Connect with us

LATEST NEWS

ಮಾತನಾಡುತ್ತಾ ಹೋಗುತ್ತಿದ್ದಾಗಲೇ ಯುವತಿಯ ಮೊಬೈಲ್ ಎಸ್ಕೇಪ್-ಆ್ಯಪ್ ಮೂಲಕ ಆರೋಪಿಯನ್ನು ಬೆನ್ನಟ್ಟಿದ ಡೆಲಿವರಿ ಬಾಯ್

Published

on

ಬೆಂಗಳೂರು: ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದ ಯುವತಿಯೋರ್ವಳ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಸಿದ್ಧಾಪುರದಲ್ಲಿ ನಡೆದಿದೆ.

ಟೋನಿ ಬಂಧಿತ ಆರೋಪಿ.


ಕಳೆದ ತಿಂಗಳು ಯುವತಿಯೋರ್ವಳು ರಸ್ತೆಯಲ್ಲಿ ನಡೆದುಕೊಂಡು ಫೋನಿನಲ್ಲಿ ಮಾತನಾಡಿಕೊಂಡು ಬರುತ್ತಿದ್ದಾಗ ಟೋನಿ ಎಂಬ ಯುವಕ ಕದ್ದು ಪರಾರಿಯಾಗುತ್ತಿದ್ದ.

ಈ ಸಂದರ್ಭ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿ ಡೆಲಿವರಿ ಬಾಯ್ ಸೂರ್ಯ ಎಂಬವರು ಯುವತಿಯ ನೆರವಿಗೆ ಬಂದು ‘ಫೈಂಡ್ ಮೈ ಆ್ಯಪ್’ ಮುಖಾಂತರ ಮೊಬೈಲ್ ಲೋಕೇಷನ್ ಪತ್ತೆ ಮಾಡಿದ್ದಾರೆ.

ಈ ಆ್ಯಪ್ ಮುಖಾಂತರ ಲೊಕೇಷನ್ ದೃಢಪಡಿಸಿಕೊಂಡ ಸೂರ್ಯ ಐದಾರು ಕಿಲೋಮೀಟರ್ ದೂರದಲ್ಲಿದ್ದ ಆರೋಪಿಯನ್ನು ಹಿಂಬಾಲಿಸಿದ್ದಾರೆ.

ಕೊನೆಗೂ ಕಳ್ಳ ಸಿಕ್ಕಿದರೂ ಕೂಡಾ ಆತನಲ್ಲಿ ಮೊಬೈಲ್ ಹಿಂತಿರುಗಿಸುವಂತೆ ಕೇಳಿದಾಗ ಆತ ಸೂರ್ಯನ ಮುಖಕ್ಕೆ ಚಾಕುವಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ.

ನಂತರ ಮೊಬೈಲ್ ಕಳೆದುಕೊಂಡ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿ ಕೊನೆಗೂ ಪೊಲೀಸರು ಆರೋಪಿ ಟೋನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

DAKSHINA KANNADA

ಮಂಗಳೂರು : ಕೂಳೂರು ಸೇತುವೆ ಬಳಿ ದರ್ಪ ; ಪೊಲೀಸರಿಂದ ಸ್ಪಷ್ಟನೆ

Published

on

ಮಂಗಳೂರು : ಮಾ.21ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರು” ಎಂಬ ವೀಡಿಯೊ 2024ರ ಡಿ.23ರಂದು ಕುದುರೆಮುಖ ಜಂಕ್ಷನ್‌ ನಲ್ಲಿ ನಡೆದಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

ಪಾನಮತ್ತನಾದ ಓರ್ವ ವ್ಯಕ್ತಿ ಕುದುರೆಮುಖ ಜಂಕ್ಷನ್ ನಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಸಾರ್ವಜನಿಕರ ಸಹಾಯದೊಂದಿಗೆ ಪೊಲೀಸರು ಆ ವ್ಯಕ್ತಿಯನ್ನು ಬದಿಗೆ ಕಳುಹಿಸಿದರೂ ಆತ ಮತ್ತೆ ಪದೇ ಪದೇ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಸಮಯ ತುಂಬಾ ಕುಡಿದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ಆತನಿಗೆ ಮೂಗಿನಲ್ಲಿ ರಕ್ತ ಬಂದಿರುತ್ತದೆ.

ಈ ವೇಳೆ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವಾಹನದ ಬಳಿ ಕರೆದುಕೊಂಡು ಬರುತ್ತಿರುವಾಗ ಯಾರೋ ಸಾರ್ವಜನಿಕರು ತಪ್ಪಾಗಿ ತಿಳಿದುಕೊಂಡು ವೀಡಿಯೊ ಮಾಡಿ ವೈರಲ್‌ ಮಾಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Continue Reading

LATEST NEWS

ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ?

Published

on

ಮಂಗಳೂರು: ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಯಾವುದು? ಅಮೆರಿಕ, ಚೀನಾ ಅಥವಾ ರಷ್ಯಾ ಅಲ್ಲ. 2025 ರ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದೆ.


ವಲ್ಡ್ ಹ್ಯಾಪಿನೆಸ್ ರಿಪೋರ್ಟ್ 2025 ರ ಪ್ರಕಾರ ಫಿನ್‌ಲ್ಯಾಂಡ್ ಸತತ ಎಂಟನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಎಂಬ ಕೀರ್ತಿ ಗಳಿಸಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಯೋಗಕ್ಷೇಮ ಕೇಂದ್ರವು ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ 10 ದೇಶಗಳು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿವೆ.

ಫಿನ್‌ಲ್ಯಾಂಡ್ ಮೊದಲ ಸ್ಥಾನವನ್ನು ಹೊಂದಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನವನ್ನು ಹೊಂದಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಮತ್ತೊಂದೆಡೆ ಭೀಕರ ಅಂತರ್ಯುದ್ಧದಲ್ಲಿ ಕಾದಾಡುತ್ತಿರುವ ಅಫ್ಘಾನಿಸ್ತಾನ ಮತ್ತೊಮ್ಮೆ ಸಂತೋಷದ ರಾಷ್ಟ್ರಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಸೇರಿದ್ದು, 147ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (146) ಮತ್ತು ಲೆಬನಾನ್ (145) ಹಿಂದಿನ ಸ್ಥಾನದಲ್ಲಿದೆ.

ವಿಚಿತ್ರ ಎಂಬಂತೆ ಹಮಾಸ್ ಜೊತೆ ಭೀಕರ ಯುದ್ದ ನಡೆಸಿದ ಇಸ್ರೇಲ್ ದೇಶವು ಎಂಟನೇ ಸ್ಥಾನದಲ್ಲಿದೆ. ಕೋಸ್ಟಾ ರಿಕಾ ಮತ್ತು ಮೆಕ್ಸಿಕೊ ಕೂಡ ಮೊದಲ ಬಾರಿಗೆ ಅಗ್ರ ಹತ್ತು ಸ್ಥಾನಗಳಲ್ಲಿದ್ದು, ಈ ದೇಶಗಳು ಕ್ರಮವಾಗಿ 6 ​​ಮತ್ತು 10ನೇ ಶ್ರೇಯಾಂಕದಲ್ಲಿವೆ.

ಇದನ್ನೂ ಓದಿ:  ಐಪಿಎಲ್ 2025: ಕೆಕೆಆರ್-ಆರ್ಸಿಬಿ ಉದ್ಘಾಟನಾ ಪಂದ್ಯವೇ ರದ್ದಾಗುವ ಸಾಧ್ಯತೆ?

ದೇಶ ಪ್ರತಿಯಿಂದ ಒಂದರಿಂದ ಮೂರು ಸಾವಿರ ಜನರ ಮಾದರಿ ಗಾತ್ರವನ್ನು ಆಯ್ಕೆ ಮಾಡಲಾಗಿದೆ. ಕೇಳಲಾದ ಪ್ರಶ್ನೆಗಳ ಆಧಾರದ ಮೇಲೆ ಅವರಿಗೆ ರಚಿಸಲಾಗಿದೆ. ಈ ಪ್ರಶ್ನೆಗಳಿಗೆ 0 ರಿಂದ 10 ರ ರೇಟಿಂಗ್‌ನಲ್ಲಿ ಉತ್ತರಿಸಬೇಕು. 0 ಎಂದರೆ ಕೆಟ್ಟದು, 10 ಎಂದರೆ ಅತ್ಯುತ್ತಮ ಅನುಭವ. ಸಂಪತ್ತು ಮತ್ತು ಅಭಿವೃದ್ಧಿ, ಸಂಬಂಧಗಳು, ಜನರ ನಡುವಿನ ನಂಬಿಕೆ, ಆತ್ಮತೃಪ್ತಿ, ಸಾಮಾಜಿಕ ಬೆಂಬಲ, ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಎಲ್ಲಾ ಈ ಅಂಶಗಳನ್ನು ಪರಿಗಣಿಸಿ ದೇಶಗಳಿಗೆ ಸ್ಥಾನ ನಿಗದಿಪಡಿಸಲಾಗಿದೆ.

ಅಗ್ರ 10 ಅಗ್ರ ಸ್ಥಾನದಲ್ಲಿರುವ ದೇಶಗಳು
1. ಫಿನ್ಲ್ಯಾಂಡ್

2. ಡೆನ್ಮಾರ್ಕ್

3. ಐಸ್ಲ್ಯಾಂಡ್

4. ಸ್ವೀಡನ್

5. ನೆದರ್ಲ್ಯಾಂಡ್

6. ಕೋಸ್ಟಾ ರಿಕಾ

7. ನಾರ್ವೆ

8. ಇಸ್ರೇಲ್

9. ಲಕ್ಷಂಬರ್ಗ್

೧೦. ಮೆಕ್ಸಿಕೋ

ಭಾರತಕ್ಕೆ ಎಷ್ಟನೇ ಸ್ಥಾನ?
2025ರ ಸಂತೋಷದ ವರದಿಯಲ್ಲಿ 147 ದೇಶಗಳನ್ನು ಪರಿಗಣಿಸಿ ವರದಿ ಸಿದ್ದಪಡಿಸಲಾಗಿದೆ. ಇದರಲ್ಲಿ ಭಾರತವು 118ನೇ ಸ್ಥಾನವನ್ನು ಹೊಂದಿದೆ. ಕಳೆದ ವರ್ಷಕ್ಕಿಂತ ಕೊಂಚ ಸುಧಾರಿಸಿದೆ ಎಂದು ಹೇಳಬಹುದು. ಏಕೆಂದರೆ 2024ರ ಹ್ಯಾಪಿನೆಸ್ ರಿಪೋರ್ಟ್‌ನಲ್ಲಿ ಭಾರತವು 126ನೇ ಸ್ಥಾನದಲ್ಲಿತ್ತು. ಆದರೆ 2025ರಲ್ಲಿ ಭಾರತವು 8 ಸ್ಥಾನ ಮೇಲಕ್ಕೇರಿದೆ.

ಶ್ರೇಯಾಂಕದಲ್ಲಿ ಕುಸಿತಕಂಡ ಅಮೆರಿಕ
ಸಂತೋಷ ಸೂಚ್ಯಂಕ ವರದಿಯಲ್ಲಿ ಕಳೆದ ವರ್ಷ 23ನೇ ಸ್ಥಾನದಲ್ಲಿದ್ದ ಅಮೆರಿಕ ಈ ಬಾರಿ ಒಂದು ಸ್ಥಾನ ಕುಸಿದಿದೆ. 2012ರಲ್ಲಿ 11ನೇ ಸ್ಥಾನದಲ್ಲಿದ್ದ ಅಮೆರಿಕ ಈಗ 24ನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ.

Continue Reading

LATEST NEWS

ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Published

on

ಗದಗ: ಪ್ರೀತಿ ಪ್ರೇಮದ ಕಾರಣದಿಂದ ಪುರುಷನ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡರಗಿ ತಾಲೂಕಿನ ಬೆಟಗೇರಿ ಬಾಲಕಿಯರ ವೃತ್ತಿಪರ ಹಾಸ್ಟೆಲ್‌ನಲ್ಲಿ ನಡೆದಿದೆ.

ವಿರಪಾಪೂರ ತಾಂಡಾದ ನಿವಾಸಿ ವಂದನಾ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. 19 ವರ್ಷದ ವಂದನಾಗೆ ಅದೇ ಗ್ರಾಮದ 42 ವರ್ಷದ ಕಿರಣ್ ಕಾರಬಾರಿ ಎಂಬಾತ ಪ್ರೀತಿಸುತ್ತಿದ್ದ. ಬಳಿಕ ಮದುವೆಯಾಗು ಅಂತ ಒತ್ತಾಯಿಸುತ್ತಿದ್ದ. ಪ್ರತಿದಿನ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಮದುವೆ ಆಗದಿದ್ದರೆ ಫೋಟೋ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗೆ ಹಾಕುವುದಾಗಿ ಹೆದರಿಸಿದ್ದ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.

ಗುರುವಾರ ಹಾಸ್ಟೆಲ್‌ನಲ್ಲಿ ಪಿನಾಯಿಲ್ ಸೇವಿಸಿದ್ದಾಳೆ, ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾಳೆ.

ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕುಟುಂಬಸ್ಥರ ಆಗ್ರಹವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿ ಕಿರಣ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page