ಜೊತೆ ಪತ್ನಿ ಚೆನ್ನಮ್ಮ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಲಿರುವರು. ಬೆಳಿಗ್ಗೆ 6:30ಗೆ ಆಶ್ಲೇಷ ಪೂಜೆ ನೆರವೇರಿಸಿದ ಎಚ್.ಡಿ.ದೇವೇಗೌಡ ದಂಪತಿ, ಬಳಿಕ ಸಂಪುಟ ನರಸಿಂಹ ದೇವರ ದರ್ಶನ ಪಡೆದರು.

ಅಶ್ಲೇಷ ಪೂಜೆಯ ಬಳಿಕ 11 ಗಂಟೆಯವರೆಗೆ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಮತ್ತೆ ದೇವಳದಲ್ಲಿ ತುಲಾಭಾರ ಸೇವೆ ನಡೆಸಲಿರುವರು. 12 ಗಂಟೆಗೆ ಮತ್ತೆ ಮಹಾಪೂಜೆಯಲ್ಲಿ ಭಾಗಿಯಾಗಲಿರುವರು.

ಬಳಿಕ ರಸ್ತೆ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಜೆಡಿ ಎಸ್ ಮುಖಂಡ ಎಂ.ಬಿ.ಸದಾಶಿವ, ದೇವಳದ ಮೋಹನ್ ರಾಮ್ ಸುಳ್ಳಿ ಉಪಸ್ಥಿತರಿದ್ದರು.

bengaluru

ವಿಶೇಷ ಚೇತನ ಯುವತಿಯನ್ನೂ ಬಿಡದ ಕಾಮುಕ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

Published

on

ಬೆಂಗಳೂರು: ಗಾಂಜಾ ನಶೆಯಲ್ಲಿದ್ದ ಕಾಮುಕನೊಬ್ಬ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಘ್ನೇಶ್ ಅಲಿಯಾಸ್​​ ದಾಡು ಎಂಬಾತನಿಂದ ಕೃತ್ಯ ನಡೆದಿದ್ದು, ಆರೋಪಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಮದುವೆಗೆ ಎಂದು ಸಂತ್ರಸ್ತೆ ಕುಟುಂಬಸ್ಥರು ತೆರಳಿದ್ದು, ವಿಶೇಷ ಚೇತನ ಯುವತಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದ ಗಾಂಜಾ ನಶೆಯಲ್ಲಿದ್ದ ಆರೋಪಿ ವಿಘ್ನೇಶ್, ಚಿಲಕ ಹಾಕಿದ್ದ ಮನೆಗೆ ನುಗ್ಗಿದ್ದಾನೆ.

ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಈ ವೇಳೆ ಮಗಳನ್ನು ನೋಡಿಕೊಂಡು ಹೋಗೋಣ ಎಂದು ತಾಯಿ ಬಂದಾಗ ಮನೆ ಒಳಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ಕಾಲಿನಿಂದ ಒದ್ದು ಆಕೆ ಬಾಗಿಲನ್ನು ತೆರೆದಿದ್ದು, ಮಗಳ ಸ್ಥಿತಿ ಕಂಡು ಶಾಕ್​ ಆಗಿದ್ದಾಳೆ.

ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರ ನಡೆಸಲು ಆರೋಪಿ ಮುಂದಾಗಿದ್ದನು. ಘಟನೆ ಬಳಿಕ ತಕ್ಷಣ ಅಲರ್ಟ್​ ಆದ ಸ್ಥಳೀಯರು ಆರೋಪಿ ವಿಘ್ನೆಶ್​ನನ್ನು ಹಿಡಿದು ಮನಸೋ ಇಚ್ಛೆ ತಳಿಸಿದ್ದಾರೆ. ಬಳಿಕ ಪೊಲೀಸರಿಗೆ ವಿಘ್ನೇಶ್​​ನನ್ನು ಒಪ್ಪಿಸಲಾಗಿದ್ದು, ಆರೋಪಿಯನ್ನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

 

 

Continue Reading

bengaluru

ಪತ್ನಿಯ ಮಿತಿಮೀರಿದ ಅನುಮಾನ, ನೇಣಿಗೆ ಶರಣಾದ ಬ್ಯಾಂಕ್ ಉದ್ಯೋಗಿ..!

Published

on

ಬೆಂಗಳೂರು: ಪತ್ನಿಯಿಂದ ಕಿರುಕುಳ ತಾಳಲಾರದೇ ಬ್ಯಾಂಕ್‌ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.

ಗಗನ್ ರಾವ್ ನೇಣಿಗೆ ಶರಣಾದ ಪತಿ. 8 ತಿಂಗಳ ಹಿಂದಷ್ಟೇ ಮೇಘನಾ ಜಾವ್‌ ಅವರೊಂದಿಗೆ ಗಗನ್‌ ರಾವ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬ್ಯಾಂಕ್‌ ಉದ್ಯೋಗಿಯಾಗಿದ್ದ ಗಗನ್‌ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಘನಾ, ಗಗನ್‌ ಮೇಲೆ ಅನುಮಾನ ಪಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿತ್ತು. ಬಳಿಕ ಕೋಪಿಸಿಕೊಂಡು ತವರಿಗೆ ಹೋಗಿದ್ದ ಮೇಘನಾ, ಇತ್ತೀಚೆಗಷ್ಟೇ ಗಂಡನ ಮನೆಗೆ ವಾಪಸ್‌ ಬಂದಿದ್ದಳು.

ನಿನ್ನೆ ರಾತ್ರಿ ಮತ್ತೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಗಗನ್‌ ನೇಣಿಗೆ ಶರಣಾಗಿದ್ದಾರೆ.

Continue Reading

bengaluru

ಇನ್ಮುಂದೆ ನಂದಿನಿ ತುಪ್ಪ ಭಾರೀ ದುಬಾರಿ..! ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಶಾಕ್ ನೀಡಿದ ಕೆಎಂಎಫ್

Published

on

ಬೆಂಗಳೂರು: ಜಿಎಸ್‌.ಟಿ ದರ ಇಳಿಕೆಯಾಗಿದ್ದ ಬಗ್ಗೆ ಸಂಭ್ರದಲ್ಲಿದ್ದ ರಾಜ್ಯದ ಜನತೆಗೆ ಕೆಎಂಎಫ್ ಶಾಕ್ ನೀಡಿದೆ. ತುಪ್ಪದ ದರವನ್ನು ಕೆಎಂಎಫ್ ಏರಿಕೆ ಮಾಡಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದೆ.  ನಂದಿನಿ ತುಪ್ಪದ ದರವನ್ನು  ಪ್ರತಿ ಕೆ.ಜಿ.ಗೆ 90 ರೂಪಾಯಿ ಏರಿಕೆ ಮಾಡಿದೆ.

ಎಲ್ಲ ಮಾದರಿಯ ತುಪ್ಪದ ದರವನ್ನು ಪ್ರತಿ ಕೆ.ಜಿ.ಗೆ. 90 ರೂಪಾಯಿ ಏರಿಕೆ ಮಾಡಿದೆ.  ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಹೇಳಿದೆ.  ಈ ಹಿಂದೆ ಒಂದು ಕೆ.ಜಿ.  ತುಪ್ಪಕ್ಕೆ 610 ರೂ ಇತ್ತು. ಇಂದಿನಿಂದ 700 ರೂ ಗೆ ಏರಿಕೆ ಆಗಿದೆ.  ತುಪ್ಪ ಹೊರತು ಪಡಿಸಿ ಉಳಿದ ಇತರೆ ನಂದಿನಿ ಉತ್ಪನ್ನದ ರೇಟ್ ನಲ್ಲಿ  ಯಾವುದೇ ಬದಲಾವಣೆ ಇಲ್ಲ.

ನಂದಿನಿ ಹಾಲು 95 ಲಕ್ಷದಿಂದ 1 ಕೋಟಿ ಲೀ.ವರೆಗೆ ಉತ್ಪತ್ತಿ ಆಗುತ್ತಿದೆ. ಕೇವಲ 50 ಲಕ್ಷ ಲೀ. ಹಾಲು‌ ಮಾರಾಟ ಆಗ್ತಿದೆ . ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪ ಸರಬರಾಜು ಮಾಡ್ತಿದ್ದೇವೆ. ನಷ್ಟ ಭರಿಸಲು ಬೆಲೆ‌ ಏರಿಕೆ ಮಾಡಬೇಕು.ಹೀಗಾಗಿ ತುಪ್ಪದ ದರ ಏರಿಕೆ ಮಾಡಿದ್ದೇವೆ ಎಂದು ಬಮೂಲ್ ಹಾಲಿ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page