Connect with us

LATEST NEWS

ಬಿಕಿನಿ ತೊಟ್ಟು ಬಸ್ಸಿನಲ್ಲಿ ಅಡ್ಡಾಡಿದ ಯುವತಿ

Published

on

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ವಿಡೀಯೋಗಳು ಒಂದಾ.. ಎರಡಾ.. ಪ್ರತಿದಿನವೂ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವರಗೆ ವಿಡಿಯೋಗಳನ್ನು ಟ್ರೋಲ್ ಮಾಡೋದೆ ಒಂದು ಕೆಲಸವಾಗಿರುತ್ತದೆ. ಸದ್ಯ ಅದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ವೈರಲ್ ಆಗ್ತಾ ಇದೆ.

ಬೇಸಿಲ ಬೇಗೆಗೆ ಸೆಖೆ ಜಾಸ್ತಿ ಆಗಿ ಹೋಗಿದೆ. ಹಾಗಾಗಿ ಇಲ್ಲೊಬ್ಬಳು ಕೇವಲ ಒಳ ಉಡುಪನ್ನು ಧರಿಸಿ ಅರೆಬೆತ್ತಲೆಯಾಗಿ ಬಸ್ಸಿನಲ್ಲಿ ಅಡ್ಡಾಡ್ಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಮಹಿಳೆಯ ಈ ವರ್ತನೆಯನ್ನು ಕಂಡು ಜನರು ಗರಂ ಆಗಿದ್ದಾರೆ.

ಸೆಲೆಬ್ರಿಟಿಗಳು, ಇನ್ಫ್ಲುಯೆನ್ಸರ್ ಗಳು ಫೋಟೋಶೂಟ್ ಗಳಿಗಾಗಿ ಬಿಕಿನಿ ಧರಿಸುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬಳು ಯುವತಿ ಮಾತ್ರ ಸಾರ್ವಜನಿಕ ಸ್ಥಳದಲ್ಲಿ ಬಿಕಿನಿ ತೊಟ್ಟು ಓಡಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾಳೆ. ಹೌದು ದೆಹಲಿಯಲ್ಲಿ ಯುವತಿಯೊಬ್ಬಳು ಕೇವಲ ಒಳ ಉಡುಪು ಧರಿಸಿ ಸಾರ್ವಜನಿಕವಾಗಿ DTC ಬಸ್ಸಿನಲ್ಲಿ ಅರೆಬೆತ್ತಲೆಯಾಗಿ ಪ್ರಯಾಣಿಸಿದ್ದಾಳೆ.

ಈಕೆ ಬಸ್ಸಿನಲ್ಲಿ ಅರೆಬೆತ್ತಲೆಯಾಗಿ ನಿಂತಿರುವ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಆಕೆಯ ಈ ಅವತಾರವನ್ನು ನೋಡಲಾರದೆ ಆಕೆಯ ಹತ್ತಿರ ಇದ್ದಂತಹ ಸಹ ಪ್ರಯಾಣಿಕರ ಅಲ್ಲಿಂದ ಎದ್ದು ಹೋಗಿದ್ದಾರೆ.

DAKSHINA KANNADA

ಉಳ್ಳಾಲ ದರ್ಗಾ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮ; ರಸ್ತೆ ಸಂಚಾರದಲ್ಲಿ ಬದಲಾವಣೆ

Published

on

ಮಂಗಳೂರು: ದಿನಾಂಕ 24-04-2025 ರಿಂದ 18-05-2025ರವರೆಗೆ ಉಳ್ಳಾಲ ದರ್ಗಾದ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮವು ನಡೆಯಲಿದ್ದು, ನೇತ್ರವಾತಿ ಹಳೆಯ ಸೇತುವೆಯ ದುರಸ್ಥಿ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಹೀಗಾಗಿ ಸದರಿ ದಿನಾಂಕಗಳಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಾಹನಗಳ ಸಂಚಾರಕ್ಕೆ ನಿಗದಿಪಡಿಸಲಾದ ಮಾರ್ಗಗಳ ವಿವರ ಹೀಗಿದೆ:

  • ಮೆಲ್ಕಾರು ಜಂಕ್ಷನ್ (ರಾಷ್ಟ್ರೀಯ ಹೆದ್ದಾರಿ-75): ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ/ ಬಿ.ಸಿ.ರೋಡ್ ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ/ಹೋಗುವ ಸಾರ್ವಜನಿಕರ ವಾಹನಗಳಿಗೆ ಮೆಲ್ಕಾರು ಜಂಕ್ಷನ್‌ನಲ್ಲಿ ತಿರುವು ಪಡೆದು- ಬೊಳ್ಯಾರ್ – ಮುಡಿಪು – ಕೊಣಾಜೆ – ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.
  • ಅಡ್ಯಾರು ಕಟ್ಟೆ (ರಾಷ್ಟ್ರೀಯ ಹೆದ್ದಾರಿ-73); ಫರಂಗಿಪೇಟೆ, ತುಂಬೆ, ಅಡ್ಯಾರು ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ/ಹೋಗುವ ಕಾರು/ದ್ವಿ-ಚಕ್ರ ವಾಹನಗಳು ಅಡ್ಯಾರು ಕಟ್ಟೆ (ಬೊಂಡಾ ಫ್ಯಾಕ್ಟರಿ) ರಸ್ತೆಯಾಗಿ- ಹರೇಕಳ ಸೇತುವೆ – ಗ್ರಾಮಚಾವಡಿ ನ್ಯೂಪಡ್ಪು – ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.

 

Continue Reading

FILM

ಕ್ರಿಕೆಟರ್ ಶರತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅರ್ಚನಾ ಕೊಟ್ಟಿಗೆ

Published

on

ಕ್ರಿಕೆಟರ್ ಶರತ್ ಬಿ.ಆರ್ ಜೊತೆ ಸ್ಯಾಂಡಲ್’ವುಡ್ ನಟಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಖ್ಯಾತಿಯ ಅರ್ಚನಾ ಕೊಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಕ್ಷಿಯಾಗಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಕ್ರಿಕೆಟರ್ ಶರತ್ ಬಿ.ಆರ್ ಜೊತೆ ಇಂದು (ಏ.23) ನಟಿ ಹಸೆಮಣೆ ಏರಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಈ ಮದುವೆ ಜರುಗಿದೆ.

ನಿನ್ನೆ (ಏ.22) ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ, ಸಪ್ತಮಿ ಗೌಡ, ಸ್ವಾನಿ ಸುದೀಪ್, ಆಶಿಕಾ ರಂಗನಾಥ್, ಖುಷಿ ರವಿ, ಅಮೃತಾ ಅಯ್ಯಂಗಾರ್, ತೇಜಸ್ವಿನಿ ಶರ್ಮಾ, ಸಾನ್ಯ ಅಯ್ಯರ್, ಯುವ ರಾಜ್‌ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿ ಶುಭಕೋರಿದರು.

ಕ್ರಿಕೆಟರ್ ಪ್ರಸಿದ್ಧ್ ಕೃಷ್ಣ, ವೈಶಾಖ್ ವಿಜಯ್ ಕುಮಾರ್, ದೇವದತ್ ಪಡಿಕ್ಕಲ್ ಅನೇಕರು ಭಾಗಿಯಾಗಿ ಸ್ನೇಹಿತ ಶರತ್ ಹಾಗೂ ಅರ್ಚನಾ ದಂಪತಿಗೆ ಶುಭಹಾರೈಸಿದರು.

Continue Reading

LATEST NEWS

ಮುಂಬೈ ಇಂಡಿಯನ್ಸ್ ಎದುರು ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ಹೈದರಾಬಾದ್

Published

on

ಮಂಗಳೂರು/ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ.

ಆರು ದಿನಗಳ ಹಿಂದಷ್ಟೇ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡವು ಸನ್‌ರೈಸರ್ಸ್ ಎದುರು ಜಯಿಸಿತ್ತು. ಈಗ ಕಮಿನ್ಸ್ ಬಳಗವು ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ಸ್ಪೋಟಕ ಶೈಲಿಯ ಬ್ಯಾಟರ್‌ಗಳು ತುಂಬಿರುವ ಹೈದರಾಬಾದ್‌ ತಂಡವನ್ನು ಕಟ್ಟಿ ಹಾಕುವ ತಂತ್ರವನ್ನು ಈ ಟೂರ್ನಿಯಲ್ಲಿ ಕೆಲವು ಎದುರಾಳಿ ಬೌಲರ್‌ಗಳು ಕಂಡುಕೊಂಡಿದ್ದಾರೆ.

ಆದ್ದರಿಂದ ಸನ್‌ರೈಸರ್ಸ್ ತಂಡವು ಟೂರ್ನಿಯುದ್ದಕ್ಕೂ ಏಳು, ಬೀಳುಗಳನ್ನು ಕಾಣುತ್ತಿದೆ. ಸನ್‌ರೈಸರ್ಸ್ ತಂಡವು ಮೊದಲ ಸುತ್ತಿನಲ್ಲಿ ಐದು ಸೋತು, ಎರಡರಲ್ಲಿ ಜಯಿಸಿದೆ. ಇನ್ನುಳಿದಿರುವ ಟೂರ್ನಿಯ ಅರ್ಧಭಾಗದಲ್ಲಿ ಹೆಚ್ಚು ಗೆಲುವು ಸಾಧಿಸಿ ಪ್ಲೇಆಫ್‌ಗೆ ಸಾಗಬೇಕಾದ ಒತ್ತಡದಲ್ಲಿದೆ.

ಇದನ್ನೂ ಓದಿ: ಇಂಪ್ಯಾಕ್ಟ್ ಪ್ಲೇಯರ್ ಕುರಿತು ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮಾ..!

ಮುಂಬೈ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ದ 177 ರನ್ ಗುರಿಯನ್ನು ಒಂದೇ ವಿಕೆಟ್ ನಷ್ಟದಲ್ಲಿ, ನಾಲ್ಕಕ್ಕೂ ಹೆಚ್ಚು ಓವರ್ ಬಾಕಿ ಇರುವಾಗಲೇ ಗೆದ್ದಿತ್ತು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅಜೇಯ ಜತೆಯಾಟದ ಮೂಲಕ ಚೆನ್ನೈ ಮೊತ್ತವನ್ನು ಮೀರಿ ನಿಂತಿದ್ದರು. ಆದರೆ ಚೆನ್ನೈ ತಂಡದ ಇಂದಿನ ಸ್ಥಿತಿಯನ್ನು ಗಮನಿಸಿದರೆ ಮುಂಬೈ ಗೆಲುವು ಅಧಿಕಾರಯುತವೆನಿಸದು. ಹೀಗಾಗಿ 8 ಪಂದ್ಯಗಳಿಂದ 8 ಅಂಕವನ್ನಷ್ಟೇ ಹೊಂದಿರುವ ಪಾಂಡ್ಯ ಪಡೆಗೆ ಹೈದರಾಬಾದ್ ವಿರುದ್ದದ ಪಂದ್ಯ ಹೆಚ್ಚು ಮಹತ್ವದ್ದೆನಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page